*ಬರುವದನ್ನು ಪ್ರೀತಿಯಿಂದ ಸ್ವಾಗತಿಸು, ಹೋಗುವದನ್ನು ಹೃತ್ಪೂರ್ವಕ ಅಭಿನಂದಿಸು*
*ಬರುವದನ್ನು ಪ್ರೀತಿಯಿಂದ ಸ್ವಾಗತಿಸು, ಹೋಗುವದನ್ನು ಹೃತ್ಪೂರ್ವಕ ಅಭಿನಂದಿಸು*
ಜೀವನದಲ್ಲಿ ಬರುವ ವಸ್ತುಗಳು ನೂರಾರು. ಹೋಗುವ ವಸ್ತುಗಳೂ ಸಾವಿರಾರು. ಬರುವವುಗಳು ಬಂದೇ ಬರುತ್ತವೆ. ಹೋಗುವವಸ್ತುಗಳು ಹೋಗುವವುಗಳೆ. ಇದುವೂ ಅತ್ಯಂತ ನಿಶ್ಚಿತ.
ಕೆಲ ವಸ್ತುಗಳು ಬಂದಾಗ ಯಾಕ ಬಂದವು... ಅವುಗಳು ಬರಲೇ ಬಾರದು ಎಂದು ನಾವು ಎಷ್ಟು ಏನು ಮಾಡಿದರೂ ಅವು ಬಂದೇ ಬರುತ್ತವೆ. ಹಾಗಾಗಿ ಬರುವ ವಸ್ತುವನ್ನು ಪ್ರೀತಿಯಿಂದ ಸ್ವಾಗತಿಸು. ಬಿಸಿಲು ಇದೆ, ಉದಾಹರಣೆಗೆ "ಈ ರಾಯಚೂರಿನ ಉರಿ ಬಿಸಲು ಯಾಕೆ ಬಂತು... ?? ಬರುವದೇ ಬೇಡ.." ಎಂದು ಎಷ್ಟು ಹೋರಾಡಿದರೂ ಬರದೆ ಇರಲು ಸಾಧ್ಯವೇ... ?? ಇಲ್ಲ ತಾನೆ ಬರುವದೇ ಇದು ಅತ್ಯಂತ ನಿಶ್ಚಿತ.
ಬರುವ ಬಿಸಿಲು ಬರಬಾರದು ಎಂದು ನೀನು, ಅದುವೋ ಬಂದೇ ತೀರುವದು. ಹೀಗಿರುವಾಗ ಇರಿಸು ಮುರುಸು, ಮನಸ್ತಾಪ, ದುಃಖ ಹೀಗೆ ನೂರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಬಂದೇ ತೀರುವ ಬಿಸಿಲನ್ನು ಪ್ರೀತಿಯಿಂದ ಸ್ವಾಗತಿಸಿದೀ ಎಂದಾದರೆ, ಆ ಬಿಸಲೂ ನಿನಗೆ ಆಪ್ಯಾಯಮಾನವಾಗುತ್ತದೆ. ಬಿಸಿಲಿನ ಜೊತೆಗೆ ಹೊಂದಾಣಿಸಿಕೊಳ್ಳಲು ಸಾಧ್ಯವಿದೆ. ಅದರೊಟ್ಟಿಗೆ ಇರುವದೂ ಸಾಧ್ಯವಾಗುತ್ತದೆ. ಜೊತೆಗೆ ಮನಸ್ತಾಪಗಳು ಇರುವದಿಲ್ಲ. ಯಾಕೆಂದರೆ " ಆ ಬಿಸಲನ್ನು ಪ್ರೀತಿಯಿಂದ ಸ್ವಾಗತಿಸಿದಿ" ಇದುವೇ ಮೂಲ. ಇದು ಕೇವಲ ಒಂದು ಉದಾಹರಣೆ ಮಾತ್ರ. ಇರದಂತೆ ಎಲ್ಲವೂ........
*ಹೋಗುವದನ್ನು ಹೃತ್ಪೂರ್ವಕ ಹರಿಸು....*
ಬಂದ ವಸ್ತು ಶಾಶ್ವತವಲ್ಲ. ನಾನೇ ಶಾಶ್ವತನಲ್ಲ ಹೀಗಿರುವಾಗ ವಸ್ತುಗಳು ಶಾಶ್ವತ ನಮ್ಮೊಟ್ಟಿಗೆ ಇರಲಿ ಎನ್ನುವದು ಮೂರ್ಖತನವೇ ಆದೀತು. ಎಷ್ಟು ದಿನ ನಮ್ಮ ಬಳಿ ಇರುವ ಪುಣ್ಯವಿದೆ ಅಷ್ಟು ದಿನ ನಮ್ಮ ಬಳಿ ಇರುತ್ತವೆ. ಹೋಗುವ ದಿನ ಬಂದಾಗ ಹೋಗಲೇ ಬೇಕು. ಹೋಗಿಯೇ ತೀರುತ್ತದೆ. ಅದು ಏನೂ ಆಗಿರಬಹುದು.
ಒಂದು ಪದಾರ್ಥವಿದೆ. ಅನೇಕ ವರ್ಷಗಳಿಂದ ನಾನು ಪ್ರೀತಿಸಿದ್ದೇನೆ. ಹಾಗಾಗಿ ಇದು ನನ್ನಬಳಿಯೇ ಇರಲಿ ಎಂದರೆ ಇರುವದಾ.. ?? ಅಸಾಧ್ಯದ ಮಾತು. ಒಂದಿನ ಹೋಗಲೇ ಬೇಕು. ಹೋಗುವ ವಸ್ತುವನ್ನು ಹೃತ್ಪೂರ್ವಕ ಬಿಟ್ಟುಕೊಟ್ಟರೆ ನೀನು ಸಮಾಧಾನ ದಿಂದ ಇರಬಹುದು. ಇಲ್ಲವಾದಲ್ಲಿ ಹೋಯಿತೂ ಹೋಯಿತೂ ಹೋಯಿತೂ ಅಂತಾನೇ ದುಃಖದ ಮಡುವಿನಲ್ಲೇ ಕಳೆಯ ಬೇಕಾಗುತ್ತದೆ. ಅದ್ದರಿಂದ ಹೋಗುವ ವಸ್ತುಗಳನ್ನು ಹೃತ್ಪೂರ್ವಕ ಅಭಿನಂದಿಸು. ನೀನು ಸಮಾಧಾನದಿಂದರಬಹುದು.
ವಿಲಂಬಿ ನಾಮ ಸಂವತ್ಸರವಿದೆ. ಒಂದು ವರ್ಷದಿಂದ ನಾನು ನಿತ್ಯ ನೆನಿಸಿ ಪಠಿಸಿ ಇದ್ದೇನೆ ಇದು ನನ್ನೊಟ್ಟಿಗೇ ಇರಲಿ ಎಂದರೆ ಇರದು. ಈ ಸಂವತ್ಸರವನ್ನು ಹೇಗೆ ಸಾರ್ಥಕ ಮಾಡಿಕೊಂಡೆ ಎಂದು ಯೋಚಿಸಿ, ಇದು ಹೋಗುವದೇ, "ವಿಕಾರಿ" ಎಂಬ ಹೊಸ ಸಂವತ್ಸರ ಬರುವದೇ ಎಂದು ತಿಳಿದು, *ವಿಲಂಬಿಯನ್ನು* ಹೃತ್ಪೂರ್ವಕ ಬೀಳ್ಕೊಡು, *ವಿಕಾರಿಯನ್ನು* ಪ್ರೀತಿಯಿಂದ ಸ್ವಾಗತಿಸು. ವಿಳಂಬಿಯನ್ನು ಕಳೆದುಕೊಂಡ ದುಃಖವೂ ಇರುವದಿಲ್ಲ, ವಿಕಾರಿಯನ್ನು ಪ್ರೀತಿಯಿಂದ ಸ್ವಾಗತಿಸಿದ್ದಕ್ಕೆ ಅತ್ಯಂತ ವೈಭವದಿಂದ ವಿಕಾರಿಯನ್ನು ಕಳೆಯಲೂ ಬಹುದು. ಇದು ಕೇವಲ ಉದಾಹರಣೆ ಮಾತ್ರ. ಹೀಗೆ ಪ್ರತಿಯೊಂದು ವಸ್ತುವನಲ್ಲಿಯೂ ಹೀಗೆ ಭಾವಿಸುತ್ತಾ ಹೋದರೆ ಸಮಾಧಾನದ ಜೀವನವನ್ನು ರೂಪಿಸಿಕೊಳ್ಳಲು ಅನುವಾಗಬಹುದು.
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
determine which type of Foreign currenhcy trading software can benefit you most.
Advertised shortcuts and file types both encourage the above behavior,
andd in addition repoair a damaged application by copying missing files every time they are invoked.
Economist are predicting the economy increase before it
gets worse.
I like anything you have developed right here, actually like what you do revealing and in what ways in places
you say it. You make it all satisfying but you just take good care of to continue the idea good.
I can’t hold on to read simple things far more on your side.
This really is an excellent web site.
infos. I'd like to see more posts like this .