*ನಾಳೆ ಹನುಮಜ್ಜಯಂತಿ - ಹನುಮ ವಿಶೇಷ*

*ನಾಳೆ ಹನುಮಜ್ಜಯಂತಿ - ಹನುಮ ವಿಶೇಷ*

ಹನುಮಂತ ದೇವರು ಅವತರಿಸಿದ ದಿನ ಹನುಮಜ್ಜಯಂತಿಯ ಆಚರಣೆ ಅತ್ಯಂತ ವೈಭವದಿಂದ ಜಗತ್ತಿನಲ್ಲೆಲ್ಲ ನಡೆಯುತ್ತದೆ. ( ಕೆಲ ದೇಶಗಳಲ್ಲಿ ನಾನಳೆಯ ಪೌರ್ಣಿಮೆ ಅಲ್ಲದೆ ಬೆರೆ ಕಾಲದಲ್ಲೂ ಆಚರಿಸುತ್ತಾರೆ.)

*ಹನುಮಂತನಾರು.....*

ಅನೇಕರು ಹೇಳುವದುಂಟು ಹನುಂತ ಶಿವನ ಅವತಾರಿ ಎಂದು. ಅಂಜೆನಾ ದೇವಿಯ ಪತಿ ವಾಯು. ಹಾಗಾಗಿ ವಾಯುಪುತ್ರ ಎಂದು ಪ್ರಸಿದ್ಧ ಎಂದು. ಅದೆಲ್ಲ ಅಷ್ಟು ಸರಿಯಾದ ತತ್ವವಲ್ಲ. 

ಅಂಜನಾ ದೇವಿ ಹಾಗೂ ಕೇಸರಿ ಎಂಬ ದಂಪತಿಗಳಲ್ಲಿ, ಮೂಲರೂಪಿಯಾದ ವಾಯುದೇವರ ಅನುಗ್ರಹದಿಂದ, *ವಾಯುದೇವರೇ*  ಮೊಟ್ಟ ಮೊದಲು ಅವತಾರ ರೂಪದಿಂದ *ಹನೂಮಾನ್* ಎಂದು ಜನಿಸಿ ಬಂದರು. ಇದು ರಾಮಾಯಣ ಪ್ರಸಿದ್ಧ. ವೇದಸಿದ್ಧ. 

*ಹನೂಮಂತದೇವರಲ್ಲಿಯ ಗುಣ ಶಕ್ತಿಗಳು*

"ಹನು" ಜ್ಙಾನ. ಹನೂಮಾನ್ ಅನಂತ ಜ್ಙಾನ ಸ್ವರೂಪಿಯಾಗಿರುವವರು ಹನೂಮಂತ ದೇವರು. ಕೇವಲ ಜ್ಙಾನ‌ಮಾತ್ರವಲ್ಲ, "ಧರ್ಮ, ವಿಜ್ಙಾನ, ವೈರಾಗ್ಯ, ಐಶ್ವರ್ಯ, ಬುದ್ಧಿ, ಪ್ರಜ್ಙಾ, ಮೇಧಾ, ಧೃತಿ, ಸ್ಥೈರ್ಯ, ಬಲ, ಭಕ್ತಿ, ಸಹನೆ, ದಯೆ, ಕ್ಷಮೆ, ಸಾಮರ್ಥ್ಯ, ವಿನಯ, ಮುಂತಾದ ಅನಂತಾನಂತ ಗುಣಗಳು ಮೂಲರೂಪದಲ್ಕಿ ಇವೆಯೋ ಆ ಎಲ್ಲ ಗುಣಗಳೂ  ಈ ಹನುಮಂತ ರೂಪದಲ್ಲಿ ಇವೆ" ಎಂದು ಬಳಿತ್ಥಾಸೂಕ್ತದಲ್ಲಿ ಸ್ಪಷ್ಟ ಪಡಿಸುತ್ತಾರೆ. 

*ಹನುಮಂತದೇರು - ನಾವು...*

ಹನುಮಂತ ದೇವರಲ್ಲಿ ಅನಂತ ಗುಣಗಳಿವೆ. ಆ ಗುಣಗಳೆಲ್ಲದರಲ್ಲಿ ನಮ್ಮ ಶಕ್ತಿಗನುಗುಣವಾಗಿ ನಾವು ಏನೆಲ್ಲ ಗುಣಗಳನ್ನು ತಿಳಿಯುತ್ತೇವೆಯೋ ಆ ಎಲ್ಲ ಗುಣಗಳಿಂದ ಹನುಮಂತದೇವರು ನಮ್ಮಲ್ಲಿ ಪ್ರವೇಶಿಸುತ್ತಾರೆ. ಸ್ವಾರ್ಥಕ್ಕೋಸ್ಕರವಾಗಿಯಾದರೂ ನಿತ್ಯ ಹನುಮಂತ ದೇವರ ಗುಣಗಳನ್ನು ತಿಳಿದು ಅಭಿಷೇಕ ಸ್ತೋತ್ರ ಚಿಂತನೆ ಧ್ಯಾನ ಮಾಡುವದು ಅನಿವಾರ್ಯ. 

*ನಮಗೆ ನಿತ್ಯ ಜೀವನಕ್ಕೆ  ಹನುಂತ ದೇವರ ಉಪಯೋಗ ....*

ನಮಗೋ ನಮ್ಮ ಮಕ್ಕಳಿಗೋ ಹಸಿವೆ ಆಗ್ತಿಲ್ಲವೇ... ಹನುಮಂತ ದೇವರ ಒಂದು ಗುಣ  *ಬ್ರಹ್ಮಾಡವನ್ನೇ ತಿಂದರೂ ಜೀರ್ಣ ಮಾಡಿಕೊಳ್ಳುವ ಶಕ್ತಿ ಇದೆ* ಇದರ ಚಿಂತನೆ. 

ನೀರು ಕುಡಿದರೂ, ಏನನ್ನು  ತಿಂದರೂ ಇನ್ಫೆಕ್ಷನ್  ಆಗ್ತಿದೆಯಾ ...  *ಮೂಲರೂಪದಲ್ಲಿ  ವಿಷ ಕುಡಿದರೂ ಜೀರ್ಣಿಸಿಕೊಂಡರು* ಎಂಬ ಚಿಂತನೆ ಸಾಕು.

ಹುಳಗಳು ಕಚ್ಚಿದರೆ ಡೆಂಗ್ಯು, ಮಲೇರಿಯಾ, ಚಿಕನ್ ಗುನ್ಯಾ, ಆನೆಕಾಲು ಮುಂತಾದ ರೋಗ ಗಳು ಬರುತ್ತೆವೆ ಎಂಬ ಹೆದರಿಕೆಯಾ.. ?? *ಭೀಮನಾದಾಗ ಏಳು ಅತ್ಯಂತ ಘೋರವಾದ  ಹಾವುಗಳು ಕಚ್ಚಿದರೂ ಭೀಮನಿಗೇನೂ ಆಗಲಿಲ್ಲ*  ಎಂಬ ಚಿಂತನೆ.

ಅಸಾಧ್ಯವಾದ ಕೆಲಸಗಳು ಸಾಧಿಸಬೇಕಾ.. ?? *ಹನುಮಂತನಾದಾಗ ಸಮುದ್ರೋಲ್ಲಂಘನವನ್ನು ಅತ್ಯಂತ ಅನಾಯಾಸೇನ ದಾಟಿ ಕೆಲಸವನ್ನು ಯಶಸ್ವಿ ಮಾಡಿಕೊಂಡು ಬಂದ*  ಎಂಬ ಚಿಂತನೆ. 

ಗುರು ಹಿರಿಯರ ಜೊತೆಗೆ ಧೈರ್ಯದಿಂದ ಸ್ಪಷದಟವಾಗಿ ಮಾತಾಡಲು ಆಗಬೇಕೇ..??  *ಹನುಂತನಾಗಿ ರಾಮನೊಟ್ಟಿಗೆ ಮಾತಾಡಿದ ವಿಷಯಗಳ ಚಿಂತನೆ* ಸಾಕು. 

ದೇವರ ಸೇವೆ ಚೆನ್ನಾಗಿ ಆಗ್ತಿಲ್ಲವೇ... *ಹನುಂತ ದೇವರು ರಾಮದೇವರ ಪೂಜೆ ಹೇಗೆ ಮಾಡಿದರು, ಭಕ್ತಿ ಮಾಡಿದರು, ರಾಮ ದೇವರ ಸೇವೆಯನ್ನು ಯಾವ ಮಟ್ಟಿಗೆ ಮಾಡಿದರು* ಈ ಗುಣಗಳ ಚಿಂತನೆ. 

ಶತ್ರುಗಳ ನಾಶವಾಗಬೇಕೇ...?? *ಅಕ್ಷ ಕುಮಾರ ಮೊದಲಾದವರ ಸಂಹಾರ, ರಾವಣ ಕುಂಭ ಕರ್ಣ ಮೊದಲಾದವರ ಪರಾಭವ, ಜರಾಸಂಧ ದುಶ್ಶಾಸನರ ಸಂಹಾರ* ಇವುಗಳ  ಚಿಂತನೆ.

ಧರ್ಮ, ಜ್ಙಾನ, ವೈರಾಗ್ಯ, ಭಕ್ತಿ, ಶ್ರೀಮಂತಿಕೆ, ಸೌಖ್ಯ, ಸಮೃದ್ಧಿ ಮೊದಲು ಯಾವೆಲ್ಲ ನಮಗೆ ಬೇಕೋ ಆ ಎಲ್ಲ ಗುಣಗಳ ಚಿಂತನೆ ಅವಶ್ಯವಾಗಿ ಬೇಕು. ಜೊತೆಗೆ  ಯಾವ ದೋಷಗಳು ದುರ್ಗುಣಗಳು ನಮ್ಮಿಂದ ದೂರಾಗಬೇಕಾದರೂ *ಹನುಮಂತ ದೇವರು ನಿರ್ದುಷ್ಟರು*  ಎಂಬ ಚಿಂತನೆ ಮಾಡಿದರೆ ಸಾಕು ಎಲ್ಲ ದೋಷಗಳಿಂದ ಮುಕ್ತನಾಗುವ. 

ಶ್ವಾಸೋಚ್ಛ್ಚಾಸ ಬೇಕೆ, ಆರೋಗ್ಯ ಬೇಕೇ, ಗುಣವಂತನಾಗ ಬೇಕೇ, ಜ್ಙಾನಬೇಕೇ, ದೇವರ ದಾಸನಾಗಿರಬೇಕೇ, ಮೋಕ್ಷಬೇಕೇ ಎಲ್ಲದಕ್ಕೂ ಹನುಂತ ದೇವರ ಆಶೀರ್ವಾದದ ಆದರ್ಶ ಪಾಲನೆ ಅನಿವಾರ್ಯ.  ಹೀಗೆ ಹನುಂತದೇವರ ಉಪಕಾರ ಎಷ್ಟಿದೆಯೋ ತಿಳಿಯದು. ಆ ಹನುಮಂತ ದೇವರ ಸ್ಪಷ್ಟ ಶುದ್ಧ ಸರಿಯಾದ  ಜ್ಙಾನ ಅನಿವಾರ್ಯ. ಸಾಮಾನ್ಯವಾಗಿ ತಿಳಿಯುವ ಪ್ರಯತ್ನ ಮಾಡಿದೆ. ಹೆಚ್ಚಿನದು ವಾಯು ಮಹಿಮೆಯ ತಿಳಿಯುವಾಗ ತಿಳಿಯೋಣ....

*✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
My brother recommended I would possibly like this website.
He was once totally right. This put up truly made my
day. You can not believe just how so much time I had spent for this information! Thank you!

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*