Posts

*ಜಯರಾಯರ ಅನುಗ್ರಹದ ಕುಡಿಯೇ ಶ್ರೀ ವಿಜಯೀಂದ್ರರು*

Image
*ಜಯರಾಯರ ಅನುಗ್ರಹದ ಕುಡಿಯೇ ಶ್ರೀ ವಿಜಯೀಂದ್ರರು* ಇಂದು ಮಹಾಮಹಿಮೋತರಾದ ಶ್ರೀ ವಿಜಯೀಂದ್ರತೀರ್ಥರ ಆರಾಧನಾ ಮಹೋತ್ಸವ. ಶ್ರೀ ವಿಜಯೀಂದ್ರರ ಅನುಗ್ರಹದಿಂದ ನಾವು ಇಂದು ವಿಜಯಿ ಆಗುವ ಲಕ್ಷಣಗಳು ತೋರುತ್ತಿವೆ. ವಿಜಯೀಂದ್ರರಂತಹ ಪ್ರಭುಗಳು ಇರದಿದ್ದರೆ ನಮಗೆ ವಿಜಯ ಕನಸಿನ ಕಮಲವಾಗಬಹುದಾಗಿತ್ತು. ಶ್ರೀ ವಿಜಯೀಂದ್ರರು ಇರುವಾಗಲೂ ನಾವು ವಿಜಯಿಗಳಾಗಿಲ್ಲ ಇದು ನಮ್ಮ ದೌರ್ಭಾಗ್ಯ.  ಶ್ರೀಶ್ರೀ ವಿಜಯೀಂದ್ರ ಗುರುಸಾರ್ವಭೌಮರು ತಾವು ಸ್ವತಹ ವಿಜಯಿಗಳಾಗಿ, ನಂಬಿದ  ನಮ್ಮೆಲ್ಲರನ್ನೂ ವಿಜಯಿಗಳನ್ನಾಗಿ ಮಾಡಲು ಅವರಿಗೆಲ್ಲಿಯದು ಶಕ್ತಿ ?? ಎಂದು ಯೋಚಿಸಿದರೆ...  ಉತ್ತರವಿಷ್ಟೆ *ಮಾನ್ಯಖೇಟದ ಜಯರಾಯರಲ್ಲಿಯ ನಂಬಿಕೆ, ಜಯರಾಯರ ಅನುಗ್ರಹ.* ಅಂತೆಯೇ ವಿಜಯಿಗಳು ಅಷ್ಟೇ ಅಲ್ಲದೆ *ಜಗನ್ಮಾನ್ಯರೂ ಆದರು.* *ಶ್ರೀಮಟ್ಟೀಕಾಕೃತ್ಪಾದರ ಮಹಾನ್ ಭಕ್ತರು* ಎಪ್ಪತ್ತೆರಡು ವಿದ್ಯೆಗಳಲ್ಲಿ ಪಾರಂಗತರು ನಮ್ಮ ಇಂದಿನ ಕಥಾನಾಯಕರು ಶ್ರೀವಿಜಯೀಂದ್ರರು. ಎಲ್ಲ ವಿದ್ಯೆಗಳೂ ಒಲೆದು ಬಂದಿರುವದು, ಮತ್ತು ಆ ವಿದ್ಯೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವದು ಜಯರಾಯರ ಅನುಗ್ರಹದ ಬಲದಿಂದಲೇ.  ಪ್ರಭುಗಳ ಒಂದು ಮಹಿಮೆ ಸುಂದರ ಕಥೆ... ಸಕಲವಿದ್ಯೆಗಳಲ್ಲಿಯೂ ಜಯ ವಿಜಯೀಂದ್ರರದ್ದು. ಒಂದೊಂದು ವಿದ್ಯೆಯಲ್ಲಿ ಪಾರಂಗತರಾದ ನಾನಾ ವಾದಿವಿದ್ವಾಂಸರುಗಳೆಲ್ಲ ಇವರ ವಿದ್ಯೆಯಮುಂದೆ ತಲೆಬಾಗುವದೊಂದೇ ಫಲವಾಗಿತ್ತು. ಕೊನೆಯ ಅಸ್ತ್ರವಾಗಿ *ಬ್ರಹ...

*ಭೂಮಿ ಹಾಗೂ ಜಲ.. ನಮ್ಮವರು*

Image
*ಭೂಮಿ ಹಾ ಗೂ ಜಲ.. ನಮ್ಮವರು* ಭೂಮಿ ಹಾಗೂ ಜಲ (ನೀರು) ಇವುಗಳ ಅನ್ಯೋನ್ಯತೆ,  ಇವುಗಳಲ್ಲಿಯ ಹೊಂದಾಣಿಕೆ ಉತ್ತಮವಾಗಿರುವಂತಹದ್ದು. ಅಂತೆಯೆ ಭೂ ಜಲ ಗಳು ಸೃಷ್ಟಿಯಾದಾಗಿನಿಂದ ಕೂಡಿ ಇದ್ದರೂ ಒಂದರೆಕ್ಷಣ ವೈ ಮನಸ್ಯವಿಲ್ಲ. ಪರಸ್ಪರ ಉಪಕಾರ ಪ್ರತ್ಯುಪಕಾರಗಳ ಪ್ರತಿಸ್ಪಂದನೆಯಿಂದ  ಈ ವಿಶಿಷ್ಟ ತರಹದ ಅನ್ಯೋನ್ಯತೆ ಗಾಢತೆ ನಿಗೂಢವಾಗಿಯೇ ಉಳಿಸಿಕೊಂಡಿವೆ. ಪೃಥ್ವಿಜಲಗಳಂತೆಯೇ ನಾವು ಇರುವದು ತುಂಬ ಉತ್ತಮ ಎಂದೆನಿಸುತ್ತದೆ.  *ಭೂಮಿಗೆ ಜಲ ಹೊಂದಿಕೊಂಡಿದ್ದೇ ಹೆಚ್ಚು...* ನೀರಿನ ಸ್ವಭಾವ ಹರಿಯುವದು. ಆ ಹರಿಯುವಿಕೆಗೆ ಸ್ಥಳ ಕೊಟ್ಟಿರುವದು ಭೂಮಿ. ಹೀಗಿರುವಾಗ ಭೂಮಿ ಹೇಗೆಲ್ಲ ಸ್ಥಳಕೊಟ್ಟಿದೆ ಹಾಗೆ ಹರಿಯುತ್ತಾ ಸಾಗುತ್ತದೆ. ಅಂಕವಂಕಾಗಿ ಹರಿಯಬಹುದು, ನೇರವಾಗಿಯೂ ಹರಿಯಬಹುದು. ಪೃಥಿವಿ ಎತ್ತರವಾಗಿದ್ದರೆ ತಿರುಗಿ ಉಲ್ಟಾ ಹರಿಯುತ್ತದೆ,  ಹದವಾಗಿದ್ದರೆ ಇಂಗಿ ಹೋಗತ್ತೆ.. ಅಂತೂ ಪೃಥ್ವಿ ಹೇಗಿರತ್ತೆ ಹಾಗೆ ಹೊಂದಿಕೊಂಡು ಹೋಗತ್ತೆ ಅಂತೆಯೆ ತನ್ನ ಗಮ್ಯವನ್ನು ತಾನು ಸಹಜವಾಗಿ ಸೇರುತ್ತದೆ. *ತನ್ನ ಗಮ್ಯ ಸೇರುವದೇ ಜಲಕ್ಕೆ ಅತಿಮುಖ್ಯವೇ ಹೊರತು, ಈ ಪೃಥ್ವಿ ಸರಿಯಾಗಿ ಯಾಕೆ ಹಾದಿಕೊಟ್ಟಿಲ್ಲ ಎಂದು ಜಗಳ ಮಾಡ್ತಾ ಕೂಡುವದು ಅಲ್ಲ.* ಹಾಗೆಯೇ... ನಮಗೆ ನಮ್ಮ ಗಮ್ಯ ಸ್ಥಾನ ತಲುಪುವ ಉದ್ದೇಶ್ಯವಿದ್ದರೆ ನಿನ್ನವರೊಟ್ಟಿಗೆ ನೀನು ಹೊಂದಿಕೊಂಡು ಅವರು ಹೇಗಿರುತ್ತಾರೆಯೋ ಹಾಗೆ ಅವರೆದುರಿಗೆ ತಗ್ಗಿ ಬಗ್ಗಿ, ಮಾರ್ಗಾಂತರ...

*ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ..*

*ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ..* "ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ" ನೀರಿನಲ್ಲಿಯೇ ನಾವು ಇದ್ದೇವೆ ಆದರೆ ಮತ್ತೂ ನೀರಡಿಕೆ ನೀರು ಬೇಕು ಎಂದರಚಿದರೆ ನಮ್ಮನ್ನು ನಾಲ್ಕು ಜನ ಏನನಬಹುದು... ?? ಹೀಗಿದೆ ಇಂದಿನ  ನಮ್ಮ ಅವಸ್ಥೆ.  ಮಾನವನ ಬದುಕು ಸುಖಕ್ಕಾಗಿ. ಸುಖವಿರುವದು ಎಮ್ಮಲ್ಲಿಯೇ. ಆದರೆ ಹುಡುಕುತ್ತಿರುವದು ಮಾತ್ರ ಜಗತ್ತಿನಲ್ಲೆಲ್ಲ.  ಸುಖ‌ ಕೊಡುವವ ದೇವ.‌ ಸ್ವಯಂ ಸುಖ ಪೂರ್ಣನಾಗಿ ನಮ್ಮಲ್ಲಿಯೇ ಇದ್ದಾನೆ ಆದರೂ ಆ ಸುಖ ಕೊಡುವ, ಸುಖಪೂರ್ಣ ದೇವರನ್ನು ಅವಜ್ಙೆ ಮಾಡಿ,  ತಿರಸ್ಕರಿಸಿ, ಮರೆತು ಬಾಹ್ಯ ನೂರಾರು ಪದಾರ್ಥಗಳಿಂದ ಸುಖವನ್ನು ಹಂಬಲಿಸುತ್ತಿದ್ದೇವೆ.  ಇಂತಹ ನಮ್ಮನ್ಮು ಮೂರ್ಖ ಅನ್ನದೆ ಏನ್ನೇನು ತಾನೆ ಹೇಳಿಯಾರು...  ಸರ್ವ ಸಮೃದ್ಧಿ ಕೊಡುವ ಗಾಯತ್ರಿ ಇದೆ. ದೇವತೆಗಳು ಇದ್ದಾರೆ. ತತ್ವಜ್ಙಾನವಿದೆ. ಭಕ್ತಿ ಇದೆ ,ಸ್ವಯಂ ದೇವರು ಇದ್ದಸನೆ ಇವಗಳನ್ನು ಗಾಳಿಗೆ ತೂರಿ ಏಂಟಾರು ಗಂಟೆ ದುಡಿದರೂ ಹಣ ಬಂದೀತು ಸುಖ ಸಮೃದ್ಧಿ ವೈಭವ ಸಂತೋಷ ಬಾರದು.  *ಸುಖ ಸಿಗುವದು ಉಚಿತವೇ ಹೊರತು ಹಣದಿಂದ ಸಿಗುವದಿಲ್ಲ* "ಯಾವದು ಉಚಿತವೋ ಅದು ಕಿಮ್ಮತ್ತು ಕಳೆದುಕೊಳ್ಳುತ್ತದೆ. ಯಾವುದಕ್ಕೆ ಬೆಲೆ ಇದೆಯೋ ಅದಕ್ಕೆ ತುಂಬ ಬೇಡಿಕೆ" ಅಂತೆಯೆ ಹಿತ್ತಲ ಗಿಡ ಮದ್ದಲ್ಲ ಅಂ...

*ಭಕ್ತ್ಯೈವ - ತುಷ್ಯತಿ*

Image
*ಭಕ್ತ್ಯೈವ - ತುಷ್ಯತಿ* ಸಾಧಕನಾದ ಜೀವ,  ಸಿದ್ದಿಕೊಡುವವ ದೇವ. "ಸಾಧಕನಲ್ಲಿ ಇರುವವದು ಮೊಟ್ಟ ಮೊದಲಗುಣ  ಭಕ್ತಿ ಎಂದಾದರೆ. ದೇವನಿಂದ ಪಡೆಯುವ ಅತೀ ಶ್ರೇಷ್ಠ ಫಲ ಭಗತ್ಪ್ರೀತಿ"  ಇವೆರಡೂ ಇರುವದು ಅನಿವಾರ್ಯ.  ಅಂತೆಯೇ ಶ್ರೀಮದಾಚಾರ್ಯರು *ಭಕ್ತ್ಯೈವ ತುಷ್ಯತಿ* ಭಕ್ತಿಯಿಂದಲೆ ಭಗವತ್ಪ್ರೀತಿ ಎಂದರು.  ಈ ವಾಕ್ಯಕ್ಕೆ ಮೂಲಾಧಾರವಾಗಿ ವೇದವ್ಯಾಸರು *ಭಕ್ತಪ್ರಿಯಮ್* ಎಂದು ಹೇಳಿದರು.  *ಜ್ಙಾನೇನೈವ ಭಕ್ತಿಃ* ಭಕ್ತಿ ಬರುವದು ಉಂಟಾಗುವದು  ಕೈ ಮುಗುದೆ, ಕಾಲು ಮುಗುದೆ, ಉರುಳುಹಾಕಿದೆ, ಇನ್ನೇನೋ ದೈಹಿಕ  ನೂರು ಮಾಡಿದರೂ ಅದು ಭಕ್ತಿ ಎಂದಿನಿಸದು. ಅವುಗಳಿಂದ ಅಥವಾ ಕೈ ಮುಗಿ ಎಂದರೆ ಭಕ್ತಿ ಪುಟ್ಟದು. "ನಾನಾವಿಧ ಗುಣಗಳ ಜ್ಙಾನದಲ್ಲಿ ಮುಳುಗಿದಾಗಲೇ ಭಕ್ತಿ ಪುಟ್ಟುವದು" ಜ್ಙಾನ ಬೆಳೆದಂತೆ ಬೆಳಿಯುವದು. ಜ್ಙಾನಶುದ್ಧವಾದಂತೆ ಭಕ್ತಿ ದೃಢವಾಗುವದು. ಭಕ್ತಿ ಪುಟ್ಟಲು ಜ್ಙಾನವೇ ಮೂಲ. ಜ್ಙಾನವಿಲ್ಲದ ಭಕ್ತಿ "ಕುರುಡಭಕ್ತಿ" ಎಂದೇ ಅನಿಸುವದು. ಭಕ್ತಿ ಹಾಗಾಗಲೇ ಬಾರದು ಎಂಬ ಬಯಕೆ ಇರುವವರೆಲ್ಲರೂ ತತ್ವಜ್ಙಾನದಲ್ಲಿಯೇ ತೊಡಗಿಕೊಂಡರು.  *ವೈರಾಗ್ಯದಿಂದಲೇ ಜ್ಙಾನ* ವಿಜಯದಾಸರು ಹೇಳಿದಂತೆ "ಜ್ಙಾನವಿಲ್ಲದೇ ಮೋಕ್ಷವಿಲ್ಲ*  ಎಂದು ಹೇಳಿದಂತೆ ಮುಕ್ತಿಗೋಸ್ಕರ ಭಕ್ತಿ, ಭಕ್ತಿಗೋಸ್ಕರ ಜ್ಙಾನ. ಜ್ಙಾನಕ್ಕಾಗಿ ವೈರಾಗ್ಯ.  ಭೋಗಿಯಾದವಗೆ ಜ್ಙಾನ ಹಗಲುಗನಸಾಗಬಹುದು. ಅದು ನ...

*ಹಾದಿಯಲ್ಲಿ ನೂರು ರೂಪಾಯಿ ಸಿಕ್ಕರೆ.......*

*ಹಾದಿಯಲ್ಲಿ ನೂರು ರೂಪಾಯಿ ಸಿಕ್ಕರೆ.......* ಜೀವನದಲ್ಲಿ ಹಣವೇ ಮುಖ್ಯವಲ್ಲ ಹಣವೂ ಮುಖ್ಯ ಅಷ್ಟೆ. ಆ ಹಣ ಎಷ್ಟು ಉತ್ತಮ ಪ್ರಾಮಾಣಿಕವೋ ಅಷ್ಟು ಆ ಹಣ ಸಾರ್ಥಕ. ಎಷ್ಟು ಅಪ್ರಾಮಾಣಿಕವೋ ಅಷ್ಟು ನಮಗೆ ಅನುಪಯುಕ್ತ.  ಹಣ ಹೊಟ್ಟೆ ತುಂಬಿಸಲು. ಪ್ರಾಮಾಣಿಕ ಹಣ ದೇವರಿಗೆ ನಿವೇದಿತ ಪದಾರ್ಥದಿಂದ ಹೊಟ್ಟೆ ತುಂಬಿಸಿದರೆ, ಅಪ್ರಾಮಾಣಿಕ ಹಣ ರೋಡಿನಲ್ಲಿ ಗೋಲಗಪ್ಪಾ ತಿನಿಸಿ ಹೊಟ್ಟೆ ತುಂಬಿಸೀತು. ಪ್ರಾಮಾಣಿಕ ಹಣ ನೆಮ್ಮದಿಯ ಉಸಿರಾಡಿಸಲು ಅನುವಾದರೆ, ಅಪ್ರಾಮಾಣಿಕ ಹಣ ಶಾಂತಿ ಸಮೃದ್ಧಿ ನೆಮ್ಮದಿಯನ್ನೇ ಕೆಡಿಸಿ ಹಾಕುತ್ತದೆ.  ನಾವು ವಿದ್ಯಾಪೀಠದಲ್ಲಿ ಇರುವಾಗ ಎಲ್ಲಿಯಾದರೂ "ಒಂದುಡ್ಡು ಸಿಕ್ಕರೆ, ಹಿರಿಯರು ಹೆಳುತ್ತಿದ್ದರು ಹುಂಡಿಯಲ್ಲಿ ಹಾಕು" ಎಂದು ಹೇಳಿ ಹಾಕಿಸುತ್ತಿದ್ದರು. ಏಕೇ ಎಂದು ಕೇಳಿದರೆ ಈಗ ಅರ್ಥವಾಗುದಿಲ್ಲ. ಹೇಳಿದ್ದು ಕೇಳಬೇಕು ಎಂದಷ್ಟೆ ಹೇಳುತ್ತಿದ್ದರು. ಆ ಮಾತಿನ ಅರ್ಥ ಮೊನ್ನೆ ನಮ್ಮ ಗೆಳೆಯನ ಜೊತೆಗೆ ಸುಮ್ಮನೆ ಮಾತಾಡುತ್ತಿರುವಾಗ ಸ್ಪಷ್ಟವಾಯಿತು.  ಒಬ್ಬ ಬಂದದ್ದರಲ್ಲಿ ತಿಂದು ಉಂಡು ಜೀವನ ನಡೆಸುವ ಬಡವ. ಬಹಳ ದುಡ್ಡಿಲ್ಲ. ದಿನದ ಒಪ್ಪತ್ತು ಊಟಕ್ಕೂ ಕಷ್ಟ. ಆದರೆ ಇದ್ದದ್ದರಲ್ಲಿ ಬಂದದ್ದರಲ್ಲಿ ತುಂಬ ಸಮಾಧಾನ. ಕಷ್ಟ ಎಂದು ಎಂದಿಗೂ ಚಿಂತೆ ಮಾಡಿಲ್ಲ. ಎಂದಿಗೂ ಟೆನ್ಶನ್ ಮಾಡಿಕೊಂಡ ಉದಾಹರಣೆಯೇ ಇಲ್ಲ. ಯಾಕೆಂದರೆ ಅವ ಒಬ್ಬ ಸಾಮಾನ್ಯ ಬಡವ.  ಅವನಿಗೆ ಒಂದು ದಿನ ಬೆಳಗಿನ ಝಾವಾ ಹಾದಿಯಲ್ಲಿ ...

*ಯೋಗವೊಂದೇ ಮನಸ್ಸು - ದೇಹ - ಇಂದ್ರಿಯಗಳ ಪೋಷಕ*

Image
*ಯೋಗವೊಂದೇ ಮನಸ್ಸು - ದೇಹ - ಇಂದ್ರಿಯಗಳ ಪೋಷಕ* ಭಾರತೀಯ ಪ್ರಾಚೀನರು ತಮ್ಮ ದೀರ್ಘಕಾಲೀನ ಸುಖ ಶಾಂತಿ ಸಮೃದ್ಧಿಗೆ ಆರಿಸಿಕೊಂಡ  ಸಂಸ್ಕೃತಿಗಳು ಅನೇಕ. ಅವುಗಳಲ್ಲಿ "ಯೋಗವೂ" ಒಂದು. ಪ್ರಾಚೀನರಲ್ಲಿ ಬಡತನವಿತ್ತು, ಒತ್ತಡವಿರಲಿಲ್ಲ. ದಾರಿದ್ರ್ಯ ಇತ್ತು ಹಪಹಪಿ ಇರಲಿಲ್ಲ. ಒತ್ತಡ ಬರಲು ಆಸ್ಪದವೇ ಇರಲಿಲ್ಲ. ಅವರ ಜೀವನದಲ್ಲಿ ಯೋಗ ಹಾಸು ಹೊಕ್ಕಾಗಿತ್ತು.  "ಅಷ್ಟಾಂಗ ಯೋಗ" "ಯಮ - ನಿಯಮ - ಆಸನ-  ಪ್ರಾಣಾಯಾಮ- ಪ್ರತ್ಯಾಹಾರ - ಧಾರಣ - ಧ್ಯಾನ - ಸಮಾಧಿ" ಈ ರೂಪದಲ್ಲಿ ನಿರಂತರ ಯೋಗ ನಡೀತಾ ಇತ್ತು. ಈ ಎಂಟರಲ್ಲಿ "ದೇಹ - ಇಂದ್ರಿಯ - ಮನಸ್ಸು -  ಆತ್ಮಾ ಇವೆಲ್ಲದಕ್ಕೂ ಅಭೂತಪೂರ್ವ ಶಕ್ತಿ ಒದಗಿಸುವ ಸಾಮರ್ಥ್ಯ ಅಡಗಿದೆ.  *ರೋಗ ಬಂದಮೇಲೆ ಯೋಗ" ಕಂಡದ್ದು ತಿನ್ನುವಾಸೆ. ಯಾವುದರಲ್ಲಿಯೂ ನಿಯಮವಿಲ್ಲ. ಪ್ರಾಣಾಯಾಮ ಎಂದರೆ ಮೂಗು ಹಿಡಿತಾರೆಯೇ ಹೊರತು ಹೇಗೆ ಮಾಡಬೇಕು ತಿಳಿದಿಲ್ಲ. ಧ್ಯಾನ ಧಾರಣ ಸಮಾಧಿ ದೂರದ ಮಾತೇ. ಶುಗರ್ ಬಿಪಿ ಥೈರಾಡ್ ಮೊಣಕಾಲು ನೋವು ಇತ್ಯಾದಿ ಇತ್ಯಾದಿ ಬಂದ ಮೇಲೆ ಯೋಗಕ್ಕೆ ಮೊರೆ ಹೋಗ್ತೇವೆ...  *ರೋಗ ಬಾರದಿರಲೇ ಯೋಗ....* ಎಂಟನೇಯವರ್ಷ ಬರುವದರಲ್ಲಿ ಮಾತೃ ಭೋಜನ ಮುಗಿಯಿತೋ ಅವನಿಗೆ ತಿನ್ನುವ ಉಣ್ಣುವ ಆಹಾರಕ್ಕೆ ನಿಯಮ ಬಂತು. ಉಡುವ ತೊಡುವ ಬಟ್ಟೆಗೆ ನಿಯಮ ಬಂತು. ಪ್ರಾಣಾಯಾಮ ಕಲಿಸಿಕೊಟ್ಟರು, ಸೂರ್ಯ ನಮಸ್ಕಾರ ಹಾಕಿಸಿದರು, ಪದ್ಮಾಸನದಲ...

*ನಾಳೆ ಬಾ....... ಎಂದು ಸತ್ಯಪೂರ್ಣರೇ ಬರಿಯಬೇಕು*

Image
"ನಾಳೆ ಬಾ" ಎಂದು ಸತ್ಯಪೂರ್ಣರೇ ಬರಿಯಬೇಕು "ನಾಳೆ ಬಾ" ಎಂದು ಮನೆಯ ಬಾಗಿಲಿಗೆ ಬರೆದಿರುವದನ್ನು ನಾವು ಹಿಂದೇ ನೋಡಿದ್ದೇವೆ. ಪುನಹ ಇಂದು ನೋಡೊದಾಗ ಮತ್ತೆ ನೆನಪಾಯ್ತು. ಯಾಕೆ ಹಾಗೆ ಬರೆದಿರುತ್ತಾರೆ ಎಂದರೆ, ಮನೆಗೆ ನಿತ್ಯವೂ ಮಾರಿ ಬರುತ್ತಾಳೆ, ಒಳಬಂದರೆ ಅವಳು ತುಂಬ ಪೀಡೆ ಕೊಡುತ್ತಾಳೆ, "ನಾಳೆ ಬಾ" ಎಂದು ಬರೆದಾಗ ಅದನ್ನು ಓದಿ ತಿರುಗಿ ಹೋಗುತ್ತಾಳೆ. ಪುನಹ ನಾಳೆ ಬಂದಾಗ ಅದೇರೀತಿ ಇರುತ್ತದೆ. ಅಂತೂ ಆ ಮಾರಿ ಒಳಬರಲು ಬಿಡಬಾರದು ಎಂದು "ನಾಳೆ ಬಾ" ಎಂದು ಬರೆಯುವ ರೂಢಿ. ಇದು ಇರಲಿ..  *ಈ ತರಹದ ಮಾರಿ ಗಳು ಇಂದು ಅನೇಕ ಇವೆ..* ನಮ್ಮ ಮೇಲೆ ಧಾಳಿ ಮಾಡಿ, ನಮ್ಮನ್ನು ಉನ್ನತಿಗೆ ಏರಿಸದಂತೆ ಮಾಡಿ ನಿಂತ ಸ್ಥಳದಿಂದ ಕದಲಿಸದ ಸ್ಥಿರವಾಗಿ ನಿಲ್ಲಿಸುವ ಅಥವಾ ಇನ್ನೂ ಕೆಳಗೆ ಇಳಿಸುವ  ಅನೇಕ ಮಾರಿಗಳಲ್ಲಿ ಒಂದು‌ ಮಾಹಾಮಾರಿ  ಅದು *ನಾಳೆ ಮಾಡುವೆ* ಎಂಬ ಆಲಸ್ಯ.  ಸಂಧ್ಯಾವಂದನೆ ಮಾಡು "ನಾಳೆಯಿಂದ ಆರಂಭಿಸುವೆ. ಜಪ ಮಾಡು ನಾಳೆ. ದೇವರ ಪೂಜೆ ಮಾಡು ನಾಳೆ. ಓದು ನಾಳೆಯಿಂದ ಪಕ್ಕ. ಇನ್ನೇನೋ ಕೆಲಸ ಮಾಡು ನಾಳೆ ಇಂದ ನಿಶ್ಚಿತ. ಏಕಾದಶಿ ಮಾಡು ನಾಳೆ. ಧರ್ಮಕರ್ಮ ಆರಂಭಿಸು ನಾಳೆ. ಹೀಗೆ ಪ್ರತಿಯೊಂದೂ ನಾಳೆ ಇಂದ ಅಂತ ಅಂದು ಕೊಂಡರೆ "ನಾಳೆಯ ದಿನ ಇಂದು ಆದಾಗ, ಪುನಹ ನಾಳೆ ಎಂಬ ವರಲು ಮಾತು ಬರುವದು ಸಹಜ" ಹೀಗೆ ಪ್ರತಿಯೊಂದು ಸಾಧನೆಯನ್ನೂ ಮುಂದೂಡುತ್ತಾ ಸಾಗಿಸುವದು...