*ಹೇ ಮನುಜ !!! ರಾಮ ಮಂತ್ರವ ಜಪೀಸೋ......*
*ಹೇ ಮನುಜ !!! ರಾಮ ಮಂತ್ರವ ಜಪೀಸೋ......*
ವೈಷ್ಣವೋತ್ತಮರಾದ ರುದ್ರದೇವರು ತನ್ನ ಮಡದಿಯಾದ ಉಮೆಗೆ ಉಪದೇಶಿಸಿದ ಮಂತ್ರ *ರಾಮ ಮಂತ್ರ.* ನಿತ್ಯ ಜ್ಙಾನಿಗಳಾದ, ಜೀವೋತ್ತಮರಾದ, ಭಾವಿಬ್ರಹ್ಮರಾದ, ಸ್ವಯ ವಾಯುದೇವರ ಅವತಾರಿಗಳಾದ ಹನುಮಂತದೇವರು ನಿರಂತರ ಸ್ಮರಿಸುವ ಧೇನಿಸುವ ಚಿಂತಿಸುವ ೭೨ ಕೋಟಿ ಮಂತ್ರಗಳಲ್ಲಿ ರಾಮ ಮಂತ್ರವೂ ಒಂದು. ಅಂತಹ ರಾಮ ಮಂತ್ರ ನಿರಂತರ ಜಪಿಸು ಎಂದು ದಾಸರಾಯರು ಹೇಳುತ್ತಾರೆ.
*ರಾಮ ಮಂತ್ರ ಜಪದಿಂದ ಸರ್ವಸಿದ್ಧಿ...*
ಬೇಡರವನಾದ ವಾಲ್ಮೀಕಿ ತನ್ನ ವೃತ್ತಿಯಲ್ಲಿ ರತನಾಗಿ ಇರುತ್ತಾನೆ. ಕಂಡ ಪ್ರಾಣಿ ಪಶು ಪಕ್ಷಿಗಳನ್ನು ಸಂಹರಿಸುವದು. ಹಾದಿಹೋಕರ ಹಣ ವಸೂಲಿ ಮಾಡುವದು ಇತ್ಯಾದಿ ಇತ್ಯಾದಿ ಕೆಲಸಗಳಲ್ಲಿ ಲೀನ ನಾಗಿರುತ್ತಾನೆ.
ಒಂದಿನ ನಾರದರು ಬಂದು ವಾಲ್ಮೀಕಿಯ ಜೊತೆಗೆ ಮಾತಾಡುತ್ತಾರೆ. ಹೇ ವಾಲ್ಮೀಕಿ !!! ಇಷ್ಟೆಲ್ಲ ಪ್ರಾಣಿ ಪಶು ಪಕ್ಷಿಗಳ ಹಿಂಸೆ ಮಾಡುತ್ತೀ, ದರೋಡೆ ಮಾಡುತ್ತೀ ಇವೆಲ್ಲ ಪಾಪದ ಕೆಲಸವಲ್ಲವೇನೋ ?? ಪಾಪ ಬರುವದಿಲ್ಲವಾ.. ?? ಎಂದು ಕೇಳುತ್ತಾರೆ..
ವಾಲ್ಮೀಕಿ... ) ಸ್ವಾಮೀ !!! ಪಾಪ ಪುಣ್ಯ ಅಂತಾ ಕುಳಿತರೆ ಹೊಟ್ಟೆಪಾಡೇನು... ?? ನನ್ನ ನಂಬಿದ ನನಗೋಸ್ಕರ ಇರುವ ಮಡದಿ ಮಕ್ಕಳ ಅವಸ್ಥೆ ಏನು.. ?? ಅವರಿಗೋಸದಕರ ಇದೆಲ್ಲ ಮಾಡಲೇ ಬೇಕು.
ನಾರದರು..) ನಿಜ ಅವಶ್ಯವಾಗಿ ಮಾಡು. ನೀ ತಂದ ಪ್ರಾಣಿ ಪಶು ಪಕ್ಷಿಗಳನ್ನು ಹಂಚಿಕೊಳ್ಳುತ್ತಾರೆ ಸರಿ ನಾ.. ಅಯ್ತು. ದರೊಡೆ ಮಾಡಿದ ಒಡೆವೆಗಳನ್ನು ಹಂಚಿಕೊಳ್ಳುತ್ತಾರೆ ಸರಿ ನಾ... ಆಯ್ತು. ಆದರೆ ಇವುಗಳನ್ನು ಸಂಪಾದಿಸುವಾಗ *ಪಾಪವನ್ನೂ ಸಂಪಾದಿಸಿರುತ್ತೇಯಲಾ... ಅದನ್ನೂ ಹಂಚಿಕೊಳ್ಳುತ್ತಾರೆನೊ...??* ಎಂದು ನಾದರು ಕೇಳುತ್ತಾರೆ.
ವಾಲ್ಮೀಕಿ..) ಮನೆಗೆ ಹೋಗಿ ಹೆಂಡತಿ ಮಕ್ಕಳಿಗೆ ಕೇಳುತ್ತಾರೆ. "ನನ್ನ ಹಣ ಬೇಕು ನಿಮಗೆ, ಹಾಗೆ ನನ್ನ ಪಾಪವನ್ನೂ ಹಂಚಿಕೊಳ್ಳುತ್ತೀರಲಾ..." ಎಂದು.
ಮಡದಿ ಮಕ್ಕಳು..) ಒಯ್.. ರೀ !! ಪಾಪ ಪುಣ್ಯ ನಿಮಗ ಬಿಟ್ಟಿರೋದು. ನಮಗ ಹಣ ಒಡವೆ ವಜ್ರ ಅನ್ನ ಒದಗಸ್ತಾ ಇರೋದು ನಿಮ್ಮ ಕೆಲಸ ಅಷ್ಟೆ... ತಿಳಿತಾ ಎಂದು ಹೇಳಿ ಜೋರು ಮಾಡ್ತಾರೆ.
ವಾಲ್ಮೀಕಿ..) ನೇರ ನಾರದರ ಬಳಿ ಬಂದು ಹೀಗೀಗಾಯ್ತು ಎಂದು ಗೊಗೊರೆಯುತ್ತಾರೆ.
ನಾರದರು..) ನೋಡೋ ವಾಲ್ಮೀಕಿ... !! "ನೀನು ಸಂಪಾದಿಸಿದ ಹಣ ಮೊದಲಾದವುಗಳು ಅವರಿಗೆ ಬೇಕು, ಸಂಪಾದಿಸಿದ ಪಾಪ ಮಾತ್ರ ಅವರಿಗೆ ಬೇಡ ಎಂದು ಹೇಳುತ್ತಾರೆ" ಅಂತಹವರು ನುನಗೆ ಬೇಕಾ... ?? ಸಂಸಾರ ಬಿಟ್ಹಾಕು. ನಡೆ ವನಕ್ಕೆ...
ವಾಲ್ಮಿಕಿ ... ) ವಕ್ಕೆ ಸಿದ್ಧನು ಆಗೆ ಯೇಬಿಟ್ಟ. ಅದನ್ನು ಕಂಡ ನಾರದರು ವಾಲ್ಮೀಕಿಗೆ *ರಾಮ ಮಂತ್ರ* ಉಪದೇಶಿಸುತ್ತಾರೆ. ನಿರಂತರ ಪಠಿಸು. ಚಿಂತಿಸು. ಧೇನಿಸು ಎಂದು ಆದೇಶಿಸಿ ಅದೃಶ್ಯರಾಗುತ್ತಾರೆ.
ವಾಲ್ಮೀಕಿಯು *ರಾಮ ಮಂತ್ರದ* ಜಪದ ಪ್ರಭಾವದಿಂದಲೇ *ವಾಲ್ಮೀಕಿ ಋಷಿ* ಯಾದರು. ಅದಿಕಾವದಯ ವಾದ ರಾಮಾಯಣವನ್ನು ಬರೆದರು. ಬರೆದ ಗ್ರಂಥ ಅಜರಾಮರವಾಗಿ ಇರುವಂತೆ ಎಲ್ಲ ಸೂಕ್ಷ್ಮ ವಿಚಾರಗಳನ್ನೂ ಅಳವಡಿಸಿದರು. ಅಂತೆಯೇ *ಆದಿ ಕವಿ* ಎಂದಾದರು.
ವಾಲ್ಮೀಕಿಯ ಜೀವನ ಆದರ್ಶವನ್ನಾಗಿ ಪಡೆದು ರಾಮಾಯಣ ಓದುವವರು ಕೆಲವರಾದರೆ, ವಾಲ್ಮೀಕಿ ಋಷಿಗಳ ಹೆಸರನಿಂದ ವೈಭವವನ್ನು ಸೌಲತ್ತುಗಳನ್ನು ಪಡೆಯುವರು ಹಲವರಾದರು.
ವಾಲ್ಮೀಕಿ ಋಷಿಗಳ ಹೆಸರಿನಿಂದ ನಮಗೆ ಸೌಲತ್ತುಗಳು ಬೇಡ. ವಾಲ್ಮೀಕಿಯಂತೆ ರಾಮಾಯಣ ಕರ್ತೃಗಳೂ ಆಗುವದು ಬೇಡ. ವಾಲ್ಮೀಕಿಯಂತೆ ಭಕ್ತರಾಗೋಣ. ರಾಮಾಯಣ ಕೇಳೋಣ. ರಾಮಭಕ್ತರಾಗಿ ಉಳಿಯೋಣ. ಅದಕ್ಕಾಗಿ ನಿತ್ಯ *ರಾಮ ಮಂತ್ರವನ್ನು ಜಪಿಸೋಣ.*
*ಸೀತಾರಮ- ಜಯರಾಮ- ರಾಮ ರಾಮ- ಹರೇ ರಾಮ* ಯಾವುದೋ ಒಂದನ್ನು ಆಯ್ಕೆ ಮಾಡಿಕೊಂಡು ಜಪ ಆರಂಭಿಸೋಣ. ಕೇವಲ ಆರವತ್ತು ಸೆಕೆಂಡಿಗೆ ನೂರು ಸಲ ಆಗುತ್ತದೆ. ಹತ್ತು ನಿಮಿಷಕ್ಕೆ ಸಾವಿರ ಸಲ ಆಗುತ್ತದೆ. ಹತ್ತು ನಿಮಿಷವೂ ಹೊಂದಿಸಿಕೊಳ್ಳದಷ್ಟು ಬ್ಯುಸಿ ಇನ್ನೂವರೆಗಂತೂ ಆಗಿಲ್ಲ.
ಒಬ್ಬ ಸಾಮಾನ್ಯ ಬೇಡರವ ಮಾಹಾನ್ ಋಷಿ ಆದಿ ಕವಿ ಎಂದು ಆದಾಗ, ನಾವ್ಯಾಕ ಜಪ ಮಾಡಿ ಸಿದ್ಧಾರಗಬಾರದು.. ?? *ಸಿದ್ಧಿಯತ್ತ ನಮ್ಮ ಹೆಜ್ಜೆ.... ರಾಮ ಮಂತ್ರವೇ ನಮ್ಮ ಸಿದ್ಧಿ.*
ನಿನ್ನೆಯ ಒಂದು ಲೇಖನಕ್ಕೇ ಮುನ್ನೂರಕ್ಕೂ ಹೆಚ್ಚು ಜನ ನಾವು ಜಪ ಮಾಡುತ್ತೇವೆ ಎಂದು ಮಾತುಕೊಟ್ಟಿದ್ದಾರೆ. ಇಂದು ನೂರಕ್ಕೂ ಹೆಚ್ಚಿನ ಜನರು ಇಂದಿನ ಜಪವಾಗಿದ್ದು ತಿಳಿಸಿದ್ದಾರೆ. ನವಮಿಯವರೆಗೆ ಸಾಗಲಿ. ಸೀತಾರಾಮರ ಅನುಗ್ರಹ ಎಲ್ಲರಿಗಿರಲಿ.
*✍🏽✍✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments