Posts

*ಗೇಣು ಮುಂದಕ್ಕೆ ಹೋಗಿ, ಮೂರು ಮೊಳ ಹಿಂದೆ ಸರಿದಂತೆ ಆಗಿದೆ....*

*ಗೇಣು ಮುಂದಕ್ಕೆ ಹೋಗಿ, ಮೂರು ಮೊಳ ಹಿಂದೆ ಸರಿದಂತೆ ಆಗಿದೆ....* ಸಾಧಕನಾದ ಎಲ್ಲರೂ ಸಿದ್ಧಿಯ ದಾರಿಯಲ್ಲಿ  ಇರುವವರೇ. ಸಿದ್ಧಿ ಏನಾದರೂ ಆಗಿರಬಹುದು. ಸಿದ್ಧ (successful man) ಪುರುಷನಾಗುವ ಹಂಬಲ ಎಲ್ಲರಿಗೂ ಇರುವಂತಹದ್ದೇ.  ಸಿದ್ಧ ಪುರುಷನಾಗುವ ಹಂಬಲದಲ್ಲಿ ಅಲ್ಪ ಸ್ವಲ್ಪ ಪ್ರಯತ್ನದಿಂದ ಗೇಣು  ಮುಂದೆ ಹೋಗಿರುತ್ತಾನೆ. ಕ್ರಮಿಸುವ ದಾರಿ ಕನಿಷ್ಠ ಸಾವಿರ ಮೈಲು ಇರತ್ತೆ. ಆದರೆ ಹೋಗಿರುವದು "ಗೇಣು ಮುಂದೆ" ಆದರೆ ತನ್ನ ಬೆವರಿನ‌ ಕಡೆ ಗಮನವಿರಿಸಿ, ತುಂಬ ಮುಂದೆ ಹೋಗಿದೀನಿ ಎಂಬ ಭಾವನೆಯಲ್ಲಿಯೇ, ಸಣ್ಣ ಯಡವಟ್ಟುಗಳನ್ನು ಮಾಡಿಕೊಂಡು ಮೂರು ಮೊಳ ಹಿಂದು ಬಿದ್ದಿರುತ್ತಾರೆ ಇದು ಇಂದಿನ ದಯನೀಯ ಸ್ಥಿತಿಯಾಗಿದೆ.  ಸಮಾಜದ ಸಂಗಠನೆ, ಜಪ, ಅಧ್ಯಯನ, ಪರೋಪಕಾರ, ಪ್ರೀತಿ, ಸ್ನೇಹ, ಸಿರಿವಂತಿಕೆ, ಯಾವುದೇ ಮಾರ್ಗವನ್ನು ಆರಿಸಿದರೂ ಅದರಲ್ಲಿ ಕೊನೆವರೆಗೆ ಸಾಗಿ ಸಂಪೂರ್ಣ ಸಿದ್ಧಪುಷನಾದ ಎಂದಾಗುವದೇ ಇಲ್ಲ. ಗೇಣು ಮುಂದೆ ಸಾಗುವದರಲ್ಲಿಯೇ ಮೂರು ಮೊಳ ಹಿಂದೆ ಕುಸುದು ಬಿದ್ದಿರುತ್ತಾನೆ. ಗೇಣು ಮುಂದೆ ಬರಲು ಹಾಕಿದ ಶ್ರಮ ಕನಿಷ್ಠ ವರ್ಷ ವರ್ಷಗಳೇ ಹಿಡಿದಿರುತ್ತದೆ. ಜಾರಿದ್ದು ಮಾತ್ರ ಕ್ಷಣ. ಬಿದ್ದಿದ್ದು ಮಾತ್ರ ಮತ್ತೆ ಆರಂಭಿಸಲು ಅಸಾಧ್ಯವಾಗುವಷ್ಟು ದೂರ.  ವರ್ಷ ವರ್ಷಗಳಿಂದ ಸಾಧಿಸಿದ ಸಣ್ಣ ಯಡವಟ್ಟಿಗೆ ಅಷ್ಟು ದೂರ ಬೀಳಲು ಹೇಗೆ ಸಾಧ್ಯ.... ? ಇದೊಂದು ಉತ್ತಮ‌ ಪ್ರಶ್ನೆ.  ಉತ್ತರ ಹೀಗೆ... ...

*ಮತದಾನ ನಮ್ಮ ಹಕ್ಕು .... ಮತ ಚಲಾಯಿಸಿಯೇ ತೀರುವೆ*

Image
* ಮತದಾನ ನಮ್ಮ ಹಕ್ಕು .... ಮತ ಚಲಾಯಿಸಿಯೇ ತೀರುವೆ* ಹಿಂದಿನ ಕಾಲದಲ್ಲಿ ರಾಜರುಗಳು ತಲೆ ತಲೆ ಮಾರುಗಳಿಂದ ಆಡಳಿತ ನಡೆಸಿಕೊಂಡು ಬಂದಿದ್ದರು. ಧಾರ್ಮಿಕ ವಿಷ್ಣುಭಕ್ತ, ಪ್ರಜಾಪ್ರೇಮಿ, ರಾಷ್ಟ್ರಹಿತ ರಾಜರುಗಳು  ಧರ್ಮರಾಜ - ಶ್ರೀರಾಮ ನಂತಹ ರಾಜರಿದ್ದರೆ ರಾಜ್ಯವೂ ಹಾಗೇಯೇ ಇರುತ್ತಿತ್ತು. ದುಷ್ಟ ನೀಚ ದುರ್ಯೋಧನ ಜರಾಸಂಧ ರಾವಣನಂತಹ ರಾಜರುಗಳಿದ್ದರೆ ರಾಜ್ಯವೂ ಹಾಗೇಯೇ ಇರುತ್ತಿತ್ತು. ಅಂತೂ ರಾಜನಿದ್ದ ಹಾಗೆಯೇ ಪ್ರಜೆಗಳು ಇರುವದೂ ಆಗಿರುತ್ತಿತ್ತು.  ಅಥವಾ ರಾಜನ ಆಡಿಳಿತದ ವಿಚಾರಗಳನ್ನು ಸಹಿಸಿಕೊಳ್ಳುವದೂ ಇರುತ್ತಿತ್ತು. ಆದರೆ  ಪ್ರಜಾ ಪ್ರಭುತ್ವದ ಆಡಳಿತದಲ್ಲಿ ಇಂದು ಹಾಗಿಲ್ಲ. ನಮಗೆ ಅಂದರೆ ಪ್ರಜೆಗಳಿಗೆ ಹೇಗೆ ಬೇಕೋ, ಎಂತಹ ರಾಜ ಬೇಕೋ, ಆರಿಸುವ ಆರಿಸಿಕೊಳ್ಳುವ ಜವಾಬ್ದಾರಿ ಪೂರ್ಣವಾಗಿ ಇದೆ. ಇದುವೇ ಈಗಿನ ಸೊಭಗು. ಆರಿಸುವ ಜವಾಬ್ದಾರಿ ನಮ್ಮ ಮೇಲಿದೆ. *ಉತ್ತಮ ರಾಜನನ್ನು ಆರಿಸದೆಯೇ ಮನೆಯಲ್ಲಿ ಇರೋಣವೇ...........???* *ರಾಜಾ ಕಾಲಸ್ಯ ಕಾರಣಮ್..* ಕಾಲ ರಾಜನಿಗೆ ಕಾರಣವೋ, ರಾಜ ಕಾಲಕ್ಕೆ ಕಾರಣನೋ ಎಂಬ ಸಂಶಯ ಬದಾಗ ಶಾಸ್ತ್ರ ಉತ್ತರಿಸಿರುವದು *ರಾಜಾ ಕಾಲಸ್ಯ ಕಾರಣಮ್*  ಕಾಲದ ಪರಿವರ್ತನೆಗಳಿಗೆ ಉತ್ತಮ ಕಾಲಕ್ಕೆ,ಅಥವಾ ನಿಕೃಷ್ಟ ಕಾಲಕ್ಜೆ  ಅಂತೂ ಎಂತಹದೇ ಕಾಲಕ್ಕೆ ರಾಜನೇ ನೇರ  ಕಾರಣ ಎಂದು ಸ್ಪಷ್ಟವಾಗಿ ತಿಳಿಸಿಕೊಟ್ಟಿತು. "ರಾಜನು ಯಾವೆಲ್ಲ ತರಹದ ವಿಚಾರ ಭರಿತನಾಗಿರುತ್ತಾನೆ, ಆ ಎ...

*ನಾಳೆ ಹನುಮಜ್ಜಯಂತಿ - ಹನುಮ ವಿಶೇಷ*

Image
*ನಾಳೆ ಹನುಮಜ್ಜಯಂತಿ - ಹನುಮ ವಿಶೇಷ* ಹನುಮಂತ ದೇವರು ಅವತರಿಸಿದ ದಿನ ಹನುಮಜ್ಜಯಂತಿಯ ಆಚರಣೆ ಅತ್ಯಂತ ವೈಭವದಿಂದ ಜಗತ್ತಿನಲ್ಲೆಲ್ಲ ನಡೆಯುತ್ತದೆ. ( ಕೆಲ ದೇಶಗಳಲ್ಲಿ ನಾನಳೆಯ ಪೌರ್ಣಿಮೆ ಅಲ್ಲದೆ ಬೆರೆ ಕಾಲದಲ್ಲೂ ಆಚರಿಸುತ್ತಾರೆ.) *ಹನುಮಂತನಾರು.....* ಅನೇಕರು ಹೇಳುವದುಂಟು ಹನುಂತ ಶಿವನ ಅವತಾರಿ ಎಂದು. ಅಂಜೆನಾ ದೇವಿಯ ಪತಿ ವಾಯು. ಹಾಗಾಗಿ ವಾಯುಪುತ್ರ ಎಂದು ಪ್ರಸಿದ್ಧ ಎಂದು. ಅದೆಲ್ಲ ಅಷ್ಟು ಸರಿಯಾದ ತತ್ವವಲ್ಲ.  ಅಂಜನಾ ದೇವಿ ಹಾಗೂ ಕೇಸರಿ ಎಂಬ ದಂಪತಿಗಳಲ್ಲಿ, ಮೂಲರೂಪಿಯಾದ ವಾಯುದೇವರ ಅನುಗ್ರಹದಿಂದ, *ವಾಯುದೇವರೇ*  ಮೊಟ್ಟ ಮೊದಲು ಅವತಾರ ರೂಪದಿಂದ *ಹನೂಮಾನ್* ಎಂದು ಜನಿಸಿ ಬಂದರು. ಇದು ರಾಮಾಯಣ ಪ್ರಸಿದ್ಧ. ವೇದಸಿದ್ಧ.  *ಹನೂಮಂತದೇವರಲ್ಲಿಯ ಗುಣ ಶಕ್ತಿಗಳು* "ಹನು" ಜ್ಙಾನ. ಹನೂಮಾನ್ ಅನಂತ ಜ್ಙಾನ ಸ್ವರೂಪಿಯಾಗಿರುವವರು ಹನೂಮಂತ ದೇವರು. ಕೇವಲ ಜ್ಙಾನ‌ಮಾತ್ರವಲ್ಲ, "ಧರ್ಮ, ವಿಜ್ಙಾನ, ವೈರಾಗ್ಯ, ಐಶ್ವರ್ಯ, ಬುದ್ಧಿ, ಪ್ರಜ್ಙಾ, ಮೇಧಾ, ಧೃತಿ, ಸ್ಥೈರ್ಯ, ಬಲ, ಭಕ್ತಿ, ಸಹನೆ, ದಯೆ, ಕ್ಷಮೆ, ಸಾಮರ್ಥ್ಯ, ವಿನಯ, ಮುಂತಾದ ಅನಂತಾನಂತ ಗುಣಗಳು ಮೂಲರೂಪದಲ್ಕಿ ಇವೆಯೋ ಆ ಎಲ್ಲ ಗುಣಗಳೂ  ಈ ಹನುಮಂತ ರೂಪದಲ್ಲಿ ಇವೆ" ಎಂದು ಬಳಿತ್ಥಾಸೂಕ್ತದಲ್ಲಿ ಸ್ಪಷ್ಟ ಪಡಿಸುತ್ತಾರೆ.  *ಹನುಮಂತದೇರು - ನಾವು...* ಹನುಮಂತ ದೇವರಲ್ಲಿ ಅನಂತ ಗುಣಗಳಿವೆ. ಆ ಗುಣಗಳೆಲ್ಲದರಲ್ಲಿ ನ...

*ಕೌಸಲ್ಯೆಯ ಹರಕೆಗಳು..... ನಮಗೆ ಮಾರ್ಗದರ್ಶಕವೂ*

Image
*ಕೌಸಲ್ಯೆಯ ಹರಕೆಗಳು..... ನಮಗೆ ಮಾರ್ಗದರ್ಶಕವೂ* "ಯಂ ಪಾಲಯಸಿ ಧರ್ಮಂ ತಂ ಪ್ರೀತ್ಯಾ ಚ ನಿಯಮೇನ ಚ. ಸ ವೈ ರಾಘವ ಶಾರ್ದೂಲ  ಧರ್ಮಸ್ತ್ವಾಂ ಅಭಿರಕ್ಷತು" ಕೌಸಲ್ಯೆ ರಾಮನಿಗೆ ಹರಿಸುವ ಮಾತು. ಎಲ್ಲ ತಂದೆ ತಾಯಿಗಳಿಗೂ, ಉತ್ತಮ ಮಗನಿಗೂ ಒಂದು ಉತ್ಕೃಷ್ಟ ಸಂದೇಶದಂತಿದೆ.  "ರಾಮ ನೀನು ಮಾಡುವ ಧರ್ಮದಲ್ಲಿ ಪ್ರೀತಿ ಇರಲಿ, ನಿಯಮವೂ ಹೊಕ್ಕಿರಲಿ.  ಧರ್ಮ ಮಾಡುವಾಗ  ಧರ್ಮವನ್ನು ಬೇಸರಿಸ ಬೇಡ. ಪ್ರೀತಿಯಿಂದ ಮಾಡು. ನಿಯಮೇನ ಮಾಡು. ಎಂದೂ ತಪ್ಪಿಸಬೇಡ. ಪ್ರೀತಿಯಿಂದ ನಿಮಬದ್ಧವಾಗಿ ಮಾಡಿದ  ಧರ್ಮವೇ ನಿನ್ನನ್ನು ರಕ್ಷಿಸಲಿ. ರಕ್ಷಿಸುತ್ತದೆ." ಎಂದು.... ನಾವು ಮಾಡುವ ಧರ್ಮದಲ್ಲಿ ಪ್ರೀತಿ ಇರುವದಿಲ್ಲ. ಅಂತೆಯೇ ಧರ್ಮ ಮಾಡುವಾಗ ಟೀವಿ ಮೋಬೈಲು ಹರಟೆ ಇವುಗಳ ಹೆಚ್ಚು ಗಮನ ಹೋಗುತ್ತದೆ.   ನಿಯಮವಂತೂ ಸರ್ವಥಾ ಇರದು.  ಸ್ವಾಮಿಗಳು ಹೇಳಿದರು, ಉಪನ್ಯಾಸ ಕೇಳಿದೆ, ಏನೋ ಕಷ್ಟ ಆವರಿಸಿತು, ಯಾವದೋ ಕ್ಷೇತ್ರಕ್ಕೆ ಹೋಗಿದ್ದೆ ಆಗ ಅತ್ಯುತ್ತಮ ರೀತಿಯಲ್ಲಿ ಎಲ್ಲ ಧರ್ಮಗಳೂ ಸಾಗಿರುತ್ತವೆ.  ಆದರೆ ಕೆಲ ಹೊತ್ತು, ಕೆಲದಿನಗಳು ಉರುಳಿದರೆ ಆ ಧರ್ಮ ಶಿಥಿಲವಾಗುತ್ತದೆ. ಇನ್ನ ನಾಲ್ಕು ದಿನಗಳು ಕಳೆಯುವದರೊಳಗೇ ಸತ್ತೇ ಹೋಗಿರುತ್ತದೆ.  ಯಾವ ಧರ್ಮದಲ್ಲಿ ಪ್ರೀತಿ ಇದೆ ಆ ಧರ್ಮ ನಿಯಮೇನ ಇರುವದಿಲ್ಲ. ಯಾವುದನ್ನು ನಿಯಮೇನ ಮಾಡ್ತಾ ಇರುತ್ತೀವಿ ಅದರಲ್ಲಿ ಪ್ರೀತಿ ಇರದೆ ಯಾಂತ್...

*ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...*

Image
*ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...* ಆದರ್ಶ ಪುರುಷ ಶ್ರೀರಾಮ ಚಂದ್ರ. ಗುಣಗಳ ಗಣಿ ಶ್ರೀರಾಮ ಚಂದ್ರ. ರಾಮಾಯಣ ಆರಂಭವಾಗಿರುವದೇ "ಗುಣವಂತರಾರು ??? ಎಂಬ  ಪ್ರಶ್ನೆಗೆ ಉತ್ತರ ರೂಪವಾಗಿ". ರಾಮಾಯಣ ಶ್ರೀರಾಮನ ಗುಣಗಳನ್ನು ಕೊಂಡಾಡುವಾಗ, ಶ್ರೀರಾಮನಲ್ಲಿ ಅತಿಮಾನುಷ ಗುಣಗಳು ಸಾವಿರಾರು ಅಲ್ಲ ಅನಂತ ಅನಂತ ಇವೆ ಎಂಬುವದನ್ನು ಮನಗಂಡು,  ಆ ಎಲ್ಲ ಗುಣಗಳ ಕಡೆ ಬೆಳಕು ಹಾಯಿಸುತ್ತಾ,  ಸಾಮಾನ್ಯ ಮಾನವನಿಗೆ ಯಾವೆಲ್ಲ ಗುಣಗಳು ಮಾರ್ಗದರ್ಶನ ವಾಗಬಹುದೋ, ಉಪಕಾರಿಯಾಗಬಹುದೋ, ಈ ಗುಣಗಳನ್ನು ನಾನೂ ರೂಢಿಸಿಕೊಳ್ಳಬಹುದು ಎಂದೆನಿಸುವದೋ ಆ ತರಹದ ಗುಣಗಳನ್ನೇ ನೂರಾರು ಸಾವಿರಾರು ಗುಣಗಳನ್ನು ಬಿಚ್ಚಿಡುತ್ತದೆ. ಕೆಲಗುಣಗಳ ಕಡೆ ಗಮನ ಹರಿಸೋಣ. *ಮೃದು \ ಸ್ಮಿತ ಪೂರ್ವಾಭಿಭಾಷೀ* ಎಂದಿಗೂ ರಾಮ ಆಡುವ ಮಾತು ಮೊದಲನೆಯ ಮಾತಾಗುತ್ತಿತ್ತು. ಅವರು ಮಾತಾಡಲಿ ಎಂಬ ಭಾವ ಇರುತ್ತಿರಲಿಲ್ಲ. ಆ ಮಾತು ಮೃದುವೇ ಆಗಿರುತ್ತಿತ್ತು. ಮಾತಾಡುವಾಗ ಮಂದಹಾಸ ತುಂಬಿ ತುಳುಕಿರುತ್ತಿತ್ತು.  ಎಂದಿಗೂ ಕಠೋರ ಮಾತು ಅಥವಾ ಕೊಂಕು ಮಾತು ಆಗಿರುತ್ತಿರಲಿಲ್ಲ. *ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ* ಎಷ್ಟೇ ಪರುಷವಾಗಿ ಕ್ರೂರವಾಗಿ ಅಂದರೂ ಆಡಿದರೂ ತಿರುಗಿ ಉತ್ತರವನ್ನು ಎಂದಿಗೂ ಕೊಡುತ್ತಿರಲಿಲ್ಲ ಶ್ರೀರಾಮ. ಈ ಗುಣ ಮನವನ ವೈಭವದ ಜೀವನಕ್ಕೆ ಅತ್ಯುಪಯುಕ್ತ, ರೂಢಿಸಿಕೊಳ್ಳಲೂ ಬಹುದು. ಆ ಗುಣವನ್ನೇ ಬಿಚ್ಚಿ...

*ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು.....*

*ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು.....* ಸಜ್ಜನರ ರಕ್ಷಣೆಗೆ ಧಾವಿಸಿ ಬರುವ ಮಂತ್ರ ರಾಮ ಮಂತ್ರ. ರಕ್ಷಕರು ನೂರಾರು ಜನ ಇದಾರೆ. ಇರುವ ಎಲ್ಲ ರಕ್ಷಕರೂ ಕಷ್ಟಗಳು ಬಂದಾದಮೇಲೆ, ಆಪತ್ತೊದಗಿದಮೇ ರಕ್ಷಣೆಗೆ ಧಾವಿಸಿ ಬರುತ್ತಾರೆ. ಆಪತ್ತು ಬರುವದಕ್ಕೂ ಪೂರ್ವದಲ್ಲಿಯೇ ಆಪತ್ತ ಬಂದಕ್ಷಣದಲ್ಲಿಯೇ ರಕ್ಷಿಸುವವನು *ಶ್ರೀರಾಮ* ಮಾತ್ರ. ಅಂತೆಯೇ ಎಲ್ಲವೂ ರಾಮಮಯವಾಗಿತ್ತು ಅಂದಿನ ಜಗತ್ತು.  ವಿಶ್ವಾಮಿತ್ರ ಮಹಾಪರಾಕ್ರಮಿ. ಬಲಿಷ್ಠ. ಅಪರೋಕ್ಷಜ್ಙಾನಿ. ಸ್ವಯಂ ಚಕ್ರವರ್ತಿ.  ಇದರಮೇಲೆ ಕನಿಷ್ಠ ನಾಲವತ್ತು ಸಾವಿರ ವರ್ಷ ತಪಸದಸಿನಲ್ಲಿ ತೊಡಗಿಸಿ,  ಕಾಮಕ್ರೋಧ ದ್ವೇಶ ಹಗೆ ಮತ್ಸರ ಹಸಿವು ನೀರಡಿಕೆ ಕೊನೆಗೆ ಶ್ವಾಸೋಚ್ಛ್ವಾಸ ಇವುಗಳೆಲ್ಲವನ್ನೂ ಗೆದ್ದು *ಬ್ರಹ್ಮರ್ಷಿ* ಎಂದು ಬ್ರಹ್ಮದೇವರಿಂದಲೇ ಕರೆಸಿಕೊಂಡ ಮಹಾಂತ *ವಿಶ್ವಾಮಿತ್ರರು.* ವಿಶಿಷ್ಟವಾದ ಸಿದ್ಧಿಗೋಸ್ಕರ ಹನ್ನೆರಡು ದಿನಗಳ ಕಾಲ ಜರುಗುವ ಯಜ್ಙದ ರಕ್ಷಣೆಗೋಸ್ಕರ *ಶರಣು ಬರಬೇಕಾಯ್ತು ಶ್ರೀರಾಮಚಂದ್ರದೇವರಿಗೇ.* ಶ್ರೀರಾಮಚಂದ್ರನೇ ವಿಶ್ವಾಮಿತ್ರರಿಗೆ ಅನಿವಾರ್ಯ ಎಂದಾಯ್ತು.  ಶ್ರೀರಾಮನಿಂದಲೇ ಸಂರಕ್ಷಿತವಾಯಿತು ಸಂಪೂರ್ಣಗೊಂಡಿತು ಯಜ್ಙ.  ಸ್ವಯಂ ಯೊಗ್ಯತೆ ಇಲ್ಲದ, ತಪಸ್ಸೂ ಮಾಡದ, ದುರ್ಗುಣಗಳಿಗೆ ಆಗರರಾದ ನಮಗೆ *ಶ್ರೀರಾಮ ಹಾಗೂ ರಾಮ ನಾಮ* ಎಷ್ಟು ಅನಿವಾರ್ಯ ಎಂದು ಏಕಾಂತದಲ್ಲಿ ಸ್ವಲ್ಪ ಯೋಚಿಸೋಣ......  ಸಾಧನೆಯಲ್ಲಿ ತೊಡಗ್ತ...

*ಹೇ ಮನುಜ !!! ರಾಮ ಮಂತ್ರವ ಜಪೀಸೋ......*

Image
*ಹೇ ಮನುಜ !!! ರಾಮ ಮಂತ್ರವ ಜಪೀಸೋ......*  ವೈಷ್ಣವೋತ್ತಮರಾದ ರುದ್ರದೇವರು ತನ್ನ ಮಡದಿಯಾದ ಉಮೆಗೆ ಉಪದೇಶಿಸಿದ ಮಂತ್ರ *ರಾಮ ಮಂತ್ರ.* ನಿತ್ಯ ಜ್ಙಾನಿಗಳಾದ, ಜೀವೋತ್ತಮರಾದ, ಭಾವಿಬ್ರಹ್ಮರಾದ,   ಸ್ವಯ ವಾಯುದೇವರ ಅವತಾರಿಗಳಾದ ಹನುಮಂತದೇವರು ನಿರಂತರ ಸ್ಮರಿಸುವ ಧೇನಿಸುವ ಚಿಂತಿಸುವ ೭೨ ಕೋಟಿ ಮಂತ್ರಗಳಲ್ಲಿ ರಾಮ ಮಂತ್ರವೂ ಒಂದು. ಅಂತಹ ರಾಮ ಮಂತ್ರ ನಿರಂತರ ಜಪಿಸು ಎಂದು ದಾಸರಾಯರು ಹೇಳುತ್ತಾರೆ.  *ರಾಮ ಮಂತ್ರ ಜಪದಿಂದ ಸರ್ವಸಿದ್ಧಿ...* ಬೇಡರವನಾದ ವಾಲ್ಮೀಕಿ ತನ್ನ ವೃತ್ತಿಯಲ್ಲಿ ರತನಾಗಿ ಇರುತ್ತಾನೆ. ಕಂಡ ಪ್ರಾಣಿ ಪಶು ಪಕ್ಷಿಗಳನ್ನು ಸಂಹರಿಸುವದು. ಹಾದಿಹೋಕರ ಹಣ ವಸೂಲಿ ಮಾಡುವದು ಇತ್ಯಾದಿ ಇತ್ಯಾದಿ ಕೆಲಸಗಳಲ್ಲಿ ಲೀನ ನಾಗಿರುತ್ತಾನೆ.  ಒಂದಿನ ನಾರದರು ಬಂದು ವಾಲ್ಮೀಕಿಯ ಜೊತೆಗೆ ಮಾತಾಡುತ್ತಾರೆ. ಹೇ ವಾಲ್ಮೀಕಿ !!! ಇಷ್ಟೆಲ್ಲ ಪ್ರಾಣಿ ಪಶು ಪಕ್ಷಿಗಳ ಹಿಂಸೆ ಮಾಡುತ್ತೀ, ದರೋಡೆ ಮಾಡುತ್ತೀ ಇವೆಲ್ಲ ಪಾಪದ ಕೆಲಸವಲ್ಲವೇನೋ ?? ಪಾಪ ಬರುವದಿಲ್ಲವಾ.. ?? ಎಂದು ಕೇಳುತ್ತಾರೆ.. ವಾಲ್ಮೀಕಿ... ) ಸ್ವಾಮೀ !!! ಪಾಪ ಪುಣ್ಯ ಅಂತಾ ಕುಳಿತರೆ ಹೊಟ್ಟೆಪಾಡೇನು... ?? ನನ್ನ ನಂಬಿದ ನನಗೋಸ್ಕರ ಇರುವ ಮಡದಿ ಮಕ್ಕಳ ಅವಸ್ಥೆ ಏನು.. ?? ಅವರಿಗೋಸದಕರ ಇದೆಲ್ಲ ಮಾಡಲೇ ಬೇಕು.  ನಾರದರು..) ನಿಜ ಅವಶ್ಯವಾಗಿ ಮಾಡು. ನೀ ತಂದ ಪ್ರಾಣಿ ಪಶು ಪಕ್ಷಿಗಳನ್ನು ಹಂಚಿಕೊಳ್ಳುತ್ತಾರೆ ಸರಿ...