Posts

*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....*

Image
*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....* ಎರಡು ದಿನದಲ್ಲಿ ನಮ್ಮ ನೆಚ್ಚಿನ ದೇವತೆ ಗಣಪ್ಪ ಬರುವವನಿದ್ದಾನೆ. ಮುಂದಿನ ಸಂಪೂರ್ಣ ಒಂದು ವಾರ ಗಣಪತಿಯ ಹಬ್ಬದ ಉತ್ಸವದ ವಾರ. "ಗಣಪತಿ ಒಬ್ಬ ದೇವತೆ" ಎನ್ನುವದನ್ನು ಇಂದಿನ ಜನತೆ ಮರೆತಂತೆ ಇದೆ. ಗಣಪತಿ ಆಕಾಶಕ್ಕೆ ಅಭಿಮಾನಿ. ದೇವರಿಗೆ ಅತ್ಯಂತ ಪ್ರಿಯ. ನಮ್ಮ ವಿಘ್ನನಿವಾರಕ ಸ್ವಾಮಿ. ಎಂದೂ ಮರೆಯುವಂತಿಲ್ಲ.  *ಗಣಪತಿ ದೇವತೆ ಎನ್ನುವದನ್ನು ನಾವೆಲ್ಲಿ ಮರೆತಿದ್ದೇವೆ... ??* ಗಣಪತಿ ದೇವತೆ ಎನ್ನುವದನ್ನು ನಾವು ಮರೆತಿಲ್ಲ ನಿಜ. ನಮ್ಮ ವೃತ್ತಿ ಮಾತ್ರ ಮರೆತಂತೆ ತೋರಿಸುತ್ತದೆ. ದೇವತೆ ಎಂಬ ಭಾವ ನೆನಪಿದ್ದರೆ ದೇವತೆಗೆ ಅವಮಾನವಾಗುವ ಯಾವ ಕ್ರಿಯೆಯೂ ಆಗುತ್ತಿರಲಿಲ್ಲ.  *ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....* ಹಾಲಿನ ಅಂಗಡಿಯಲ್ಲಿ ಮೊಸರು ಇಟ್ಟರೆ ಶೋಭೆ. ಶ್ರೀಖಂಡ ಬಾಸುಂದಿ ಫೇಡೆ ಮೊದಲಾದ ಹಾಲಿನ ಪದಾರ್ಥಗಳನ್ನೇ ಇಟ್ಟರೆ ಆ ಅಂಗಡಿಗೂ ಯಜಮಾನನಿಗೂ ಕೀರ್ತಿ ಜೊತೆಗೆ ತೃಪ್ತಿ. ಜೊತೆಗೆ ಹಾಲಿನ ಅಂಗಡಿಯಲ್ಲಿ "ಹೆಂಡವನ್ನೂ ಇಟ್ಟರೆ" ಹಾಲಿನ ಅಂಗಡಿಗೇ ಅವಮಾನ. ಹಾಗೆಯೆ ಇಂದು ಮಹಾನ್ ದೊಡ್ಡ ದೇವತೆಯಾದ, ವಿಷ್ಣುಪ್ರಿಯನೂ ಆದ, ನಮ್ಮೆಲ್ಲರ ನೆಚ್ಚಿನ ದೊರೆಯಾದ ಗಣಪತಿಯ ಎದರು ವೇದಮಂತ್ರಗಳನ್ನು ಅಂದರೆ ಮಹಾ ತೃಪ್ತಿ. ಪುರಂದರ ವಿಜಯ ಕನಕದಾಸರುಗಳು - ಮೀರಾಬಾಯಿ - ಕಬೀರದಾಸ - ಅನ್ನ...

*ನಾವು ಕರೆದರೆ ದೇವನು ಏಕೆ ಬರುವದಿಲ್ಲ..... ಎಂಬ ಪ್ರಶ್ನೆ ಉಚಿತವೇ??*

*ನಾವು ಕರೆದರೆ ದೇವನು ಏಕೆ ಬರುವದಿಲ್ಲ..... ಎಂಬ ಪ್ರಶ್ನೆ ಉಚಿತವೇ..??* "ಭಕ್ತಪ್ರಿಯಂ" ಭಕ್ತರಿಗೆ ಅತ್ಯಂತ ಪ್ರಿಯ ಎಂದು ಶ್ರೀಮದ್ಬಾಗವತ ದೇವರನ್ನು ಕರೆಯುತ್ತದೆ. ಭಕ್ತರಮೇಲೆ ಅಷ್ಟು ಪ್ರೀತಿಸುವ ದೇವ ಭಕ್ತರಾದ ನಾವು ಕರೆದರೆ ಓ ಎನ್ನುವದಿಲ್ಲವೇಕೆ.. ?? ಬರುವದಂತೂ ದೂರದ ಮಾತು ಅಲ್ಲವೆ... ?? ಎಂದು ಅನೇಕ ಬಾರಿ ಅನಿಸಿದ್ದು ಇದೆ.  ಕರದರೆ ಬಾರದಷ್ಟು ದುಷ್ಟನು ದೇವನಲ್ಲ. ಹೇಗೆ ಕರಿಯಬೇಕೋ ಹಾಗೆ ಕರೆದರೆ, ಹೆಂಡತಿಯನ್ನೂ ಪಕ್ಕಕ್ಕಿರಿಸಿ ಓಡಿ ಬರುವಷ್ಟು ಕರುಣಿಯಾಗಿದ್ದಾನೆ ದೇವ. ಕರಿಯುವ ಪ್ರಕಾರದಲ್ಲಿ ಕರಿಯಬೇಕಷ್ಟೆ...  "ನಾರಾಯಣ ಅಖಿಲ ಗುರೋ ಭಗವನ್ನಮಸ್ತೆ" ಎಂದು ಗಜೇಂದ್ರ ಕರೆದ, ಓಡಿಬಂದ ದೇವ. ಪ್ರಹ್ಲಾದ ಕರೆದ ಓಡಿಬಂದ ದೇವ. ದ್ರೌಪದಿ ಕರೆದಳು ಓಡಿಬಂದ ದೇವ. ಇವರೆಲ್ಲರು ಹೇಗೆ ಕರೆದರೋ ಹಾಗೆ ನಾವು ಕರೆದರೆ ಓಡಿಬರದೇ ಇರಲಾರ.  *ದ್ರೌಪದೀ ಗಜೇಂದ್ರ ಪ್ರಲ್ಹಾದ ಇವರು ಹೇಗೆ ಕರೆದರು....* ದ್ರೌಪದೀ ಗಜೇಂದ್ರ ಪ್ರಲ್ಹಾದ ಈ ಎಲ್ಲ ಭಕ್ತರು ದೆವನನ್ನು ಕರೆಯುವದಕ್ಕೂ ಪೂರ್ವದಲ್ಲಿ ದೇವರಿಗೋಸ್ಕರ ತನ್ನನ್ನು ತಾವು ಪರಿಪೂರ್ಣ ಸಮರ್ಪಿಸಿಕೊಂಡವರು. ತಮ್ಮ ಸಮಯವನ್ನು ದೇವರಿಗೋಸ್ಕರ ಮೀಸಲು ಇಟ್ಟವರು. ತಮ್ಮ ದೇಹ ಇಂದ್ರಿಯ ಮನಸ್ಸು ಕುಟುಂಬ ಹಣ ಧನ ಕನಕ ಮನೆ ಎಲ್ಲವನ್ನೂ  ದೇವರಿಗೆ ಸಮರ್ಪಿಸಿದವರು ಇವರು. ದೇವರಾಜ್ಙಾ ರೂಪ ಧರ್ಮಪಾಲನೆಯಲ್ಲಿ ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ಳದವರು ಇವ...

*ಓ ಸಿಟ್ಟು ಕೊಲ್ಲುವ ದೇವ ನಿನಗೆ ನಮಸ್ಕಾರ*

Image
*ಓ ಸಿಟ್ಟು  ಕೊಲ್ಲುವ ದೇವ ನಿನಗೆ ನಮಸ್ಕಾರ* "ಕ್ರೋಧಘ್ನೇ ನಮಃ" ಎಂದು ವಿಷ್ಣುಸಹಸ್ರ ನಾಮದಲ್ಕಿ ಬಂದ ಒಂದು ಅತ್ಯುತ್ತಮ ರೂಪ. ಕ್ರೋಧವನ್ನು ಸಿಟ್ಟನ್ನು ನಾಶ ಮಾಡುವ ದೇವರ ರೂಪ. ನಿತ್ಯ ಚಿಂತನೆಗೆ ಯೋಗ್ಯವೂ ಆದ ರೂಪ.  *ಸಿಟ್ಟು ಯಾಕೆ ಬರತ್ತೆ......??* ಸಿಟ್ಟು ಯಾಕೆ ಬರತ್ತೆ..?? ಎಂದು ಕೇಳಿದರೆ ನಿರ್ದಿಷ್ಟ ನಿಖರ ಕಾರಣಗಳನ್ನು ಹೇಳುವದು ಕಷ್ಟ ಎಂದು ಅನೇಕರು ಹೇಳುವದಿದೆ. ಆದರೆ ಶ್ರೀಕೃಷ್ಣ ಪರಮಾತ್ಮ *ಕಾಮಾತ್ ಕ್ರೋಧೋಭಿಜಾಯತೇ* ಎಂದು ಗೀತೆಯಲ್ಲಿ ತಿಳಿಸಿದಂತೆ "ತನ್ನ ಇಚ್ಛೆಗಳು ಈಡೇರದಿರುವಾಗ ಸಿಟ್ಟು ಬರುವದು" ಎಂದು ತಿಳಿಸಿಕೊಡುತ್ತಾನೆ.  ಹಸಿದವನಿಗೆ ಸಿಟ್ಟು ಬರತ್ತೆ ಇಲ್ಲೆಲ್ಲಿ ಅವನ ಇಚ್ಛೆ ವಿಫಲವಾಗಿದೆ ?? ಎಂದು ಪ್ರಶ್ನೆ ಬರಬಹುದು. ತಾನೊಂದು ಇರಿಸಿಕೊಂಡ ಸಮಯಕ್ಕೆ ಊಟವಾಗಿಲ್ಲ. ಹಾಗಾಗಿ ಸಿಟ್ಟೇ ಹೊರತು. ಹಸಿವೆ ಸಿಟ್ಟಿಗೆ ಕಾರಣವಲ್ಲ. ಏಕಾದಶಿ ಕೃಷ್ಣಾಷ್ಟಮಿ ಸಿಟ್ಟಿನಲ್ಲೇ ಕೊಳೆಯಬೇಕಾಗುತ್ತಿತ್ತು.  *ಕ್ರೋಧಘ್ನೇ ನಮಃ* ನನ್ನ ಮಾತು ಕೇಳಿಲ್ಲ ಹಾಗಾಗಿ ನಮ್ಮವರ ಮೇಲೆ ಸಿಟ್ಟು.  ಧರ್ಮ ತಾನು ನಾನು ಬಯಸಿದ ಫಲ ಕೊಟ್ಟಿಲ್ಲ ಹಾಗಾಗಿ ಧರ್ಮದಮೇಲೆ ಸಿಟ್ಟು. ದೇವರ ವಿಷಯಕವೂ ಹೀಗೆಯೇ. ಎದ್ದರೆ ಸಿಟ್ಟು, ಕೂಡೆಂದರೆ ಸಿಟ್ಟು, ಮಲಗಿದರೆ ಸಿಟ್ಟು, ಊಟವಾದರೆ ಸಿಟ್ಟು, ಮಾತಾಡಿದರೆ ಸಿಟ್ಟು, ಹೀಗೆ ಎಲ್ಲದರ ಮೇಲೇ ಸಿಟ್ಟು ಮಾಡಿಕೊಳ್ಳಲಿಕ್ಕೆ ಸಿಟ್ಟನ್ನೇನು ನಾವು ಖರೀದಿ ಮಾಡ...

*ಚಿಣ್ಣರಿಗೆ ಕೃಷ್ಣನ ಸವಿನುಡಿಗಳು....*

Image
*ಚಿಣ್ಣರಿಗೆ ಕೃಷ್ಣನ ಸವಿನುಡಿಗಳು....* ಕೃಷ್ಣನಿಗೆ ಚಿಣ್ಣರೆಂದರೆ ಬಲುಪ್ರೀತಿ. ಚಿಣ್ಣರನ್ನು ಬದಲು ಮಾಡಲು ತುಂಬ ಅಭಿರುಚಿ. ಚಿಣ್ಣರಿಂದಲೇ ಹೊಸಬದುಕಿನ ಆಸಕ್ತಿ. ಸಮೃದ್ಧ ಜೀವನದ ನಿರ್ಮಾಣಕ್ಕೋಸ್ಕರವೇ ಚಿಣ್ಣರ ಅಭಿವ್ಯಕ್ತಿ. ಅಂತೆಯೇ ಕೃಷ್ಣನಿಗೆ ಚಿಣ್ಣರೂ ಎಂದರೆ ಎಲ್ಲಿಲ್ಲದ ರುಚಿ.  *ಶ್ರೀಕೃಷ್ಣ ಪ್ರೀತಿಸುವಷ್ಟು ಚಿಣ್ಣರಲ್ಲಿ ಏನಿದೆ ...* ಇವತ್ತು ಸೃಷ್ಟಿಗೆ ಬರುವ ಜೀರು ಅನಂತ ಅನಂತ. ಆ ಎಲ್ಲ ಜೀವರಾಶಿಗಳಿಗೂ ತಮ್ಮ ಜೀವನದ ಉದ್ದೇಶ್ಯ ಗೊತ್ತಾಗುವದರೊಳಗೇ ಜೀವನದ ಕೊನೆಯ ಉಸಿರು ಬಂದಾಗಿರುತ್ತದೆ. "ಸ್ಪಷ್ಟ ಉದ್ದೇಶ್ಯ ತಿಳಿಸಿ ಉದ್ದೇಶ್ಯ ಸಿದ್ದಿಗೆ ಕ್ರಿಯಾಶೀಲನನ್ನಾಗಿಸುವ ಸರಿಯಾದ ಸಮಯ ಎಂದರೆ ಅದು ಬಾಲ್ಯಾವಸ್ಥೆ" ಹಾಗಾಗಿ ಅರಳುವ  ಚಿಣ್ಣರೂ ಎಂದರೆ ಕೃಷ್ಣನಿಗೆ ಪ್ರೀತಿ.  *ಶೈಶವಾವಸ್ಥೆ ಅಂತಹದ್ದೇನಾಗಿದೆ....* ಶೈಶವ ಅವಸ್ಥೆಯಲ್ಲಿ ಏನಿಲ್ಲ. "ಹೊಟ್ಟೆ ತುಂಬ ಊಟ, ಕಣ್ಣು ತುಂಬ ನಿದ್ರೆ, ಮುಖದ ತುಂಬಿ ನಗು" ಇಷ್ಟಿದೆ ಎಂದೆ ನಮ್ಮ ತಿಳುವಳಿಕೆ. ಕೃಷ್ಣನ ವಿಚಾರವೇ ಬೇರೆ. ಹೆಮ್ಮರವಾಗಿ ಬೆಳೆಯುವ ಈ ಗಿಡವನ್ನು ಹೇಗೆ ಬೆಳಿಸಬೇಕು ಎಂದು ತಿಳಿಸುವ ಬೆಳೆಸುವ ಸಮಯ ಅಂದರೆ ಅದು ಶೈಶವ ಅವಸ್ಥೆ.  *ಉದ್ದೇಶ್ಯಗಳ ಅರಿವು ಮೂಡಿಸುವದು ಮೊದಲ ಕಾರ್ಯ* ಸಾಧನೆಗೋಸ್ಕರ ಬಂದವರು ನಾವು. ನಾಳೆ ಮಾಡಿದರಾಯ್ತು ಎಂದು ಸಾಧನೆಯನ್ನು ಮುಂದೂಡುವವರೂ ನಾವೇ.  ಕೃಷ್ಣ ಭೂಮಿಗೆ ಬರುವ ಉದ್ದ್...

*ಮನ ಮನೆಯಲ್ಲಿ ಹುಟ್ಟಿ ಮತ್ತೆ ಹುಟ್ಟಿ ಬಾ ಕೃಷ್ಣ...!!*

Image
*ಮನ ಮನೆಯಲ್ಲಿ ಹುಟ್ಟಿ ಮತ್ತೆ ಹುಟ್ಟಿ ಬಾ ಕೃಷ್ಣ...!!* ಐದು ಸಾವಿರ ವರ್ಷದ ಹಿಂದೆ ಧರ್ಮ ರಕ್ಷಣೆ ಹಾಗೂ ದುಷ್ಟ ಶಿಕ್ಷೆಗೆ ಹುಟ್ಟಿ ಬಂದ ಕೃಷ್ಣ, ಇಂದು ಪುನಃ ನಮ್ಮ ಮನೆ ಮನಗಳಲ್ಲಿ ಹುಟ್ಟಿ ಬರಬೇಕಾಗಿದೆ. ಅದಕ್ಕೋಸ್ಕರ ನಾಳೆಯ ಕೃಷ್ಣಾಷ್ಟಮಿ ಆಚರಣೆ... ಕಲಿಯ ರಾಜ್ಯದಲ್ಲಿ ಮನಸ್ಸಿಗೆ ಅಭಿಮಾನಿ ಕಾಲನೇಮಿ. ಒಂದರ್ಥದಲ್ಲಿ ಗೃಹ ಮಂತ್ರಿ ಇದ್ದ ಹಾಗೆ. ಈ ಕಾಲನೇಮಿ ಮನೆಯಲ್ಲೋ ಅಥವಾ ಮನದಲ್ಲಿಯೋ ಕೃಷ್ಣ ನಿದ್ದಾಗ ಇರಲಾರ. ಕೃಷ್ಣ ಬಂದರೆ ಸಂಹಾರ ಮಾಡಿಯೇ ಬಿಡುವ.  *ಮನೆ ಹಾಗೂ ಮನದಲ್ಲಿ ಕೃಷ್ಣನಿಲ್ಲವೆ...* ಮನೆ ವಿಸ್ತಾರವಿದೆ. ಮನಸ್ಸು ತುಂಬ ವಿಶಾಲವಿದೆ. ಆದರೆ ಕೃಷ್ಣನಿಗೆ ಮಾತ್ರ ಸ್ಥಳಾವಕಾಶ ಇಲ್ಲವೇ ಇಲ್ಲ. ಆದ್ದರಿಂದಲೇ ಮನೆ ಒಂದು ದಿಕ್ಕಿಗೆ ಮನ ಮತ್ತೊಂದು ದಿಕ್ಕಿಗೆ ಹೊಗುತ್ತಿವೆ.  ಹೀಗಾಗಿ ಮನೋಭಿಮಾನಿ ಕಾಲನೇಮಿ ಕಂಸ ಮನೆಯಲ್ಲೆಲ್ಲ ಮನಸ್ಸಿನಲ್ಲೆಲ್ಲ ವ್ಯಾಪಿಸಿ ಕುಳಿತುಕೊಂಡಿದ್ದಾನೆ. ಈ ಕಾಲನೇಮಿ ಕಂಸ  ಹೆಚ್ಚು ಸಮಯ ಧರ್ಮದಿಂದ ದೂರ ಇರುವಂತೆ ನೋಡಿಕೊಳ್ಳುತ್ತಾನೆ. ಅಧರ್ಮದಲ್ಲಿ ರುಚಿ ಹಚ್ಚಿಸುತ್ತಾನೆ. ಅಧರ್ಮದಲ್ಲಿ ಪ್ರೇರೇಪಿಸುತ್ತಾ ಇರುತ್ತಾನೆ.  *ಕೃಷ್ಣನನ್ನು ಮನೆ ಮನಕ್ಕೆ ಕರದಿಲ್ಲವೆ....* ಮನೆಗೆ ನೂರಾರು ಬಂಧು ಬಾಂಧವರನ್ನು ಗೆಳೆಯರನ್ನು ಕರೆತರುತ್ತವೆ ಹಾಗೆ "ಕೃಷ್ಣ ನೀ ಬೇಗನೇ ಬಾರೋ" ಎಂದು ಕರಿಲಿಕ್ಕೆ ಸಾಧ್ಯವಿಲ್ಲ. ತಪ್ಪಿ ಕೃಷ್ಣನನ್ನು  ಕರದರೆ ಮೈಮೇಲೆ ಬರತ್...

*ನೆನಪಿನ ಶಕ್ತಿ*

Image
*ನೆನಪಿನ ಶಕ್ತಿ* ದೇವರು ಕೇಳದೇ ಕೊಟ್ಟ ನೂರಾರು ಪದಾರ್ಥಗಳಲ್ಲಿ ಅತ್ಯಮೂಲ್ಯಪದಾರ್ಥ ಅದು "ನೆನಪಿನಶಕ್ತಿ" ಎಂದರೆ ತಪ್ಪಾಗಲಿಕ್ಕಿಲ್ಲ.  ಹುಟ್ಟಿದಾಗಿನಿಂದ ಸಾಯುವವರೆಗೆ ಒಟ್ಟು ಬದುಕಿನಲ್ಲಿ ಹತ್ತು ಕೋಟಿ ಕೋಟಿ ವಿಷಯಗಳನ್ನು ನೆನಪನಲ್ಲಿ ಇಟ್ಟುಕೊಳ್ಳತ್ತದೆ ಎಂದು ಒಂದು ಅಂದಾಜು.  ತಾಯಿಯನ್ನು ನೋಡಿ ಗುರುತು ಹಿಡಿಯುವದು, ಅಮ್ಮಾ ಎಂದು ತಾಯಿ ಹೇಳುತ್ತಿದ್ದಂತೆ ಪುನಃ ಹೇಳುವದು, ಹೆಸರಿಟ್ಟು ಕರೆದಾಕ್ಷಣ ತಿರುಗಿ ನೋಡುವದು ಹೀಗೆ ಒಂದೊಂದನ್ನೂ ನೆನಪಿನಲ್ಲಿಟ್ಟುಕೊಳ್ಳುವ ಕೆಲಸ ಮೆದುಳಿನ ಕೆಲಸಗಳು. ಈ ರೀತಿ ಒಬ್ಬ ವ್ಯಕ್ತಿ ಬದುಕಿನಲ್ಲಿ ನೆನಪಿಟ್ಟುಕೊಂಡ ಪದಗಳು ಆಲೋಚನೆಗಳು, ವಸ್ತುಗಳು, ವಿಷಯಗಳು ಎಲ್ಲವನ್ನೂ ಒಂದೆಡೆ ಕ್ರೋಡೀಕರಿಸಿ ಬರೆದರೆ ಹತ್ತುಕೋಟಿ ಐವತ್ತುಲಕ್ಷ ಮೈಲು  ಆಗುತ್ತದೆ ಎಂದು ಒಂದು ಅಂದಾಜು ಅಷ್ಟೆ.  ಇಷ್ಟು ಅಗಾಧವಾದ ಶಕ್ತಿ ಒಂದು ಕಿಲೋಗ್ರಾಮಿನ ಮೆದುಳಿಗೆ ದೇವರುಕೊಟ್ಟಿದ್ದಾನೆ. ಈ ಒಂದು ಮೆದುಳಿಗೆ ಸಹಾಯಕವಾಗಿ  ಲಕ್ಷಕೋಟಿ ನರಗಳು ಅನುಕ್ಷಣವೂ ಬಿಡದೆ ಕೆಲಸ ಮಾಡುತ್ತಿರುತ್ತವೆ.  ಒಂದು ಕಿಲೊ ಗ್ರಾಂ ಅಷ್ಟಿರುವ ಮೆದಳಿನಲ್ಲಿ ಅಂದಾಜು ಲಕ್ಷ ಕೋಟಿ‌ ನರಗಳು ಇರುತ್ತವೆ ಎಂದರೆ ಎಷ್ಟು ಸೂಕ್ಷ್ಮವಾಗಿ ಇರುತ್ತವೆ ಎಂದು ಯೋಚಿಸಬೇಕು.  "ಒಂದು ದೊಡ್ಡ ಕಾಂಪ್ಯುಟರ್ ಆಫೀಸಿನ ಹಾಲಿನಲ್ಲಿ ಕೋಟಿಜನ ತಲೆ ಎತ್ತದೆ ಕೆಲಸ ಮಾಡುತ್ತಿರುತ್ತಾರೆ" ಎನ್ನುವದನ್ನು ಊಹಿಸಿ ನೋ...

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

Image
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ಗುರುಸಾರ್ವಭೌಮರಾದ ಶ್ರೀಶ್ರೀರಾಘವೇಂದ್ರ ಪ್ರಭುಗಳ ಆರಾಧನಾ ಮಹೋತ್ಸವ. ಆ ಮಹಾಮಹಿಮರ ಚರಮಶ್ಲೋಕದ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡೋಣ.  *ಪೂಜ್ಯಾಯ* - ಶ್ರೀಮಟ್ಟೀಕಾಕೃತ್ಪಾದರು ವ್ಯಾಸರಾಜರು ಶ್ರೀರಘೂತ್ತಮರ ತರುವಾಯ ಜಗತ್ತಿನಲ್ಲಿಯೇ ಪರಮಪೂಜ್ಯರಾದ. *ಸತ್ಯ ಧರ್ಮರತಾಯ ಚ* - ಸತ್ಯ ಹಾಗೂ ಭಾಗವತಧರ್ಮಗಳಲ್ಲೇ ರತರಾದ. *ಭಜತಾಂ ಕಲ್ಪವೃಕ್ಷಾಯ* - ಸೇವೆ ಮಾಡುವ ಸದ್ಭಕ್ತರಿಗೆ ಕಲ್ಪವೃಕ್ಷದಂತೆ ಸರ್ಸ್ವವನ್ನೂ ಕೊಡುವ. *ನಮತಾಂ ಕಾಮಧೇನವೇ* - ನಮಸ್ಕಾರ ಮಾಡುವ ಭಕ್ತರಿಗೆ ಕಾಮಧೇನುವಿನಂತಿರುವ. *ರಾಘವೇಂದ್ರಾಯ* ಶ್ರೀರಾಘವೇಂದ್ರ ಪ್ರಭುಗಳಿಗೆ. *ನಮಃ* - ನಮಸ್ಕಾರಗಳು.  ವಿವರಣೆ..... ಹಿರಿಯರು ಎಂದಿಗೂ ನಮಗೆ ಆದರ್ಶ ಪುರುಷರೇ. ತಮ್ಮ ನಡೆ ನುಡಿಗಳಿಂದ ನಮಗೂ ಮಾರ್ಗ ತೋರಿಸಿಟ್ಟಿರುತ್ತಾರೆ. ಅತ್ಯುತ್ತಮರಾದ ರಾಯರೂ ಮಹಾನ್ ಆದರ್ಶರೇ ಮಾರ್ಗದರ್ಶಕರೇ.  *ರಾಯರು ಪೂಜ್ಯರು ಏಕೆ  ಹೇಗೇ.....* ಪೂಜ್ಯತೆಗೆ ಕಾರಣ ಒಂದು ಧರ್ಮಾಚರಣೆ ಇನ್ನೊಂದು ನಿಸ್ವಾರ್ಥ ಪರೋಪಕಾರ. ರಾಯರಲ್ಲಿ ಈ ಎರಡೂ ಗುಣಗಳು ನಿಸ್ಸೀಮವಾಗಿದ್ದವು. ಅಂತೆಯೇ ಇಂದಿಗೂ ಎಂದೆಂದಿಗೂ ಪೂಜ್ಯರೆ. *ಧರ್ಮಪರಾಯಣರು ರಾಯರು...* ಭಾಗವತ ಧರ್ಮಗಳನ್ನು ರೂಢಿಸಿಕೊಂಡವರು ರಾಯರು. ಎಲ್ಲ ಧರ್ಮಗಳೂ ಅವರ ನರನಾಡಿಗಳಲ್ಲಿ ಇದ್ದವು. ಆ ಎಲ...