*ಮತದಾನ ನಮ್ಮ ಹಕ್ಕು .... ಮತ ಚಲಾಯಿಸಿಯೇ ತೀರುವೆ*
*ಮತದಾನ ನಮ್ಮ ಹಕ್ಕು .... ಮತ ಚಲಾಯಿಸಿಯೇ ತೀರುವೆ*
ಹಿಂದಿನ ಕಾಲದಲ್ಲಿ ರಾಜರುಗಳು ತಲೆ ತಲೆ ಮಾರುಗಳಿಂದ ಆಡಳಿತ ನಡೆಸಿಕೊಂಡು ಬಂದಿದ್ದರು. ಧಾರ್ಮಿಕ ವಿಷ್ಣುಭಕ್ತ, ಪ್ರಜಾಪ್ರೇಮಿ, ರಾಷ್ಟ್ರಹಿತ ರಾಜರುಗಳು ಧರ್ಮರಾಜ - ಶ್ರೀರಾಮ ನಂತಹ ರಾಜರಿದ್ದರೆ ರಾಜ್ಯವೂ ಹಾಗೇಯೇ ಇರುತ್ತಿತ್ತು. ದುಷ್ಟ ನೀಚ ದುರ್ಯೋಧನ ಜರಾಸಂಧ ರಾವಣನಂತಹ ರಾಜರುಗಳಿದ್ದರೆ ರಾಜ್ಯವೂ ಹಾಗೇಯೇ ಇರುತ್ತಿತ್ತು. ಅಂತೂ ರಾಜನಿದ್ದ ಹಾಗೆಯೇ ಪ್ರಜೆಗಳು ಇರುವದೂ ಆಗಿರುತ್ತಿತ್ತು. ಅಥವಾ ರಾಜನ ಆಡಿಳಿತದ ವಿಚಾರಗಳನ್ನು ಸಹಿಸಿಕೊಳ್ಳುವದೂ ಇರುತ್ತಿತ್ತು. ಆದರೆ ಪ್ರಜಾ ಪ್ರಭುತ್ವದ ಆಡಳಿತದಲ್ಲಿ ಇಂದು ಹಾಗಿಲ್ಲ. ನಮಗೆ ಅಂದರೆ ಪ್ರಜೆಗಳಿಗೆ ಹೇಗೆ ಬೇಕೋ, ಎಂತಹ ರಾಜ ಬೇಕೋ, ಆರಿಸುವ ಆರಿಸಿಕೊಳ್ಳುವ ಜವಾಬ್ದಾರಿ ಪೂರ್ಣವಾಗಿ ಇದೆ. ಇದುವೇ ಈಗಿನ ಸೊಭಗು. ಆರಿಸುವ ಜವಾಬ್ದಾರಿ ನಮ್ಮ ಮೇಲಿದೆ. *ಉತ್ತಮ ರಾಜನನ್ನು ಆರಿಸದೆಯೇ ಮನೆಯಲ್ಲಿ ಇರೋಣವೇ...........???*
*ರಾಜಾ ಕಾಲಸ್ಯ ಕಾರಣಮ್..*
ಕಾಲ ರಾಜನಿಗೆ ಕಾರಣವೋ, ರಾಜ ಕಾಲಕ್ಕೆ ಕಾರಣನೋ ಎಂಬ ಸಂಶಯ ಬದಾಗ ಶಾಸ್ತ್ರ ಉತ್ತರಿಸಿರುವದು *ರಾಜಾ ಕಾಲಸ್ಯ ಕಾರಣಮ್* ಕಾಲದ ಪರಿವರ್ತನೆಗಳಿಗೆ ಉತ್ತಮ ಕಾಲಕ್ಕೆ,ಅಥವಾ ನಿಕೃಷ್ಟ ಕಾಲಕ್ಜೆ ಅಂತೂ ಎಂತಹದೇ ಕಾಲಕ್ಕೆ ರಾಜನೇ ನೇರ ಕಾರಣ ಎಂದು ಸ್ಪಷ್ಟವಾಗಿ ತಿಳಿಸಿಕೊಟ್ಟಿತು. "ರಾಜನು ಯಾವೆಲ್ಲ ತರಹದ ವಿಚಾರ ಭರಿತನಾಗಿರುತ್ತಾನೆ, ಆ ಎಲ್ಲ ವಿಚಾರಗಳು ಪ್ರಜೆಗೂ ಬರುತ್ತವೆ" ಹೀಗಿರುವಾಗ *ಎಂತಹ ರಾಜನನ್ನು ನಾವು ಚುನಾಯಿಸಬೇಕು ಎಂದು ನಿಶ್ಚಯಿಸಿ ಕೊಂಡಿದ್ದೇವೆಯೋ, ಎಂತಹ ರಾಜ್ಯ, ಯಾವ ತರಹದ ಕಾಲ ನಮಗೆ ಬೇಕು ಎಂದು ನಿಶ್ಚಯಿಸಿ ಕೊಂಡಿದ್ದೇವೆಯೋ* ಆ ತರಹದ ರಾಜನನ್ನು ನಮ್ಮ ಸಂಪೂರ್ಣ ಅಧಿಕಾರವನ್ನು ಉಪಯೋಗಿಸಿ ಆರಿಸಿದಾಗ ಆ ರಾಜ್ಯ, ಆ ತರಹದ ಕಾಲ ಎಮಗೆ ಒದಗಿ ಬರುತ್ತದೆ.
*ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ....*
ಮನೆಯ - ರಾಜ್ಯದ - ರಾಷ್ಟ್ರದ ಯಜಮಾನ ಯಾವೆಲ್ಲ ಗುಣಗಳಿಂದ ಭರಿತನಾಗಿ ಎಷ್ಟೆಲ್ಲ ಅಭಿವೃದ್ಧಿ, ಸಾಧನೆ, ಉನ್ನತ ಯೋಚನೆ, ದೂರದೃಷ್ಟಿ, ನಿರ್ಮಲತೆ, ಭ್ರಷ್ಟಾಚಾರಗಳೆ ಇಲ್ಲದ, ವಿಷ್ಣು ದೇಶ ಹಿಂದೂ ಸಮಾಜದ ರಾಷ್ಟ್ರದ ಭಕ್ತನಾದ ರಾಜನನ್ನು ನಾವು ಆರಿಸಿದಾಗ, ಆ ರಾಜನ ಯಜಮಾನನ ಪ್ರಭಾವದಿಂದ ಈ ಕಾಲ ನಿರ್ಮಲ, ಗುಣಭರಿತ, ಭ್ರಷ್ಟಾಚಾರ ರಹಿತ, ದೇಶದ ಉನ್ನತಿಯ, ವಿಚಾರಗಳು ಎಲ್ಲರ ತಲೆಯಲ್ಲಿಯೂ ಬರುತ್ತವೆ. ಅಂತೆಯೇ ಕನ್ನಡದಲ್ಲಿ ಬಂದ ನಾಣ್ಣುಡಿ *ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ* ಎಂದು. ಈ ನಾಣ್ಣುಡಿಯ ಆಳವಾದ ಅರ್ಥಗರ್ಭಿತ ವಿಚಾರವನ್ನು ನಾವೆಲ್ಲರೂ ಈ ಹದಿನೈದು ವರ್ಷಗಳಲ್ಲಿ ಅನುಭವಿಸಿದ್ದೆವೆಯೂ ಸಹ.
ನಾಡದ್ದೇ ಅಂದರೆ 23 ನೇಯ ತಾರೀಕಿನಂದು ನಮಗೆ ಇದೆ, ಕೆಲವರಿಗೆ ಮಿಗಿದು ಹೋಗಿದೆ, ಮತ್ತೆ ಹಲವರಿಗೆ ಇನ್ನೂ ಐದು ಕಂತುಗಳಲ್ಲಿ ಲಭ್ಯವಿದೆ... *ಅತ್ಯುತ್ತಮ, ದೇಶಭಕ್ತ, ರಾಷ್ಟ್ರಹಿತ, ರಾಷ್ಟ್ರದ ಪ್ರಗತಿಯೇ ಧ್ಯೇಯವಾಗಿ ಇಟ್ಟುಕೊಂಡ, ರಾಷ್ಟ್ರದ ರಕ್ಷೆಣೆಗೆ ಪಣತೊಟ್ಟ, ರಾಜನನ್ನು ಆರಿಸುವ ಜವಾಬ್ದಾರಿ ನಮಗೂ ನಿಮಗೂ ಒದಗಿ ಬಂದಿದೆ, "ಉತ್ತಮೋತ್ತಮ ರಾಜನನ್ನು ಆರಿಸಿಯೇ ಬಿಡೋಣ....."* ಅದನ್ನು ಪುನಹ ಹಾಳು ಮಾಡಿಕೊಳ್ಳುವದು ಬೇಡ. ಯಾರೆಲ್ಲರಿಗೆ ಅಧಿಕಾರವಿದೆ ಆ ಎಲ್ಲರೂ ಮತದಾನವನ್ನು ಕಡ್ಡಾಯ ಮಾಡಲೇಬೇಕು. ಮತದಾನದ ಜೊತೆಗೆ ಪುಣ್ಯದಾನವನ್ನೂ ಮಾಡೋಣ. ವೈಭವದ ರಾಮರಾಜ್ಯನ್ನು ಸ್ಥಾಪಿಸೋಣ.
*✍🏽✍ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.
Comments