*"ವಾಯು" ದೇವರೆಂಬ ರತ್ನವನ್ನೇ ಪಡೆಯಬೇಕು.....*

*"ವಾಯು" ದೇವರೆಂಬ ರತ್ನವನ್ನೇ ಪಡೆಯಬೇಕು.....*

ರತ್ನಗಳನ್ನು ಪಡೆಯಲೇ ಭೂಮಿಗೆ ಬಂದಂತೆ ನಾವಿದ್ದೇವೆ. ಅಂತೆಯೆ ಒಂದಿಲ್ಲ ಒಂದು ರತ್ನವನ್ನು ನಾವು ಸಂಪಾದಿಸುತ್ತೇವೆ. ಆ ಎಲ್ಲ ರತ್ನಗಳೂ ಒಂದೆಡೆ ಆದರೆ *ವಾಯುದೇವರೆಂಬ* ರತ್ನ ಪಡೆದರೆ ಆಯ್ತು ಎಲ್ಲವೂ ದೊರಕಿದಂತೆಯೆ. ಯಾಕೆಂದರೆ...

*ಭೂಮಿಭೂಷಾ ಮಣೀರ್ಮೆ*

ತ್ರಿವಿಕ್ರಮ ಪಂಡಿತಾಚಾರ್ಯರು ತಮ್ಮ ಉದ್ಗ್ರಂಥವಾದ ವಾಯುಸ್ತುತಿಯಲ್ಲಿ "ಸಂಪೂರ್ಣ ಜಗತ್ತಿನಲ್ಲಿ ಅನರ್ಘ್ಯವಾದ ಭೂಷಾ ರತ್ನವೇನಾದರು ಇದ್ದರೆ ಅದು ನನ್ನ ಪಾಲಿಗೆ  *ವಾಯುದೇವರೇ ಭೂಷಾ ಮಣಿ*  ಎಂದು  ತಿಳಿಸುತ್ತಾರೆ. 

*ವಾಯುದೇವರೆಂಬ ಭೂಷಾ ಮಣಿಯಿಂದ ಲಾಭವೇನು...?*

ಭಕ್ತಿ ಬೆಳೆಯತ್ತೆ. ಜ್ಙಾನ ದೊರೆಯತ್ತೆ. ವೈರಾಗ್ಯ ವೃದ್ಧಿಸತ್ತೆ. ಪ್ರಜ್ಙಾ ವಿಶಿಷ್ಟರೀತಿಯಲ್ಲಿ ನೆನಪು ಉಳಿಯತ್ತೆ.  ಮೇಧಾ ಶಕ್ತಿ ಅಭಿವೃದ್ಧವಾಗುತ್ತದೆ. ಸಾಧನೆಯಲ್ಲಿ ಧೈರ್ಯ. ಸಾಧನಮಾರ್ಗದಲ್ಲಿ ಸ್ಥೈರ್ಯ. ಯೋಗ  ನಾನಾವಿಧವಾದ ಉಪಾಯಗಳು. ವಿಶಿಷ್ಟರೀತಿಯ ಮಹಾಬಲ. ಇತ್ಯಾದಿಯಾದ ಹತ್ತುಗುಣಗಳೇ ದೊರೆಯುತ್ತವೆ. ಇದುವೇ ಮಹಾ ಲಾಭ.

*ಲಕ್ಷ ಲಕ್ಷ ಉಪಯೋಗಗಳು....*

ಅರೋಗ್ಯ ಜ್ಙಾನ ಆಯುಷ್ಯ ಇವುಗಳನ್ನು ಕೊಡುವದೀ ರತ್ನ. ಸುಗ್ರೀವನಿಗೆ ಹಾರ ಹಾಕಿ, ವಾಲಿಯಿಂದ  ಬೇರ್ಪಡಿಸಿದ ಕಥೆ ಕೇಳಿದಾಗ *ವಾಯುದೇವರ ರಕ್ಷಾ ಕವಚವಿದ್ದರೆ ರಾಮ ರಕ್ಷಣೆ* ಎಂಬುವದು ದೃಢವಾಗುತ್ತದೆ. 

ಲಕ್ಷ್ಮಣ ಬಿದ್ದಾಗ ಎರೆಡರಡು ಬಾರಿ ಗಂಧ ಮಾದನ ಬೆಟ್ಟವನ್ನೇ ತಂದುದು ಈ ರತ್ನವೇ. ಎಷ್ಟೇ ಆಪತ್ತುಗಳು ಒದಗಿದರೂ, ಅಸಾಧ್ಯವಾದ  ಸಮುದ್ರ ದಾಟಿ ಶ್ರೀರಾಮ ಸೇವೆ ಮಾಡಿದ ಕಥೆ ಕೆಡಳಿದಾಗ, "ನಮ್ಮಿಂದ ಅಸಾಧ್ಯವಾದ, ನೂರಾರು ವಿಘ್ನಗಳು ಇರುವ, ಸಾಧನೆಯನ್ನೂ ಅನಾಯಾಸೇನ ಮಾಡಿಸುವದೀ ರತ್ನ‌" ಎಂಬ ಭಾವ ದೃಢವಾಗುತ್ತದೆ.

ವಿಭೀಷಣ ಕಾಲಿಗೆ ಬಿದ್ದಾಗ ಎಲ್ಲ ಕಪಿಗಳ ವಿರೋಧವಿದ್ದರೂ, ಹನುಮನ ಮಾತಿಗೆ ಬೆಲೆ ಕೊಟ್ಟು ವಿಭೀಷಣನನ್ಜು ಸ್ವೀಕರಿಸಿದ ರಾಮ ಈ ಕಥೆ ಕೇಳಿದಾಗ "ಹನುಮನೆಂಬ ರತ್ನವಿದ್ದರೆ ರಾಮ ಎಂದಿಗೂ ಕೈ ಬಿಡ" ಎಂಬುವದು ದೃಢವಾಗುತ್ತದೆ. 

ರಾವಣ ಕುಂಭಕರ್ಣರನ್ನು ಸಂಹರಿಸುವ ಪ್ರಸಂಗ ಎದುರಾದಾಗಲೂ "ಇವರೀರ್ವರ ಸಂಹರಿಸಿದ ಕೀರ್ತಿ ನಮ್ಮ ಸ್ವಾಮಿಗೇ ಬರಲಿ" ಎಂಬ ಕಥೆ ಕೇಳಿದಾಗ ವಿನಾ ಕಾರಾಣ ಇನ್ನೊಬ್ಬರು ಮಾಡಿದ ಸಾಧನೆಯನ್ನು ನಾ ಮಾಡಿದೆ ಎಂದು ಗುರುಗಳ ಮುಂದೆ ಹೇಳಿ, ಪರರ ಕೀರ್ತಿ ಪಡೆಯುವ ನೀಚ ಕೆಲಸಕ್ಕೆ ಕೈ ಹಾಕಬಾರದು ಎಂದು ತಿಳಿಸುತ್ತದೆ ಈ ರತ್ನ. 

*ನಿನಗೇನೋ ಬೇಕು....???* 

"ನಿನಗೆನೋ ಬೇಕು..?? ಎಂದು ಶ್ರೀ ರಾಮನೇ ಖುದ್ದಾಗಿ  ಕೇಳಿದರೆ "ನನಗೇನೂ ಬೇಡ" ಎಂದೇ ಹೇಳಿ "ಶ್ರಿರಾಮನ ಆಲಿಂಗನವನ್ನೇ ಪಡೆದ" ಕಥೆ ಕೇಳಿದಾಗ "ಬೇಡ ಬೇಡ ಎಂದರೆ ದೇವ ತನ್ನನ್ನೇ ಕೊಡುತ್ತಾನೆ" ಎಂಬ ಭಾವವನ್ನು ಮೂಡಿಸುವದೀ ರತ್ನ. 

ಈ ಮಣಿಯನ್ನು ಕಳ್ಳರು ಕದಿಯಲ್ಲ. ಈ ಮಣಿ ಭೋಗಿಸಿದರೆ ಸವಿಯುವದಿಲ್ಲ.  ಟಿಜೋರಿಯಲ್ಲೇ ಇಡುವ ಪ್ರಸಂಗವಿಲ್ಲ. ಸದಾ ನಮ್ಮೊಟ್ಟಿಗೆ ಇರುವ, ನಮ್ಮ‌ಆಪತ್ತಿಗೆ ಒದಗುವ, ನಮಗೆ ಸರ್ವ ವಿಧವಾದದ್ದನ್ನೂ ಕೊಡುವ, ನಿತ್ಯವೂ ಅಭಿವೃದ್ಧಿಸುವ, ಅನರ್ಘ್ಯವಾದ ರತ್ನವೆಂದರೆ ಅದು *ವಾಯು ದೇವರೆಂಬ ರತ್ನ.*

ಈ "ವಾಯು" ಎಂಬ ರತ್ನದ ಸಂಪಾದನೆಯ ಗುರಿ ಈ ಮಧ್ವ ನರಾತ್ರೋತ್ಸವದ ಈ ಪ್ರಸಂಗ. ಪರಿಪೂರ್ಣ ಲಾಭವನ್ನು ಪಡೆಯೋಣ.

*ನ್ಯಾಸ...✍🏽✍🏽*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*