Posts

*ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ.....*

Image
*ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ.....* ಶ್ರೀಮದ್ಭಾಗವತದಲ್ಲಿ ಸಜ್ಜನರ ಸಹವಾಸದ ಲಾಭವನ್ನು ಕೊಂಡಾಡುತ್ತಾ "ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ....." ಈ ಶ್ಲೋಕವನ್ನು ಉದಾಹರಿಸುತ್ತಾ ಒಂದು ಉತ್ಕೃಷ್ಟ ಪ್ರಮೇಯವನ್ನು ತಿಳಿಸಿಕೊಡುತ್ತದೆ.  ಗುಣವಂತ ಸಜ್ಜನ. ಗುಣಗಳು ಪ್ರಕಾಶಮಾನವಾದವುಗಳು. ಪ್ರಕಾಶಮಾನ ಗುಣಗಳು ತನ್ನ ಪ್ರಕಾಶವನ್ನು ಹರಡದೇ ಬಿಡದು.  ಸಜ್ಜನನ ಸಜ್ಜನಿಕೆಯ ಗುಣಗಳ ಪ್ರಕಾಶ, ತಮ್ಮ ಸನಿಹ ಬಂದವರ ಮನಸ್ಸಿನಮೇಲೆ ಬೀಳುವದು ನಿಶ್ಚಿತ. ಅದೇರೀತಿ ದುರ್ಜನರ ದುರ್ಗಣಗಳೂ.  ಸಜ್ಜನ ಕಠೋರ. ದುರ್ಜನ ಆಹ್ಲಾದಕರ. ಸಜ್ಜನಿಕೆಗೆ ಅಡ್ವಟೇಸ್ ಕಡಿಮೆ. ದುರ್ಜನನಿಗೆ ಪ್ರಚಾರ ಹೆಚ್ಚು. "ಕಠೋರತೆಗೆ ಬೆದರಿ ಆಕರ್ಷಣೆಗೆ ಮೋಸಹೋದರೆ ಸಿಗುವದು ಪ್ರಪಾತ." ಅಂತೆಯೇ ಗುಣವಂತರಾದ ಸಜ್ಜನರ ಸಹವಾಸಕ್ಕೆ ಎಲ್ಲಿಲ್ಲದ ಮಹತ್ವ ಅಂದಿನಿಂದಲೂ ಇದೆ.  ಗುಣವಂತರಲ್ಲಿ ದೋಷಗಳು ಇವೆ. ದೋಷಗಳೇ ಇಲ್ಲದಿರುವದಕ್ಕೆ ಅವನೇನು ಋಜು ಅಲ್ಲ. ದೋಷಗಳಿವೆ ಎಂದ ಮಾತ್ರಕ್ಕೆ ಅವನು ಗುಣವಂತನೇ ಅಲ್ಲ ಎಂದೂ ಅಲ್ಲ. ಗುಣವಂತರಾದ ಸಜ್ಜರ ಗುಣವಂತಿಕೆಯಿಂದ ನಮಗೆ ಲಾಭವಾಗುತ್ತಿದ್ದರೆ ಸಾಕು. ಆ ಸಜ್ಜನನಿಂದ ನಮ್ಮ ಸಜ್ಜನಿಕೆ ಒಂದು ಸ್ಫೂರ್ತಿ ಸಿಗುತ್ತದೆ.  *ಸಜ್ಜನರ ಗುಣವಂತಿಕೆಯಿಂದ ನಮಗೇನು ಲಾಭ....* ಏನು ಲಾಭವಿಲ್ಲ ಎಂದು ಇಲ್ಲ. ಎಲ್ಲ‌ ಲಾಭಗಳೂ ಇವೆ. ಉಪನಿಷತ್ತು ಒಂದು ಮಾತನ್ನು ಹೇಳತ್ತೆ "ಯೇ ಯೇ ಗುಣಾನ್ ವಿಜಾನಂತಿ ವ...

*ಯೋಚನೆಗೆಲ್ಲಿ ಮಿತಿಯಿದೆ.....*

Image
*ಯೋಚನೆಗೆಲ್ಲಿ ಮಿತಿಯಿದೆ.....* ಅಮಿತವಾದದ್ದು ಏನೂ ಪಡೆಯಲು ಆಗಲ್ಲ. ಹಣವೋ ಅಂತಸ್ತೋ ಅಥವಾ ಯೋಗ್ಯತೆಯೋ ಇನ್ನೇನೋ ಯಾವದನ್ನೂ ಹೆಚ್ಚಾಗಿ ಪಡೆಯಲು ಆಗುವದಿಲ್ಕ. ಎಲ್ಲದಕ್ಕೂ ಒಂದು ಮಿತಿ ಇದೆ.  ಆದರೆ.... "ಯೋಚನೆಗಳಿಗೆ ಮಿತಿ ಇದೆಯಾ... ?? ಸರ್ವಥಾ ಇಲ್ಲವೇ ಇಲ್ಲ." ಉತ್ಕೃಷ್ಟ ವಿಚಾರಭರಿತ ಆರೋಗ್ಯ ಪೂರ್ಣ ಯೋಚನೆಗಳನ್ನು ರೂಢಿಸಿಕೊಂಡರೆ ಉತ್ತಮ ರೀತಿಯಲ್ಲಿ ಬೆಳವಣಿಗೆಗಳು ಆಗಬಹುದೆಂದೂ ಯೋಚಿಸಬಹುದು.  *ಇಂದಿನ ಯುವಕ ತಲೆಯಲ್ಕಿ ಕ್ಷುದ್ರ ಯೋಚನೆಗಳೇ..* ಕ್ರಿಕೇಟ್ ಪ್ಲೇಯರ್ ಆಗಬೇಕು. ಫಿಲ್ಮಸ್ಟಾರ್ ಆಗಬೇಕು.. ರೌಡಿ ಆಗಬೇಕು.. ಕರೋಡಪತಿ ಆಗಬೇಕು.. ಯಾರನ್ನೋ ಮನಸ್ಸಿನಲ್ಲಿ ಸದಾಕಾಲ ದ್ವೇಶಿಸುತ್ತಾ ಇರೋದು.. ಅವರನ್ನು ಸಾರ್ವಜನಿಕವಾಗಿ ಹೇಗೆ ಹಳಿಯಲಿ ಎಂದೆ ಯೋಚಿಸುವದು...  ಇತ್ಯಾದಿಯಾಗಿ ಅನುಪಯುಕ್ತ ಅನಾರೋಗ್ಯಭರಿತ ಅನವಶ್ಯಕ ವಿಚಾರಗಳೇ ಮೈದುಂಬಿರುತ್ತವೆ. *ಯೋಚನೆಗಳಿಲ್ಲದೇ ಮನಸ್ಸು ಇರಲಾರದು*  ಕ್ಷುದ್ರ ಯೋಚನೆಗೆ ಆಸ್ಪದ ಕೊಟ್ಟರೆ ಅವೇ ಕೊರಗುತ್ತಾ ಕೂಡುತ್ತವೆ. ಆ ಯೋಚನೆ ಗಳಿಂದ ತಾತ್ಕಾಲಿಕ ಕ್ಷುದ್ರ ನೆಮೆದಿ ಬಿಟ್ಟರೆ  ಇನ್ನ್ಯಾವ ಪರ್ಟಿನೂ ಸಿಗದು. "ಉತ್ಕೃಷ್ಟ ಆರೋಗ್ಯ ಭರಿತ ಸಾರ್ಥಕ ಯೋಚನೆಗಳಿಗೆ ಜೀವ ತುಂಬಿದರೆ ಅವುಗಳೇ  ಹೆಮ್ಮರವಾಗಿ ಬೆಳಿಯುತ್ತವೆ." ಉತ್ಕೃಷ್ಟ ಯೋಚನೆಗಳೇ ಮನುಷ್ಯನನ್ನು ಉತ್ಕೃಷ್ಟತೆಗೆ ಕರೆದೊಯ್ಯುತ್ತವೆ" ಇದು ನೂರು ಪ್ರತಿಶತಹ ಸಿದ್ಧ. ...

*ಕಾಮ ಗೆದ್ದರಾ, ಹರಿಗೆ ಪ್ರೇಮ ಪೂರ್ಣರಾ*

Image
*ಕಾಮ ಗೆದ್ದರಾ, ಹರಿಗೆ ಪ್ರೇಮ ಪೂರ್ಣರಾ* ಕಾಮ - ಇಚ್ಛೆ. ಕಾಮಗಳು ಇಚ್ಛೆಗಳು ಮನಸ್ಸಿನ ವಿಕಾರಗಳೆ.  ಸತ್ಕಾಮಗಳು ಹಾಗೂ ಸದಿಚ್ಛೆಗಳು ಬರಲು ಬೇಕು ಮನೋಭಿಮಾನಿಗಳ ಅನುಗ್ರಹ. ಮನೋಭಿಮಾನಿ ದೇವತೆಗಳನೇಕರಲ್ಲಿ ಇಂದ್ರಾವತಾರಿಗಳಾದ, ಶೇಶದೇವರಿಂದ ಆವಿಷ್ಟರಾದ, ಮಲಖೇಡ ನಿವಾಸಿಗಳೂ ಆದ,  ನಾಳೆಯಿಂದ ಮೂರುದಿನಗಳ ನಮ್ಮೆಲ್ಲರ *ಆರಾಧ್ಯ ಗುರುಗಳಾದ ಶ್ರೀಮಟ್ಟೀಕಾಕೃತ್ಪಾದರೂ* ಒಬ್ಬರು. ಎಲ್ಲರಿಗೂ ಸಮಯ ಇರುವದು ಇಪ್ಪತ್ತು ನಾಲ್ಕು ಗಂಟೆ ಮಾತ್ರ. ಆ ಇಪ್ಪತ್ತು ನಾಲ್ಕು ಗಂಟೆ ವ್ಯರ್ಥಕಾಮನೆ ವ್ಯರ್ಥ ಇಚ್ಚವೆಗಳಲ್ಲೇ ತೊಡಗಿದರೆ ದೇವರ ನೆನಪೇ ಆಗದು.  ಆ ವ್ಯರ್ಥ ಕಾಮನೆಗಳನ್ನು ವ್ಯರ್ಥ ಇಚ್ಛೆಗಳನ್ನು ಎಷ್ಟೆಲ್ಲ ಸಾಧ್ಯವೋ ಅಷ್ಟು ಯಾರು  ಮೆಟ್ಟಿನಿಂತಿದಾರೆ  ಅವರೇ *ಕಾಮ ಗೆದ್ದವರು.* ಅಂತಹವರಿಗೇ ದೇವರ ಧರ್ಮದ ಶಾಸ್ತ್ರದ ನೆನಪು. ಯಾರು ದೇವರನ್ನು ತಿಳಿತಾರೆ, ಶಾಸ್ತ್ರ ಓದುತ್ತಾರೆ ಧರ್ಮ ಮಾಡುತ್ತಾರೆ ಅವರೇ ನಿಜವಾಗಿಯೂ *ದೇವರ ಪ್ರೇಮ ಪ್ರಿಯರು.* ದುಷ್ಟಕಾಮನೆಗಳನ್ನು ಗೆಲ್ಲುವದು ಒಂದಾದರೆ. ಸತ್ಕಾಮನೆಗಳನ್ನು ಮಾಡುವದೂ ಒಂದು ದೊಡ್ಡ ಧರ್ಮ. ಯಾರು ಸತ್ಕಾಮಿಗಳೋ ಅವರು ವಿಷ್ಣು ಪ್ರಿಯರೇ.‌ *ನೇಮ ನಿಷ್ಠರಾ ನಿಷ್ಕಾಮನಾ ಪರಾ* ಸತ್ಕಾಮನೆಗಳು ಬಂದಾಗ ನೇಮಗಳು ಆರಂಭವಾಗುತ್ತವೆ. ನೇಮ ನಿತ್ಯಗಳು ಬೇಡಾದವರಿಗೆ ದುಷ್ಟಕಾಮನೆಗಳ ಬೆಳೆಯುವದು. ಸತ್ಕಾಮನೆಗಳ ಅಭಿವೃದ್ಧಿ ಧರ್ಮದ ನಾಂದಿ. ಧರ್ಮ ಬೆಳಿಯಿತೋ, ...

*ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್*

Image
*ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್* ಅತ್ಯಂತ ಸಂತೋಷದ ಮಹಾ *ವಿಜಯೋತ್ಸವದ ದಿನ* ಪ್ರಾತಃಸ್ಮರಣೀಯ ದೇವಾಂಶ ಸಂಭೂತ ಶ್ರೀಶ್ರೀ ವ್ಯಾಸರಾಜರ ವೃಂದಾವನ ಪುನಃ ಪ್ರತಿಷ್ಠಾಪಿಸಿದ ವೈಭವದ ದಿನ.  ಮೊನ್ನೆಯ ದಿನ ಕಿಡಗೇಡಿಗಳು ವೃಂದಾವನವನ್ನು ಒಡೆದು ಹೋದರು ನಿಜ. ಅಂದಿನಿಂದ ಇಂದಿನ ವರೆಗೆ ಅನೇಕ ನೆಗೆಟಿವ್ ಆದ ಮಾತುಗಳನ್ನು "ನಮ್ಮಿಂದ ನಿಮ್ಮನ್ನು ಉಳಿಸಿಕೊಳ್ಳಲಾಗಲಿಲ್ಲ" "ಕ್ಷಮಿಸಿಬಿಡಿ, ನಿಮ್ಮನ್ಮು ಉಳಿಸಿಕೊಳ್ಳುವ ಯೋಗ್ಯತೆ ನಮಗಿಲ್ಲ" "ಯಾರ್ಯಾರ್ರದೋ ಗದ್ದಲಗಳಲ್ಲಿ ನಿಮನ್ನು ಕಳೆದುಕೊಂಡು ಬಿಟ್ಟೆವು" ಹಾಗೆ ಹೀಗೆ ಮನಬಂದ ತಲೆತೋಚಿದ ನೂರಾರು ಸಾವಿರ ಸಾವಿರ ಮಾತು ಕೇಳಿ ನೋಡಿ ತುಂಬ ಬೇಸರವೂ ಆಯಿತು.  *ಶ್ರೀವ್ಯಾಸರಾಜರು* "ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್ | ಮುಚ್ಯತೇ ಸರ್ವದುಃಖ್ಯೇಭ್ಯಃ ತದಂತರ್ಯಾಮಿಣೋ ಬಲಾತ್ ||"  *ವ್ಯಾಸರಾಜೋ ವ್ಯಾಸರಾಜ ಸ್ಮರಣೆ ಮಾತ್ರದಿಂದ ಶ್ರೀವ್ಯಾಸರಾಜರ ಅಂತರ್ಯಾಮಿಯ ಮಹಾ ಶಕ್ತಿಯಿಂದ ಅಪಜಯ ಮೊದಲಾದ ಎಲ್ಲ ದುಃಖಗಳೂ ನಾಶವಾಗುತ್ತವೆ* ಎಂದು ಶ್ರೀ ಶ್ರೀ  ವಿಜಯೀಂದ್ರತೀರ್ಥರು ಮನಬಿಚ್ಚಿ ಹೇಳುತ್ತಿರುವಾಗ ಅವರನ್ನು ಉಳಿಸುವವರು ನಾವ್ಯಾರು... ?? "ವ್ಯಾಸರಾಜರಿಂದ ಶ್ರೀಮದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ದಿವ್ಯ ಸಿದ್ಧಾಂತ ಉಳಿತೋ, ಅಂತಹ ವ್ಯಾರಾಜರ ಬಗ್ಗೆ ಮಾತಾಡುವವರು ನಾವ್ಯಾರು... ?? ಅತಿಭೀಕರವಾದ ...

*ಟೀಕಾರಾಯರ ಪಾದ ಸೋಕೀದ ಕೊನೆ ಧೂಳಿ....*

Image
*ಟೀಕಾರಾಯರ ಪಾದ ಸೋಕೀದ ಕೊನೆ ಧೂಳಿ....* ಪಾಪಗಳು ಜೀವನ ಬೆಂಬಿಡದ ಭುತಗಳು. ಪಾಪ ಹೆಸರಿಗೆ ಒಂದೆ ಇದೆ. ಆದರೆ ಆ ಪಾಪದ ರೂಪಗಳು ಕೋಟಿ ಕೋಟಿ. ಪ್ರತಿಯೊಂದಕ್ಕೂ ನೂರಾರು ಪಾಪಗಳು.  ಒಂದು ಸುಖ ನೂರುಪಾಪಗಳನ್ನು ಹೊತ್ತೇ ಬಂದಿರತ್ತೆ. ಆ ಒಂದೊಂದು ಪಾಪವೂ ನಮ್ಮನ್ನು ದಿಕ್ಕುಗೆಡಿಸುತ್ತದೆ. ಕಂಗಾಲ್ ಆಗಿ ಮಾಡಿಬಿಡುತ್ತದೆ. *ಏಲ್ಲ ಇದ್ದರೂ ಏನಿಲ್ಲದವನಂತೆ ಮಾಡುತ್ತವೆ* ಪಾಪಗಳು. ಉದಾಹರಣೆಗೆ "ಒಂದು ನಿದ್ರೆ ಇದೆ. ಆ ಒಂದು ನಿದ್ರೆ ಸುಖಮಯವೇ. ಸುಖಕ್ಕಾಗಿಯೇ ನಿದ್ರೆ. ಆದರೆ ಆನಿದ್ರೆಗೆ ಪಾಪಗಳು ಮೆತ್ತಿಕೊಂಡು ಇವೆ. ನಿದ್ರೆ ಬರ್ತಾ ಇದೆ ಮಲಗಲು ಸ್ಥಳ ಸಿಗಲಿಲ್ಲ -  ಪಾಪ ಇದೆ. ಸ್ಥಳ ಸಿಕ್ಕಿತು ಘಾಳಿ ಇಲ್ಲ - ಪಾಪವಿದೆ. ದೊಡ್ಡ ದೊಡ್ಡ ವಿದ್ಯುದ್ದೀಪಗಳಿವೆ - ಪಾಪವಿದೆ.  ತುಂಬ ಶಕಿ ಆಗ್ತಿದೆ - ಪಾಪವಿದೆ. ಹುಳ ಕಚ್ತಿವೆ - ಪಾಪವಿದೆ. ಚಳಿ ಆಗ್ತಿದೆ - ಪಾಪವಿದೆ.  ಪಕ್ಕದವರು ಜೋರಾಗಿ ಘುರಿಕೆ ಹೊಡಿತಿದಾರೆ - ಪಾಪವಿದೆ. ಕೆಟ್ಟ ಕನಸ್ಸು ಬಿದ್ದಿತು - ಪಾಪವಿದೆ. ಕರೆಂಟ್ ಹೋಯ್ತು - ಪಾಪವಿದೆ. ಫ್ಯಾನ್ ಕಟಕಟ ಶಬ್ದ ಮಾಡ್ತಿದೆ - ಪಾಪವಿದೆ. ಐದೇ ಐದು ನಿಮಿಷ ನಿದ್ದೆ ಆಗತ್ತೆ ಏನೋ ಆಗಿ ಎಚ್ಚರವಾಗತ್ತೆ - ಪಾಪವಿದೆ.  ಈ ತರಹದಿಂದ  ಅನಾಯಾಸೇನ ಫ್ರೀಯಾಗಿ ಮಾಡುವ ನಮ್ಮ ಕಾರ್ಯಗಳಿಗೆ ನೂರಾರು ಪಾಪಗಳಿವೆ. ನಮ್ಮನ್ನು ಕಂಗೆಡಿಸಿಬಿಡುತ್ತವೆ. ಹೀಗಿರುವಾಗ ದೊಡ್ಡ ದೊಡ್ಡ ಸಾಧನೆ ಎಂದು... ?? ಅ...

*ನಮ್ಮ ಗುರುಗಳು....*

Image
*ನಮ್ಮ ಗುರುಗಳು....* (ಗೂರು ಪೌರ್ಣಿಮೆಯ ಸುಸಂದರ್ಭದಲ್ಲಿ ಗುರುಸ್ಮರಣೆ) ಅಲುಗಾಡದ ಗುರುಭಕ್ತಿ, ಸರ್ವ ಸಮರ್ಪಣೆ, ನಿರಂತರ ಸೇವೆ, ಉತ್ಕೃಷ್ಟ ಅಧ್ಯಯನ ಇವುಗಳು ಗುರುಪ್ರೀತಿ ಸಾಧನೆಗಳು. ಗುರು ಪ್ರೀತರಾದರೆ ಶಿಷ್ಯನ ಎಲ್ಲ ಮಾಲಿನ್ಯಕಳೆದು, ಆ ಶಿಷ್ಯನನ್ನೂ ಗುರುವಾಗುವಂತೆ ಪರಿವರ್ತಿಸಿಬಿಡುತ್ತಾರೆ. ಅಂತೆಯೇ ಗುರುಗಳ ಆರಾಧನೆ ಯಾವ ಮತಗಳಲ್ಲೂ ಇಲ್ಲದಷ್ಟು ನಮ್ಮ ಮತ ಸಂಪ್ರದಾಯಗಳಲ್ಲಿ ಹಾಸು ಹೊಕ್ಕಾಗಿದೆ.   ಗುರುಗಳಲ್ಲಿಯ ಭಕ್ತಿಯೇ ದೇವನ ಭಕ್ತಿಸೌಧದ ಮೊದಲ ಸೋಪಾನವೆನ್ನುತ್ತೆ ಶಾಸ್ತ್ರ. ಅಂತೆಯೇ "ಮುಕುಂದ ಭಕ್ತ್ಯೈ ಗುರುಭಕ್ತಿಜಾಯೈ" ಎಂದು ಸಾರಿದರು ನಾರಾಯಣ ಪಂಡಿತಾಚಾರ್ಯರು.  *ಸರ್ವ ಸಮರ್ಪಣೆ....* ಗುರು ದೇವತಾ ದೇವರಿಗೆ ನಮ್ಮನ್ನು ನಾವು ಪೂರ್ತಿ  ಅರ್ಪಿಸಿಕೊಳ್ಳುವದರಿಂದ, ಅವರು ನಮ್ಮ ಬೆನ್ನಿಗಿರುತ್ತಾರೆ. ನಮ್ಮ ಬಳೆಕೆಗೆ ಬರುತ್ತಾರೆ. ಆಪತ್ತಿಗೆ ಒದಗುತ್ತಾರೆ. ಸಮಯವರಿತು ಕಾಪಾಡುತ್ತಾರೆ.  ಎಷ್ಟು ಬಲಗಳು ಜೊತೆಗಿದ್ದರೂ ಅತಿ ಘೋರ ಆಪತ್ತಿಗೆ ಒದಗುವ ಬಲ ಗುರುಬಲ ಮಾತ್ರ.  *ಸಾರ್ಥಕತೆಗೆ ಬೇಕು ಗುರುವೆಂಬ ಆಶ್ರಯ...* ಹನಿ ಹನಿ ಸೇರಿದರೆ ಅದು ಕಡಲು. ಹನಿ ಕಡಲಿನಲ್ಲಿ ಎಷ್ಟು ಸುರಕ್ಷಿತವೋ ಅಷ್ಟೇ ಅಸುರಕ್ಷಿತ ತಾನು ಕಡಲು ಸೇರದೆ ತಾನಾಗಿ ಇದ್ದರೆ. ಹಾಗೆಯೇ ಹನಿ ಹನಿಯಂತಿರುವ ನಾವಾಗಲಿ, ಅಥವಾ ನಮ್ಮ   ಪುಣ್ಯವಾಗಲಿ ಗುರುಗಳು ಎಂಬ ಕಡಲು ಸೇರಿದ...

*ಓ ಗುರೋ.... !! ನಿನಗೆ ನಮಃ*

Image
*ಓ ಗುರೋ.... !!  ನಿನಗೆ ನಮಃ* "ಗುರುಃ ಗುರುತಮೋ" ಎಂದು ವಿಷ್ಣು ಸಹಸ್ರನಾಮದಲ್ಲಿ ಬಂದ ಒಂದು ನಾಮ.  ಮೂಲ ಗುರುವಾದ ವೇದವ್ಯಾಸ ಕೃಷ್ಣ ಕಪಿಲ ದತ್ತಾತ್ರೇಯ ಮೊದಲಾದ ಅನಂತ ಅವತಾರಾತ್ಮಕ  ಶ್ರೀ ಹರಿಗೆ "ಗುರು" ಎಂದು ವಿಷ್ಣು ಸಹಸ್ರನಾಮ ಸಂಬೋಧಿಸುತ್ತದೆ. *ಆ ಗುರುವಿನಿಂದ ಆರಂಭಿಸಿ ಇಂದಿನ ನಮ್ಮ ಗುರುಗಳ ವೆರೆಗೂ ಎಲ್ಲ ಗುರುಗಳಿಗೆ ಅನಂತ ವಂದನೆಗಳನ್ನು* ನಿತ್ಯವೂ ಜೊತೆಗೆ ನಾಳೆಯ ದಿನ ವಿಶೇಷವಾಗಿ ಸಲ್ಲಿಸೋಣ.  *ಗುರುಗಳು ಯಾರು... ??* ವಿದ್ಯೆ ಕೊಟ್ಟು, ತತ್ವಜ್ಙಾನವನ್ನು ಉಪದೇಶಿಸಿ, ಸನ್ಮಾರ್ಗದಲ್ಲಿ ಇರಿಸಿ, ಹಿತಾಹಿತಗಳನ್ನು ತಿಳಿ ಹೇಳಿ, ಮಮತಾ ಅಭಿಮಾನಗಳಿಲ್ಲದೇ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ, ದೂರದೃಷ್ಟಿಯ ವಿಚಾರಗಳನ್ನು ಒದಗಿಸುವ, ಧರ್ಮ ಮಾಡಿಸುವ, ವಿಷ್ಣು ಭಕ್ತಿ ಬೆಳಿಸುವ, ಧರ್ಮ ಗುರು ಶಾಸ್ತ್ರ ದೇವರಲ್ಲಿ ನಿಷ್ಠೆ ಒದಗಿಸುವ, ನಂಬಿ ಬಂದವರಿಗೆ ಸಮುದ್ರದಂತೆ ಏಕಾಶ್ರಯರು,  ಇತ್ಯಾದಿ ನೂರಾರು ಸಾವಿರಾರು ಗುಣಗಳುಳ್ಳವರೇ ಗುರುಗಳು. ಆ ಗುರುಗಳಿಗೆ ಕೋಟಿ ಕೋಟಿ ವಂದನೆಗಳು.  *ಗುರುಗಳು ಇರುವದೇ ಉಪದೇಶಕ್ಕೆ...* ಮೂಲ ಗುರು ಆದಿ ಗುರುವಾದ ಬ್ರಹ್ಮದೇವರಿಗೇ ಉಪದೇಶ ಮಾಡಿದರೆ. ಬ್ರಹ್ಮದೇವರು ಉಳಿದ ದೇವತೆಗಳಿಗೆ ಉಪದೇಶಿಸಿದರು. ದೇವತೆಗಳು ಋಷಿಗಳಿಗೆ. ಋಷಿಗಳು ಮುನಿಗಳಿಗೆ. ಮುನಿಗಳು ಇಂದು ನಮಗೆ ಉಪದೇಶ ಮಾಡುತ್ತಿದ್ದಾರೆ. ಈ ಪ್ರಥ ಅಂದಿನಿಂದ ಬಂದ ಅನೂಚಾನ ಪ್ರಥ. ಒಂ...