*ಗಂಡೆದೆಯ ಗುಂಡಾಚಾರ್ಯರು*

*ಗಂಡೆದೆಯ ಗುಂಡಾಚಾರ್ಯರು*

ಮನುಷ್ಯನನ್ನು ದೃಢವಾಗಿಸುವದು ಗುಣಗಳು. ಆ ಎಲ್ಲ ಅನೇಕ ಗುಣಗಳ ಗಣಿಯಾಗಿದ್ದರು ಪಂ. ಗುಂಡಾಚಾರ್ಯರು. 

ಜ್ಙಾನ. ಗುರುಭಕ್ತಿ, ವಿಷ್ಣುನಿಷ್ಠೆ, ವಿಷ್ಣುಭಕ್ತಿ, ಶಾಸ್ತ್ರನಿಷ್ಠೆ, ನಿರಂತರ ಪಾಠಪ್ರವಚನ,  ಸಹನೆ, ಕ್ಷಮೆ, ಸತ್ಯ, ತಿತಿಕ್ಷಾ, ಸಂತೃಪ್ತಿ, ಸಮೃದ್ಧಿ, ಅತಿಥಿ ಅಭ್ಯಾಗತರ ಸೇವೆ, ಬ್ರಾಹ್ಮಣರಲ್ಲಿ ಭಕ್ತಿ, ಆದರೆ ಗೌರವ, ಧರ್ಮಾಚಾರಣೆ, ಸಾತ್ವಿಕ ನಡೆ, ಋಜು, ಪ್ರೀತಿ ಇತ್ಯಾದಿ ಇತ್ಯಾದಿ ನಾನಾವಿಧದ ನೂರಾರುಗುಣಗಳ ಗಣಿ ನಮ್ಮ ಗುಂಡಾಚಾರ್ಯರು. 

ಅಸತ್ಯ ಸುಳ್ಲು ಅವರ ಬಾಯಿಂದ ನಾನು ಕೇಳಿಯೇ ಇಲ್ಲ. ಸಿಟ್ಟಾಗಿದ್ದು ನೋಡಿಲ್ಲ. ಇನ್ನೊಬ್ಬರಿಗೆ ಮೋಸಮಾಡುವದು ಎಂಬುವದು ಗೊತ್ತೇ ಇರಲಿಲ್ಲ. ತಮಗಾಗಿಯೂ ಎಂದಿಗೂ ಮೋಸ (ಸಂಧ್ಯಾವಂದನ ಮೊದಲಾದ ಧರ್ಮಗಳಲ್ಲಿ ಹೊಂದಾಣಿಸಿಕೊಂಡು) ಮಾಡಿಕೊಳ್ಳಲಿಲ್ಲ. ಅಹಂಕಾರ ಈರ್ಷೆ, ಅಸಹನೆ, ಇವ್ಯಾವವದೂ ಕಾಣಲಿಲ್ಲ. 

ಹೆಚ್ಚಿನದ್ದನ್ನು ಅಪೇಕ್ಷಿಸಿಲ್ಲ. ಕಡಿಮೆ ಮಾಡಿಕೊಳ್ಳಲಿಲ್ಲ. ಯಾವದನ್ನೂ ಬಿಡಲಿಲ್ಲ.  ಇರುವದರಲ್ಲಿ ಅತ್ಯಂತ ಸಮೃದ್ಧಿ ಹಾಗೂ  ಸಂತೃಪ್ತಿ. 

ತಾವೂ ತಮ್ಮ ಇಬ್ಬರ ಮಕ್ಕಳನ್ನೂ ಶಾಸ್ತ್ರಕ್ಕಾಗಿಯೇ ಮೀಸಲು ಇಟ್ಟರು. ಶಿಷ್ಯನಿಗೆ ಶ್ರೀಮನ್ಯಾಯ ಸುಧಾ ಗ್ರಂಥದವರೆಗೆ ಪಾಠಮಾಡಿದರು. ಅನೇಕ ವಾಕ್ಯಾರ್ಥಗಳಲ್ಲಿ ಭಾಗವಹಿಸಿದ್ದರು. ಮದರಾಸಿನ ಪೂಜ್ಯ ಆಚಾರ್ಯರ ದಿಗ್ವಿಜಯದ ಪೀಠಿಕೆ ಇವರೇ ಹಾಕಿದ್ದರು.  ಧರ್ಮಶಾಸ್ತ್ರದ ಉತ್ತಮ ಪುಸ್ತಕವನ್ನು ಸಂಪಾದಿಸಿ ಜಗತ್ತಿಗೆ ಕೊಟ್ಟರು. ಪೂಜ್ಯ ಆಚಾರ್ಯರು ಉಪದೇಶಿಸಿದ ಎಪ್ಪತ್ತೆರಡು ಮಹಾಮಂತ್ರಗಳನ್ನು ಯಾತಯಾಮವಾಗಲು ಬಿಟ್ಟುರಲಿಲ್ಲ.  ಸನ್ಯಾಸಿಗಳನ್ನೂ ದಿಗ್ಭ್ರಮೆಗೊಳಿಸುವ   ಇವರದು ಆಗಿತ್ತು. 

ಪರಮಪೂಜ್ಯ ಪರಮಾಚಾರ್ಯರಲ್ಲಿ ಹಾಗೂ ಪೂಜ್ಯ ಆಚಾರ್ಯರಲ್ಲಿ ಅಧ್ಯಯನ ಮಾಡಿದ, ಸೇವೆ ಸಲ್ಲಿಸಿದ ಕೀರ್ತಿ ಇವರದು. ಅತೀ ಸಣ್ಣ ವಿದ್ಯಾರ್ಥಿಗಳೊಟ್ಟಿಗೆಯೂ ವಿದ್ಯಾರ್ಥಿಯಂತೆಯೇ ಸರಳವಾಗಿ ಇರುತ್ತಿದ್ದರು. 

ನಾಸಿಕದಿಂದ ಅವರ ಬಂದರೆ ನನಗೆ ಖುಶಿ. ರಾತ್ರಿ ಹನ್ನೆರಡವರೆಗೂ ನಾನು ನನ್ನ ಗೆಳೆಯ ವಿಜಯಸಿಂಹ ಇಬ್ಬರೂ ಮಾತಾಡ್ತಾ ಕೂಡಬೇಕು. ನೂರಾರು ವಿಷಯಗಳನ್ನು ನಮ್ಮ ಗುರುಗಳಾಗಿ, ಗೆಳೆಯರಾಗಿ, ಸಖರಾಗಿ, ತಂದೆತಾಯಿಗಳಂತೆ ಎಲ್ಲ ಕ್ರಮದಲ್ಲಿಯೂ ಮಾತುಗಳನ್ಮು ಅನುಭವಗಳನ್ನೂ ಹೇಳಬೇಕು. ವಿಶೇಷವಾಗಿ ಪರಮಪೂಜ್ಯ ದೊಡ್ಡಾಚಾರ್ಯರ ಬಗ್ಗೆ ಹಾಗೂ ಈ ಆಚಾರ್ಯರ ಬಗ್ಗೆ ವಿಶೇಷವಾಗಿ ಭಕ್ತಿ ಮೂಡುವಂತೆ ದೃಢವಾಗುವಂತೆ ಹೇಳಬೇಕು. ಮೊನ್ನೆ ಪೂಜ್ಯ ಆಚಾರ್ಯರ ಷಷ್ಠಿಪೂರ್ತಿಯ ಪ್ರಸಂಗದಲ್ಲಿಯೂ ಪೂಜ್ಯ ಆಚಾರ್ಯರ ಅನುಗ್ರಹ ಕರುಣೆಯ ಬಗ್ಗೆ ಇಪ್ಪತ್ತು ನಿಮಿಷ ಹೇಳಿ ಉಪದೇಶಿಸಿದರು. 

ಗುಣವಂತಿಕೆ ಜ್ಙಾನ ಗುರುಭಕ್ತಿ ವಿಷ್ಣುನಿಷ್ಠೆ ಧರ್ಮನಿಷ್ಠೆ ಈ ಎಲ್ಲ ತರಹದ ಗುಣಗಳನ್ನು ರೂಢಿಸಿಕೊಂಡ, ಅಂತೆಯೇ ಗುಂಡಿನಂತೆ ಘಟ್ಟಿಯಾದ ಪಂ. ಗುಂಡಾಚಾರ್ಯರು ಮಂಜಿನಂತೆ ಕರಗಿ ಹೋಗಿದ್ದು ಮಾತ್ರ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. 

ಪೂಜ್ಯ ಆಚಾರ್ಯರಿಗೆ ದೇವತೆಗಳು ಸ್ವಾಗತಿಸುತ್ತಾರೆ. ದೇವರು ಸದ್ಗತಿ ಕೊಡುತ್ತಾನೆ. ಇದರಲ್ಕಿ ನನಗಂತೂ ಯಾವ ಸಂದೇಹವಿಲ್ಲ. ಅವರ ಪುತ್ರ ನಮ್ಮ ಹುಡುಗ, ನನ್ನ ತಮ್ಮನಂತಿರುವ  ಚಿ. ಪ್ರದ್ಯುಮ್ನ ಅವನಿಗೆ ವಿಶೇಷ ಧೈರ್ಯ ದೇವರು ಕೊಡಲಿ. ಅವರ ಅನುಗ್ರಹ ಸದಾ ಇರಲಿ...

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*