*ಸಂಕ್ರಾಂತಿಯ ಪ್ರೀತಿಯ ನಮನಗಳು ಹಾಗೂ ಶುಭ ಆಶಂಸನೆಗಳು🎋🌿🌹*

*ಸಂಕ್ರಾಂತಿಯ ಪ್ರೀತಿಯ ನಮನಗಳು ಹಾಗೂ ಶುಭ ಆಶಂಸನೆಗಳು🎋🌿🌹*

ಸಂಕ್ರಾಂತಿಗಳು ಹನ್ನೆರಡು. ಈ ಹನ್ನೆರಡು ಸಂಕ್ರಮಣಗಳಿಗೂ ಒಂದೊಂದು ಹೆಸರು ಇದೆ. ಇವೆಲ್ಲವೂ ಇಂದು ಉತ್ತಮ ಪರ್ವಕಾಲಗಳೇ. ಈ ಎಲ್ಲ ಪರ್ವಕಾಲಗಳಿಗಿಂತಲೂ ಅಯನ ಸಂಕ್ರಮಣದ ಪರ್ವಕಾಲ ಅತ್ಯುತ್ತಮ. ಅವುಗಳಲ್ಲಿ ಒಂದು ಕರ್ಕ ಸಂಕ್ರಮಣ  (ದಕ್ಷಿಣಾಯನ ಪರ್ವಕಾಲ.) ಮತ್ತೊಂದು ಮಕರ ಸಂಕ್ರಮಣ (ಉತ್ತರಾಯಣ ಪರ್ವಕಾಲ.)

*ನಾಳೆ ಇರುವದೇ  ಮಕರ ಸಂಕ್ರಮಣ*

"ಪರ್ವಕಾಲಗಳು"  ಪುಣ್ಯದ ಹಪಹಪಿ ಇದ್ದವರಿಗೆ ಒಂದು ಬೋನಸ್ ದಿನವಿದ್ದ ಹಾಗೆ. ಪೂರ್ಣಲಾಭವನ್ನು ಪಡೆದುಕೊಳ್ಳುತ್ತಾರೆ.  ಅಂದು ಮಾಡುವ ಸ್ನಾನ ದಾನ ಜಪ ಪೂಜೆ ತರ್ಪಣ ಇವೆಲ್ಲದಕ್ಕೂ ನೂರುಪಟ್ಟು ಹೆಚ್ಚಿನ ಫಲ. ನಾಳೆಯದಿನ ೭.೪೬ ರಿಂದ ಸೂರ್ಯಾಸ್ತದ ವರೆಗೂ ಪರ್ವಕಾಲವಿರುತ್ತದೆ.  *೯.೪೬ ವರೆಗೆ ವಿಶೇಷ ಪುಣ್ಯತಮವಾದ ಪರ್ವಕಾಲ* ಆ ಪ್ರಸಂಗ ಅತೀ ಹೆಚ್ಚಿನ ಮಹತ್ವ.  ಸೂರ್ಯಾಸ್ತದವರೆಗೂ ಪರ್ವಕಾಲ ಇರುವದು. ಆ ಕಾಲದಲ್ಲಿ ವಿಶೇಷವಾಗಿ ಸ್ನಾನ, ದಾನ, ಜಪ, ಅಧಿಕಾರಿಗಳು  ತರ್ಪಣ ಇತ್ಯಾದಿ ಇತ್ಯಾದಿ ಮಾಡೋಣ. 

*ಯುವಕರಿಗೆ "ಗಾಯತ್ರೀ ಜಪ" ವೇ ತುಂಬ  ವಿಶೇಷ* 

ಜೀವನದಲ್ಲಿ ಸಾಧಿಸುವ ನೂರಾರು ಕನಸು ಹೊತ್ತಿರುವ ಇಂದಿನ ಮಕ್ಕಳು ಹಾಗೂ ಯುವಕರೆಲ್ಲರಿಗೂ *ಗಾಯತ್ರೀ ಜಪ* ತುಂಬ ಸಹಾಯಕಾರಿ. ಎಲ್ಲ ಯುವಕರೂ ಕನಿಷ್ಠ ಸಾವಿರದೆಂಟು 1008 ಸಲವಾದರೂ ಗಾಯತ್ರೀಜಪ ಮಾಡಲೇಬೇಕು ಎಂದು ನನ್ನ ಅತ್ಯಂತ ಪ್ರೀತಿಯ ಆಗ್ರಹ. 

ಈ ಎಲ್ಲ ಸಾಧನೆಯ ಮುಖಾಂತರ ಎಲ್ಲ ಅನಿಷ್ಟಗಳನ್ನು ಪರಿಹಾರ ಮಾಡಿಕೊಂಡು,   ವಿಶೇಷವಾದ ಫಲ ಪಡೆಯೋಣ. 

ತಿಲಸ್ನಾನ, ತಿಲೋದಕ, ತಿಲಹೋಮ, ತಿಲಭೋಜನ, ತಿಲದಾನ ಇವುಗಳಿಗೆ ತುಂಬ ಮಹತ್ವವಿದೆ. ಒಂದು ಎಳ್ಳು ಹೇಗೆ ಸಾವಿರ ಎಳ್ಳುಗಳ ಹುಟ್ಟಿಗೆ ಕಾರಣವೋ ಹಾಗೆ ನಮ್ಮ ಇಂದಿನ ಒಂದು ಪುಣ್ಯ ಸಾವಿರತರಹದ ಪುಣ್ಯಗಳು ಬರಲಿ ಎಂಬ ಕಾರಣಕ್ಕೆ ತಿಲಕ್ಕೆ ತುಂಬ ಮಹತ್ವವಿದೆ. ಎಲ್ಲ ಪರ್ವಕಾಲಗಳಲ್ಲಿಯೂ ತಿಲಕ್ಕೆ ತುಂಬ ಮಹತ್ವದ ಪಾತ್ರವಿದೆ. 

*ನಮ್ಮಲ್ಲೂ ಸಂಕ್ರಮಣವಾಗಲಿ...*

ಸೂರ್ಯ ಆಕಾಶದಲ್ಲಿ ಪಥ ಬದಲಿಸಿದಂತೆ ಇಂದು ನಾವುಹ ಪಥ ಬದಲಿಸೋಣ. "ಅಧರ್ಮ ಮಾರ್ಗದಿಂದ ದರ್ಮದೆಡೆಗೆ,  ಅಜ್ಙಾನದಿಂದ ಜ್ಙಾನದೆಡೆಗೆ, ಅಸೌಖ್ಯಂದಿಂದ ಸೌಖ್ಯದೆಡೆಗೆ, ನಾಸ್ತಿಕತೆಯಿಂದ ಆಸ್ತಿಕದೆಡೆಗೆ, ಅಸಮೃದ್ಧಿಯಿಂದ ಸಮೃದ್ಧಿ ಎಡೆಗೆ, ವಿಶೇಷವಾಗಿ ವಿಷ್ಣು ಹಾಗೂ ವಿಷ್ಣು ಭಕ್ತಿಯೆಡೆಗೆ ಮತ್ತು ವೈಷ್ಣವರೆಡೆಗೆ ನಮ್ಮ ಸಂಕ್ರಮಣವಾಗಲಿ" ಗುರು ಹಿರಿಯರಲ್ಲಿ ಸೂರ್ಯನೇ ಮೊದಲಾದ ದೇವತೆಗಳಲ್ಲಿ ವಾಯುದೇವರಲ್ಲಿ ವಿಶೇಷವಾಗಿ ಲಕ್ಷ್ಮೀನಾರಾಯಣರಲ್ಲಿ ಪ್ರಾರ್ಥಿಸೋಣ. 

*ನನ್ನ ಅತ್ಮೀಯರೆಲ್ಲರಿಗೂ ಪ್ರೀತಿಯ ನಮಸ್ಕಾರಗಳು ಹಾಗೂ ಶುಭ ಆಶಂಸನೆಗಳು*

*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*