ಓ!! ವಿವೇಕಾತ್ಮನೇ ವಿವೇಕವನ್ನೀಯು...*
ಓ!! ವಿವೇಕಾತ್ಮನೇ ವಿವೇಕವನ್ನೀಯು...* ಆತ್ಮಮನಸ್ಸು, ಮನಸ್ಸಿನಲ್ಲಿ ವಿವೇಕತೆಯ ಜಾಲ ಹರಡಿಸುವವನು ಶ್ರೀಹರಿ. ಅವನೇ ವಿವೇಕಾತ್ಮ. ಶ್ರೀಹರಿ ಬಿಂಬ. ನಾವು ಪ್ರತಿಬಿಂಬರು. ಪ್ರತಿಬಿಂಬರು ಸರ್ವಥಾ ಬಿಂಬನ ಅಧೀನ. "ನಡದು ನಡೆಸುವ, ನುಡಿದು ನಿಡಿಸುವ" ಇತ್ಯಾದಿ ಇತ್ಯಾದಿ... ದೇವರನ್ನು ಕಾಣುವದು ಬಾಹ್ಯ ಇಂದ್ರಿಯಗಳಿಗೆ ಸಾಮರ್ಥ್ಯವಿರದು. ಕೇವಲ ಮನಸ್ಸಿಗೆ ಮಾತ್ರ ಸಾಧ್ಯವಿದೆ. ಬಾಹ್ಯ ಪದಾರ್ಥಗಳನ್ನು ನೋಡುವದು ಕಣ್ಣು. ಆದರೆ ಆ ಕಣ್ಣಿನಗೆ ನೂರಾರು ಪದಾರ್ಥಗಳ ಗೊಂದಲವುಂಟು ಮಾಡಿದರೆ, ತೋರಿಸುವ ಕಣ್ಣು ಕಾಣಿಸಲು ಅಸಮರ್ಥವಾಗುತ್ತದೆ. ಹಾಗೆಯೇ ದೇವರನ್ನೇ ಕಾಣುವ ಮನಸ್ಸಿಗೆ ಕೋಟಿ ಕೋಟಿ ಪದಾರ್ಥಗಳ ಸಂಬಂಧಗಳನ್ನು ಹಚ್ಚಿಸಿದಾಗ, ಗೊಂದಲವೋ ಗೊಂದಲವಾಗಿ ಯಾವದನ್ನು ಕಾಣಬೇಕೋ ಅದನ್ನು ಬಿಟ್ಟು ಕಂಡದ್ದು ಕಾಣಲು ತೊಡಗುತ್ತದೆ. *ನಮ್ಮೊಳಗೆ ದೇವನಿದ್ದಾನೆ. ಪ್ರೇರಕನಾಗಿ ನಿಂತಿದಾನೆ. ನಮ್ಮ ಪರಮ ಹಿತೈಷಿಯಾಗಿಯೇ ಇದ್ದಾನೆ. ಆ ದೇವರನ್ನು ಕಾಣುವ ನಮ್ಮ ಮನಸ್ಸು ಗದ್ದಲದಿಂದ ತುಂಬಿರುವದರಿಂದ ಅವನ ದಿವ್ಯ ಧ್ವನಿ ಕೇಳದಾಗಿದೆ, ಚುರುಕು ಓಡಾಟ ಕಾಣದಾಗಿದೆ...... ಯಾವದು ಹಿತ, ಯಾವದು ಅಹಿತ ಎಂಬ ವಿವೇಕ ಪೂರ್ಣನಾಗಿ ಯೋಚಿಸಿ, ಮೌನವೆಂಬ ಝರಡಿ ಹಿಡಿದಾಗ ಒತ್ತಡಗಳೆಂಬ ಎಲ್ಲ ಅಲೋಚನೆಗಳೂ ಕಸದ ಬುಟ್ಟಿಗೆ ಸೇರುತ್ತವೆ. ಆಗ ಧ್ಯಾನ. ಆ ಧ್ಯಾನದಲ್ಲಿ ದೇವರೇ ದೇವರು .. ನೀನೇ ನೀನು. ಕೇಳುವದು, ನೋಡುವದು, ಮೂಸುವದು, ಸ...