*ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...*

*ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...*

ಆದರ್ಶ ಪುರುಷ ಶ್ರೀರಾಮ ಚಂದ್ರ. ಗುಣಗಳ ಗಣಿ ಶ್ರೀರಾಮ ಚಂದ್ರ. ರಾಮಾಯಣ ಆರಂಭವಾಗಿರುವದೇ "ಗುಣವಂತರಾರು ??? ಎಂಬ  ಪ್ರಶ್ನೆಗೆ ಉತ್ತರ ರೂಪವಾಗಿ".

ರಾಮಾಯಣ ಶ್ರೀರಾಮನ ಗುಣಗಳನ್ನು ಕೊಂಡಾಡುವಾಗ, ಶ್ರೀರಾಮನಲ್ಲಿ ಅತಿಮಾನುಷ ಗುಣಗಳು ಸಾವಿರಾರು ಅಲ್ಲ ಅನಂತ ಅನಂತ ಇವೆ ಎಂಬುವದನ್ನು ಮನಗಂಡು,  ಆ ಎಲ್ಲ ಗುಣಗಳ ಕಡೆ ಬೆಳಕು ಹಾಯಿಸುತ್ತಾ,  ಸಾಮಾನ್ಯ ಮಾನವನಿಗೆ ಯಾವೆಲ್ಲ ಗುಣಗಳು ಮಾರ್ಗದರ್ಶನ ವಾಗಬಹುದೋ, ಉಪಕಾರಿಯಾಗಬಹುದೋ, ಈ ಗುಣಗಳನ್ನು ನಾನೂ ರೂಢಿಸಿಕೊಳ್ಳಬಹುದು ಎಂದೆನಿಸುವದೋ ಆ ತರಹದ ಗುಣಗಳನ್ನೇ ನೂರಾರು ಸಾವಿರಾರು ಗುಣಗಳನ್ನು ಬಿಚ್ಚಿಡುತ್ತದೆ. ಕೆಲಗುಣಗಳ ಕಡೆ ಗಮನ ಹರಿಸೋಣ.

*ಮೃದು \ ಸ್ಮಿತ ಪೂರ್ವಾಭಿಭಾಷೀ*

ಎಂದಿಗೂ ರಾಮ ಆಡುವ ಮಾತು ಮೊದಲನೆಯ ಮಾತಾಗುತ್ತಿತ್ತು. ಅವರು ಮಾತಾಡಲಿ ಎಂಬ ಭಾವ ಇರುತ್ತಿರಲಿಲ್ಲ. ಆ ಮಾತು ಮೃದುವೇ ಆಗಿರುತ್ತಿತ್ತು. ಮಾತಾಡುವಾಗ ಮಂದಹಾಸ ತುಂಬಿ ತುಳುಕಿರುತ್ತಿತ್ತು.  ಎಂದಿಗೂ ಕಠೋರ ಮಾತು ಅಥವಾ ಕೊಂಕು ಮಾತು ಆಗಿರುತ್ತಿರಲಿಲ್ಲ.

*ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ*

ಎಷ್ಟೇ ಪರುಷವಾಗಿ ಕ್ರೂರವಾಗಿ ಅಂದರೂ ಆಡಿದರೂ ತಿರುಗಿ ಉತ್ತರವನ್ನು ಎಂದಿಗೂ ಕೊಡುತ್ತಿರಲಿಲ್ಲ ಶ್ರೀರಾಮ. ಈ ಗುಣ ಮನವನ ವೈಭವದ ಜೀವನಕ್ಕೆ ಅತ್ಯುಪಯುಕ್ತ, ರೂಢಿಸಿಕೊಳ್ಳಲೂ ಬಹುದು. ಆ ಗುಣವನ್ನೇ ಬಿಚ್ಚಿಡುತ್ತದೆ.  

*ನಾಸ್ಯ ಕ್ರೋಧಃ ಪ್ರಸಾದಶ್ಚ ನಿರರ್ಥೋಸ್ತಿ ಕದಾಚನ*

ಶ್ರೀರಾಮ ಒಂದೆಡೆ ಪ್ರೀತಿ ಮಾಡಿದ್ದಾನೆಯೋ ಅಥವಾ ಕೋಪಮಾಡಿದ್ದಾನೆಯೋ ಏನೆ ಆಗಿರಲಿ ಅದು ಸಾರ್ಥಕವೇ ಆಗಿರುತ್ತಿತ್ತು. "ಸಿಟ್ಟು ಮಾಡಿಕೊಂಡೆ ಕೆಲಸವಾಗಲಿಲ್ಲ, ಪ್ರೀತಿ ಮಾಡಿದೆ ಉಳಿಯಲಿಲ್ಲ" ಎಂದು ಎಂದಿಗೂ ಆಗಲಿಲ್ಲ. 

*ಅರ್ಥಧರ್ಮೌ ಚ ಸಂಗೃಹ್ಯ ಸುಖತಂತ್ರೋ ನಚಾಲಸಃ*

ಶ್ರೀ ರಾಮ ಧರ್ಮಕ್ಕೆ ಕುಂದುತಾರದೆ, ಧರ್ಮದ ಜೊತೆಗೆ ಕಾಂಪ್ರಮೈಸ್ ಮಾಡಿಕೊಳ್ಳದೆ ಹಣ ಸಂಪಾದನೆ ಮಾಡುತ್ತಿದ್ದ.  ಹಣ ಸಂಪಾದನೆಯ ಭರದಲ್ಲಿ ಧರ್ಮಕ್ಕೆ ಎಂದಿಗೂ ಚ್ಯುತಿ ತರಲೇ ಇಲ್ಲ. ಇವೆರಡರ ಸಂಪಾದನೆ ಸಾಗುತ್ತತಿದ್ದಾಗೆ ಸುಖಕ್ಕೆ ತಿಲಾಂಜಲಿ ಕೊಡಲಿಲ್ಲ. ಈ ಮೂರನ್ನೂ ಅಚ್ಚುಕಟ್ಟಾಗಿ ಸಂಪಾದಿಸುತ್ತಿದ್ದ. 

ಮನುಷ್ಯ ಹಣ ಸಂಪಾದನೆ ಮಾಡುತ್ತಾನೆ.  ಧರ್ಮ ಮಾಡುತ್ತಾನೆ ಅಥವಾ ಸುಖವನ್ನು ಅನುಭವಿಸುತ್ತಾನೆ. ಈ ಮೂರರಲ್ಲಿ ಒಂದರ ಹಿಂದೆ ಬೆನ್ನು ಬಿದ್ದಿರುತ್ತಾನೆ. ಒಂದನ್ಬೂ ಪೂರ್ಣವಾಗಿ ಪಡೆದಿರುವದಿಲ್ಲ. ಅವನು ಅಪೂರ್ಣನೇ...

ಹಣ ಸಂಪಾದನೆಯಲ್ಲಿ ತೊಡಗಿದಾಗ ಧರ್ಮ ಹಾಗೂ ಸುಖ ಮರತೆರುತ್ತಾನೆ. ಧರ್ಮಾಚರಣೆಯಲ್ಲಿ ತೊಡಗಿದ್ದರೆ ಹಣ ಸುಖ ದೂರ ಮಾಡಿರುತ್ತಾನೆ. ಸುಖದ ಸುಪ್ಪರಿಗೆಯಲ್ಲಿ ತೇಲಾಡುತ್ತಿದ್ದರೆ ಧರ್ಮ ಹಣಸಂಪಾದನೆಗೆ ತಿಲಾಂಜಲಿ ಇಟ್ಟಿರುತ್ತಾನೆ. ಒಂದರ ಹಿಂದೆ ಇದ್ದರೆ ಒಂದೆ ಸಾಗುತ್ತದೆ. ಹಣ ಧರ್ಮ ಸುಖ ಈ ಮೂರು ವೈಭವದಿಂದ ಇದ್ದಾಗೆ ವೈಭವದ ಜೀವನ. ಈ ಮೂರರಲ್ಲಿ ಒಂದು ಇಲ್ಲದಿದ್ದರೂ ಅವನು ವಿಕಲಾಂಗನೇ ಸರಿ. 

ಈ ಕ್ರಮದಲ್ಲಿ ಶ್ರೀರಾಮನ ಗುಣಗಳನ್ನು ನೋಡಿದಾಗ ಎಲ್ಲಗುಣಗಳೂ ಜೀವನಗೆ ಸಹಕಾರಿ. ಗುಣಗಳನ್ನು ರಾಮಾಯಣದಲ್ಲಿ ಹುಡುಕುತ್ತಾ ಸಾಗಿದರೆ ನೂರಾರು ಗುಣಗಳು ಮನುಷ್ಯನ ವೈಭವದ ಜೀವನಕ್ಕೆ ಅನುಕೂಲ ಗುಣಗಳು ಸಿಕ್ಕು ಬರುತ್ತವೆ. ಅಂತೆಯೆ ರಾಮಾಯಣ ಹಾಗೂ ಶ್ರೀರಾಮ ಜೀವನದ ಆದರ್ಶ ಎಂದು ಹಿರಿಯರೆಲ್ಲರೂ ಕೊಂಡಾಡಿದ್ದು. 

ಶ್ರೀರಾಮನ ಗುಣಗಳು ಜೀವನದಲ್ಲಿ ಬರಬೇಕಾದರೆ ಶ್ರೀರಾಮನೇ ಅನುಗ್ರಹಿಸಬೇಕು. ಶ್ರಿರಾಮನ ಅನುಗ್ರಹಕ್ಕಾಗಿ *ಶ್ರೀರಾಮನಾಮ ಸ್ಮರಣ-ಜಪ- ಚಿಂತನ- ರಾಮಾಯಣ ಕಥಾಶ್ರವಣ* ಇವುಗಳು ಅನಿವಾರ್ಯ. ಶ್ರೀರಾಮನವಮಿಯವರೆಗೆ ಆಲಿಸೋಣ ಪಾಲಿಸೋಣ. ಭಕ್ತರಾಗಿ  ದಾಸರಾಗಿ ಗುಣವಂತಿಕೆಯ ಭಿಕ್ಷೆ ಬೇಡಿಪಡೆಯೋಣ. 

*✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*