*ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ.....*
*ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ.....* ಶ್ರೀಮದ್ಭಾಗವತದಲ್ಲಿ ಸಜ್ಜನರ ಸಹವಾಸದ ಲಾಭವನ್ನು ಕೊಂಡಾಡುತ್ತಾ "ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ....." ಈ ಶ್ಲೋಕವನ್ನು ಉದಾಹರಿಸುತ್ತಾ ಒಂದು ಉತ್ಕೃಷ್ಟ ಪ್ರಮೇಯವನ್ನು ತಿಳಿಸಿಕೊಡುತ್ತದೆ. ಗುಣವಂತ ಸಜ್ಜನ. ಗುಣಗಳು ಪ್ರಕಾಶಮಾನವಾದವುಗಳು. ಪ್ರಕಾಶಮಾನ ಗುಣಗಳು ತನ್ನ ಪ್ರಕಾಶವನ್ನು ಹರಡದೇ ಬಿಡದು. ಸಜ್ಜನನ ಸಜ್ಜನಿಕೆಯ ಗುಣಗಳ ಪ್ರಕಾಶ, ತಮ್ಮ ಸನಿಹ ಬಂದವರ ಮನಸ್ಸಿನಮೇಲೆ ಬೀಳುವದು ನಿಶ್ಚಿತ. ಅದೇರೀತಿ ದುರ್ಜನರ ದುರ್ಗಣಗಳೂ. ಸಜ್ಜನ ಕಠೋರ. ದುರ್ಜನ ಆಹ್ಲಾದಕರ. ಸಜ್ಜನಿಕೆಗೆ ಅಡ್ವಟೇಸ್ ಕಡಿಮೆ. ದುರ್ಜನನಿಗೆ ಪ್ರಚಾರ ಹೆಚ್ಚು. "ಕಠೋರತೆಗೆ ಬೆದರಿ ಆಕರ್ಷಣೆಗೆ ಮೋಸಹೋದರೆ ಸಿಗುವದು ಪ್ರಪಾತ." ಅಂತೆಯೇ ಗುಣವಂತರಾದ ಸಜ್ಜನರ ಸಹವಾಸಕ್ಕೆ ಎಲ್ಲಿಲ್ಲದ ಮಹತ್ವ ಅಂದಿನಿಂದಲೂ ಇದೆ. ಗುಣವಂತರಲ್ಲಿ ದೋಷಗಳು ಇವೆ. ದೋಷಗಳೇ ಇಲ್ಲದಿರುವದಕ್ಕೆ ಅವನೇನು ಋಜು ಅಲ್ಲ. ದೋಷಗಳಿವೆ ಎಂದ ಮಾತ್ರಕ್ಕೆ ಅವನು ಗುಣವಂತನೇ ಅಲ್ಲ ಎಂದೂ ಅಲ್ಲ. ಗುಣವಂತರಾದ ಸಜ್ಜರ ಗುಣವಂತಿಕೆಯಿಂದ ನಮಗೆ ಲಾಭವಾಗುತ್ತಿದ್ದರೆ ಸಾಕು. ಆ ಸಜ್ಜನನಿಂದ ನಮ್ಮ ಸಜ್ಜನಿಕೆ ಒಂದು ಸ್ಫೂರ್ತಿ ಸಿಗುತ್ತದೆ. *ಸಜ್ಜನರ ಗುಣವಂತಿಕೆಯಿಂದ ನಮಗೇನು ಲಾಭ....* ಏನು ಲಾಭವಿಲ್ಲ ಎಂದು ಇಲ್ಲ. ಎಲ್ಲ ಲಾಭಗಳೂ ಇವೆ. ಉಪನಿಷತ್ತು ಒಂದು ಮಾತನ್ನು ಹೇಳತ್ತೆ "ಯೇ ಯೇ ಗುಣಾನ್ ವಿಜಾನಂತಿ ವ...