*ಗೇಣು ಮುಂದಕ್ಕೆ ಹೋಗಿ, ಮೂರು ಮೊಳ ಹಿಂದೆ ಸರಿದಂತೆ ಆಗಿದೆ....*

*ಗೇಣು ಮುಂದಕ್ಕೆ ಹೋಗಿ, ಮೂರು ಮೊಳ ಹಿಂದೆ ಸರಿದಂತೆ ಆಗಿದೆ....*

ಸಾಧಕನಾದ ಎಲ್ಲರೂ ಸಿದ್ಧಿಯ ದಾರಿಯಲ್ಲಿ  ಇರುವವರೇ. ಸಿದ್ಧಿ ಏನಾದರೂ ಆಗಿರಬಹುದು. ಸಿದ್ಧ (successful man) ಪುರುಷನಾಗುವ ಹಂಬಲ ಎಲ್ಲರಿಗೂ ಇರುವಂತಹದ್ದೇ. 

ಸಿದ್ಧ ಪುರುಷನಾಗುವ ಹಂಬಲದಲ್ಲಿ ಅಲ್ಪ ಸ್ವಲ್ಪ ಪ್ರಯತ್ನದಿಂದ ಗೇಣು  ಮುಂದೆ ಹೋಗಿರುತ್ತಾನೆ. ಕ್ರಮಿಸುವ ದಾರಿ ಕನಿಷ್ಠ ಸಾವಿರ ಮೈಲು ಇರತ್ತೆ. ಆದರೆ ಹೋಗಿರುವದು "ಗೇಣು ಮುಂದೆ" ಆದರೆ ತನ್ನ ಬೆವರಿನ‌ ಕಡೆ ಗಮನವಿರಿಸಿ, ತುಂಬ ಮುಂದೆ ಹೋಗಿದೀನಿ ಎಂಬ ಭಾವನೆಯಲ್ಲಿಯೇ, ಸಣ್ಣ ಯಡವಟ್ಟುಗಳನ್ನು ಮಾಡಿಕೊಂಡು ಮೂರು ಮೊಳ ಹಿಂದು ಬಿದ್ದಿರುತ್ತಾರೆ ಇದು ಇಂದಿನ ದಯನೀಯ ಸ್ಥಿತಿಯಾಗಿದೆ. 

ಸಮಾಜದ ಸಂಗಠನೆ, ಜಪ, ಅಧ್ಯಯನ, ಪರೋಪಕಾರ, ಪ್ರೀತಿ, ಸ್ನೇಹ, ಸಿರಿವಂತಿಕೆ, ಯಾವುದೇ ಮಾರ್ಗವನ್ನು ಆರಿಸಿದರೂ ಅದರಲ್ಲಿ ಕೊನೆವರೆಗೆ ಸಾಗಿ ಸಂಪೂರ್ಣ ಸಿದ್ಧಪುಷನಾದ ಎಂದಾಗುವದೇ ಇಲ್ಲ. ಗೇಣು ಮುಂದೆ ಸಾಗುವದರಲ್ಲಿಯೇ ಮೂರು ಮೊಳ ಹಿಂದೆ ಕುಸುದು ಬಿದ್ದಿರುತ್ತಾನೆ. ಗೇಣು ಮುಂದೆ ಬರಲು ಹಾಕಿದ ಶ್ರಮ ಕನಿಷ್ಠ ವರ್ಷ ವರ್ಷಗಳೇ ಹಿಡಿದಿರುತ್ತದೆ. ಜಾರಿದ್ದು ಮಾತ್ರ ಕ್ಷಣ. ಬಿದ್ದಿದ್ದು ಮಾತ್ರ ಮತ್ತೆ ಆರಂಭಿಸಲು ಅಸಾಧ್ಯವಾಗುವಷ್ಟು ದೂರ. 

ವರ್ಷ ವರ್ಷಗಳಿಂದ ಸಾಧಿಸಿದ ಸಣ್ಣ ಯಡವಟ್ಟಿಗೆ ಅಷ್ಟು ದೂರ ಬೀಳಲು ಹೇಗೆ ಸಾಧ್ಯ.... ? ಇದೊಂದು ಉತ್ತಮ‌ ಪ್ರಶ್ನೆ.  ಉತ್ತರ ಹೀಗೆ... 

ನೆಲದ ಮೇಲೆ ಮಗಿದ್ದಾನೆ ಒಬ್ಬ ವ್ಯಕ್ತಿ. ಅವನು ಇಡೀ ರಾತ್ರಿ ನಿದ್ದಿಗಣ್ಣಲ್ಲಿ  ಹೊರಳಾಡಿದರೂ ಏನೂ ಸಮಸ್ಯೆ ಆಗದು. ಆ ವ್ಯಕ್ತಿ ಗಾದಿಯ ಮೇಲೆ ಮಲಗಿದಾಗ ಹೊರಳಾಡಿ ಕೆಳ ಬಂದರೆ ತಂಪು ಹತ್ತಿ ಎಚ್ಚರ ವಾಗಬಹುದು. ಅದೇ ವ್ಯಕ್ತಿ ಪಲಂಗದ ಮೇಲಿನಿಂದ ಜಾರಿದರೆ ಮೈ ಕೈ ನೋವು ಬಂದಿತು. ಆ ವ್ಯಕ್ತಿ ಮಾಳಿಗೆಯ ಮೇಲಿನಿಂದ ಜಾರಿದರೆ ಇನ್ನೊಮ್ಮೆ ನಿದ್ರೆ ಬಾರದಷ್ಟು ಮೈ ಕೈ ಎಲ್ಲ ಫ್ರಾಕ್ಚರ್ ಆಗಿ ಬಿಡಬಹುದು. ಬೆಟ್ಟದ ಮೇಲಿನಿಂದ ಜಾರಿದರೆ ಸತ್ತೇ ಹೋಗಬಹುದು. ಹೀಗೆಯೇ...  ಎಷ್ಟು ಮೇಲೆ ಹೋಗುತ್ತಾನೆ ಅಷ್ಟು ಎಚ್ಚರಿಕೆಯಿಂದ ಇರಬೆಕು. ಮೇಲೇರಿದಾಗ ಅತೀ ಸಣ್ಣ ಅವಘಡವೂ ಮಹಾಹಾನಿಕಾರಕ ವಾಗಿರುತ್ತದೆ. 

ಸಾಧನೆಯ ಹಾದಿಯಲ್ಲಿ, ಸಿದ್ಧಿಯ ದಾರಿಯಲ್ಲಿ ವರ್ಷ ವರ್ಷಗಳ ಶ್ರಮದಿಂದ ಗೇಣು ಮೇಲೇರಿದ ವ್ಯಕ್ತಿ ಸಣ್ಣದಾಗಿ ಜಾರಿದರೂ, (ಅಧ್ಯಯನದ ಮಾರ್ಗದಲ್ಲಿ ಅತೀ ಸಣ್ಣ ಅಹಂಕಾರ, ಸ್ನೇಹದ ಮಾರ್ಗದಲ್ಲಿ ಅತೀ ಸಣ್ಣ ಜಗಳ, ಸಣ್ಣ ವೈಮನಸ್ಸು, ತಪಸ್ಸಿನ ಮಾರ್ಗದಲ್ಲಿ ಸಣ್ಣ ಆಲಸ್ಯ) ಹೀಗೆ ಕ್ಷಣ ಕಾಲದಲ್ಲಿ ಜಾರಿದರೂ ಆಗುವ ಹಾನಿ ಮಾತ್ರ ಅತೀ ದೊಡ್ಡದೇ. ಅನಿಸ ಬಹುದು "ಜಾರಿದ್ದು ಮೂರೇ ಮೊಳ" ಎಂದು.  ಗೇಣು ಕ್ರಮಿಸುವದಕ್ಕೇ ಘನತರವಾದ ತ್ಯಾಗಪೂರ್ವಕ ಪರಿಶ್ರಮ ಸಹಿತವಾದ ವರ್ಷ ವರ್ಷಗಳನ್ನು ಉರುಳಿಸಿರುತ್ತೇವೆ ಇದುವೂ ಅಷ್ಟೇ ನಿಜ.

ಅಂತೆಯೇ ಪುಣ್ಯವಂತರಿಗೆ ಪ್ರಪಾತಗಳು ಹೆಚ್ಚೆಚ್ಚು. ಪುಣ್ಯಸಂಪಾದನೆ ಮಾಡಿ ಮೇಲೇರಿದಾಗ, ಅಥವಾ ಹಣ, ಧನ, ಪ್ರತಿಷ್ಠೆ, ಸ್ನೇಹ ಇನ್ಯಾವುದೋ ಸಂಪಾದನೆ ಮಾಡಿ ಮೇಲೇರಿದಾಗ ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದ ಇಡಬೇಕು. ಇಲ್ಲವಾದಲ್ಲಿ ಅತೀ ದೊಡ್ಡ ಪ್ರಪಾತಕ್ಕೆ ಕುಸಿಯುವ ಸಂಭವ ಹೆಚ್ಚಿರತ್ತೆ. ಮತ್ತೆ ಮೊದಲಿನಿಂದ ಸಾಧನೆ ಆರಂಭವಾಗಬೇಕಾಗುತ್ತದೆ. ವರ್ಷವರ್ಷವೋ  ಜೀವನ ಜೀವನಗಳೋ ಹಿಡಿಯಬಹುದು. *"ಒಂದಂತೂ ನಿಜ ಮೇಲೇ ಹೋಗದಿದ್ದರೂ ಕೆಳ ಕುಸಿಯದಿದ್ದರೆ ಸಾಕು."*

ಕ್ಷಣದ ಎಡವಟ್ಟುಗಳು ಆಗದಿರುವದಕ್ಕೆ ಜೀವನದಲ್ಲಿ ಪುಣ್ಯವಿರಬೇಕು. ಪ್ರತೀ ಹಂತದಲ್ಲಿ ದೇವತಾ ಗುರು ಹಿರಿಯರ ಆಸರೆ ಇರಬೇಕು. ಆಪತ್ತಿನಲ್ಲಿ ಉತ್ತಮ ಗೆಳೆಯನಿರಬೇಕು. ಇವರು ಜಾರುವಾಗಲೂ ಕೈ ಹಿಡಿದು ಜಾರದಿರುವಂತೆ ಮಾಡಬಹುದು, ಅಥವಾ  ಒಂದೇ ಮೊಳ ಜಾರುವಂತೆ ಮಾಡಿ ರಕ್ಷಿಸಲೂ ಬಹುದು. ಎಲ್ಲದರ ಮೇಲೆ ದೇವರ ಆಸರೆ ಸಿಕ್ಕಿತೂ ಎಂದಾದರೆ ಎಡವಟ್ಟುಗಳೇ ಆಗದಿರಬಹುದು. ದೇವರ ಆಸರೆ ಸಿಗುವದಕ್ಕಾಗಿ ಇಂದಿನಿಂದ ಸಂಧ್ಯಾವಂದನ, ಪೂಜೆ ಇವುಗಳನ್ನು ಮಾಡೋಣ. ಗಾಯತ್ರೀ ಮೊದಲಾದ  ಜಪ ಮಾಡೋಣ. ಗುರು ಹಿರಿಯರ ಸೇವೆ ಮಾಡೋಣ. ಗೆಳೆಯರನ್ನು ಹರಿಸೋಣ..... ನಾವಾರಿಸಿಕೊಂಡ ಮಾರ್ಗದಲ್ಲಿ ಸಿದ್ಧಪುರುಷರು ಎಂದಾಗೋಣ.

*✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
This was it, i was searching for. Thanks a lot for
taking time to release it on your post. Truly Appreciated.
I will be visiting your blog again as i just discovered you release
such a fantastic things here.

I figured out a website which is dedicated to people who are eager to loose
weight faster or later. It's about Keto Body Tone
that is getting popular in the USA, and they are concerning other nations too.
Hope you might love to examine it out and share your views about Keto Body Tone Diet
Product.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*