Posts

Showing posts from October, 2019

*ಸ್ವಾಭಾವಿಕ ಭಕ್ತರಿಗೆ ಭರವಸೆಕೊಡುವದು - ಈ ಬಲಿಪ್ರತಿಪದಾ*

Image
*ಸ್ವಾಭಾವಿಕ ಭಕ್ತರಿಗೆ ಭರವಸೆಕೊಡುವದು - ಈ ಬಲಿಪ್ರತಿಪದಾ* ದೇವ ಆ ಆ ದೇಶ ಆ ಕಾಲಗಳಲ್ಲಿ ನಮ್ಮ ನಮ್ಮ ಕರ್ಮಾನುಸಾರ ಎಲ್ಲ ವಿಧದಿಂದಲೂ ರಕ್ಷಿಸುವ ಜವಬ್ದಾರಿ ಹೊತ್ತು ರಕ್ಷಿಸುತ್ತಾನೆ.  ರಕ್ಷಣೆಮಾಡು ಎಂದು ಕೋರಿದ್ದು ನಾಲ್ಕು ಆದರೆ ದೇವ ರಕ್ಷಣೆ ಮಾಡುವದು ನೂರಾರು ತರಹದಿಂದ. ನಮಗೆ ಆಪತ್ತು ಏನಿದೆ ಎಂದು ನಮಗೆ ಗೊತ್ತಾಗದಿರುವ ಹಾಗೆ ನಮ್ಮ ರಕ್ಷಣೆಯ ಜವಾಬ್ದಾರಿ ಹೊತ್ತವ ದೇವ. ಆ  ದೇವನ ಸ್ಮರಣೆ ಚಿಂತನೆ ನಮಗೆ ಅನಿವಾರ್ಯ.  *ಬಲಿ ಪ್ರತಿಪದಾ* ಇಂದು ವಾಮನರೂಪದಿಂದ ಬಂದು  ಭಕ್ತ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ಅಟ್ಟಿದ ದಿನ *ಬಲಿ ಪ್ರತಿಪದಾ* ನಮ್ಮಲ್ಲರಿಗೂ ಒಂದು ಹಬ್ಬದ ದಿನ.  *ಬಲಿ ಚಕ್ರವರ್ತಿಯ ಪಾರಮ್ಯ* ಹುಟ್ಟು ದೈತ್ಯ‌. ಸ್ವಾಭಾವಿಕ ಭಕ್ತ. ದೈತ್ಯಚಕ್ರವರ್ತಿಯಾಗಿ ಬಾಳಬೇಕಾದರೆ ದೇವತೆಗಳ ಭಕ್ತರ ವಿರೋಧ ಅನಿವಾರ್ಯ. ಹಾಗಾಗಿ ದೇವತಾ ವಿರೋಧದ ಪರಾಕಾಷ್ಠೆ ಬಲಿಯಲ್ಲಿ ಬೆಳದಿತ್ತು. ಅಂತೆಯೇ ಇಂದ್ರನನ್ನು ಸೋಲಿಸಿದ. ಇಂದ್ರನನ್ನು ಓಡಿಸಿದ. ಆ ಇಂದ್ರಪದವಿಯಮೇಲೆ ಕಣ್ಣು ಹಾಕಿದ. ಆ ಇಂದ್ರ ಪದವಿ ಸ್ಥಿರವಾಗಿ ಉಳಿಯಲು ನೂರು ಅಶ್ವಮೇಧಯಾಗ ಮಾಡಲು ಹೊರಟ.  *ವಾಮನವತಾರ....* ಈಚೇ ದೇವರಿಗೆ ದೇವತೆಗಳಲ್ಲರು ಶರಣು ಹೋದರು. ಅಭಯವನ್ನಿತ್ತ ದೇವ. ಕಶ್ಯಪ ಅದಿತಿಯರಲ್ಲಿ ಪ್ರಾದುರ್ಭವಿಸಿದ. ಪುಟ್ಟ ರೂಪ. ಅನಂತ ಸೂರ್ಯರ ಪ್ರಕಾಶ. ಅನಂತ ಚಂದ್ರರಕಾಂತಿ. ಜಗತ್ತನ್ನೇ ಸೋಲಿಸ...

*ನರಕ ಚತುರ್ದಶೀ*

Image
*ನರಕ ಚತುರ್ದಶೀ* ಶ್ರೀಕೃಷ್ಣ ಭೀಮರು ಬರುವದಕ್ಕೂ ಪೂರ್ವದಲ್ಲಿ ಮಧ್ಯಭಾರತದ ಮೂರುದಿಕ್ಕನ್ನು ಆಕ್ರಮಿಸಿಕೊಂಡು ಇರುವವರು ಮೂರು ಜನರು. ಒಬ್ಬ ಶಿಶು ಹಂತಕ - ಮತ್ತೊಬ್ಬ ರಾಜ ಘಾತುಕ - ಮುಗದೊಬ್ಬ ಸ್ತ್ರೀ ಘಾತುಕ ಹೀಗೆ. ಮಥುರೆಯಲ್ಲಿ ಶಿಶುಹಂತಕ ಕಂಸ. ಮಗಧ ಇಂದಿನ ಪಾಟ್ನಾದಲ್ಲಿ ರಾಜ ಘಾತುಕ ಜರಾಸಂಧ. ಅಸ್ಸಾಂ ದೇಶದಲ್ಲಿ ಸ್ತ್ರೀ ಘಾತುಕ ನರಕಾಸುರ. ಹೀಗೆ ಈ ಮೂರು ಜನ ಕೈಯಲ್ಲಿ ಸಮಗ್ರ ಭಾರತವಿತ್ತು.  ಇಂದಿನ ಪ್ರಸಂಗ ನರಕಾಸುರ... ನರಕಾಸುರ ಮಹಾ ಬಲಿಷ್ಠ. ವರಾಹದೇವರ ಮಗ. ಇಂದ್ರಾದಿಗಳಿಗೇ ಭಯ ಹುಟ್ಟಿಸಿದ ಪರಾಕ್ರಮಿ. ವರುಣ ಕುಬೇರ ಮೊದಲಾದ ದಿಕ್ಪಾಲಕರಿಂದ ಅವರ ವಾಹನ ಗಳಾದ ಆನೆ ಕುದುರೆ ಮೊದಲಾದವುಗಳನ್ನು ಅಪಹರಿಸೊಕೊಂಡು ಬಂದಿದ್ದ. ದೇವಲೋಕದ ಅಪರೂಪ ವಸ್ತುಗಳು ಇವನಬಳಿ ಇದ್ದವು.  ಅದಿತಿಯ ಕರ್ಣಕುಂಡಲಗಳನ್ನೂ ಅಪಹರಿಸಿಕೊಂಡು ಬಂದಿದ್ದ. ಇಷ್ಟು ಸಾಲದೆ ಹದಿನಾರು ಸಾವಿರದ ನೂರು ಜನ ಸ್ತ್ರೀರತ್ನವನ್ನೂ ಅಪಹರಿಸಿಕೊಂಡು ಬಂದಿದ್ದ. ಇದು ನರಕಾಸುರನ ಪರಾಕ್ರಮದ ಝಳಕು... *ಕೃಷ್ಣನ ರಾಜ ಸಭೆ.....* ಕೃಷ್ಣ ರಾಜನಾಗಿರಲಿಲ್ಲ ನಿಜ. ಆದರೆ ರಾಜ್ಯ ಹಾಗೂ ರಾಜ್ಯದ ಜನತೆ ಕೃಷ್ಣನ ಕೈಲೆ ಇದ್ದರು ಇದುವೂ ಅಷ್ಟೇ ನಿಜ. ಒಂದುದಿನ ಇಬ್ಬರು ದೂತರು ಏಕಕಾಲಕ್ಜೆ ಕೃಷ್ಣನ ಸನಿಹ ಬರುತ್ತಾರೆ. ಒಬ್ಬ ಸ್ವರ್ಗದಿಂದ ಇನ್ನೊಬ್ಬ ಪ್ರಾಗ್ಜ್ಯೋತಿಷ ಪುರದಿಂದ.  ಸ್ವರ್ಗದಿಂದ ಇಂದ್ರ ಕಳುಹಿಸಿರುತ್ತಾನೆ. ತನ್ನ ತಾಯಿಯ ಕರಗಣಕ...

*ಬೆಸರವೇ ನಿನ್ನ ಮಹಿಮೆ ಬಣ್ಣಿಸಳವಯ್ಯ.,....*

*ಬೆಸರವೇ ನಿನ್ನ ಮಹಿಮೆ ಬಣ್ಣಿಸಳವಯ್ಯ.,....* ನಮಗೆ ಬೇಕಾದ ಪದಾರ್ಥ, ವ್ಯಕ್ತಿ,  ಆತ್ಮೀಯ ಇವರಲ್ಲಿಯೇ ಬೇಸರ ಮೂಡುವದು.... ಬೇಸರವನ್ನು ಆ ಕ್ಷಣಕ್ಕೇ ಚಿವುಟುವದು ಅತ್ಯಂತ ಸೂಕ್ತ. ಇಲ್ಲವಾದಲ್ಲಿ ಆತ್ಮೀಯತೆಯನ್ನೇ ಕದಡಿಸಿಬಿಡುತ್ತದೆ. ಬೇಸರ ಎರಡು ದಿನ ಯೋಗ್ಯ. ಎರಡನೆಯ ದಿನ ದಾಟಿ ಮೂರನೇಯ ದಿನಕ್ಕೆ ವಿಸ್ತರಿಸಿತೂ ಎಂದಾದರೆ, ಒಂದು ವಾರದ ವರೆಗೆ ಬೇಸರದ್ದೇ ಸಾಮ್ರಾಜ್ಯ. ಹತ್ತನೇಯ ದಿನಕ್ಕೆ ಕಾಲಿಟ್ಟರೆ ಒಂದು ತಿಂಗಳು ನಿಶ್ಚಿತ. ತಿಂಗಳು ಮೀರಿದರೆ ನಮ್ಮನ್ನು ತಂಗಳು ಮಾಡಿಬಿಡುತ್ತದೆ ಅದುವೂ ಅಷ್ಟೇ ನಿಶ್ಚಿತ. ಹಾಗಾಗಿ ಆ ಬೇಸರವನ್ನು ಮರಿ ಇದ್ದಾಗಲೇ ಚೂಟಿಬಿಡುವದು ಅತ್ಯಂತ ಸೂಕ್ತ.  ಬೇಸರದ ಪರಿಹಾರ ಹೇಗೆ.... ?? ಪದಾರ್ಥಗಳೊಟ್ಟಿಗೆ ಬೇಸರವಾದಾಗ ಮರೆತುಬಿಟ್ಟು ಬೇರೆಯೊಂದರಲ್ಲಿ ವ್ಯಸ್ತ ಬ್ಯುಸಿ ಆಗುವದು ಯೋಗ್ಯ. ವ್ಯಕ್ತಿಗಳೊಟ್ಟಿಗೆ ಬೇಸರವಾದಾಗ  ನಕ್ಕು ನಗಿಸುವ ಪುಸ್ತಕ ಓದುವದೋ ನಾಟಕ ನೋಡುವದೋ ಉತ್ತಮ ಉಪಾಯ.  ಆತ್ಮೀಯರೊಟ್ಟಿಗೆ ಬೇಸರವಾದಾಗ *ಒಂದು ನಗು - ಒಂದೇ ಒಂದು ಮಾತು ಸಾಕು* ಬೇಸರ ಕ್ಷಣದಲ್ಕಿಯೇ ಇಳಿದು ಹೋಗಿಬಿಡತ್ತೆ.  ಆದರೆ..... ಬೀಡುಬಿಟ್ಟ ಬೇಸರ, ತನಗೆ ಬೇಸರ ಬರಬಾರದು ಎಂದು ತನ್ನೊಟ್ಟಿಗೆ ಒಬ್ಬ ಗೆಳಯನನ್ನು ಸಾಕುತ್ತದೆ ಆ ಗೆಳೆಯ *ಅಹಂ - ego.* ಇವನೂ ಸೇರಿಬಿಟ್ಟರೆ ನಗಲೂ ಆಗದು. ಮಾತಾಡಲೂ ಆಗದು. ಪರಿಣಾಮ ಇನ್ನೆಂದಿಗೂ ಸುಧಾರಿಸದಷ್ಟು ಕೆಟ್ಟು ಹೋಗಿರು...

ಒಳ್ಳೆಯ ಸಂಭಾಷಣೆ ನಡೆಸಲು ಈ ವಿಶೇಷಣಗಳು ಗುಣಗಳು ಅತ್ಯವಶ್ಯಕ...

*ಒಳ್ಳೆಯ ಸಂಭಾಷಣೆ ನಡೆಸಲು ಈ ವಿಶೇಷಣಗಳು ಗುಣಗಳು ಅತ್ಯವಶ್ಯಕ...* ಕೋರಿಕೆ ತೀರಿಸಿಕೊಳ್ಳಲು ವಿದ್ವತ್ತು ಬೇಕು. ವಿದ್ವತ್ತು ಇದು ಅನೇಕ ಗುಣಗಳ ಸಮುದಾಯ. ಕಲಿಕೆ ಕುಶಲತೆ ಪ್ರಾವೀಣ್ಯ ಉಪಾಯ ನಿಪುಣತೆ ಜ್ಙಾನ ವಿಜ್ಙಾನ ಚತುರತೆ ಇತ್ಯಾದಿಗಳಲ್ಲ ಸೇರಿದಾಗ ವಿದ್ವಾನ್ ಎಂದೆನಿಸಿಕೊಳ್ಳುವವ. ಈ ವಿದ್ವಾನ್ ತನ್ನ ಕೊರಿಕೆಗಳನ್ನು ಈಡೇರಿಸಿಕೊಳ್ಳಲು ಸಮರ್ಥ. ಒಬ್ಬ ವ್ಯಕ್ತಿಯ ಕೋರಿಕೆ "ಮಾತಾಡುವದು" ಎಂದುಕೊಂಡಾಗ, ಒಳ್ಳೆಯ ಸಂಭಾಷಕ ಎಂದೆನೆಸಿಕೊಳ್ಳ ಬೇಕಾದರೆ ಅನೇಕ ಗುಣಗಳನ್ನು ರೂಢಿಸಿಕೊಂಡವನಾಗಿರಬೇಕು.  ೧) ಮುಖಾಮುಖಿ -- ಮಾತಾಡುವವರ ಕಡೆಗೆ ಮುಖವನ್ನಷ್ಟೇ ತಿರುಗಿಸದೆ, ಸಂಪೂರ್ಣ ಶರೀರವನ್ಬೇ ತಿರಿಗಿಸಿ ಮಾತಾಡಿದರೆ ಮಾತಾಡುವವನಿಗೆ ಸಂತೋಷ. ಮುಖವನ್ನೇ ಆಚೆ ತಿರುಗಿಸಿದರೆ ಅವಮಾನ.  ೨) ಕುತೂಹಲ -- ಮುಂದೆ ಕುಳಿತು ಆಲಿಸುವದು, ಕುತೂಹಲದಿಂದ ಅಲಿಸುವದು, ಶ್ರದ್ಧೆಯಿಂದ ಕೇಳುತ್ತಿದ್ದೇನೆ ಎಂಬ ಭಾವ ಹುಟ್ಟಿಸುವದು ಇವೆಲ್ಲ ನಿಮ್ಮ ಮಾತನ್ನು  ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದು ಅಭಿವ್ಯಕ್ತಪಡಿಸುವ ಕಲೆಯಾಗಿರುತ್ತದೆ.   ೩) ನಮ್ಮ ಕಣ್ಣುಗಳು -- ಮುಖ್ಯ ವಿಷಯಗಳನ್ನು ಅಭಿವ್ಯಕ್ತ ಮಾಡುತ್ತಿರುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡುವದು. ತಾನು ಹೇಳುವಾಗಲೂ ಸಹ ಹಾಗೆ ಮಾಡುವದು, ಇದೂ ಒಂದು ಸಂಭಾಷಣೆಯ ಕಲೆ. ವಿಷಯಗಳನ್ನು ಮಾಟಿಸುವ ಕಲೆ.  ೪) ಮುಖ -- ಹೇಳುವ ವಿಷಯವನ್ನು ಆಧರಿಸಿ ನಮ್ಮ ಮು...

*ಗೀತಾಚಾರ್ಯನಿಗೆ ಗೀತೆಯ ಅರ್ಚನೆ..*

Image
*ಗೀತಾಚಾರ್ಯನಿಗೆ ಗೀತೆಯ ಅರ್ಚನೆ* ಪರ್ಯಾಯ ಫಲಿಮಾರು *ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ* ಆಶೀರ್ವಾದ ಆಜ್ಙೆಯೊಂದಿಗೆ, ಅವರ ಆತಿಥ್ಯದಲ್ಲಿ,  ಅನ್ನ‌ಬ್ರಹ್ಮ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸಾಗಿದ ನಡೆದ *ಭಗವದ್ಗೀತಾ -  ಭಾಷ್ಯ - ಪ್ರಮೇಯ ದೀಪಿಕಾ* ಜ್ಙಾನ ಸತ್ರ.  ಆದಿಗುರುಗಳಾದ ಜಗದ್ಗುರುಗಳಾದ  ಶ್ರೀಮದಾಚಾರ್ಯರು ತಿಳಿಸಿದಂತೆ "ವೈಷ್ಣವಂ ವಿಷ್ಣುಗೀತಾ ಚ ಜ್ಙೇಯಂ ಪಾಠ್ಯಂ ಚ ತದ್ವಯಮ್" ವಿಷ್ಣು ಸಹಸ್ರನಾಮ ಮತ್ತು ಭಗವದ್ಗೀತೆ ಇವುಗಳನ್ನು ತಿಳಿಯುವದು  ಪಠಿಸುವದು ಅನಿವಾರ್ಯ.  ಶ್ರೀಕೃಷ್ಣನಿಗೆ ಅಚ್ಚುಮೆಚ್ಚಾದ, ಅತ್ಯಂತ ಪ್ರೀತ್ಯಾಸ್ಪದ ಗ್ರಂಥ ಗೀತೆ. ಗೀತೆ ತುಂಬ ಕಠಿಣ. ಕೃಷ್ಣ ಪರಮಾತ್ಮನ ಮರ್ಮ ಸಾಮಾನ್ಯ ಜನರ ಅರಿವಿಗೇ ಬರದು. ಅಂತೆಯೇ ಕೃಷ್ಣನ ಮನೋರಥದ ಸಂಪೂರ್ಣ ಅರಿವು ಇರುವ ಶ್ರೀಮದಾಚಾರ್ಯರೇ ಭುವಿಗಿಳಿದು *ಗೀತೆಯ ಅರ್ಥವನ್ನು , ಆಳವನ್ನು, ಗಾಂಭೀರ್ಯವನ್ನು, ನೂರುರಾರು ವಿಷಯಗಳನ್ನು, ತತ್ವ ಪ್ರಮೇಯ ಸಿದ್ಧಾಂತ ಇವುಗಳನ್ನೂ ವಿಶದವಾಗಿ  ತಿಳಿಸಬೇಕಾಯ್ತು.  *ಗೀತಾಭಾಷ್ಯ* ಶ್ರೀಮದಾಚಾರ್ಯರು ಮೊಟ್ಟಮೊದಲು ಬಾರಿಗೆ ವೇದವ್ಯಾಸ ದೇವರ ಬಳಿ ತೆರಳುತ್ತಿರುವಾಗವ, ಉಪಾಯನ ರೂಪದಲ್ಲಿ *ಗೀತಾಭಾಷ್ಯ* ಎಂಬ ಉದ್ಗ್ರಂಥವನ್ನು ರಚಿಸಿ ಸಮರ್ಪಿಸಿದರು. ಗೀತೆಯ ದಿವ್ಯ ವ್ಯಾಖ್ಯಾನವನ್ನು ನೋಡಿದ  ಸ್ವಯಂ ನಾರಾಯಣ *ಅತ್ಯದ್ಭುತ !! ಭಲೇ ಭೇಶ್ !! ಉದ್ಗಾರ ತೆಗೆದ...

*"ನಡೀತದ ಬಿಡು" ಪಾತಾಳಕ್ಕೆ ಒಯ್ದುಬಿಡು*

*"ನಡೀತದ ಬಿಡು"  ಪಾತಾಳಕ್ಕೆ ಒಯ್ದುಬಿಡು* ನಾವು ತಲತಲಾಂತರದಿಂದಲೂ ಧಾರ್ಮಿಕರು. ವಿಷ್ಣು ಭಕ್ತರು. ಭಗವಂತನವರು. ಸಜ್ಜನರು. ಧರ್ಮದಲ್ಲೇ ರತರು. ಅಂತೆಯೇ ಸಾಧನೆಯ ಮೆಟ್ಟಲುಗಳನ್ನು ಮೇಲೇರಿ ಬಂದಿದ್ದೇವೆ. ಮೇಲೇರಿದ ನಮ್ಮನ್ನು ಸರಳವಾಗಿ ಕೆಳಬೀಳಿಸುವದೇನಿದೆ ಅದು *ನಡೀತದ ಬಿಡು* ಎಂಬ ಧೋರಣೆ. ಕಟ್ಟುನಿಟ್ಟಾಗಿ ಪಾಲಿಸುವನನ್ನು ಸರಳವಾಗಿ ಜಾರಿಸಿಬಿಡುತ್ತದೆ "ನಡೀತದ ಬಿಡು" ಎಂಬುವದೇ.  ಏನಿದು *ನಡೀತದ ಬಿಡು...* ಕಟ್ಟುನಿಟ್ಟಾದ ಯಾವದೇ ಧರ್ಮವನ್ನು ತನ್ನ ಮೂಗಿನ ನೇರ ತರುತ್ತಾ, ಹಂತಹಂತವಾಗಿ ನಮನ್ನು ಪಾತಾಳಕ್ಕೆ ಒಯ್ಯುವದೇ *ನಡೀತದ ಬಿಡು.* ಬೆಳಗಿನ ಝಾವ ಆರಕ್ಕೆ ಅರ್ಘ್ಯ ಕೊಡುವದು ಕರ್ತವ್ಯ. ನೂರೆಂಟು ಗಾಯತ್ರಿಯೂ ಅನಿವಾರ್ಯ. ಅದನ್ನು ಕಟ್ಟುನಿಟ್ಟಾಗಿ ಸಾಧಿಸಿಕೊಳ್ಳುತ್ತಾ ಬರುತ್ತಿರುತ್ತಾನೆ. ಒಂದು ದಿನ "ಆರಕ್ಕೇ ಮಾಡುವದೇನಿದೆ ಒಂಭತ್ತಕ್ಕೇ ಮಾಡಿದರೂ *ನಡೀತದ ಬಿಡು* ಎಂದು ಯೋಚಿಸಿ, ನಾಲಕನೇಯ ಅರ್ಘ್ಯಕೊಟ್ರಾಯ್ತು" ಎಂದು ಯೋಚಿಸುತ್ತಾನೆ. ಮುಂದೆ ಕೆಲದಿನಗಳ ನಂತರ ಇವತ್ತೊಂದು ದಿನ ಸಂಧ್ಯಾವಂದನ ಬಿಟ್ಟರೆ ನಡೀತದ ಎಂದು ಬಿಡುವ. ನಂತರ ಸಂಧ್ಯಾವಂದನೆ  ಬಿಡುವದೇ ಹವ್ಯಾಸವಾಗುತ್ತದೆ.  ಸಂಧ್ಯಾವಂದನೆ ಕೇವಲ ಒಂದು ಉದಾಹರಣೆ ಮಾತ್ರ. ಹೀಗೆ ಪೂಜೆ ಜಪ ಅಧ್ಯಯನ ಪ್ರದಕ್ಷಿಣೆ ನಮಸ್ಕಾರ ಮೊದಲು ಮಾಡಿ ಎಲ್ಲ ಸಾಧನಗಳಲ್ಲಿಯೂ ಹೀಗೆಯೆ ಆಗುತ್ತದೆ.  ಸಾಧನೆಯ ಮಾರ್ಗದಲ್ಲಿ ಕಷ್ಟಪಟ್ಟು...