ನಮ್ಮ ನಾಡು..*
*ನಮ್ಮ ನಾಡು ..* ಅಂತರ್ನಿಹಿತ ಪಶುಭಾವದ ತೃಪ್ತಿಗಾಗಿ ಸದಾ ತೊಯ್ದಾಡುವ ಮಾನವನಿಗೆ ಮನಶ್ಶಾಂತಿ ನೀಡುವ ನೀಡುವ ತತ್ವಜ್ಙಾನ, ನೀತಿ ಅಧ್ಯಾತ್ಮಗಳ ತವರು ನಮ್ಮ ಸಿದ್ಧಾಂತ .. ಮಾನವ ತಾ ತನ್ನ ಪಾಶವೀಯ ಮೇಲ್ಮಸುಗನ್ನು ಕಿತ್ತೆಸೆದು, ತನ್ನ ಜನ್ಮ ಮೃತ್ಯುರಹಿತ ಆನಂದಮಯ ಆತ್ಮ ರೂಪದಲ್ಲಿ ನಿರಂತರ ತನ್ನನ್ನು ತಾ ಕಂಡುಕೊಳ್ಳುವಂಥ ಸರ್ವವಿದ್ಯೆಗಳ ಸಾಧನಾ ಸ್ಥಳ ನಮ್ಮ ಭಾರತ. ಸುಖಭೋಗಗಳನ್ನುಂಡು, ಅದಕ್ಕಿಂತೂ ಹೆಚ್ಚಾಗಿ ದುಃಖದ ನಂಜು ನುಂಗಿ, ಕಡೆಗೆ ಅವೆಲ್ಲ ಅಸಾರ ಅನುಪಯುಕ್ತ ಎಂಬ ಭಾವನೆ ಅನುಭವಿಸಕ್ಕಿಂತಲೂ ಮೊದಲಿಗೇ ತಿಳಿಸಿದ ಭೂಮಿ ನಮ್ಮ ಭಾರತ.. ನವ ಯವ್ವನದ ಮದ, ಮದುಯುಕ್ತ ವಿಲಾಸಿ ಜೀವನ, ಆ ಭವ್ಯ ಜೀವನದ ಅಮಲಿನಲ್ಲಿ ಮುಳುಗುವದಕ್ಕೂ ಪೂರ್ವದಲ್ಲೆ ಇದು ಅನುಪಯುಕ್ತ, ಅತ್ಯಂತ ಹೇಯ ಅಂತ ಸಾರಿದ ಭೂಮಿ ನಮ್ಮ ಭಾರತ. ಭವಸಾಗರ. ಇದರಲ್ಲಿ ನೋವು ನಲಿವು, ಸಬಲತೆ ದುರ್ಬಲತೆ, ಸುಖ ದುಃಖ, ಸಮೃದ್ಧಿ ದಾರಿದ್ರಯ, ಸಾವು ಬದುಕು, ಪ್ರೇಮ ದ್ವೇಶ, ಪ್ರೀತಿ ಮಾತ್ಸರ್ಯ, ಇವೆ ಮೊದಲಾದ ಪ್ರಬಲ ಪ್ರವಾಹಗಳ ಮಧ್ಯದಲ್ಲಿಯೇ ನಿಸ್ಸೀಮ ಶಾಂತಿಯನ್ನು ಅರಹುವ ಏಕೈಕ ದೇಶ ಅದು ನಮ್ಮ ದೇಶ. ಜ್ಙಾನದ ಮೇರುಗಳನ್ನು, ವಾಙ್ಮಯ ಗಂಗೆಗಳನ್ನು ಹರಿಸುವ ಮುಖಾಂತರ ಧರ್ಮದ ಭಯ ಹುಟ್ಟಿಸಿ, ಸನ್ಮಾರ್ಗದಲ್ಲಿ ಇರಿಸುವ ದೇಶ ನಮ್ಮ ದೇಶ. ಎಂತಹ ದುಃಖಗಳು ಅಪ್ಪಳಿಸಿದರೂ , ಆ ದುಃಖದ ಮಧ್ಯದಲ್ಲಿಯೇ *ಸಣ್ಣದರಲ್ಲಿಯೇ ಆಯಿತು* ಎಂಬ ಸಮಾಧಾನದ ಸೂತ್ರವನ್ನು ತಿಳಿಸಿದ ದೇಶ. ಎನೆಲ್ಲವನ್...