Posts

*ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್*

Image
*ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್* ಶ್ರೀಶ್ರೀ೧೦೦೮ಶ್ರೀ ಶ್ರೀರಾಘವೇಂದ್ರಸ್ವಾಮಿಗಳ ೩೪೭ ನೇಯ ಆರಾಧನಾ ಮಹೋತ್ಸವ. ಇಂದು ನಮ್ಮ ದೇಹ ಇಂದ್ರಿಯ ಮನಸ್ಸುಗಳು ಕಲುಷಿತವಾಗಿವೆ, ಕಲ್ಮಷವಾಗಿವೆ. ಕಲುಷಿತವಾದ ದೇಹೇಂದ್ರಿಯ ಮನಸ್ಸುಗಳು ಇರುವದರಿಂದಲೇ ಸುತ್ತಲ ಪರಿಸರವೆಲ್ಲವೂ ಕಲುಷಿತವಾಗಿವೆ. ಸ್ವಚ್ಛಗೊಳಿಸುವ ಒಬ್ಬ ವ್ಯಕ್ತಿಯ ಆವಶ್ಯಕತೆ ತುಂಬ ಇದೆ. ಆ ವ್ಯಕ್ತಿಯೆ ಇಂದಿನ ಆರಾಧಕರಾದ ಗುರು ಸಾರ್ವಭೌಮರು. *ಗುರು ಸ್ಮರಣೆಯಿಂದ ಆಪತ್ತು ಪರಿಹಾರ* ಕಲುಷಿತ ಮನಸ್ಸೇ ಇಂದಿನ ಒಂದು ದೊಡ್ಡ ಆಪತ್ತು.  ಆ ಆಪತ್ತಿನ ಪರಿಹಾರದ ಮಾರ್ಗವೇ ಗುರುಸ್ಮರಣೆ. ಇದುವೇ ದಾಸರೆಲ್ಲರ ಧರ್ಮವೂ ಸಹ ಆಗಿದೆ. ಆದ್ದರಿಂದ ನಿರಂತರ *ಶ್ರೀಗುರುಭ್ಯೋ ನಮಃ* *ಶ್ರೀರಾಘವೇಂದ್ರಾಯ ನಮಃ* ಎಂಬ ಮಂತ್ರಗಳ ನಿರಂತರ ಸಂಸ್ಮರಣೆ ಜಪ ಅತ್ಯವಶ್ಯಕ. *ಯಃ ಪಿಪೇಜ್ಜಲಮೇತೇನ ಸ್ತೋತ್ರೇಣೈವ ಅಭಿಮಂತ್ರತಮ್* ಕೇವಲ ಗುರುಮಂತ್ರದ ಜಪ ಮಾತ್ರವಲ್ಲದೇ *ನೀರನಲ್ಲಿ ಗುರುಸ್ತೋತ್ರವನ್ನು ಜಪಿಸುತ್ತಾ ಅಭಿಮಂತ್ರಣೆ ಮಾಡಿ, ಆ ಜಲವನ್ನು ಕುಡಿದರೆ ಆಯ್ತು* ಎಲ್ಲತರಹದ ಎಲ್ಲ ರೋಗಗಳೂ ದೇಹ ಇಂದ್ರಿಯ ಮನಸ್ಸಿನ ಸಕಲ ಕಲ್ಮಷಗಳೂ ಬೇರುಸಹಿತ ಸ್ವಚ್ಛವಾಗಿ ತೊಳೆದು ಹೋಗುತ್ತವೆ ಎಂದು ಅಪ್ಪಣ್ಣಾಚಾರ್ಯರು ತಿಳುಹಿಸುತ್ತಾರೆ. ಜ್ಙಾನದ ವಿರೋಧಿಯಾದ ಅಜ್ಙಾನ ವಿಸ್ಮೃತಿ ಭ್ರಾಂತಿ ಸಂಶಯ ಅಪಸ್ಮೃತಿ ಆಲಸ್ಯ ತೊದಲ್ನುಡಿವಿಕೆ ಇವೇ ಮೊದಲಾದ ಸಕಲ ಇಂದ್ರಿಯ ದೋಷಗಳೂ ಪರಿಹಾರವಾಗು...

*ಮಂದಭಾಗ್ಯರಿಗೆ ದೊರೆಯದಿವರ ಮಹಾ ಸೇವಾ.....*

Image
*ಮಂದಭಾಗ್ಯರಿಗೆ ದೊರೆಯದಿವರ ಮಹಾ ಸೇವಾ.....* ಮಹಾಜ್ಙಾನಿಗಳು, ದೇವಾಂಶಸಂಭೂತರು. ಕೋಟಿ ಕೋಟಿ ಗುಂಣವಂತರು. ನಿತ್ಯ ನಿರಂತರ ಭಗವಾರಾಧಕರು. ದುರ್ವಾದಿ ಖಂಡನಪ್ರವೀಣರು. ಸ್ವಮತ ಸ್ಥಾಪಕರು. ಶ್ರೀಮದಚಾರ್ಯರ ಹಾಗೂ ಶ್ರೀಮಟ್ಟೀಕಾಕೃತ್ಪಾದರ ನಿರಂತರ ಆರಾಧಕರು. ಭಕ್ತಾಭೀಷ್ಟಪ್ರರೂ ಆದ ಗುರುಸಾರ್ವಭೌಮರಾದ ಶ್ರೀಶ್ರೀ ೧೦೦೮ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ, ಇಂದಿನಿಂಸ ಮೂರುದಿನಗಳ ಕಾಲ ವೈಭವದಿಂದ ಸಾಗುತ್ತದೆ. ಪುಣ್ಯವಂತರ ಸೇವೆ, ಪುಣ್ಯವಂತರಿಗೇ ಸಿಗುವದು. ಪುಣ್ಯವಂತರನ್ನು ಮೆಚ್ಚಿಸುವವರೂ,  ಪುಣ್ಯವಂತರೆ. ರಾಯರಿಗೆ ಪ್ರಿಯವಾದದ್ದನ್ನು ಬೇಡುವವರೂ ಪುಣ್ಯವಂತರೇ. ಅಂತೆಯೇ ದಾಸರು ಕೊಂಡಾಡಿದರು *ಮಂದಭಾಗ್ಯರಿಗೆ ದೊರಕಿದವರ ಮಹಾ ಸೇವಾ* ಎಂದು. ಸ್ವಾರ್ಥವೇ ಉದ್ದೇಶ್ಯವಾಗಿ ಇರುವ ಸೇವೆಯೇ ದೊರೆಯದು ಎಂದಾರೆ, ಅವರ ಪ್ರೀತ್ಯರ್ಥಕ ಅವರ ಮಹಿಮೆ ತಿಳಿದುಕೊಳ್ಳುವದು ದೂರದ ಮಾತು. ಆದರೂ ಕೆಲ ಗುಣಗಳ ಮಹಿಮೆಯನ್ನು ತಿಳಿಯೋಣ. *ಜ್ಙಾನ* ಎಂದೂ ಬತ್ತದ ಜ್ಙಾನ ಗಂಗೆ ರಾಯರು. *ದೇವದೀನಾಮಗಮ್ಯಂ* ದೇವತೆಗಳಿಗೂ ತಿಳಿಯಲಸಾಧ್ಯವಾದ ಮಾತುಗಳು ಎಂದೇ ಪ್ರಸಿದ್ಧವಾದವುಗಳು *ಶ್ರೀಮನ್ಯಾಯಸುಧಾ, ತತ್ವಪ್ರಕಾಶಿಕಾ ಮೊದಲಾದ ಗ್ರಂಥಗಳು.*  ಆ ಸಮಗ್ರ ಗ್ರಂಥಗಳ ಪಾಠ ಪ್ರವಚನ ಮಾಡಿಯೇ *ಜೀರ್ಣವಾಚಃ* ನಾಲಿಗೆ ಸವೆದುವಹೋಗಿತ್ತು ಅಂತೆ ಗಿರು ಸಾರ್ವಭೌಮರದ್ದು ಎಂದು ಅಪ್ಪಣ್ಣಾಚಾರ್ಯರಯ ಸಾರುತ್ತಾರೆ. ಸುಧಾ ಗ್ರಂಥಕ್ಕೆ *ಪರಿಮಳ,*  ತ...

ದಾಸರ ದೃಷ್ಟಿಯಲ್ಲಿ ರಕ್ಷಾಬಂಧನ

Image
*ದಾಸರ ದೃಷ್ಟಿಯಲ್ಲಿ ರಕ್ಷಾಬಂಧನ* *ನಮ್ಮಣ್ಣನ ಬಲವೆಂಬೊ ಘನ್ನ ಛತ್ರದ ನೆರಳು ಮನ್ಮಸ್ತಕದಲಿ ಇರುವಾಗ ಯಾವುದರ ಭಯ ಎನಗೆ....... ನಿನ್ನ ಪ್ರಿಯ ತಂಗಿ *ಶಚಿ.....* ಜಗತ್ತಿಗೆ ನಿಜವಾದ ಹಾಗು ಸ್ವತಂತ್ರನಾದ ಅಪ್ಪ ಗುರು  *ಅಣ್ಣ*  ಶ್ರೀಹರಿ ಒಬ್ಬನೇ. ಸ್ವತಂತ್ರನಾದ ಅಣ್ಣನಿರುವಾಗ, ಅಸ್ವತಂತ್ರನಾದವರೆಲ್ಲರೂ ತಂಗಿಯರೇ. ಅಂತೆಯೆ ದಾಸರಾಯುರು "ಎನ್ನಪ್ಪ ಎನ್ನಮ್ಮ ಎನ್ನಯ್ಯ *ಎನ್ನಣ್ಣ* ಎನ್ನ ಕಾಯುವ ದೇವ" ಎಂದು ಕೊಂಡಾಡಿದರು. ಅದ್ದರಿಂದ ಎನ್ನಣ್ಣನಾದ ಶ್ರೀಹರಿಯ ಕೃಪೆ ಎಮ್ಮೆಲ್ಲರಲ್ಲಿಯೂ ಖಂಡಿತವಾಗಿಯೂ ಇರಲೇಬೇಕು. ಜಗದಣ್ಣನ ಬಗ್ಗೆ ದಾಸರಾರ ಭಾವಾಭಿವ್ಯಕ್ತಿ.... "ಎನ್ನಣ್ಣನ ಕೃಪೆ ಇನ್ನು ಎನಗಿಲ್ಲದುದರಿಂದ ಎನ್ನ ಮೇಲೆ ಈ ಪರಿ ಮುನದ್ಯಾ ದೇವಾ." "ಎನ್ನಣ್ಣನ ಕೃಪೆ ಇನ್ನು ತೊಲಗಿದುದರಿಂದ ಘನ್ನವಾದ ಸ್ಥಾನದಿಂದ ಇಳಿದೇ." "ಎನ್ನಣ್ಣನ ಕೃಪೆ ಇನ್ನು ಹಿಂಗದ ಕಡೆಯಿಂದ ಛಿನ್ನವಾದ ಅಜ್ಙಾನಿ ಆದೆನೆಂದು" "ಎನ್ನಣ್ಣನ ಕೃಪೆ ಇನ್ನು ಜರಿದು ಪೋದದರಿಂದ ಅಚ್ಛಿನ್ನ ಭಕುತಿಯಿಂದ ಹೀನನಾದೆ" "ಎನ್ನಣ್ಣನ ಕೃಪೆ ಇನ್ನು ತಪ್ಪಿದುದರಿಂದ ನಿನ್ನ ನಿಗ್ರಹಕ್ಕೆ ವಿಷಯನಾದೆ" "ಎನ್ನಣ್ಣನ ಕೃಪೆ ಇನ್ನು ಇಲ್ಲದ ಕಾರಣದಿ ಎನ್ನ ಈ ಪರಿ ನೀನು ಬಳಲಿಸುವಿ" "ಎನ್ನಣ್ಣನ ಕೃಪೆಯಿಂದ ಗುರು ವಿಜಯ ವಿಠ್ಠಲರೇಯಾ ಮನ್ನಿಸುವಿ ಎನ್ನ ಆ...

*ಜನಿವಾರ ಧಾರಣೆಯ ಮಹತ್ವ.....*

*ಜನಿವಾರ ಧಾರಣೆಯ ಮಹತ್ವ.....* ಬ್ರಾಹ್ಮಣನೆಂದೆನಿಸಿ ವೇದಾಧ್ಯಯನಿಗಳನ್ನು ಮಾಡುವ ಯೋಗ್ಯನಿಗೆ ಉತ್ಸರ್ಜನ ಉಪಾಕರ್ಮಗಳು ಇವು ತುಂಬ ಮಹತ್ವದ್ದು. ವೇದಾಧ್ಯಯನವನ್ನು ಗುರುಗಳಿಗೆ ಅರ್ಪಸಿವದು ಉತ್ಸರ್ಜನ ಎಂದಾದರೆ, ವೇದಗ್ರಹಣ ಮಾಡುವ ಕರ್ಮ ಉಪಾಕರ್ಮ ಎಂದು ಪ್ರಸಿದ್ಧ.  ವೇದಗ್ರಹಣ ಮಾಡಿದ ನಂತರ ನಿರಂತರ ಒಂದೂ ದಿನ ತಪ್ಪದೆ ಆರು ತಿಂಗಳ ವರೆಗೆ ಪಾಠ ಹೇಳಿಸಿಕೊಳ್ಳುತ್ತಾ ಅಧ್ಯಯನ ಮಾಡುವದು. ಆರು ತಿಂಗಳ ನಂತರ ಉತ್ಸರ್ಜನವನ್ನು ಮಾಡಿ, ನಂತರ ಕಲಿತ ಪಾಠದ ಚಿಂತನೆ. (ಇಂದು ಉತ್ಸರ್ಜನ ಹಾಗೂ ಉಪಾಕರ್ಮ ಎರಡೂ ಒಂದೇ ದಿನ ಮಾಡಿಕೊಳ್ಳಿತ್ತೇವೆ.) ವೇದಾಧ್ಯಯನಕ್ಕೆ ಅಧಿಕಾರ ಸಿಗುವದೇ ಉಪನಯನದ ನಂತರ. ಉಪನಯನ ಪ್ರಸಂಗದಲ್ಲಿ ಜನಿವಾರ ಧಾರಣೆ.   ಅಂದೇ ವೇದ ಶಾಸ್ತ್ರ ಅಧ್ಯಯನಗಳಿಗೆ ಹಾಗೂ ಗಾಯತ್ರೀ ಮೊದಲಾದ ಮಂತ್ರಗಳ ಜಪಕ್ಕೆ ಅಧಿಕಾರ.  ಉಪದಿಷ್ಟ ಮಂತ್ರಗಳ ಜಪ, ವೇದಗಳ ಅಧ್ಯಯನ ೩ ದಿನ ತಪ್ಪಿಸಿದರೆ ಯಾತಯಾಮ ಎಂದಾಗುವದು. ಯಾತಯಾಮ ಆದರೆ ಪಾರಾಯಣ ಜಪ ಮಾಡಿದ್ದು (ಎಣಿಸಿದ್ದಕ್ಕೆ ಲೆಕ್ಖಕ್ಕೆ ಮಾತ್ರ)  ಒಂದೇ ಫಲ. ಮಂತ್ರಗಳ ಪೂರ್ಣ ಮಟ್ಟದ ಫಲಕ್ಕೆ ಯಾತಯಾಮ ಆಗದಿರುವ ಹಾಗೆ ನೋಡಿಕೊಳ್ಳುವದು ಅತ್ಯಂತ ಆವಷ್ಯಕ. "ಬ್ರಹ್ಮ" ಎಂದರೆ ವೇದ. ವೇದಗಳನ್ನು "ಅಣತಿ" ತಪ್ಪದೆ ಪಠಿಸುವರು ಯಾರೋ ಅವರು ಬ್ರಾಹ್ಮಣ. ಬ್ರಾಹ್ಮಣ್ಯ ಉಳಿಸಿಕೊಳ್ಳುವ, ಬೆಳಿಸಿಕೊಳ್ಳುವ   ಉತ್ತಮ ಯೋಗ್ಯ ದಿನ ಇಂದು. ಜನಿವಾರ ಧಾರಣೆಯ ಮಹತಿ. *ಮಮ ಬ್ರಾಹ...

*ಸಾ ಲಕ್ಷ್ಮೀರ್ಮೇ ಪ್ರಸೀದತು*

Image
*ಸಾ ಲಕ್ಷ್ಮೀರ್ಮೇ ಪ್ರಸೀದತು* ಇಂದು ವರಕೊಡುವ ಮಹಾಮಹಾ ದೇವತೆಗಳಿಗೆ ತಾಯಿಯಾದ ವರಮಹಾಲಕ್ಷ್ಮೀ ವ್ರತ. ಸಾಮಾನ್ಯವಾಗಿ ಲಕ್ಷ್ಮೀದೇವಿಯ ಪೂಜೆ ಹಣ, ಕನಕ, ಸುಖ, ಸಮೃದ್ಧಿ ಇವುಗಳಿಗೇ ಮಾಡುವದು. ನಾಶವಾಗದ ಧನ ಕನಕಾದಿಗಳನ್ನು ಪಡೆಯುವ ಮಾರ್ಗದಲ್ಲಿ ವಿಚಾರ ಇರಬೇಕು ಇದುವೂ ಅಷ್ಟೇ ನಿಶ್ಚಿತ. ಹಾಗಾದರೆ ನಾಶವಾಗದ ವಸ್ತುಗಳನ್ನು ಪಡೆಯಲು ಏನು ಮಾಡಬೇಕು.... ??? ನಾವು ಪಡೆದ ವಸ್ತುಗಳು ನಾಶವೇಕೆ ಆಗುತ್ತೆ... ???? ಪಡೆದ ವಸ್ತು ನಾಶವಾಗಲು ಮೂಲ ಕಾರಣ, ಆ ವಸ್ತು ಸ್ವಾಮಿಯ ಇಚ್ಛೆಗೆ ವಿರುದ್ಧವೇ ಆಗಿರುತ್ತದೆ. ಅಥವಾ ನಮ್ಮ ಯೋಗ್ಯತೆಗೆ ಅನುಗುಣವಾಗಿ ಪಡೆದಿರುವದಿಲ್ಲ. "ಪಡೆಯುವ ವಸ್ತುವಿನ ಮಟ್ಟದ ಯೋಗ್ಯತೆಯಾದರೂ ಹೊಂದಿರಬೇಕು, ಯೋಗ್ಯತೆಗೆ ಅನುಗುಣವಾದದ್ದೇ ಪಡೆದಿರಬೇಕು" ಇದೆರಡೂ ನಮ್ಮಿಂದ ಆಗಿರುವದಿಲ್ಲ. ಹಾಗಾಗಿ ಶಾಶ್ವತವಾದದ್ದನ್ನು ಪಡೆಯಲಾಗಿರುವದಿಲ್ಲ. ನಾಶವಾಗದ ವಸ್ತುವನ್ನೇ ಪಡೆಯಬೇಕಾದರೇನು ಮಾಡುವದು....???? ಲಕ್ಷ್ಮೀದೇವಿಯನ್ನು ಚೆನ್ನಾಗಿ ಉಪಾಸನೆ ಮಾಡಿ, ಬೇಡುವ ಕ್ರಮದಲ್ಲಿ, ಬೇಡುವದನ್ನೇ ಬೇಡಿದಾಗ, ಸಿಗುವದು ನಾಶವಾಗದ ಶಾಶ್ವತ ವಸ್ತುವನ್ನೇ.... ಆ ಕ್ರಮ ಹೇಗೆ.... ??? ಶ್ರೀಶಾಂಘ್ರಿಭಕ್ತಿಂ ಹರಿದಾಸದಾಸ್ಯಂ ಪ್ರಪನ್ನಮಂತ್ರಾರ್ಥ ದೃಢೈಕನಿಷ್ಠಾಂ | ಗುರೋಃಸ್ಮೃತಿಂ ನಿರ್ಮಲಬೋಧಬುದ್ಧಿಂ ಪ್ರದೇಹಿ ಮಾತಃ ಪರಮಂ ಪದಂ ಶ್ರೀಃ || ೧) *ಶ್ರೀಶಾಂಘ್ರಿ ಭಕ್ತಿಮ್...* ನೇಯ ಪ್ರಾರ್ಥನೆ. ಹೇ ತಾಯಿ ...

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನಿ ಅನ್ನವೇ ವಾಸಿ......೨*

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನಿ ಅನ್ನವೇ ವಾಸಿ......೨* ನಮ್ಮ ಮನಿಯಲ್ಲಿ ತಾಯಿಯೋ, ಹೆಂಡತಿಯೋ, ಅಥವಾ ತಾನೇ ಮಾಡಿಕೊಂಡ ಅನ್ನವೋ, ವಟ್ಟಾರೆಯಾಗಿ ಮನೆಯ ಅನ್ನವೇ ನಮಗೆ ಅತ್ಯಂತ ಹಿತಕಾರಿ ಅನ್ನ. ಅದರಲ್ಲಿಯೂ ದೇವರ ನೈವೇದ್ಯವಾಗಿದ್ದರಂತೂ ಅತ್ಯತ್ತುಮ ಅನ್ನವೇ ಸರಿ. ನಿನ್ನೆ ಭೀಷ್ಮಾಚಾರ್ಯರ ವೃತ್ತಾಂತವನ್ನು ಕೇಳಿದೆವು. ಇಂದು ದ್ರೋಣಾಚಾರ್ಯರ  ಒಂದು ಪುಟ್ಟ ವೃತ್ತಾಂತವನ್ನು ತಿಳಿಯೋಣ. ಉಂಛ ವೃತ್ತಿ, ಶೀಲ ವೃತ್ತಿ ಇರುವ ಬ್ರಾಹ್ಮಣ ದ್ರೋಣಾಚಾರ್ಯ. ಸಂತೆ ಎಲ್ಲ ತಿರುಗಿ ಹೋದ ಮೇಲೆ ಆ ಆ ಜಾಗದಲ್ಲಿ ಬಿದ್ದ ಕಾಳುಗಳನ್ನು ಅಥವಾ ರಾಶಿ ಆದಮೇಲೆ ಉಳಿದ ಕಾಳುಗಳನ್ನೋ ಆರಿಸಿ ತಂದು, ಆ ಕಾಳುಗಳನ್ನು ಆಕಳಿಗೆ ತಿನ್ನಿಸಿ, ಗೋಮಯದಲ್ಲಿ ಬಂದ ಕಾಳುಗಳನ್ನು ಅಡಿಗೆಯಲ್ಲಿ ಬಳಿಸಿ ತಿನ್ನುವಂತಹ ಶ್ರೇಷ್ಠ ಧಾರ್ಮಿಕೋತ್ತಮ ದ್ರೋಣಾಚಾರ್ಯ. ಆ ಕಾಳುಗಳನ್ನೂ ಎಂದಿಗೂ ನಾಳೆಗೆ ಎಂದು ಇಟ್ಟುಕೊಳ್ಳದಂತಹ ಆಚಾರ್ಯ ದ್ರಣಾವಾರ್ಯ. ಮಗನಾದ ಅಶ್ವತ್ಥಾಮನಿಗೆ ಇವೇ ಕಾಳುಗಳನ್ನೇ ಬೀಸಿ, ಹಿಟ್ಟು ಮಾಡಿ, ಅದನ್ನು ನೀರಲ್ಲಿ ಕಲಿಸಿ, ಹಾಲು ಎಂದು ಕುಡಿಸುತ್ತಿದ್ದರು. ಅವನೂ ಅಷ್ಟೇ ಪ್ರೀತಿ ಇಂದ ಕುಡಿಯುತ್ತಿದ್ದ. ಒಂದು ದಿನ ಅಶ್ವತ್ಥಾಮನ ಆಪ್ತ ಮಿತ್ರ, ದುರ್ಯೋಧನ‌ ಕೇಸರ ಪಚ್ಚಕರಗಪೂರ, ಬದಾಮಿ ಮಿದಲಾದ ಭೋಗದ್ರವ್ಯ ಮಿಶ್ರಿತ, ಖಮ್ಮಾಗಿ ಕಾಯಿಸಿದ, ಹಾಲನ್ನು ಭಂಗಾರದ ಲೋಟದಲ್ಲಿ ಕುಡಿಸಿದ. ಈ ಒಂದು ವಾಟಗ ಹಾಲಿನ ಪ್ರಭಾವ ಇಷ್ಟು ಘೋರವಾಗಿತ್ತುದರೆ, ದ್ರ...

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನೆಯ ಅನ್ನವೇ ವಾಸಿ ......*

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನೆಯ ಅನ್ನವೇ ವಾಸಿ ......* ಅನ್ನದಾನ ನಮ್ಮ ಸತ್ಸಂಪ್ರದಾಯದಲ್ಲಿ ಅನೇಕ ದಾನಗಳಲ್ಲಿ ಅತ್ಯುತ್ತಮ ಎಂದು ಸಾರಿದ ದಾನ. ಅದರ ಜೊತೆಗೆ ಪರಾನ್ನವೂ ಒಳ್ಳೆಯದಲ್ಲ, ಸರ್ವಥಾ  ಹಿತಕಾರಿಯೂ ಅಲ್ಲ ಎಂದು ಅಲ್ಲಲ್ಲಿ ತುಂಬ ಸಾರಿದೆ. "ಅವರವರ ದೋಷಗಳನ್ನು ಹೊಂದಿಕೊಂಡ, ಅವರವರ ಪಾಪಗಳು, ಅವರು ಕೊಡುವ ಅನ್ನದೊಟ್ಟಿಗೆ   ಉಂಡವನನ್ನು ಸೇರಿಕೊಳ್ಳುತ್ತದೆ. ಹಾಗಾಗಿ ಪರಾನ್ನವನ್ನು ಉಂಡವನು ಆ ಪಾಪಗಳನ್ನು ಕಳೆದುಕೊಳ್ಳುವದಕ್ಕಾಗಿ ನಿತ್ಯ ಗಾಯತ್ರೀ ಮೊದಲಾದ ಜಪಮಾಡುವ ಸತ್ಸಂಪ್ರದಯವೂ ಒಂದಿತ್ತು.  ಇಂದು ...... ??? ತನ್ನತನವನ್ನೇ ಬದಲಾಯಿಸುವಂತಹ ಶಕ್ತಿ ಪರಾನ್ನಕ್ಕೆ ಇದೆ.  ಪರಾನ್ನ ಬಹಳ ವಿಚಿತ್ರ ಶಕ್ತಿ ಹೊಂದಿರುವಂತಹದ್ದು.  ಎಂಥವರನ್ನೂ ಬಗ್ಗಿಸುತ್ತದೆ. ಎಂಥ ಮಹಾ ನಿಷ್ಠುರ ವಾದಿಗಳನ್ನೂ ಬದಲಾಯಿಸಿ ಬಿಡುತ್ತದೆ. ಮಹಾ ಧರ್ಮ ನಿಷ್ಠುರರಿಗೂ ಅತೀ ದೊಡ್ಡ ಅಧರ್ಮಕ್ಕೇ ಸಪೋರ್ಟ ಮಾಡುವಂತೆ ಮಾಡಿಬಿಡುತ್ತದೆ. ನಿದರ್ಶನ ಭೀಷ್ಮ ದ್ರೋಣರೇ... ಭೀಷ್ಮಾಚಾರ್ಯರು ಯುದ್ಧದ ನಂತರ ಶರಪಂಜರದಲ್ಲಿ ಬಿದ್ದಾಗ ಧರ್ಮರಾಯನಿಗೆ, ಕನಿಷ್ಠ ಆರುನೂರು ಅಧ್ಯಾಗಳಿಂದ ಯುಕ್ತವಾದ, ಸಹಸ್ರಾರು ಧರ್ಮಗಳಿಂದ ಕೂಡಿದ ಸುದೀರ್ಘವಾದ ಶಾಂತಿ ಪರ್ವ, ಅನುಶಾಸನ ಪರ್ವಗಳನ್ನು ಉಪದೇಶಿಸುತ್ತಾರೆ. ಈ ಸುದೀರ್ಘದ ಉಪದೇಶ ಕೇಳಿದ ದ್ರೌಪದಿ ನಸು ನಗುತ್ತಾಳೆ. ದ್ರೌಪದಿಯ ನಗು ಅಲ್ಲಿ ನೆರೆದ ಪ್ರತಿಯೊಬ್ಬರಿಗೂ ಆಶ್ಚರ...