*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....*
*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....* ಎರಡು ದಿನದಲ್ಲಿ ನಮ್ಮ ನೆಚ್ಚಿನ ದೇವತೆ ಗಣಪ್ಪ ಬರುವವನಿದ್ದಾನೆ. ಮುಂದಿನ ಸಂಪೂರ್ಣ ಒಂದು ವಾರ ಗಣಪತಿಯ ಹಬ್ಬದ ಉತ್ಸವದ ವಾರ. "ಗಣಪತಿ ಒಬ್ಬ ದೇವತೆ" ಎನ್ನುವದನ್ನು ಇಂದಿನ ಜನತೆ ಮರೆತಂತೆ ಇದೆ. ಗಣಪತಿ ಆಕಾಶಕ್ಕೆ ಅಭಿಮಾನಿ. ದೇವರಿಗೆ ಅತ್ಯಂತ ಪ್ರಿಯ. ನಮ್ಮ ವಿಘ್ನನಿವಾರಕ ಸ್ವಾಮಿ. ಎಂದೂ ಮರೆಯುವಂತಿಲ್ಲ. *ಗಣಪತಿ ದೇವತೆ ಎನ್ನುವದನ್ನು ನಾವೆಲ್ಲಿ ಮರೆತಿದ್ದೇವೆ... ??* ಗಣಪತಿ ದೇವತೆ ಎನ್ನುವದನ್ನು ನಾವು ಮರೆತಿಲ್ಲ ನಿಜ. ನಮ್ಮ ವೃತ್ತಿ ಮಾತ್ರ ಮರೆತಂತೆ ತೋರಿಸುತ್ತದೆ. ದೇವತೆ ಎಂಬ ಭಾವ ನೆನಪಿದ್ದರೆ ದೇವತೆಗೆ ಅವಮಾನವಾಗುವ ಯಾವ ಕ್ರಿಯೆಯೂ ಆಗುತ್ತಿರಲಿಲ್ಲ. *ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....* ಹಾಲಿನ ಅಂಗಡಿಯಲ್ಲಿ ಮೊಸರು ಇಟ್ಟರೆ ಶೋಭೆ. ಶ್ರೀಖಂಡ ಬಾಸುಂದಿ ಫೇಡೆ ಮೊದಲಾದ ಹಾಲಿನ ಪದಾರ್ಥಗಳನ್ನೇ ಇಟ್ಟರೆ ಆ ಅಂಗಡಿಗೂ ಯಜಮಾನನಿಗೂ ಕೀರ್ತಿ ಜೊತೆಗೆ ತೃಪ್ತಿ. ಜೊತೆಗೆ ಹಾಲಿನ ಅಂಗಡಿಯಲ್ಲಿ "ಹೆಂಡವನ್ನೂ ಇಟ್ಟರೆ" ಹಾಲಿನ ಅಂಗಡಿಗೇ ಅವಮಾನ. ಹಾಗೆಯೆ ಇಂದು ಮಹಾನ್ ದೊಡ್ಡ ದೇವತೆಯಾದ, ವಿಷ್ಣುಪ್ರಿಯನೂ ಆದ, ನಮ್ಮೆಲ್ಲರ ನೆಚ್ಚಿನ ದೊರೆಯಾದ ಗಣಪತಿಯ ಎದರು ವೇದಮಂತ್ರಗಳನ್ನು ಅಂದರೆ ಮಹಾ ತೃಪ್ತಿ. ಪುರಂದರ ವಿಜಯ ಕನಕದಾಸರುಗಳು - ಮೀರಾಬಾಯಿ - ಕಬೀರದಾಸ - ಅನ್ನ...