ಗುರುಗಳಿಗೆ ಗುರುಗಳು ನಮ್ಮ ಮಹಾ ಗುರುಗಳು.....*
*ಗುರುಗಳಿಗೆ ಗುರುಗಳು ನಮ್ಮ ಮಹಾ ಗುರುಗಳು.....*
ಉಚ್ಚ ವಿಚಾರ, ದೃಢ ಸಂಕಲ್ಪ, ಸಾಧಿಸುವ ಛಲ, ಅದಕ್ಕಾಗಿ ಮಹಾಪ್ರಯತ್ನ, ಈಶಾನುಗ್ರಹ , ಸ್ವಯಂ ದೊಡ್ಡ ಯೋಗ್ಯತೆ ಇವುಗಳು ಇದ್ದಂತಹ ವ್ಯಕ್ತಿಗಳು ಉತ್ತುಂಗದ ಶಿಖರದಲ್ಲಿ ಬ್ರಾಜಮಾನರಾಗುತಾರೆ. ಪ್ರತಿಕೂಲ ವಾತಾವರಣಗಳೆಂಬ tsunami ಗಳು ಅಪ್ಪಳಿಸಿದರೂ ಅವುಗಳೆಲ್ಲವನ್ನು ಮೆಟ್ಟಿ ನಿಂತು ಮೆಲೇಳುತಾರೆ. ಇದಕ್ಕೆ ಉದಾಹರಣೆ ಇಂದಿನ ಆರಾಧ್ಯ ಗುರುಗಳಾದ *ಪರಮಾಚಾರ್ಯರು.*
"ಪ್ರತಿಕೂಲವಾತಾವಣಗಳನ್ನು ಮೆಟ್ಟಿನಿಂತರೆ ಉತುಂಗ, ಪ್ರತಿಕೂಲ ವಾತವರಣಗಳೆ ನಮ್ಮನ್ನು ಮೆಟ್ಟಿನಿಂತರೆ ಪಾತಾಳ" ನಾವು ಮೆಟ್ಟಿನಿಲ್ಲಲು ಬೇಕು ಮೇಲೆ ಹೇಳಿದ ೭ ಗುಣಗಳು.
ಮುಖದಲ್ಲಿ ಸೂಸುವ ಉಚ್ಚವಿಚಾರ ಮಹಾ ಕನಸನ್ನು ಹೊತ್ತ, ಕೃಷ್ಣಾ ತೀರದ ಬ್ರಾಹ್ಮಣ ಉತ್ಕೃಷ್ಟ ವ್ಯಾಸಂಗಕ್ಕಾಗಿ ಶ್ರೀಮತ್ ಶ್ರೀಸತ್ಯಧ್ಯಾತೀರ್ಥರ ಬಳಿ ತೆರಳಿದರು. ಸತ್ಯಧ್ಯಾನತೀರ್ಥರ ಸನ್ನಿಧಿಗೆ ಹೋಗುವಾಗಲೇ ಲೌಕಿಕವಾದ BA, bed ಮುಗಿಸಿ, ಉನ್ನತ ಮಟ್ಟದಲ್ಲಿ ಆಂಗ್ಲಭಾಷೆಯಲ್ಲಿ ಪ್ರವೀಣರಾಗಿದ್ದರು.
ಮಹಾಗುರುಗಳ ಸನ್ನಿಧಿಯಲ್ಲಿ ಶಾಸ್ತ್ರಭಿಕ್ಷೆಯನ್ನು ಬೇಡಿದರು. ಗುರುಗಳು ಕೇಳಿದರು BA, Bed ಆಗಿದೆ ಎಂದು ಹೇಳಿತ್ತೀ, ಆಂಗ್ಲಭಾಷೆಯಲ್ಲಿ ಪ್ರವೀಣ ಎಂದು ಹೇಳುವ ನೀ ಉತಮವಾದ ಕೆಲಸ ನೋಡಿ ಕೈ ತುಂಬ ಹಣ ಸಂಪಾದಿಸ ಬೇಡವೆ... ?? ಎಂದು.
ಲೌಕಿಕ ವಿದ್ಯೆಯಿಂದ ಸಂಪಾದಿಸಿದ ಹಣದಿಂದ ನನ್ನ ಒಂದು ಕುಟುಂಬ ಪೋಷಣೆಯೂ ದುರ್ಧರ, ಕಷ್ಟಪಟ್ಟು ನನ್ನದೊಂದು ಕುಟುಂಬ ಪೋಷಣೆ ಮಾಡಬಹುದು. ಆದರೆ ತಮ್ಮ ಹಾಗೆ ಸಾವಿರಾರು ಕುಟುಂಬಗಳ ಪೋಷಣೆ ಸಾವಿರಾರು ವರ್ಷಗಳ ವರೆಗೆ ಸಾಗಬೇಕು ಎಂದಾದರೆ ಅಲೌಕಿಕ ಅನ್ನವೇ ಬೇಕು. ಆ ಅಲೌಕಿಕ ಅನ್ನವನ್ನೇ ಭಿಕ್ಷೆ ನೀಡಿ ಎಂದು ಪರಿ ಪರಿಯಾಗಿ ಬೇಡಿದರು.
ಆ ಬೇಡಿಕೆಯಲ್ಲಿರುವ ದೃಢ ಸಂಕಲ್ಪ, ಉಚ್ಚವಿಚಾರ, ಸಾಧಿಸುವ ಛಲ, ಮಹಾ ಪ್ರಯತ್ನಶೀಲವಾದ ನಡೆ , ಗುರುತಿಸಿ, ಯೋಗ್ಯತೆ ಹಾಗೂ ಈಶಾನುಗ್ರಹವನ್ನೂ ನೋಡಿ *ಈ ವ್ಯಕ್ತಿ ಮಹಾಪುರುಷನಾಗುತ್ತಾನೆ* ಎಂದು ಯೋಚಿಸಿದ ಗುರುಗಳು ಶಿಷ್ಯ ಕೇಳಿದ ಭಿಕ್ಷೆ ನೀಡಲು ಸಿದ್ಧರಾದರು. ಶಿಷ್ಯನನ್ನಾಗಿ ಸ್ವೀಕರಿಸಿದರು.
ಅಧ್ಯಯನಕ್ಕಾಗಿ ಬರುವ ಆ ಸಮಯದಲ್ಲೇ ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿದ (ಸಮಗ್ರ ಋಗ್ವೇದ ಯಹುರ್ವೇದ ಸಾಮವೇದ, ಅಥರ್ವಣ ವೇದ, ಸಾಹಿತ್ಯ, ವ್ಯಾಕರಣ, ಅನೇಕ ವೆದಾಂತಭಾಷ್ಯಗಳು, ಸೂತ್ರಭಾಷ್ಯ ತತ್ವಪ್ರಕಾಶಿಕಾ ) ಮೊದಲಾದ ಯದ್ಗ್ರಂಥಗಳ ಅಧ್ಯಯನ ಈ ಹೊಸ ಶಿಷ್ಯನಿಗೆ ಸಮಸ್ತ ಉದ್ಗ್ರಂಥಗಳನ್ನು ಧಾರೆ ಎರದರು ಶ್ರೀಮತ್ ಶ್ರೀ ಶ್ರೀಸತ್ಯಧ್ಯಾನತೀರ್ಥರು.
ಇಂದು ಸಾವಿರಾರು ಕುಟುಂಬ, ಸಾವಿರಾರು ಜನ. ಅವರ ಛತ್ರಛಾಯೆಯಲ್ಲೇ ಜೀವನ ನಡೆಸುತ್ತಿದ್ದಾರೆ, ಧರ್ಮಮಾರ್ಗದಲ್ಲಿ ಇದ್ದಾರೆ, ಮೋಕ್ಷ ಮಾರ್ಗದಲ್ಲಿ ಮುನ್ನುಗ್ಗಿ ನಡೆಯುತ್ತದ್ದಾರೆ ಅಂತಹ ಮಹಾನ್ ವ್ಯಕ್ತಿಗಳೇ ಆದ , ಸತ್ಯಧ್ಯಾನತೀರ್ಥರ ಪರಮಪ್ರಿಯ ಶಿಷ್ಯರಾದ, ಪಂಡಿತರಾಜ ಪಂಡಿತರತ್ನೆತ್ಯಾದಿ ಬಿರಿದು ಭೂಷಿತರಾದ ಪರಮ ಪೂಜ್ಯ *ಮಾಹುಲೀ (ಮಾಹುಲೀ ಗೋಪಾಲಾಚಾರ್ಯರು) ಪರಮಾಚಾರ್ಯರು.* ನನ್ನ ಪರಮಗುರುಗಳು.
"ದೊಡ್ಡದನ್ನು ಬೆಳಿಸಿಯೇ ತಾ ಬದುಕಬೇಕು, ಹಾಗಾಗದಿದ್ದಲ್ಲಿ ದೊಡ್ಡದರ ನಿಗ್ರಹಕ್ಕೆ ಗುರಿಯಾಗಬೇಕಾದೀತು" ಎಂಬ ನಿಯಮವನ್ನು ಅನುಸರಿಸಿದವರು ನಮ್ಮ ಪರಮ (ಮಾಹುಲೀ ಆಚಾರ್ಯರು) ಗುರುಗಳು.
ಸಾಮಾನ್ಯವಾಗಿ ನಾವು ಬೆಳೆದ ಹಾಗೆ , ಯಾವುದರಿಂದ ನಾವು ಬೆಳೆದಿರ್ತೇವೆ ಅಂತಹ ದೊಡ್ಡದು ಮೂಲೆ ಗುಂಪಾಗಿರುತ್ತದೆ. ಅತಿಶಯಿತ ಎತ್ತರದ ಮಟ್ಟದಲ್ಲಿ ಬೆಳೆದರೂ ದೊಡ್ಡದರನ್ನು ಸ್ವಲ್ಪವೂ ಕಡೆಗಾಣಲಿಲ್ಲ. ಆ ದೊಡ್ಡದನ್ನು ಅಷ್ಟೇ ಆರಾಧಿಸಿದರು. ಆ ದೊಡ್ಡದು ಮತ್ಯಾವದೂ ಅಲ್ಲ, *ಎಂದೂ ಬತ್ತದ ಜ್ಙಾನಗಂಗೆಯನ್ನು ಹರಿಸಿದ ಸ್ವರೂಪೋದ್ಧಾರಕ ಗುರುಗಳೂ ಆದ "ಶ್ರೀಸತ್ಯಧ್ಯಾನತೀರ್ಥರು".*
ನನ್ನದು ಎನ್ನುವದು ಒಂದು ಇದೆ ಅಂದರೆ ಅದರ ಹಿಂದೆ ನಾನು ಇರಬೇಕು ಹಾಗೆ ನೋಡಿಕೊಂಡಿರುತ್ತೇನೆ ನಾನು. ಉದಾಹರಣೆಗೆ. ..... ಲೇಖನಗಳು ನನ್ನದಾಗಿವೆ ಅಂತೆಯೇ "ನ್ಯಾಸ" ಎಂಬ ಹಣೆಪಟ್ಟಿಯೊಂದಿಗೆ ಕೂಡಿರುತ್ತವೆ. ಮಗ ತನ್ನವನಾಗಿರುತ್ತಾನೆ ಆದ್ದರಿಂದ ಆ ಮಗನ ಹೆಸರಿನ ಹಿಂದು ಮುಂದ ತನ್ನ ಹೆಸರು ಅಥವಾ ತನ್ನ ಮನೆತನದ ಹೆಸರು ಸೇರಿಸಿಟ್ಟುರುತ್ತಾನೆ ಹೀಗಿರುವಾಗ......
ಬೆವರು ಸುರಿಸಿ, ಪಡಬಾರದ ಕಷ್ಟಪಟ್ಟು, ಭವ್ಯ ಸಮಾಜವನ್ನು ನಿರ್ಮಿಸಿ, ಆ ಮುಖಾಂತರ ಕಟ್ಟಿದ ಈ ಭವ್ಯ ಗುರುಕುಲಕ್ಕೆ ತಮ್ಮದೇ ಹೆಸರು ಬರುವಂತೆ ನೋಡಿಕೊಂಡಿದ್ದರೆ ಕೇಳುವವರು ಯಾರಿರಲಿಲ್ಲ. ಆದರೆ ಈ ಭವನ ಗುರುಕುಲ ಶಾಶ್ವತ ಉಳಿಯಬೇಕು ಎಂದಾದರೆ ನಮ್ಮ ಗುರುಗಳ ಹೆಸರೇ ಇಡಬೇಕು ಎಂದು ಯೋಚಿಸಿ *"ಶ್ರೀಸತ್ಯಧ್ಯಾನವಿದ್ಯಾಪೀಠ"* ಎಂದು ನಾಮಕರಣ ಮಾಡಿ, ದೊಡ್ಡವರಾದ ಗುರುಗಳ ಹೆಸರನ್ನು ಬೆಳಿಸಿ ಉಳಿಸಿದರು. ಅವರ ಸೇವೆ ಮಾಡಿದರು. ಗುರು ಸೇವೆ ಹೇಗಿರಬೇಕು ಎಂದು ತಿಳಿಸಿಕೊಟ್ಟರು.
ದೊಡ್ದದು ಗುರು ಬೆಳೆದು ಉಳಿಯಬೇಕಾದರೆ ಶಿಷ್ಯರು ಅನಿವಾರ್ಯವಾ... ??
ತಾವು ಬೆಳಿಯಲು ಉಳಿಯಲು ಸರ್ವಸಮರ್ಥರಾಗಿದ್ದರೂ , ಶಿಷ್ಯನಮೇಲೆ ಅನುಗ್ರಹಿಸುವದಕ್ಕಾಗಿ ಕೆಲವೊಮ್ಮೆ ಹೀಗೆ ಮಾಡುತ್ತಾರೆ. ಶಿಷ್ಯನಿಂದಲೇ ಶಾಶ್ವತ ಸೇವೆ ಮಾಡಿಸಿಕೊಂಡಹ ಮಹಾ ಅನುಗದರಹ ಮಾಡುವದಕ್ಕೋಸ್ಕರ ಹೀಗೆ ಮಾಡಿಕೊಂಡಿರುತ್ತಾರೆ.
ತಮ್ಮನ್ನು ದೊಡ್ಡವರನ್ನಾಗಿ ಮಾಡಿದ ಗುರುಗಳನ್ನು, ತಾ ಮರಿಯದೇ, ದೊಡ್ಡವರಾದ ಗುರುಗಳನ್ನು (ಗುರುಗಳ ಕೀರ್ತಿಯನ್ನು) ಬೆಳಿಸಿ ಹರಡಿಸಿ ಉಳಿಸುವದು ಶಿಷ್ಯರ ಕರ್ತವ್ಯವೂ ಆಗಿದೆ. ಇದು ಎರಡನೇಯ ಭಾಗ.
"ಗುರುಗಳ ಕೀರ್ತಿ ಎಷ್ಟು ಬೆಳೆಸಿ ಹರಡಿಸುತ್ತಾರೆಯೋ, ಗುರುಗಳ ಕೀರ್ತಿ ಎಷ್ಟು ದಿನ ಶಾಶ್ವತ ಉಳಿಯುವಂತೆ ಮಾಡುತ್ತಾರೆಯೋ ಅಷ್ಟು ಹಿತ" ನಮಗೆ ಅಷ್ಟೇ ಅಲ್ಲದೇನೆ "ನಮ್ಮ ಈ ಭವ್ಯ ಭವನ ಚಿರಸ್ಥಾಯೀ" ಎಂದು ಭಾವಿಸಿ ತಮ್ಮ ಹೆಸರು ತಮ್ಮ ಮನೆತನದ ಹೆಸರೂ ಏನೂ ಬರದ ಹಾಗೆ ಮಾಡಿ ತಮ್ಮ ಗುರುಗಳ ಕೀರ್ತಿ ಶಾಶ್ವತವಾಗಿ ಇರುವಂತೆ ಮಾಡಿದರು. ಅಂತೆಯೇ ಇಂದಿಗೆ 1937 2021 ವರೆಗೆ ಅವ್ಯಾಹತವಾಗಿ ನಡೆಯುತ್ತಿದೆ. ಮುಂದೆಯೂ ಸಾವಿಸಾವಿರ ವರ್ಷಗಳವರೆಗೆ ಭವ್ಯವಾಗಿ ನಡೆಯುತ್ತದೆ.
ಇದೇ ರೀತಿ ಪ್ರತಿ ಒಂದು ಹಂತದಲ್ಲೂ ಗುರುಗಳ ಕೀರ್ತಿಯನ್ನು ಹೇಗೆ ಬೆಳಿಸಿಬೇಕು ಗುರುಭಕ್ತತಿಯನ್ನು ಹೇಗೆ ಮಾಡಬೇಕು ಗುರುಭಕ್ತಿಯಿಂದಲೇ ನಮ್ಮ ಜೀವನ ಎಂದು ಅರುಹಿಸಿಕೊಟ್ಟರು ನಮ್ಮ *"ಮಹಾ ಗುರುಗಳು ಮಾಹುಲೀ ಪರಮಾಚಾರ್ಯರು"* ನಮ್ಮ ಮಹಾನ್ ಆದರ್ಶ ಪುರುಷರು.
ಆ ಮಹಾ ಗುರುಗಳ ಅನುಗ್ರಹ ಸದಾ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸೋಣ. *ನಮ್ಮ ಗುರುಗಳಲ್ಲಿ ಭಕ್ತಿನ್ನೂ ದಯಪಾಲಿಸಿ* ಎಂದೂ ಪ್ರಾರ್ಥಿಸುತ್ತಾ ಪುಟ್ಟ ಸೇವೆಯನ್ನು ಮುಗಿಸುವೆ.
*✍🏽✍🏽ನ್ಯಾಸ.*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
ವಿದ್ಯಾವಾರಿಧಿ ಚಂದಿರಮ್
ವಿದ್ಯಾರ್ಥಿವತ್ಸಲಂ ವಂದೇ
ಮಹಾಮಹಿಮಸದ್ಗುರುಮ್
ವಿದ್ಯಾವಾರಿಧಿ ಚಂದಿರಮ್
ವಿದ್ಯಾರ್ಥಿವತ್ಸಲಂ ವಂದೇ
ಮಹಾಮಹಿಮಸದ್ಗುರುಮ್
ವಿದ್ಯಾವಾರಿಧಿ ಚಂದಿರಮ್
ವಿದ್ಯಾರ್ಥಿವತ್ಸಲಂ ವಂದೇ
ಮಹಾಮಹಿಮಸದ್ಗುರುಮ್
ವಿದ್ಯಾವಾರಿಧಿ ಚಂದಿರಮ್
ವಿದ್ಯಾರ್ಥಿವತ್ಸಲಂ ವಂದೇ
ಮಹಾಮಹಿಮಸದ್ಗುರುಮ್
ವಿದ್ಯಾವಾರಿಧಿ ಚಂದಿರಮ್
ವಿದ್ಯಾರ್ಥಿವತ್ಸಲಂ ವಂದೇ
ಮಹಾಮಹಿಮಸದ್ಗುರುಮ್,,,🙏🙏