ಬಳಕಿನ ಹಬ್ಬದ ಶುಭಾಷಯಗಳು ಹಾಗೂ ನಮಸ್ಕಾರಗಳು*
*ಬಳಕಿನ ಹಬ್ಬದ ಶುಭಾಷಯಗಳು ಹಾಗೂ ನಮಸ್ಕಾರಗಳು* ಉಪನಿಷತ್ತಿನ ದೃಷ್ಟಿಯಲ್ಲಿ ಬೆಳಕು *अस्तमिते आदित्ये याज्ञवल्क्य चन्द्रमसि अस्तमिते शान्ते अग्नौ शान्तायां वाचि किं ज्योतिरेवायं पुरुषः इति आत्मैव ज्योतिः* ಉಪನಿಷತ್ತಿನ ದೃಷ್ಟಿಯಲ್ಲಿ "ಸೂರ್ಯ ಇಲ್ಲದಾಗ, ಚಂದ್ರ ಮುಳುಗಿದಾಗ, ಅಗ್ನಿ ಶಾಂತನಾದಾಗ, ನಕ್ಷತ್ರ ಕಾಣಿಸದಾದಾಗ, ಮಾತು ನಿಂತಾಗ, ಅನಾಥ ಸ್ಥಿತಿಯಲ್ಲಿ ನಾ ಬಿದ್ದಾಗ ನನ್ನನ್ನು *ತನ್ನವನು ಎಂದು ಸ್ವೀಕರಿಸುವ ದೇವರೇ ಆದ್ದರಿಂದ ದೇವರೇ ಎಲ್ಲರಿಗೂ ಬೆಳಕು."* ಅಂತರ್ಯಾಮಿಯಿಂದಲೇ ನಮಗೆ "ನಮ್ಮ ಅರಿವು, ಸುಖ, ಸಮೃದ್ಧಿ, ಅಜ್ಞಾನ, ದೇಶ, ಕಾಲ, ಮುಂತಾದವುಗಳ ಜ್ಞಾನವಾಗುವದು. ಆ ದೇವನಿಂದಲೇ ಜ್ಞಾನದ ಜ್ಯೋತಿ ಬೆಳಗುವದು. ನಮ್ಮ ಅಂತರ್ಯಾಮಿಯೇ ಇಂದ್ರಿಯಗಳನ್ನು ಉದ್ದೀಪನಗೊಳಿಸಿ ಜ್ಞಾನ ಕರುಣಿಸುತ್ತಾನೆ. ಮನಸ್ಸನ್ನು ನಿತ್ಯ ಶುದ್ಧಿ ಕರಿಸಿ ಪ್ರತಿಕ್ಷಣ ಸ್ಫೂರ್ತಿ ಉತ್ಸಾಹಗಳನ್ನು ಬೆಳಗಿಸುತ್ತಾನೆ. ಇತ್ಯಾದಿ ನೂರಾರು ಸಾವಿರಾರು ಕಾರಣಗಳಿಂದ ಜ್ಞಾನ ದೀಪನಾದ, ಅಧ್ಯಾತ್ಮದೀಪನಾದ ಪರಮಾತ್ಮನ ಅನುಗ್ರಹ ನನಗೆ ಆಗುವಂತೆ ಅನುಗ್ರಹಿಸಬೇಕು. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿಯ ಹಾರ್ದಿಕ ಶುಭಾಶಯಗಳು....💐💐💐 ನಿಮ್ಮವ ......*ನ್ಯಾಸಣ್ಣ..💐*