*ಗೇಣು ಮುಂದಕ್ಕೆ ಹೋಗಿ, ಮೂರು ಮೊಳ ಹಿಂದೆ ಸರಿದಂತೆ ಆಗಿದೆ....*
*ಗೇಣು ಮುಂದಕ್ಕೆ ಹೋಗಿ, ಮೂರು ಮೊಳ ಹಿಂದೆ ಸರಿದಂತೆ ಆಗಿದೆ....* ಸಾಧಕನಾದ ಎಲ್ಲರೂ ಸಿದ್ಧಿಯ ದಾರಿಯಲ್ಲಿ ಇರುವವರೇ. ಸಿದ್ಧಿ ಏನಾದರೂ ಆಗಿರಬಹುದು. ಸಿದ್ಧ (successful man) ಪುರುಷನಾಗುವ ಹಂಬಲ ಎಲ್ಲರಿಗೂ ಇರುವಂತಹದ್ದೇ. ಸಿದ್ಧ ಪುರುಷನಾಗುವ ಹಂಬಲದಲ್ಲಿ ಅಲ್ಪ ಸ್ವಲ್ಪ ಪ್ರಯತ್ನದಿಂದ ಗೇಣು ಮುಂದೆ ಹೋಗಿರುತ್ತಾನೆ. ಕ್ರಮಿಸುವ ದಾರಿ ಕನಿಷ್ಠ ಸಾವಿರ ಮೈಲು ಇರತ್ತೆ. ಆದರೆ ಹೋಗಿರುವದು "ಗೇಣು ಮುಂದೆ" ಆದರೆ ತನ್ನ ಬೆವರಿನ ಕಡೆ ಗಮನವಿರಿಸಿ, ತುಂಬ ಮುಂದೆ ಹೋಗಿದೀನಿ ಎಂಬ ಭಾವನೆಯಲ್ಲಿಯೇ, ಸಣ್ಣ ಯಡವಟ್ಟುಗಳನ್ನು ಮಾಡಿಕೊಂಡು ಮೂರು ಮೊಳ ಹಿಂದು ಬಿದ್ದಿರುತ್ತಾರೆ ಇದು ಇಂದಿನ ದಯನೀಯ ಸ್ಥಿತಿಯಾಗಿದೆ. ಸಮಾಜದ ಸಂಗಠನೆ, ಜಪ, ಅಧ್ಯಯನ, ಪರೋಪಕಾರ, ಪ್ರೀತಿ, ಸ್ನೇಹ, ಸಿರಿವಂತಿಕೆ, ಯಾವುದೇ ಮಾರ್ಗವನ್ನು ಆರಿಸಿದರೂ ಅದರಲ್ಲಿ ಕೊನೆವರೆಗೆ ಸಾಗಿ ಸಂಪೂರ್ಣ ಸಿದ್ಧಪುಷನಾದ ಎಂದಾಗುವದೇ ಇಲ್ಲ. ಗೇಣು ಮುಂದೆ ಸಾಗುವದರಲ್ಲಿಯೇ ಮೂರು ಮೊಳ ಹಿಂದೆ ಕುಸುದು ಬಿದ್ದಿರುತ್ತಾನೆ. ಗೇಣು ಮುಂದೆ ಬರಲು ಹಾಕಿದ ಶ್ರಮ ಕನಿಷ್ಠ ವರ್ಷ ವರ್ಷಗಳೇ ಹಿಡಿದಿರುತ್ತದೆ. ಜಾರಿದ್ದು ಮಾತ್ರ ಕ್ಷಣ. ಬಿದ್ದಿದ್ದು ಮಾತ್ರ ಮತ್ತೆ ಆರಂಭಿಸಲು ಅಸಾಧ್ಯವಾಗುವಷ್ಟು ದೂರ. ವರ್ಷ ವರ್ಷಗಳಿಂದ ಸಾಧಿಸಿದ ಸಣ್ಣ ಯಡವಟ್ಟಿಗೆ ಅಷ್ಟು ದೂರ ಬೀಳಲು ಹೇಗೆ ಸಾಧ್ಯ.... ? ಇದೊಂದು ಉತ್ತಮ ಪ್ರಶ್ನೆ. ಉತ್ತರ ಹೀಗೆ... ...