Posts

*ಅತೀ ಹೆಚ್ಚು ಬಳಿಕೆಯಲ್ಲಿ ಬರುವ ಆಧ್ಯಾತ್ಮಿಕ ಪದ ಎಂದರೆ "ದೇವರು" ಪದ..*

*ಅತೀ ಹೆಚ್ಚು ಬಳಿಕೆಯಲ್ಲಿ ಬರುವ ಆಧ್ಯಾತ್ಮಿಕ ಪದ ಎಂದರೆ "ದೇವರು" ಪದ..*  ಅತೀ ಹೆಚ್ಚು ಬಳಿಕೆಗೆ ಬರುವ ಅಧ್ಯಾತ್ಮಿಕ ಪದ ಯಾವದು ಎಂದು ನನಗೆ ಒಬ್ಬರು ಪ್ರಶ್ನೇ ಕೇಳಿದರು. *ದೇವರು* ಎಂಬ ಪದ ಎಂದು ನನ್ನ ಉತ್ತರವಾಗಿತ್ತು.  "ದೇವರು" ಎಂಬ ಪದ ಶ್ರೇಷ್ಠ ಪದ. ಕ್ರೀಡಾದಿ ಅನೇಕ ಗುಣಗಳಿಯುಕ್ತನಾದವ ನಮ್ಮ ಸ್ವಾಮಿ ಎಂದು ನಾರಾಯಣನನ್ನು ಕರೆಯುವ ಉತ್ತಮ ಪದ *ದೇವ* ಕನ್ನಡದಲ್ಲಿ ಆ ಪದವೇ *ದೇವರು* ಎಂದು ಚಾಲತಿಯಲ್ಲಿ ಬಂದಿದೆ.  "ದೇವರು" ನಮ್ಮ ಕೆಲಸಕ್ಕೆ ಅತ್ಯುಪಯುಕ್ತವಾದ ಪದ.  ಈ ಪದಕ್ಕಿಂತಲೂ ಉತ್ತಮ ಪದತ್ತೊಂದು ಸಿಗಲಾರದು. ಬೇರೆಯ ಪದಗಳು ಸಿಕ್ಕಿವೆ  ಎಂದರೆ ಆ ಎಲ್ಲ ಪದಗಲೂ ದೇವರದ್ದೇ ಆಗಿರುತ್ತವೆ.  ಮಾನವ ಕೋಟಿಯ ಆಕಾಂಕ್ಷೆಗಳು ಈಡೇರಿಸುವ, ಭರವಸೆ ಕೊಡುವ, ಸಂತೋಷ ಪ್ರದವಾದ, ನೆಮ್ಮೆದಿಯನ್ನು ಸುರಿಸುವ ಪದ *ದೇವರು* ಎಲ್ಲವೂ ಯಾವೊಂದರಲ್ಲಿ ಇದೆ ಆ ಪದವೇ *ದೇವರು*  ಏಕೆಂದರೆ ದೇವರೇ ಅಲ್ಲವೆ *ದೇವರು* ಎಂಬ ಹೆಸರಿನಿಂದ ಕರೆಸಿಕೊಳ್ಳುವವನು.   ಈಗ ಈ ಪದವನ್ನು ಬದಲಾಯಿಸಲಿಕ್ಕೇ ಸಾಧ್ಯವೇ ಇಲ್ಲ. ಏಕೆಂದರೆ.... "ದೇವ" ಎಂಬ ಈ ಪದ, ಪದದ ಮತವಾದ ಭಾವಾರ್ಥ, ಅದನ್ನು ತಿಳಿದು, ಪದದಿಂದ ವಾಚ್ಯ ಶ್ರೀಹರಿಯನ್ನು ಸಾಕ್ಷಾತ್ಕಾರ ಮಾಡಿಕೊಂಡವರೇ ಈ ಪದದ ಅಭಿವ್ಯಕ್ತಿಗೆ ಕಾರಣರಾದರು. ಹೀಗೆ ಜ್ಙಾನಿಗಳಿಂದ ಅಭಿವ್ಯಕ್ತವಾದ ಈ ಪದ ಕ್ರಮವಾಗಿ ಅಜ್ಙಾನಿಗಳಲ್ಲೂ ಪ್ರಸಿದ್ದಿಗೊಂಡ...

*ಇಂದು ನಮ್ಮ ಆಚರಣೆಗಳು ಮಹತ್ವ ಕಳೆದು ಕೊಂಡಿವೆಯಾ.........

Image
*ಇಂದು ನಮ್ಮ ಆಚರಣೆಗಳು ಮಹತ್ವ ಕಳೆದು ಕೊಂಡಿವೆಯಾ...???*  *ಹುಟ್ಟು ಹಬ್ಬ, ಮದುವೆಯ ದಿನ,  ಹೊಸವರ್ಷಾಚರಣೆ, ಹಬ್ಬ ಹರಿದಿನ* ಮೊದಲಾದ ಆಚರಣೆಗಳು ಮಹತ್ವವನ್ನು ಕಳೆದುಕೊಂಡಿವೆಯಾ.....??? ಇದೊಂದು ದೊಡ್ಡ ಪ್ರಶ್ನೆ. ಅನೇಕರಿಗೆ ಕಾಡುವ ಪ್ರಶ್ನೆ. ಸಣ್ಣ ಸಣ್ಣ ಆಚರಣೆಗಳೂ ಒಂದೊಂದು ಉತ್ತಮ ಫಲಗಳಿಗೋಸ್ಕರವೇ. ಆ ಆಚರಣೆಗಳೆ ಉತ್ತಮ ಉತ್ಕೃಷ್ಟ ಶಾಸ್ತ್ರೋಕ್ತ ರೀತಿಯಲ್ಲಿ ಆಗದಿದ್ದರೆ ಮಹಾ ಅನರ್ಥಕಾರಿಯೂ ಆಗುತ್ತವೆ. ನಿಷ್ಫಲವಂತೂ ಪ್ರತಿಶತಃ ನೂರರಷ್ಟು ನಿಶ್ಚಿತ. ಹುಟ್ಟು ಹಬ್ಬ, ಮದುವೆಯ ದಿನ, ಉಳಿದ ನಾನಾ ಹಬ್ಬಗಳ ಆಚರಣೆಗಳು ಆಚರಣೆಗಳಾಗಿ ಉಳಿದೆ ಇಲ್ಲ. ಶಾಸ್ತ್ರೋಕ್ತ ರೀತಿಯಲ್ಲೂ ಇರುವದಿಲ್ಲ. ಪಾಶ್ಚಾತ್ಯರ ಅನುಕರಣೆಯೇ ಹೆಚ್ಚಾಗಿರತ್ತೆ. ಈ ಅನುಕರಣೆ ಧಾರ್ಮಿಕರ, ಆಚಾರವಂತರ, ಪಂಡಿತರ,  ಮಡಿವಂತರ, ದೊಡ್ಡ ದೊಡ್ಡ ಕುಲವಂತರ ಮನೆಯಲ್ಲಿಯೂ ನಡೆಯುತ್ತವೆ. ತುಂಬ ದುಃಖವಾಗತ್ತೆ, ಬಹಳ ಖೇದವೆನಿಸುತ್ತದೆ. ಪಾಶ್ಚಾತ್ಯರ ಅನುಕರಣೆ ರುಚಿ ಎನಿಸತ್ತೆ, ಈ ಎಲ್ಲರ ಬಲ ಸಿಗತ್ತೆ ಹಾಗಾಗಿ ನಾನೂ ಮುಂದೊರೆಯುತ್ತೇನೆ.... *ಇಂದು ಆಚರಣೆಗಳು ಮಹತ್ವವನ್ನು ಕಳೆದು ಕೊಂಡದ್ದು ಏನಕ್ಕೆ....* ದೀಪ ಬೆಳಗುವದು  ನಮ್ಮ ಸಂಪ್ರದಾಯ. ದೀಪ ಬೆಳಗುವದೇ ನಮ್ಮ ಉಸಿರು. ದೀಪ ಶಾಂತ ಮಾಡುವದು ಬದುಕಿದಾಗ ಇರುವದೇ ಇಲ್ಲ. ಉಸಿರು ನಿಂತ ಮೇಲೆಯೇ ದಿಪ ಆರಿಸುವದು. *ದೀಪ ಶಾಂತ ಮಾಡುವದು ಎಂದರೆ ಸತ್ತನಂತರವೇ. ಅದೂ ಹತ್ತನೇಯ ದಿನ.* ಸತ್ತನಂ...

*ನನ್ನ ಭಾಗ್ಯದ ದೇವರು.....*

Image
*ನನ್ನ ಭಾಗ್ಯದ ದೇವರು.....* ಆದಿಗುರು ಆದ ದೇವ ಕೇಳಿದ್ದನ್ನೂ ಕೇಳದಿರುವದನ್ನೂ ಎಲ್ಲವನ್ನೂ ಕೊಟ್ಟಾನು. ಆದರೆ ಮೋಕ್ಷಕ್ಕೆ ದಾರಿಯಾದ *ಶುದ್ಧ ಗುರು, ಪರಿಶುದ್ಧ ತತ್ವಜ್ಙಾನ* ಅನಾಯಾಸೇನ ಕೊಡಲಾರ. ಇವುಗಳು ದೊರೆಯಬೇಕಾದರೆ ಅಪಾರ ಪುಣ್ಯದ ರಾಶಿ ಇರಬೇಕು. ಯೋಗ್ಯತೆ ಅತ್ಯುತ್ತಮವಾಗಿರಬೆಕು, ಭಗವತ್ಕೃಪಾಪಾತ್ರರೂ ಆಗಿರಬೆಕು. ಆಗ ದೊರೆಯಬಹುದೇನೋ.... ನಾ ಹುಟ್ಟುವದಕ್ಕೂ ಮೂವತ್ತು ವರ್ಷಗಳ ಮುಂಚೆಯೇ ಗುರುಗಳನ್ನು ಭುವಿಗಿಳಿಸು ಅನುಗ್ರಹ ಕರುಣೆ ಮಾಡಿದ ಆ ದೇವನಿಗೆ ನನ್ನ ಅನಂತ ನಮನಗಳು. *ಇಂದು ನಮ್ಮ ಗುರುಗಳ ಜನ್ಮದಿನ* ಸರಿಯಾಗಿ ಆರವತ್ತು ವರ್ಷಗಳ ಹಿಂದೆ ೧೯೬೦ ನೇಯ ಮಾಘ ಮಾಸ, ಕೃಷ್ಣಪಕ್ಷದ ಸಪ್ತಮಿಯದಿನ  ನಾಸ್ತಿಕತೆ, ಅಜ್ಙಾನ, ಅಧರ್ಮಗಳ ಅಂಧಕಾರದಲ್ಲಿ ಮುಳುಗಿದ ಮುಂಬಯಿ ಮಹಾನಗರದಲ್ಲಿ,  ಆಸ್ತಿಕತೆಯ ತತ್ವಜ್ಙಾನಗಳ ಪ್ರಖರ ಕಿರಣಗಳಿಂದ ಕೂಡಿದ ಸೂರ್ಯನ ಉದಯವಾಯಿತು. ಆ ಸೂರ್ಯನೇ ನಮ್ಮ ಇಂದಿನ ಮಾಹಾ ಗುರುಗಳು. *ಪರಮ ಪೂಜ್ಯ ಮಾಹುಲೀ ಆಚಾರ್ಯರು.* ಸವನತ್ರಯಾತ್ಮಕ ೧೨೦ ವರ್ಷಗಳ ಭವ್ಯ ಜೀವನದಲ್ಲಿ, ಮೊದಲನೇಯ ಸವನದಲ್ಲಿ, ತಂದೆಯವರಾದ ಪರಮಪೂಜ್ಯ ಮಾಹಲೀ ಪರಮಾಚಾರ್ಯರ ಬಳಿಯೇ  ನಿರಂತರ ಅಧ್ಯಯನ ನಡಿಸಿ, ೧೯೭೯ ನೇಯ ಇಸ್ವಿಯಲ್ಲಿ ಅರ್ಥಾತ್ ತಮ್ಮ ಹತ್ತೊಂಭತ್ತನೇಯ ವಯಸ್ಸಿಗೇನೆ  ಶ್ರೀಮನ್ಯಾಸುಧಾ ಮಂಗಳವಾಗಿಸಿಕೊಂಡರು. *ಅಧ್ಯಯನ*  ಸಾಹಿತ್ಯ, ಅಲಂಕಾರ ಶಾಸ್ತ್ರ, ಬಾಧಾಂತ ತರ್ಕ, ವ್ಯಾಸ...

*ಬೆಳಕನ್ನು ಹೊರದಬ್ಬಿದರೆ ಕತ್ತಲು ಒಳ ಸೇರೀತು..

*ಬೆಳಕನ್ನು ಹೊರದಬ್ಬಿದರೆ ಕತ್ತಲು ಒಳ ಸೇರೀತು......* ಕತ್ತಲು ಹಾಗೂ ಬೆಳಕು ಇವೆರಡೂ ಒಂದು ಇದ್ದಲ್ಲಿ ಇನ್ನೊಂದು ಇರದು. ಪರಸ್ಪರ ವಿರೋಧಿಗಳು. ಆದರೆ ಶತ್ರುಗಳು ಅಲ್ಲ. ಬೆಳಕು ಬಂದಲ್ಲಿ ಕತ್ತಲಿಗೆ ಹೋಗಬೆಕೆಂಬ ಬೇಸರಿಲ್ಲ. ಹಾಗೆಯೇ ಬೆಳಕು ಬಂದಾಗ ಕತ್ತಲಿಗೆ ಬೇಸರಿಲ್ಲದೆ ಹೋಗತ್ತೆ. ಆದರೆ ಕೂಡಿ ಇರುವದಿಲ್ಲ. ಒಂದಿದ್ದಲ್ಲಿ ಇನ್ನೊಂದು ಇರುವದಿಲ್ಲ. ಆದರೆ ಇವೆರಡರಲ್ಲಿ ಆರಿಸಿಕೊಳ್ಳುವದು ನಮಗೆ ಬಿಟ್ಟಿದ್ದು ಕತ್ತಲು ಬೇಕಾ ಬೆಳಕನ್ನು ಹೊರಗಟ್ಟು, ಬೆಳಕು ಬೇಕೇ ಕತ್ತಲನ್ನು ಹೊರಗಟ್ಟಬೇಕು. ಅಂತೂ ಯಾವದನ್ನು ಒಳಗೆ ಸೇರಿಸಬೇಕು ಎಂಬುವದು ಮಾತ್ರ ನಮಗೆ ಬಿಟ್ಟಿರೋದು.  ಬೆಳಕು ಹಾಗೂ ಕತ್ತಲಿನ ತರಹದ ಅನೇಕ ಗುಣ ಪದಾರ್ಥಗಳನ್ನು ನಾವು ಪಡೆಯುತ್ತೇವೆ. ಆಶಿಸಿ ಹಂಬಲಿಸಿ ಪಡೆದುಕೊಳ್ಳುತ್ತೇವೆ. ಅವುಗಳಲ್ಲಿ ಜ್ಙಾನ-ಅಜ್ಙಾನ, ಗುಣಗಳು-ದೋಷಗಳು, ಹಿತೈಷಿ ಸ್ನೆಹಿತರು-ಅಹಿತಮಾಡುವ ಮಿತ್ರರು, ಧರ್ಮ-ಅಧರ್ಮ, ಭಕ್ತಿ- ದ್ವೇಶ, ನಾಸ್ತಿಕತೆ-ಶ್ರದ್ಧೆ ಇವೆಲ್ಲವೂ ಒಂದು ಇರುವಲ್ಲಿ ಇನ್ನೊಂದು ಇರುವದಿಲ್ಲ. ಪರಸ್ಪರ ವಿರೋಧಿಗಳೂ ಹೌದು.  ಒಂದನ್ನು ಪಡೆಯ ಬೇಕಾದರೆ ಇನ್ನೊಂದನ್ನು ಹೊರ ಹಾಕಲೇಬೇಕು. ಧರ್ಮವನ್ನೂ ಮಾಡುತ್ತೇನೆ, ಅಧರ್ಮವನ್ನೂ ಬಿಡುವದಿಲ್ಲ ಎಂದಾಗಲು ಸಾಧ್ಯವೇ ಇಲ್ಲ.  ಧರ್ಮ ಮಾಡುತ್ತೀಯಾ ಖಂಡಿತ ಮಾಡು. ಆದರೆ ಲೋಕಕ್ಕೆ ಅಧರ್ಮವೇ ರುಚಿ ಎಂದು ಭಾವಿಸಿ ಅಧಾರ್ಮಿಕ ಮುಖವಾಡ ಹಾಕಿಕೊಂಡು, ಒಳೊಗೊಳಗೆ ಧರ್ಮವನ್ನು ಸರ್ವಥಾ ...

*ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ*

*ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ* ವಿಷ್ಣು ಸಹಸ್ರನಾಮ ದಲ್ಲಿ ಬರುವ ಒಂದು ನಾಮ *ಪ್ರೀತಿ ವರ್ಧನಃ* ಎಂದು. ಪ್ರೀತಿಯನ್ನು ನಿರಂತರ ಬೆಳಿಸುವ, ಉಳಿಸುವ ಭಗವಂತನ ಒಂದು ನಾಮ.  ದೇವರು ಕೊಟ್ಟ ಅಮೂಲ್ಯವಸ್ತುಗಳಲ್ಲಿ ಪ್ರೀತಿಯೂ ಒಂದು. ಮರೆಯುವಂತಹದ್ದು ಅಲ್ಲವೇ ಅಲ್ಲ. ಪ್ರೀತಿ ಯೊಂದು ಇರಲಿಲ್ಲ ಎಂದಾಗಿದ್ದರೆ ಜಗತ್ತೇ ಇರುತ್ತಿರಲಿಲ್ಲ. ಎಂದೋ ನಾಶವಾಗಿ ಹೋಗುತ್ತಿತ್ತು. ಜಗತ್ತಿನ ನಾಶವಾಗಿಲ್ಲ, ನಾನುಬದುಕಿ ಇದ್ದೇನೆ ಎಂದರೆ ಅದಕ್ಕೆ ಮೂಲ *ಪ್ರೀತಿ.* *ಪ್ರೀತಿ ಎಂಬ ವಸ್ತುವನ್ನೇ ದೇವರು ಸೃಷ್ಟಿಸಿರಲಿಲ್ಲ ಎಂದಿದ್ದರೆ ಏನಾಗ್ತಿತ್ತು.....???* ಇವತ್ತು ಭಾನುವಾರ ಅಲ್ವೇ ಮಾರ್ಕೇಟಿಗೋ ಮಾಲ್ ಗಳಿಗೋ ಹೋಗ್ತೆವೆ. ಸಾವಿರ ಸಾವಿ ವಸ್ತುಗಳನ್ನು ಕಾಣುತ್ತೇವೆ ಕೆಲವೇ ವಸ್ತಗಳನ್ನು ಖರೀದಿ ಮಾಡುತ್ತೇವೆ ಸರಿ ನಾ. ಹೀಗಿರುವಾಗ ಎಲ್ಲ ವಸ್ತುಗಳನ್ನು ನಾನೇಕೆ ತೆಗೆದು ಕೊಳ್ಳಲಿಲ್ಲ.. ?? ಎಂದರೆ ಆ ಎಲ್ಲ ವಸ್ತುಗಳ ಮೇಲೆ ನನಗೆ ಪ್ರೀತಿ ಹುಟ್ಟಲಿಲ್ಲ. ಯಾವ ವಸ್ತುವಿನ ಮೇಲೆ ಪ್ರೀತಿ ಹುಟ್ಟಿತೋ ಆ ವಸ್ತುವನ್ನು ನಾನು ಖರೀದಿಸಿದೆ. ಎಲ್ಲ ವಸ್ತುಗಳ ಮೇಲೆಯೂ ಪ್ರೀತಿ ಹುಟ್ಟಿದ್ದರೆ.... ಅಥವಾ ನೋಡಿದ ಯಾವೆಲ್ಲ ವಸ್ತುಗಳಿವೆ ಅದೆಲ್ಲದರ ಮೇಲೆ "ದ್ವೇಶವೇ" ಹುಟ್ಟಿದ್ದರೆ ಏನಾಗ್ತಿತ್ತೋ...... ನಾವೇ ಏಕಾಂತದಲ್ಲಿರುವಾಗ ವಿಚಾರಿಸಬೇಕು. ಉಡುವ ಬಟ್ಟೆ, ಉಣ್ಣುವ ಆಹಾರ, ಸಂಬಂಧ ಬೆಳಿಸಿಕೊಳ್ಳವ ಜನರು, ಘಳಿಸುವ ಹಣ, ಇರುವ...

*ತಪಸ್ಸು* (ಭಾರತವಾಣೀ....)

Image
*ತಪಸ್ಸು*  (ಭಾರತವಾಣೀ....) *ತಪಸೋ ಹಿ ಪರಂ ನಾಸ್ತಿ ತಪಸಾ ವಿಂದ್ಯತೇ ಮಹತ್* *ಮಂದಭಾಗ್ಯೋಲ್ಪಭಾಗ್ಯಾನಂ ತಪ ಏಕಂ ಸಮಾಸ್ಥಿತಮ್*  ತಪಸ್ಸಿನಿಗಿಂತಲೂ ಉತ್ತಮ ವಾದದ್ದು ಯಾವದಿಲ್ಲ. ತಪಸ್ಸಿಗೆ ದೇವರೂ ಒಲೆದು ಬರುತ್ತಾನೆ. ಮಂದಭಾಗ್ಯ ಅಲ್ಪಭಾಗ್ಯರಾದ ದೌರ್ಭಾಗ್ಯವಂತರಾದ ನಮಗೆ, ಅಸಾಧ್ಯವಾದದ್ದನ್ನು ಪಡೆಯ ಬೇಕಾದರೆ ತಪಸ್ಸೇ ಮೂಲ ಎಂದು ಮಹಾಭಾರತ ಸೊಗಸಾಗಿ ಸಾರುತ್ತದೆ.  ಸ್ವರ್ಗದಲ್ಲಿ ಇರುವ ಅರ್ಜುನ,  ವನದಲ್ಲಿ ಇರುವ ಧರ್ಮರಾಜನಿಗೆ ತಿಳಿಸುವ ಸುಂದರ ಮಾತು. ನನಗೆ ಒಂದು ದೈವ ಕಾರ್ಯವಿದೆ (ನಿವಾತಕವಚರ ಸಂಹಾರ) ಆ ಕೆಲಸ ಮುಗಿಸಿ ನಾನು ನಿಮ್ಮನ್ನು ಸೇರುವೆ. ಕರ್ಣಾದಿಗಳನ್ನು ಹೇಗೆ ಎದುರಿಸಬೇಕು ಎಂಬ ಭಯವನ್ನೂ ಪರಿಹರಿಸುವೆ. ಅಲ್ಲಿಯ ವರೆಗೆ ನೀವು ತಪಸ್ಸನ್ನು ಮಾಡಿ ಎಂದು..... ತಪಸ್ಸು ಇದ್ದರೆ ಎಲ್ಲವಿದೆ ತಪಸ್ಸು ಇಲ್ಲವೆಂದಾದರೆ ಏನೂ ಇರುವದಿಲ್ಲ. ತಪಸ್ಸಿನಿಂದಲೇ ಎಲ್ಲವನ್ನೂ ಸಾಧಿಸ ಬಹುದು. ಆದ್ದರಿಂದ ನೀವೆಲ್ಲರೂ ತಪಸ್ಸಿನಲ್ಲಿ ತೊಡಗಿರಿ ಎಂದು ಸಂದೇಶವನ್ನು ಕಳುಹಿಸುತ್ತಾನೆ ಅರ್ಜುನ. ಅದನ್ನು ಪಾಲಿಸುತ್ತಾರೆ ಧರ್ಮ ಭೀಮಾದಿಗಳು. ಕಾಲಾಂತರದಲ್ಲಿ ತಪಸ್ಸಿನ ಫಲವನ್ನೂ ಪಡೆಯುತ್ತಾರೆ. ಇದು ತಪಸ್ಸಿನ ಫಲ. ಇಂದು ನಮಗೆ ತಪಸ್ಸು ಬೇಡವಾಗಿದೆ. ತಪಸ್ಸು ಮಾಡಯ್ಯಾ ಅಂದರೆ ಮೂಗು ಮುರಿಯುತ್ತಾನೆ ಇಂದಿನ ಯುವಕ. ಇದಕ್ಕೆ ಮೂಲ ತಪಸ್ಸು,  ತಪಸ್ಸಿನ ಶಕ್ತಿ, ತಪಸ್ಸಿನ ಫಲ ಮೂರ ಪಡೆಯದ ಹ...

*ರೋಗಾನುಭವವೆಲ್ಲ ಉಗ್ರ ತಪವೋ.....*

Image
*ರೋಗಾನುಭವವೆಲ್ಲ ಉಗ್ರ ತಪವೋ.....* ರೋಗಗಳನ್ನು ಕೊಡುವವ ದೇವರು. ಪರಿಹರಿಸಿ ಆರೋಗ್ಯ ಕೊಡುವವನೂ ದೇವರು. ಆಪತ್ತಿನಲ್ಲಿ "ಔಷಧ" ನಾಮಕನಾಗಿ ಔಷಧಿ ರೂಪದಿಂದ ಬಂದೊದುಗವವನೂ  ದೇವರೇ ಎಂದು ನಿನ್ನೆ ತಿಳಿದೆವು.  ರೋಗ ಪರಿಹಾರ ಮಾಡುವದೇ ಉದ್ಯೆಶ್ಯವಾಗಿದ್ದರೆ ರೋಗಗಳನ್ನು ಕೊಡಬೇಕು ಯಾಕೆ....?? ಎಂದು ಸಂಶಯ ಬರತ್ತೆ.  ಮಾನವ ಜನ್ಮದಲ್ಲಿ ಬಂದ ಮನುಷ್ಯನಿಗೆ *ತಪಸ್ಸೇ* ಮೂಲ. ತಪಸ್ಸನ್ನು ಬಿಟ್ಟ ನಮಗೆ ರೋಗಗಳನ್ನಾದರೂ ತಪಸ್ಸು ಎಂದು ಭಾವಿಸಿ ಎಂದು ಸೂಚಿಸಲು ರೋಗ ಕೊಡುತ್ತಾನೆ ಎಂದೆನಿಸುತ್ತದೆ. ಅಂತೆಯೆ ದಾಸರಾಯರು *ರೋಗಾಗುನುಭವವೆಲ್ಲ ಉಗ್ರ ತಪವೋ* ಎಂದಿರಬಹುದು.  *ತಪಸ್ಸು* ಎಂದರೆ ದೇವರನ್ನು ನೆನೆಯುವದು, ಪುಣ್ಯದ ಸಂಪಾದನೆಯಾಗುವದು, ಪಾಪಗಳು ಘಟಿಸದೇ ಇರುವದು, ಇರುವ ಪಾಪಗಳನ್ನು ಕಳೆದುಕೊಳ್ಳುವದು. ಈ ನಾಲಕೂ ರೋಗವಿದ್ದಲ್ಲಿ ಸುಲಭವಾಗಿ ನಡೆಯುತ್ತವೆ.  ದೇಹ ಇಂದ್ರಿಯ ಮನಸ್ಸು ಇವುಗಳೆಲ್ಲವನ್ನೂ ಆರೋಗ್ಯವಂತನ್ನಾಗಿ ಇಟ್ಟುಕೊಂಡ ವ್ಯಕ್ತಿ ಸಾಮಾನ್ಯವಾಗಿ ಆರೋಗ್ಯಭಾಗ್ಯ ಒದಗಿಸಿದ ದೇವರನ್ನು ನೆನೆಸುವದಿಲ್ಲ. ಅದುವೇ ರೋಗಿ ನಿರಂತರ ದೇವರೆ !!! ನಾರಾಯಣ !! ನರಹರೇ !!! ಅಂತ ವಟವಟಾ ಅಂತಿರ್ತಾನೆ, ಮನಸ್ಸು ಹದವಾಗಿಸಿಕೊಂಡು ಬಾಗಿಸಿ ನಿರಂತರ ದೇವರನ್ನು ನೆನೆಯುತ್ತಾ ಇರುತ್ತಾನೆ.  ರೋಗ ಪರಿಹಾರಕ್ಕಾಗಿ ನಾನಾವಿಧ ನಾಮಗಳನ್ನು ಜಪ ತಪಗಳನ್ನು ಮಾಡುತ್ತಾನೆ, ಯಜ್ಙ ಯಾಗಗಳೆನ್ನುತ್ತಾನೆ...