*ಓ ಸಂಧಾತಾ ಸಂಧಿಮಾನ್ ಸ್ಥಿರನೇ.....!! ನಿನಗೆ ನಮೋನಮಃ*
*ಓ ಸಂಧಾತಾ ಸಂಧಿಮಾನ್ ಸ್ಥಿರನೇ.....!! ನಿನಗೆ ನಮೋನಮಃ* ವಿಷ್ಣು ಸಹಸ್ರನಾಮದಲ್ಲಿ ಬರುವ ಒಂದು ಸಂದರ, ಅರ್ಥಗರ್ಭಿತ, ನಿತ್ಯ ಚಿಂತಿಸುವ ನಾಮ *ಸಂಧಾತಾ ಸಂಧಿಮಾನ್ ಸ್ಥಿರಃ* ಎಂಬ ನಾಮ. "ಸಂಧಾತ್ರೇ ನಮಃ" ಬಿರುಕು ಬಿಟ್ಟ ಸಂಬಂಧಗಳನ್ನು ಜೋಡಿಸುವ ದೊರೆ ಶ್ರೀಹರಿಯೇ. ಯಾಕೆ ಬಿರುಕು ಬೀಳತ್ತೆ ಗೊತ್ತಿಲ್ಲ. ಹೇಗೆ ಬಿರುಕು ಬಿತ್ತೂ ಗೊತ್ತಿಲ್ಲ. ಕ್ಷಣಕ್ಕೆ ಆರುಬಾರಿ ನೆನನೆಸುವವರನ್ನೂ ವರ್ಷವರ್ಷಗಳು ಉರುಳಿದರೂ ನೆನಪೇ ಆಗದಷ್ಟು ಬಿರುಕು ಬಿದ್ದಿರುತ್ತದೆ. ಕೆಲವು ಕಡೆ ಹೀಗಾಗತ್ತೆ "ಅವನು ಸಂಬಂಧ ಇಟ್ಟುಕೊಂಡಿರುತ್ತಾನೆ ನಾನೇ ಕೆಡಿಸಿಕೊಂಡು ದೂರಾಗಿರುತ್ತೇನೆ" ಈ ವಿಷಯ ತಂದೆ ತಾಯಿ ಗುರು ದೇವತಾ ದೇವರ ವಿಷಯಕ್ಕೆ ಅನ್ವಯಿಸುತ್ತದೆ. ಈ ಎಲ್ಲ ತರಹದ ದುರವಸ್ಥೆಗಳು ಬರದಿರುವಂತೆ ಮಾಡಿ, ಬಿರಿಕು ಬಿದ್ದ ಸಂಬಂಧ ಗಳನ್ನು ಜೋಡಿಸುವ ಹೆದ್ದೊರೆ *ಸಂಧಾತಾ.* "ಸಂಧಿಮತೇ ನಮಃ" ಅವೈಷ್ಣವರ ಸಂಬಂಧ ಹೆಚ್ಚಾಗಿ, ವೈಷ್ಣವರ ಶತ್ರುತ್ವ ಬಹಳವಾಗಿ ಬಿಡುತ್ತದೆ. ಸುತ್ತಮುತ್ತ ಎಲ್ಲರೂ ಅವೈಷ್ಣವರೇ. ವಿಷ್ಣುಭಕ್ತರು ಸಾತ್ವಿಕರು ಸಜ್ಜನರು ಹಿತೈಷಿಗಳು ಕಂಡರೆ ಆಯ್ತು ಕೆಂಡಕಾರುವದೇ. ಹೀಗಾಗದೆ ಯೋಗ್ಯ ಸಂಬಂಧವನ್ನೇ ಕೊಟ್ಟು, ವೈಷ್ಣವ ಸಂಬಂಧಿಗಳಲ್ಲಿ ನೀನಿದ್ದು ಸಂಬಂಧವನ್ನು ದೃಢವಾಗಿಸುವ ದೊರೆ *ಸಂಧಿಮಾನ್* ಎಂಬ ಹೆಸರಿನ ಶ್ರೀಹರಿ. "ಸ್ಥಿರಾಯ ನಮಃ" ಸಂಬಂಧಗಳಲ್ಲಿ ಸ್ತೀರತೆ ಮುಖ್ಯ. ಸ್ತೀರ...