*ತರುಣ(ಉಪ) ಕುಲಾಧಿಪತಿ - ಪಂ ವಿಶ್ವಪ್ರಜ್ಙಾಚಾರ್ಯ*

*ತರುಣ(ಉಪ) ಕುಲಾಧಿಪತಿ -  ಪಂ ವಿಶ್ವಪ್ರಜ್ಙಾಚಾರ್ಯ*

ಎಂಭತ್ತು ವರ್ಷಗಳ ಅತ್ಯಂತ ಪ್ರಾಚೀನವಾದ ವಿದ್ಯಾಪೀಠವೆಂದರೆ ಅದು *ಸತ್ಯಧ್ಯಾನ ವಿದ್ಯಾಪೀಠ.* 

1937 ರಲ್ಲಿ *ವಾಣೀ ವಿಹಾರ ವಿದ್ಯಾಲಯ* ಎಂಬ ಹೆಸರಿನಿಂದ ಆರಂಭವಾದ ವಿದ್ಯಾಲಯ, ಅತ್ಯಂತ ಪ್ರಾಚೀನ ವಿದ್ಯಾಸಂಸ್ಥೆ. ಈ ವಿದ್ಯಾಲಯ ಎಂಟು ವಿದ್ಯಾರ್ಥಿಗಳಿಂದ ಹಾಗೂ ಎಂಟು ರೂಪಾಯಿಗಳಿಂದ ಆರಂಭವಾದ ವಿದ್ಯಾಲಯ. ಒಂದುವರೆ ಲಕ್ಷಕ್ಕೂ ಹೆಚ್ಚಾದ ಪುಸ್ತಕಗಳಿಂದ ಒಳಗೊಂಡ ಮಹಾ ವಿದ್ಯಾಲಯ.  ಈ ಮಹಾವಿದ್ಯಾಲಯದ  ಸಂಸ್ಥಾಪಕರು ಪಂಡಿತರಾಜ, ಪಂಡಿತರತ್ನ ಇತ್ಯಾದಿ ಅನೇಕ ಬಿರಿದು ಭೂಷಿತರಾದ  *ಪರಮಪೂಜ್ಯ ಪಂ. ಮಾಹುಲೀ ( ಪಂ. ಮಾಹುಲೀ ಗೋಪಾಲಾಚಾರ್ಯರು) ಪರಮಾಚಾರ್ಯರು.*

*ಸತ್ಯಧ್ಯಾನ ವಿದ್ಯಾಪೀಠ*

"ವಾಣೀ ವಿಹಾರ ವಿದ್ಯಾಲಯವೇ" ಮುಂದೆ ಕೆಲವೇ ವರ್ಷಗಳಲ್ಲಿ, ಜಗದ್ಗುರುಗಳಾದ, ತಮ್ಮ ಸ್ವರೂಪೋದ್ಧಾರಕ ಗುರುಗಳೂ ಆದ, ವಿಭೂತಿ ಪುರುಷರೂ ಆದ  ಪರಮಪೂಜ್ಯ "ಶ್ರೀಶ್ರೀ ಸತ್ಯಧ್ಯಾನ ತೀರ್ಥರ" ಹೆಸರಿನಿಂದ 1975 ರ ಸುಮಾರಿಗೆ ಮುಲುಂಡಿನಲ್ಲಿ *ಸತ್ಯಧ್ಯಾನ ವಿದ್ಯಾಪೀಠ* ಎಂದಾಯ್ತು.  ನೂರಾರು ವಿದ್ಯಾರ್ಥಿಗಳು ಸೇರಿದರು.  ಆ ಎಲ್ಲ ವಿದ್ಯಾರ್ಥಿಗಳಿಗೂ ಅನ್ನ ವಸತಿ ವಸ್ತ್ರಗಳನ್ನೊದಗಿಸಿ, ಮನೆಯ ವಾತಾವರಣವನ್ನೇ ನಿರ್ಮಿಸಿ,  ಪ್ರಾಚೀನ ಪದ್ಧತಿಯಂತೆ ಗುರುಸೇವೆ, ವಿದ್ಯಾಪೀಠ ಸೇವೆ, ಸಮಾಜ ಸೇವೆ ಇವುಗಳನ್ನೊಳಗೊಂಡು ಹದಿನೈದು ವರ್ಷಗಳಕಾಲ ನಿರಂತರ ನಾನಾ ಶಾಸ್ತ್ರಗಳ ವಿದ್ಯೆಯನ್ನೊದಗಿಸುವ ಮಹಾನ್ "ವಿಭೂತಿ" ವಿದ್ಯಾಪೀಠ *ಸತ್ಯಧ್ಯಾನ ವಿದ್ಯಾಪೀಠ.*  ಇದು ಸಮಾಜದ ಅನುಭವ. 

*ಪರಮಪೂಜ್ಯ ಪಂ ಮಾಹಲೀ (ಪಂ ವಿದ್ಯಾಸಿಂಹಾಚಾರ್ಯರು) ಆಚಾರ್ಯರು*

1984 ನೇ ಇಸ್ವಿಯ ಸುಮಾರಿಗೆ ಪರಮಪೂಜ್ಯ ಮಹಚಾರ್ಯರು ಇಹಲೋಕದ ಯಾತ್ರೆ ಮುಗಿಸಿದ ನಂತರ, ಕೇವಲ 24 ವಯಸ್ಸಿನ,  ಮಾಹುಲೀ ಆಚಾರ್ಯರು ವಿದ್ಯಾಪೀಠದ ನೊಗ ಹೊತ್ತರು. ಅವರ ಪಾಠಪ್ರವಚನ ದೀಕ್ಷೆ, ಅಧ್ಯಯನದ ಪರಾಕಾಷ್ಠೆ, ವಿದ್ಯಾರ್ಥಿ ವಾತ್ಸಲ್ಯ, ಸಂಪೂರ್ಣ ತ್ಯಾಗ, ನಿಸ್ಪೃಹ ವ್ಯಕ್ತಿತ್ವ, ವಿಚಕ್ಷ ಪಾಂಡಿತ್ಯ ಇವುಗಳ ಬಲದಿಂದಲೇ ವಿದ್ಯಾಪೀಠ ಅಂದಿನಿಂದ ಸಾಗಿತು. ಅವರ ಅನುಗ್ರಹದ ಛತ್ರಛಾಯೆಯಲ್ಲಿಯೇ ನೂರಾರು ವಿದ್ಚಾಂಸರು ಸಿದ್ಧರಾದರು. 

ಆ ಎಲ್ಲ ವಿದ್ವಾಂಸರೂ  ದೇಶದ ನೂರಾರು ಊರುಗಳಲ್ಲಿ ಅತ್ಯಂತ ವೈಭವದಿಂದ ಸಮಾಜಸೇವೆ, ಮಠದ ಸೇವೆ, ನಿತ್ಯ ಅನಿರತ ಪಾಠ ಪ್ರವಚನ, ತಮ್ಮ ಸಾಧನೆ ಇದೆಲ್ಲವೂ ಕೇವಲ ಗುರು ಸೇವೆ ಎಂದೇ ಭಾವಿಸಿ ಸಮಗ್ರ ಭಾರತದಲ್ಲೆಲ್ಲ ವ್ಯಾಪಿಸಿ ಇದ್ದಾರೆ. ಇದು ಮಾಹುಲೀ ಆಚಾರ್ಯರ ಒಂದು ವೈಭವ. *ಎಲ್ಲದರ ಮೇಲೆ ಜಗದ್ಗುರುಗಳಾದ ಶ್ರೀಶ್ರೀ ಸತ್ಯಾತ್ಮತೀರ್ಥರು.* ಆ ಆಚಾರ್ಯರ ಅನುಗ್ರಹದಿಂದಲೇ  "ಅನೇಕ ವಿದ್ವಾಂಸರು ನೂರಾರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ವಿದ್ಯಾಪೀಠಗಳನ್ನೇ ನಡೆಸುತ್ತಿದ್ದಾರೆ" ಮಠಗಳಲ್ಲಿ ಇದ್ದಾರೆ. ಅನೇಕರು ಸ್ವತಂತ್ರವಾಗಿದ್ದಾರೆ. ಊರೂರುಗಳನ್ನೇ, ಸಮಾಜವನ್ನೇ ಬದಲಾಯಿಸುವಷ್ಟು ಸಮರ್ಥರಾಗಿ ಶ್ರೀಮದಾಚಾರ್ಯರ ಸೇವೆ ನಡೆಸುತ್ತಿದ್ದಾರೆ. ಇದೆಲ್ಲವೂ ಕೇವಲ ಮಾಹುಲೀ ಆಚಾರ್ಯರ ಅನುಗ್ರಹ, ಅವರ ತಪಸ್ಸು, ಅವರ ಆದೇಶ, ಅವರ ಸೇವೆಯೇ. ಎಲ್ಲರ ಭಾವ ಒಂದೇ *ಆಚಾರ್ಯರ ಪ್ರೀತಿ* ಎಂದೇ. 

*ಪಂ ಮಾಹುಲೀ ವಿಶ್ವಪ್ರಜ್ಙಾಚಾರ್ಯರು*

ದಿನಕ್ಕೆ ಕನಿಷ್ಠ ಹದಿನಾರು ತಾಸುಗಳಂತೆ ಮೂವತ್ತೈದು ವರ್ಷಗಳಿಂದಲೂ ಹೆಚ್ಚುಕಾಲ  ನಿರಂತರ ಪಾಠ ಪ್ರವಚನ ಜಪ ತಪ ವಿದ್ಯಾಪೀಠ ಅಧ್ಯಯನ ಅಧ್ಯಾಪನ ಇವುಗಳಲ್ಲೇ ವಿದ್ಯಾಪೀಠವನ್ನು *ಉತ್ತುಂಗದ ತುದಿಗೆ ಅಲಂಕರಿಸಿದ,*  ಆರವತ್ತರ ಪರಮಪೂಜ್ಯ  ಆಚಾರ್ಯರು, ವಿದ್ಯಾಪೀಠದ ನೊಗವನ್ನು ತಮ್ಮ ಸುಪುತ್ರರಾದ, ಸ್ವಯಂ ವಿಲಕ್ಷಣ ಪಂಡಿತರಾದ  *ಪಂ ವಿಶ್ವಪ್ರಜ್ಙಾಚಾರ್ಯರರಿಗೆ* ವಹಿಸಿಕೊಟ್ಟರು. 

ಮೂರ್ಛೆಯ ಅವಸ್ಥೆಯಲ್ಲಿ ಹಾಗೂ ಕನಸಿನಲ್ಲಿ ನಿದ್ರೆಯಲ್ಲಿ  ಶಾಸ್ತ್ರಾಸ್ತ್ರಗಳ ವಾಕ್ಯಗಳನ್ನು ಅವ್ಯಾಹತವಾಗಿ ನುಡಿಯುವ ಜ್ಙಾನದ - ಶಾಸ್ತ್ರದ *ಜ್ಙಾನಗ್ರಹ ಗೃಹೀತಾತ್ಮ* ರುಗಳು ಆದ ಪರಮಾಚಾರ್ಯರ, ಮಾಹಲೀ ಆಚಾರ್ಯರ ಅನುಗ್ರಹದ ಬಲದಿಂದ (ಅವರ ಸುಪತ್ರರೂ ಆದ ಕಾರಣ) *ವಿಶ್ವಪ್ರಜ್ಙಾಚಾರ್ಯರ ನರನಾಡಿಗಳಲ್ಲಿಯೂ ಜ್ಙಾನಗಂಗೆ ಹರೆದು ಬಂದಳು.* ಅಂತೆಯೇ ಮೂವತ್ತು ವಯಸ್ಸು ತುಂಬುವದರೊಳಗೇ "ಸಮಗ್ರ ಚಂದ್ರಿಕಾ - ಸಮಗ್ರ ನ್ಯಾಯಾಮೃತ - ದಿನಕರಿ - ಚತುರ್ದಶಲಕ್ಷಣೀ - ವೈಯ್ಯಾಕರಣ ಸಿದ್ಧಾಂತ ಕೌಮುದೀ - ಸಿದ್ಧಾಂತ ಲಕ್ಷಣೀ - ಮಿಂಮಾಂಸಾ - ಅದ್ವೈತಸಿದ್ಧಿ - ದ್ವೈತವೇದಾಂತ" ಇತ್ಯಾದಿ ಅನೇಕ ಗ್ರಂಥಗಳ ಪಾಠಮಾಡಿ ವಿದ್ಯಾರ್ಥಿಗಳಿ ಪಾಠಮಾಡಿ" ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಪರೀಕ್ಷೆ ಕೊಡಿಸಿರುತ್ತಾರೆ. ಮರಮತೀಯ ಅನೇಕ ವಿದ್ಯಾರ್ಥಿಗಳಿಗೆ ನಿತ್ಯವೂ ಪಾಠಮಾಡುತ್ತಾರೆ.  ಪರಮಪೂಜ್ಯ ಮಹಾಸ್ವಾಮಿಗಳು ವಿದ್ಯಾರ್ಥಿಗಳ ಪರಿಶ್ರಮ ತಯಾರಿ ಅವರು ಕೊಟ್ಡ ಪರೀಕ್ಷೆ ನೋಡಿ ಮೆಚ್ಚಿ ಭಲೇ ಭೇಶ್ ಎಂದು ಹರಿಸಿ ಅನುಗ್ರಹಸುವಂತೆ ಮೆಚ್ಚುವಂತೆ ತಯಾರು ಮಾಡಿಸಿರುತ್ತಾರೆ. 

*ಶ್ರೀಮನ್ಯಾಸುಧಾ ಮಂಗಳ ಮಹೋತ್ಸವ*

ಇಪ್ಪತ್ತು ಜನ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ "ಶ್ರೀಮನ್ಯಾಯಸುಧಾ ಗ್ರಂಥವನ್ನು" ನಿರಂತರ ಪಾಠಮಾಡಿ,  ಪ್ರಧಾನವಾದ ಐದು ಅಧಿಕರಣಗಳಲ್ಲಿ, ಪರೀಕ್ಷೆ ಕೊಡಿಸಿರುವದು ನೋಡಿದರೆ ಎಂಥವರಿಗೂ ಅಬ್ಬಬ್ಬಾ ಅನಿಸದೇ ಇರದು. ಅದೂ ಅನೇಕ ಪರಮಪೂಜ್ಯ  ಪೀಠಾಧಿಪತಿಗಳ ಸನ್ಮುಖದಲ್ಲಿ, ಶ್ರೀಶ್ರೀಸತ್ಯಾತ್ಮತೀರ್ಥರ ಅಧ್ಯಕ್ಷತೆಯಲ್ಲಿ ಪರೀಕ್ಷೆ ಕೊಡಿಸುವದು ಎಂದರೆ ಸಾಮಾನ್ಯವಾದದ್ದೇನು ಅಲ್ಲ. 

*ಮಹಾನ್ ಮಹತ್ಕಾರ್ಯ*

ಮಾಧ್ವ ಸಮಾಜದ ವಿಶ್ವವಿದ್ಯಾಲಯಗಳು ಅನೇಕ. ಅವುಗಳಲ್ಲಿ ಎಲ್ಲ ವಿದ್ಯಾಪೀಠಗಳ ಕುಲಾಧಿಪತಿಗಳು ಹಿರಿಯ ವಿದ್ವಾಂಸರುಗಳು, ಪರಮಪೂಜ್ಯ ಸ್ವಾಮಿಗಳವರು, ನಾಡಿನ ಘನ ಘನ ವಿದ್ವಾಂಸರುಗಳೇ ಇರುತ್ತಾರೆ. ಈ ತರಹದ ಇಂದಿನ ಈ ಪ್ರಸಂಗದಲ್ಲಿ  *ಕೇವಲ ಮೂವತ್ತು ವರ್ಷದ  ಈ ತರುಣ (ಉಪ) ಕುಲಪತಿ,*  ವಿದ್ಯಾರ್ಥಿಗಳಿಗೆ ಅಣ್ಣನಾಗಿ, ತಂದೆಯಾಗಿ, ಗೆಳಯನಾಗಿ, ಗುರುವಾಗಿ, ಸಖನಾಗಿ, ಸುಖದುಃಖಗಳಲ್ಲಿ ಭಾಗಿಯಾಗಿ, ವಿದ್ಯಾರ್ಥಿಗಳ ಕಷ್ಟ ತನ್ನ ಕಷ್ಟ, ವಿದ್ಯಾರ್ಥಿಗಳ ಉತಕರ್ಷವೆ ಧ್ಯೇಯವಾಗಿ ಇಟ್ಟುಕೊಂಡು ಅತ್ಯಂತ ಪ್ರಾಚೀನ ವಿದ್ಯಾಪೀಠದ ಘನತೆ ಗೌರವಕ್ಕೆ ಕುಂದು ಬರದಂತೆ, ಇನ್ನೂ ವೈಭವ ಹೆಚ್ಚಾಗುವಂತೆ ವಿದ್ಯಾಪೀಠವನ್ನು ಮುನ್ನಡೆಸಬೇಕೆಂದರೆ ಇದೊಂದು *ಮಹತ್ಕಾರ್ಯವಲ್ಲದೆ, ಅಸದೃಶ ಕಾರ್ಯವಲ್ಲದೇ ಇನ್ನೇನು....??*

ಹಿರಿಯರ ಸತ್ಸಂಪ್ರದಾಯ ಮೀರದೇ, ನಿರಂತರ ಪಾಠಮಾಡಿ, ತಯಾರು ಮಾಡಿಸುವದೇ ಇವರ ಧ್ಯೇಯ. ವಿದ್ಯಾರ್ಥಿಗಳು ಎಂದರೆ ಪ್ರಾಣ. ಸ್ವಯಂ ತಾವು ಮುಂದಾಗಿ ವಿದ್ಯಾರ್ಥಿಗಳ ಯೋಗಕ್ಷೇಮ ನೋಡುವದೆ ಕಾರ್ಯ.

 ಕಳೆದ ಕರೋನಾ ಕಾಲದ ಘೋರ ಪ್ರಸಂಗದಲ್ಲಿಯೂ ವಿದ್ಯಾರ್ಥಿಗಳಿಗೆ ಕಿಂಚಿತ್ತೂ ಸಮಸ್ಯೆ ಬರದ ಹಾಗೆ ನೋಡಿಕೊಂಡು, ಪಾಠಮಾಡಿ  *ಮಹಾಚಾರ್ಯರ ಸಂಸ್ಮರಣಾ ದಿನದಂದು* ವಿದ್ಯಾರ್ಥಿಗಳು *ನ್ಯಾಯಾಮೃತ - ಚತುರ್ದಶ ಲಕ್ಷಣೀ* ತರ್ಕ ಗ್ರಂಥವನ್ನು ಸಂಸ್ಕೃತದಲ್ಲಿ ಅನುವಾದ ಪರೀಕ್ಷೆ ಕೊಡಿಸಿದ್ದು ನೋಡಿ ಸ್ವಯಂ ಮಹಾಸ್ವಾಮಿಗಳೆ ಮೆಚ್ಚಿ ಅನುಗ್ರಹಿಸಿದರು. 

ವಿಶ್ವಪ್ರಜ್ಙಾಚಾರ್ಯರ ಸಹಪಾಠಿಯಾದ ನನ್ನ ಕೆಲ  ಮಾತುಗಳಷ್ಟೇ. ಅವರ ವ್ಯಕ್ತಿತ್ವ ತುಂಬ ದೊಡ್ಡದು. ವಿಲಕ್ಷಣ ಬುದ್ಧಿವಂತಿಕೆ, ನಿರಂತ ಪ್ರಯತ್ನಶೀಲತಾ, ವಿದ್ಯಾರ್ಥಿ ವಾತ್ಸಲ್ಯ, ಈ ಎಲ್ಲ ಗುಣಗಳ ಆಗರ.  ವಿಶ್ವಪ್ರಜ್ಙಾಚಾರ್ಯರ ಬಗ್ಗೆ ಹೇಳುವದು ತುಂಬ. ನನ್ನ ಮೋಬೈಲ್ ಚಾರ್ಜ ಮುಗಿತು. ನಿದ್ರೆ ಬಂತು. ಹಾಗಾಗಿ ಮುಗಿಸಬೇಕು ಅಷ್ಟೆ.......

*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*