Posts

Showing posts from November, 2026

ಗೋವತ್ಸ ದ್ವಾದಶಿ – ಒಂದು ಸುಂದರ ಉಪಾಸನಾ ಚಿಂತನೆ

Image
 ಗೋವತ್ಸ ದ್ವಾದಶಿ – ಒಂದು ಸುಂದರ ಉಪಾಸನಾ ಚಿಂತನೆ ಗೋವತ್ಸ ಯಾರು? ಗೋವತ್ಸ ಎಂದರೆ ಆಕಳ ಕರು. ಉಪಾಸನಾ ದೃಷ್ಟಿಯಿಂದ ಗೋವತ್ಸ ರೂಪದಲ್ಲಿ ಎಲ್ಲ ಜೀವಿಗಳ ಶರೀರದಲ್ಲಿ ನೆಲೆಸಿರುವವರು ಸಾಕ್ಷಾತ್ ವಾಯುದೇವರು. ವಾಯುದೇವರು ಶರೀರದಲ್ಲಿ ಎಲ್ಲಿ ನೆಲೆಸಿದ್ದಾರೆ? ಆಕಳ ಕರುವನ್ನು ಕಟ್ಟುವ ವಿಶಾಲವಾದ ಮನೆಯೊಳಗೆ ಒಂದು ಸಣ್ಣ ಮನೆಯಿರುವಂತೆ, ನಮ್ಮ ಸ್ಥೂಲಶರೀರವೆಂಬ ವಿಶಾಲವಾದ ಮನೆಯೊಳಗೆ ಬಲಗಣ್ಣೆಂಬ ಸೂಕ್ಷ್ಮವಾದ ಮನೆಯಿದೆ. ಆ ಬಲಗಣ್ಣಿನಲ್ಲಿ ಗೋವತ್ಸರೂಪದಿಂದ, ಅಂದರೆ ಆಕಳ ಕರುವಿನ ರೂಪದಿಂದ ವಾಯುದೇವರು ನೆಲೆಸಿದ್ದಾರೆ. ಈ ಉಪಾಸನೆಯ ವಿಶೇಷತೆಯೇನು? ಈ ಉಪಾಸನೆಯಲ್ಲಿ ಅತ್ಯಂತ ವಿಶೇಷವಾದ ತತ್ತ್ವಚಿಂತನೆಯಿದೆ. ಸಾಕ್ಷಾತ್ ಶ್ರೀಮನ್ನಾರಾಯಣನೇ ಕರುವನ್ನು ಕಟ್ಟುವ ಸ್ಥಂಭವಾಗಿದ್ದಾನೆ. ಕರುವನ್ನು ಕಟ್ಟುವ ಹಗ್ಗವು ಅನ್ನಾಭಿಮಾನಿನಿಯಾದ ಶ್ರೀಲಕ್ಷ್ಮೀದೇವಿಯೇ ಆಗಿದ್ದಾಳೆ. ಆ ಕರುವಿನ ರೂಪದಲ್ಲಿರುವವರು ಸಾಕ್ಷಾತ್ ವಾಯುದೇವರು. ಅಂದರೆ, ಬಲಗಣ್ಣೆಂಬ ಸೂಕ್ಷ್ಮಗೃಹದಲ್ಲಿ ಶ್ರೀನಾರಾಯಣನೆಂಬ ಸ್ಥಂಭಕ್ಕೆ, ಶ್ರೀಲಕ್ಷ್ಮೀದೇವಿಯೆಂಬ ಹಗ್ಗದಿಂದ ವಾಯುದೇವರೆಂಬ ಗೋವತ್ಸವು ಬಂಧಿತವಾಗಿರುವ ದಿವ್ಯರೂಪವನ್ನು ಚಿಂತಿಸಬೇಕು. ಈ ದಿವ್ಯರೂಪವನ್ನು ಚಿಂತಿಸುವವರು ಯಾರು? ಸಪ್ತರೂಪಗಳಿಂದ ಸಪ್ತ ಋಷಿಗಳ ನಾಮದಲ್ಲು ಏಳು ದೇವತೆಗಳು ಕಣ್ಣಿನ ಏಳು ಸ್ಥಾನಗಳಲ್ಲಿ ನೆಲೆಸಿ, ನಿರಂತರವಾಗಿ ಈ ದಿವ್ಯರೂಪದ ಉಪಾಸನೆಯನ್ನು ಮಾಡುತ್ತಿರುತ್ತಾರೆ. ಗೌತಮ ಎಂಬ ನಾಮದ ರುದ್ರದೇವರು, ಭರ...