*ಜಯರಾಯರ ಅನುಗ್ರಹದ ಕುಡಿಯೇ ಶ್ರೀ ವಿಜಯೀಂದ್ರರು*
*ಜಯರಾಯರ ಅನುಗ್ರಹದ ಕುಡಿಯೇ ಶ್ರೀ ವಿಜಯೀಂದ್ರರು* ಇಂದು ಮಹಾಮಹಿಮೋತರಾದ ಶ್ರೀ ವಿಜಯೀಂದ್ರತೀರ್ಥರ ಆರಾಧನಾ ಮಹೋತ್ಸವ. ಶ್ರೀ ವಿಜಯೀಂದ್ರರ ಅನುಗ್ರಹದಿಂದ ನಾವು ಇಂದು ವಿಜಯಿ ಆಗುವ ಲಕ್ಷಣಗಳು ತೋರುತ್ತಿವೆ. ವಿಜಯೀಂದ್ರರಂತಹ ಪ್ರಭುಗಳು ಇರದಿದ್ದರೆ ನಮಗೆ ವಿಜಯ ಕನಸಿನ ಕಮಲವಾಗಬಹುದಾಗಿತ್ತು. ಶ್ರೀ ವಿಜಯೀಂದ್ರರು ಇರುವಾಗಲೂ ನಾವು ವಿಜಯಿಗಳಾಗಿಲ್ಲ ಇದು ನಮ್ಮ ದೌರ್ಭಾಗ್ಯ. ಶ್ರೀಶ್ರೀ ವಿಜಯೀಂದ್ರ ಗುರುಸಾರ್ವಭೌಮರು ತಾವು ಸ್ವತಹ ವಿಜಯಿಗಳಾಗಿ, ನಂಬಿದ ನಮ್ಮೆಲ್ಲರನ್ನೂ ವಿಜಯಿಗಳನ್ನಾಗಿ ಮಾಡಲು ಅವರಿಗೆಲ್ಲಿಯದು ಶಕ್ತಿ ?? ಎಂದು ಯೋಚಿಸಿದರೆ... ಉತ್ತರವಿಷ್ಟೆ *ಮಾನ್ಯಖೇಟದ ಜಯರಾಯರಲ್ಲಿಯ ನಂಬಿಕೆ, ಜಯರಾಯರ ಅನುಗ್ರಹ.* ಅಂತೆಯೇ ವಿಜಯಿಗಳು ಅಷ್ಟೇ ಅಲ್ಲದೆ *ಜಗನ್ಮಾನ್ಯರೂ ಆದರು.* *ಶ್ರೀಮಟ್ಟೀಕಾಕೃತ್ಪಾದರ ಮಹಾನ್ ಭಕ್ತರು* ಎಪ್ಪತ್ತೆರಡು ವಿದ್ಯೆಗಳಲ್ಲಿ ಪಾರಂಗತರು ನಮ್ಮ ಇಂದಿನ ಕಥಾನಾಯಕರು ಶ್ರೀವಿಜಯೀಂದ್ರರು. ಎಲ್ಲ ವಿದ್ಯೆಗಳೂ ಒಲೆದು ಬಂದಿರುವದು, ಮತ್ತು ಆ ವಿದ್ಯೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವದು ಜಯರಾಯರ ಅನುಗ್ರಹದ ಬಲದಿಂದಲೇ. ಪ್ರಭುಗಳ ಒಂದು ಮಹಿಮೆ ಸುಂದರ ಕಥೆ... ಸಕಲವಿದ್ಯೆಗಳಲ್ಲಿಯೂ ಜಯ ವಿಜಯೀಂದ್ರರದ್ದು. ಒಂದೊಂದು ವಿದ್ಯೆಯಲ್ಲಿ ಪಾರಂಗತರಾದ ನಾನಾ ವಾದಿವಿದ್ವಾಂಸರುಗಳೆಲ್ಲ ಇವರ ವಿದ್ಯೆಯಮುಂದೆ ತಲೆಬಾಗುವದೊಂದೇ ಫಲವಾಗಿತ್ತು. ಕೊನೆಯ ಅಸ್ತ್ರವಾಗಿ *ಬ್ರಹ...