*ರೋಗಾನುಭವವೆಲ್ಲ ಉಗ್ರ ತಪವೋ.....*
*ರೋಗಾನುಭವವೆಲ್ಲ ಉಗ್ರ ತಪವೋ.....*
ರೋಗಗಳನ್ನು ಕೊಡುವವ ದೇವರು. ಪರಿಹರಿಸಿ ಆರೋಗ್ಯ ಕೊಡುವವನೂ ದೇವರು. ರೋಗ ಪರಿಹರಿಸಿ ರಕ್ಷಿಸಲು ಅನಂತ ಉಪಾಯಗಳು ದೇವರಲ್ಲಿ ಇವೆ. ಆಪತ್ತಿನಲ್ಲಿ "ಔಷಧ" ನಾಮಕನಾಗಿ ಔಷಧಿ ರೂಪದಿಂದ ಬಂದೊದುಗವವನೂ ದೇವರೇ ಎಂದು ನಿನ್ನೆ ತಿಳಿದೆವು.
ರೋಗ ಪರಿಹಾರ ಮಾಡುವದೇ ಉದ್ಯೆಶ್ಯವಾಗಿದ್ದರೆ ರೋಗಗಳನ್ನು ರುಜಿನಗಳನ್ನು ಕೊಡಬೇಕು ಯಾಕೆ....?? ಎಂದು ಸಂಶಯ ಬರತ್ತೆ.
ಮಾನವ ಜನ್ಮದಲ್ಲಿ ಬಂದ ಮನುಷ್ಯನಿಗೆ *ತಪಸ್ಸೇ* ಮೂಲ. ತಪಸ್ಸನ್ನು ಬಿಟ್ಟ ನಮಗೆ ರೋಗಗಳನ್ನಾದರೂ ತಪಸ್ಸು ಎಂದು ಭಾವಿಸಿ ಎಂದು ಸೂಚಿಸಲು ರೋಗ ಕೊಡುತ್ತಾನೆ ಎಂದೆನಿಸುತ್ತದೆ. ಅಂತೆಯೆ *ವ್ಯಾಧಿಂ..... ವಿಷ್ಣವೇ ತಪ ಇತ್ಯೇವ ಚಿಂತಯನ್* ಅನುಭವಿಸುವ ಆಧಿ ವ್ಯಧಿಗಳನ್ನು ವಿಷ್ಣುವಿನನ್ನು ಕುರಿತು ತಪಸ್ಸು ಎಂದು ತಿಳಿಯಬೇಕು ಎಂದಿತು ಶಾಸ್ತ್ರ. ದಾಸರಾಯರೂ ಆ ಮಾತನ್ನೇ *ರೋಗಾಗುನುಭವವೆಲ್ಲ ಉಗ್ರ ತಪವೋ* ಪುನರುಚ್ಚಿರಿಸಿದರು.
*ತಪಸ್ಸು* ಎಂದರೆ...
ಒಂದು ನಿರಂತರ ದೇವರನ್ನು ನೆನೆಯುವದು, ಎರಡನೇಯದು ಪುಣ್ಯದ ಸಂಪಾದನೆ ಮಾಡುವದು. ಮೂರನೇಯದು ಹೊಸದಾಗಿ ಪಾಪಗಳು ಘಟಿಸದೇ ಇರುವದು. ಕೊನೆಯದಾಗಿ ಇರುವ ಪಾಪಗಳನ್ನು ಕಳೆದುಕೊಳ್ಳುವದು. ಈ ನಲ್ಕೂ ವಿಧದಿಂದಲೂ ತಪಸ್ಸು ಸಾಗ್ತಾ ಇರತ್ತೆ.
ದೇಹ ಇಂದ್ರಿಯ ಮನಸ್ಸು ಇವುಗಳೆಲ್ಲವನ್ನೂ ಆರೋಗ್ಯವಂತನ್ನಾಗಿ ಇಟ್ಟುಕೊಂಡ ವ್ಯಕ್ತಿ ಸಾಮಾನ್ಯವಾಗಿ ಆರೋಗ್ಯಭಾಗ್ಯ ಒದಗಿಸಿದ ದೇವರನ್ನು ನೆನೆಸುವದಿಲ್ಲ. ಅದುವೇ ರೋಗಿ ನಿರಂತರ ದೇವರೆ !!! ನಾರಾಯಣ !! ನರಹರೇ !!! ಅಂತ ಭಕ್ತಿಪೂರ್ವಕ ಸಮರ್ಪಣಾ ಪೂರ್ವಕ ನೆನಸ್ತಾ ಇರ್ತಾನೆ. ಮನಸ್ಸು ಹದವಾಗಿಸಿಕೊಂಡು ಬಾಗಿಸಿ ನಿರಂತರ ದೇವರನ್ನು ನೆನೆಯುತ್ತಾ ಇರುತ್ತಾನೆ.
ರೋಗ ಪರಿಹಾರಕ್ಕಾಗಿ ನಾನಾವಿಧ ನಾಮಗಳನ್ನು ಜಪ ತಪಗಳನ್ನು ಮಾಡುತ್ತಾನೆ. ಯಜ್ಙ ಯಾಗಗಳೆನ್ನುತ್ತಾನೆ. ದಾನ ವೆನ್ನುತ್ತಾನೆ ಹೀಗೆ ನಾನಾ ಕ್ರಮಕಗಳಲ್ಲಿ ದೇವರನ್ನು ನೆನೆಯುವ ರೋಗಿ, ಅಂತೆಯೇ *ಸಂಕಟಬಂದಾಗ ವೆಂಕಟರಮಣ* ಅಂದರು ಹಿರಿಯರು. ಹೀಗೆ ಒಂದಿಲ್ಲ ಒಂದು ತರಹದ ಪುಣ್ಯ ಸಂಪಾದನೆ ಸಾಗುತ್ತಾ ಇರುತ್ತದೆ.
ರೋಗ ಅನುಭವಿಸುತ್ತಿರುವಾಗ ಹಾಗೂ ದಾರಿದ್ರ್ಯದಲ್ಲಿರುವಾಗ ಸಾಮಾನ್ಯವಾಗಿ ಪಾಪಕರ್ಮಗಳನ್ನು ಮಾಡುವದಿಲ್ಲ. ಒಂದು ಮನವರಿಕೆ ಆಗಿರುತ್ತದೆ, "ನಾ ಮಾಡಿದ ಕರ್ಮದ ಫಲವೇ ನಾ ಉಣ್ಣುತ್ತಿರುವದು" ಎಂದು. ಹಾಗಾಗಿ ಮತ್ತೆ ಪಾಪ ಕರ್ಮಗಳನ್ನು ಮಾಡಲಾರ. ಪಾಪ ಮಾಡಲೂ ಶಕ್ತಿ ಇರದು. ಹಾಗಾಗಿ ಹೊಸ ಪಾಪ ಕರ್ಮಗಳು ಘಟಿಸುವದು ಕುಂಠಿತವಾಗುತ್ತದೆ.
ರೋಗ ಅನುಭವಿಸುತ್ತಿರುವದು ಎಂದರೆ ಹಿಂದು ಸಂಪಾದಿಸಿಟ್ಟ ಪಾಪದ ಪರಿಹಾರವೇ ಎಂದರ್ಥ. ಘಳಿಸಿಟ್ಟ ಪಾಪಗಳ ಪರಿಹಾರ ಒಂದೆಡೆ ಆದರೆ, ರೋಗಿ ಸುಖ ಅನುಭವಿಸುತ್ತಿಲ್ಲ ಹಾಗಾಗಿ ಹಿಂದಿನ ಪುಣ್ಯ ಸೇಫ್ ಆಗಿ ಉಳಿದಿದೆ. ಹೀಗೆ ಪಾಪಕಳೆದುಕೊಳ್ಳುವ, ಪುಣ್ಯ ಉಳಿಸಿಕೊಳ್ಳುವವ.
ಒಟ್ಟಾರೆಯಾಗಿ ಹೇಳುವದಾದರೆ ರೋಗಿ *ನಿರಂತರ ದೇವರನ್ನು ನೆನೆಯುವ- ಇಂದು ಹೊಸ ಪಾಪ ಮಾಡ- ಪುಣ್ಯ ಸಂಪಾದಿಸುವ - ಪಾಪ ಕಳೆದುಕೊಳ್ಳುವ* ಹೀಗೆ ತಪಸ್ವಿಗಳಲ್ಲಿ ಆಗುವ ಎಲ್ಲ ಕ್ರಿಯೆಗಳೂ ರೋಗಿಯಲ್ಲೂ ಆಗುತ್ತವೆ. ಅಂತೆಯೆರ *ರೋಗಾನುಭವವವೆಲ್ಲ ಉಗ್ರತಪವೋ* ಎಂದಿರು.
*ರೋಗಗಳು ಬಂದಾಗ ದುಃಖಪಡದೇ, ಪರರಿಗೆ ಬರದ ರೋಗ ನನಗೆ ಬಂದಿದೆ, ಇದೊಂದು ದೇವರನ್ನು ನೆನೆಸಲು, ಪಾಪ ಪರಿಹರಿಸಿಕೊಳ್ಳಲು, ಪುಣ್ಯಸಂಪಾದಿಸಿಕೊಳ್ಳಲು, ಘಳಿಸಿದ ಪುಣ್ಯ ಉಳಿಸಿಕೊಳ್ಳಲು ಎನಗೆ ಕೊಟ್ಟ ಒಂದು ಸೌಭಾಗ್ಯ* ಎಂದೇ ತಿಳಿದು ದೆವರಿಗೆ ಕೃತಜ್ಙರಾಗಿರುವದೇನಿದೆ ಇದುವೂ ಒಂದು ಸಾಧನೆ. ಬಂದ ಹಾಗೂ ಬರುವ ರೋಗ ಪರಿಹರಿಸಿಕೊಳ್ಳಲೂ ಇದೊಂದು ಸುಲಭ ಉಪಾಯ ಎಂದೆನಿಸುತ್ತದೆ. ಆದ್ದರಿಂದ ರೋಗಗಳ ಅನುತಾಪದ ಅನುಭವವೂ ತಪಸ್ಸು ಎಂದು ಭಾವಿಸುವ ಉಪಾಯ ನಮ್ಮ ಶಾಸ್ತ್ರ ನಮ್ಮ ದಾಸರು ತಿಳಿಸುತ್ತಾರೆ. ಹಾಗೆ ತಿಳಿದಾದರೂ ತಪಸ್ಸು ಮಾಡುವಂಥವರಾಗೋಣ.... 😊😄
*✍🏽✍🏽ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments