*ಅಜಾಮಿಳ ಮತ್ತು ಗಜೇಂದ್ರ*
*ಅಜಾಮಿಳ ಮತ್ತು ಗಜೇಂದ್ರ* ಕರುಣಾಳು ದೇವ. ಎಲ್ಲತರಹದ ಜನರನ್ನೂ ರಕ್ಷಿಸುವ ಹೆದ್ದೊರೆ. ಋಷಿ ಮಕ್ಕಳು ಎಂದು ಮೋಕ್ಷ ಕೊಡುವದಿಲ್ಲ. ದೈತ್ಯರ ಮಗ ಎಂದು ತಮಸ್ಸೂ ಕೊಡುವದಿಲ್ಲ. ಅವರ ವ್ಯಕ್ತಿತ್ವ ಗುಣವಂತಿಕೆ ಇವುಗಕಳನ್ನು ಗಮನಿಸಿಯೇ ಫಲಕೊಡುವ ದೊರೆ ನಮ್ಮ ದೊರೆ. ದ್ರೌಪದಿ, ಪಲ್ಹಾದ, ಬಲಿ, ಧೃವ, ಗಜೇಂದ್ರ, ಅಜಮಾಮಿಳ ಈ ಎಲ್ಲ ಮಹಾಮಹಿರ ಜೀವನ ಚರಿತ್ರೆಯಲ್ಲಿ ಸರ್ವರಕ್ಷಕನಾದ ದೇವರು ಕರುಣೆ ಹಾಗೂ ರಕ್ಷಣೆ ಅತ್ಯದ್ಭುತವೇ ಸರಿ. ಈ ಕಥೆಗಳು ಭಾಗವತ ಭಾರತದಲ್ಲಿ ಹೇಳಿರುವಂತಹದ್ದು. "ಭರವಸೆಯ ತಳಹದಿಯಮೇಲೆ ಭಕ್ತಿ ಹಾಸುಹೊಕ್ಕಿದ್ದರೆ ಸಾಧನೆ ಸುಸೂತ್ರ ಹಾಗೂ ಪೂರ್ಣಫಲಕಾರಿ" ಎಂಬುವದನ್ನು ಸಾರುವದಕ್ಕಾಗಿಯೇ, ಈ ಎಲ್ಲ ಕಥೆಗಳ ಮುಖಾಂತರ ದೇವ ತಾನು *ಕರುಣಾಮಯ ಹಾಗೂ ಸರ್ವರಕ್ಷಕ* ಎಂಬುವದನ್ನು ದೃಢಪಡಿಸುತ್ತಾನೆ. ಗಜೇಂದ್ರ ಹಾಗೂ ಅಜಾಮಿಳರಿಗೆ ದೆವರೇ ರಕ್ಷಣೆ ಮಾಡಿದ್ದಾನೆ. ಆದರೆ ಇವರೀರ್ವರಲ್ಲಿ ಬಹಳ ಕರುಣೆ ಮಾಡಿದ್ದು ಯಾರಿಗೆ... ??? ಎಂದು ಯೋಚನೆ ಬಂದಿದೆ ಎಂದಾರೆ ಉತ್ತರ ಹೀಗೆ ಹೇಳಬಹುದು, ರಕ್ಷಣೆ ಸಮಾನವಾಗಿದ್ದರೂ ಅಜಾಮಿಳನಮೇಲೆ ಕರುಣೆ ಅತೀ ಉನ್ನತಮಟ್ಟದಲ್ಲಿ ಇದೆ ಎಂದು ಹೇಳಬಹುದು. *ಗಜೇಂದ್ರ...* ಗಜೇಂದ್ರ ಒಂದು ಪ್ರಾಣಿ. ಬುದ್ಧಿ ಇಲ್ಲ. ವಿಧಿನಿಷೇಧಗಳೂ ಇಲ್ಲ. ಶಾಸ್ತ್ರ ಧರ್ಮ ಜ್ಙಾನ ಇವುಗಳನ್ನು ತಿಳಿದೂ ಇಲ್ಲ. ಆದರೆ *ದೇವರ ಮಹಾನ್ ...