Posts

*ಮನುಷ್ಯನ ಉಳಿವಿಗಾಗಿ ನಿಸರ್ಗವನ್ನು ಬಳಿಸಬೇಕೆ.. ?? ಅಥವಾ ಮನುಷ್ಯನ ಹಾವಳಿ ಇಂದ ನಿಸರ್ಗವನ್ನು ಉಳಿಸಬೇಕೇ..??*

Image
 *ಮನುಷ್ಯನ ಉಳಿವಿಗಾಗಿ ನಿಸರ್ಗವನ್ನು ಬಳಿಸಬೇಕೆ.. ?? ಅಥವಾ ಮನುಷ್ಯನ ಹಾವಳಿ ಇಂದ ನಿಸರ್ಗವನ್ನು ಉಳಿಸಬೇಕೇ..??* ಪೃಥವಿ, ನೀರು, ಘಾಳಿ, ಅಗ್ನಿ, ಆಕಾಶಗಳಿಂದ ಕೂಡಿದ ಈ ಭವ್ಯ ನಿಸರ್ಗ ಅತ್ಯದ್ಭುತವೇ ಸರಿ.  ಮನುಷ್ಯನ ಜೀವನಕ್ಕೂ ಈ ನಿಸರ್ಗ ಅತ್ಯುಪಯುಕ್ತ.  ಈ ನಿಸರ್ಗ ದೆರವರ ಮನೆ. ನಿಸರ್ಗದ ಆಳದೊಳಗೆಯೇ ಎಲ್ಲವರ ಜೀವನ. ಈ ಪಂಚಭೂತಾತ್ಮಕ ನಿರ್ಸಗದ ಮೂಲವೇ ಈ ಜೀವನ (ಮನುಷ್ಯನ) ಜೀವನ. "ತನ್ನ ಮೂಲವನ್ನೇ ತಾನು ರಕ್ಷಿಸಬೆಕು" ಇದು ಜೀವನ ಅತೀ ಮುಖ್ಯ ಜವಾಬ್ದಾರಿ. ಇಲ್ಲವಾದಲ್ಲಿ ತಾ ಕುಳಿತ ಟೊಂಗೆಯನ್ನೇ ತಾನೇ ಕಡಿದರೆ ಹೇಗೋ ಹಾಗಾಗುತ್ತದೆ. ಈ ಪ್ರಸಂಗದಲ್ಲಿ ತನ್ನ ಜವಾಬ್ದಾರಿಯನ್ನು ಮರೆತು ನಿಸರ್ಗವನ್ನು ಹಾಳು ಮಾಡಿ, ತಾನೂ ನಿರ್ಗತಿಕನಾಗಲು ಮುಂದಡಿ ಇಟ್ಟ ಏಕೈಕ ಜೀವ ಎಂದರೆ ಮನುಷ್ಯನೇ ಎಂದು ಉದ್ಗರಿಸಬಹುದು. ನಿಸರ್ಗ ಮನುಷ್ಯರಿಗೇ ಅವಷ್ಯವಾಗಿ ಬೇಕು. ಇಂದಿನ ಮನುಷ್ಯ ತುಂಬ ಸ್ವಾರ್ಥಿ. ಕೇವಲ ತನ್ನ ಜೀವನಕ್ಕೋಸ್ಕರ ಒಮ್ಮೆ ನಿಸರ್ಗವನ್ನು ಪ್ರವೇಶಿಸಿದ ಎಂದಾದರೆ, ಮುಂದೆ ಅವನೇ ದೊಡ್ಡ ಕಾಡಗಿಚ್ಚು ಆಗಿ ಮಾರ್ಪಾಡು ಆಗುತ್ತಾನೆ. ಈ ನಡವಳಿಕೆ ತುಂಬ ವಿಚಿತ್ರ ಎಂದನಿಸುತ್ತದೆ.  "ನಮ್ಮ ಬದುಕಿಗೋಸ್ಕರ ನಿಸರ್ಗದ ಉಳಿವಿನ ಆವಶ್ಯಕವೇ ಹೊರತು,   ತನ್ನ ಬದುಕಿಗಾಗಿ ನಿಸರ್ಗ" ಎಂದಾಗಬಾರದು. ಒಣ ಮರಗಳ ಜೊತೆಗೆ ಹಸಿ ಈಗ ಈಗತಾನೆ ಚಿಗಿತಿರುವ ಗಿಡಗಳನ್ನೂ ಬೀಳಿಸುವ. ಹೊಸ ಗಿಡಗಳನ್ನು ನೆಡ. ಲಕ್ಷಲಕ್ಷ ಮರಗಳನ್ನು ಕಡಿಯಲು...

*ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*

 *ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️* ಆಗ: ಕೊಳ, ಬಾವಿಯ  ನೀರನ್ನು ಸೇದಿ ನೇರವಾಗಿ ಕುಡಿದು ನೂರು ವರ್ಷ ಬದುಕುತ್ತಿದ್ದರು.  ಈಗ: ಶುದ್ಧೀಕರಿಸಿದ RO ನೀರು‌ ಕುಡಿದರು 40 ವರ್ಷಕ್ಕೆ ರೋಗಗಳು ಆಗ: ಗಾಣಗದಿಂದ ತೆಗೆದ‌ ಎಣ್ಣೆಯನ್ನು ಉಪಯೋಗಿಸಿದರೂ ಮುದುಕರಾಗುವವರೆಗೂ ಶ್ರಮವಹಿಸಿ ದುಡಿಯುತ್ತಿದ್ದರು.  ಈಗ: ಡಬಲ್ ಫಿಲ್ಟರ್ಡ್ ಎಣ್ಣೆಯನ್ನು ಉಪಯೋಗಿಸಿದರೂ ಹೃದಯಾಘಾತದಿಂದ ಆಸ್ಪತ್ರೆಗೆ ಸೇರುತ್ತಿದ್ದಾರೆ. ಆಗ: RAW SALT ಬಳಸಿ ಸಹ ಚೆನ್ನಾಗಿ ಬದುಕುತ್ತಿದ್ದರು.  ಈಗ: ಅಯೋಡಿನ್ ಉಪ್ಪು ಬಳಸಿದರು ಬಿಪಿ ಸಮಸ್ಯೆಗಳು ಆಗ: ಇದ್ದಿಲು, ಇಟ್ಟಿಗೆ, ಬೇವಿನ ಕಡ್ಡಿ ಉಪಯೋಗಿಸಿ 80 ವರ್ಷದವರೆಗೂ ಅಗಿದು ತಿನ್ನುತ್ತಿದ್ದರು.  ಈಗ: ಸೂಪರ್ ಬ್ರಾಂಡ್ ಟೂತ್ ಪೇಸ್ಟ್ ಗಳನ್ನು ಉಪಯೋಗಿಸುತ್ತಿದ್ದರು ಸಹ ಡೆನ್ಟಿಸ್ಟ್ ಗಳ ಹತ್ತಿರ ಸಾಲು ಸಾಲು. ಆಗ: ನಾಡಿ ಹಿಡಿದು ರೋಗವೇನೆಂದು ತಿಳಿದುಕೊಳ್ಳುತ್ತಿದ್ದರು.  ಈಗ: ಅಲ್ಟ್ರಾ ಸೌಂಡ್, CT ಸ್ಕ್ಯಾನಿಂಗ್, ಬ್ರೆಯನ್ ಮೇಪಿಂಗ್, ಡಿಜಿಟಲ್ ಎಕ್ಸ್ ರೇ ಗಳಿಂದಲು ಸಹ ರೋಗವೇನೆಂದು ನಿರ್ಧರಿಸಲಾಗುತ್ತಿಲ್ಲ. ಆಗ: 10 ಮಕ್ಕಳನ್ನು ಹೆತ್ತು, ವೃದ್ಧಾಪ್ಯದಲ್ಲಿಯು ಹೊಲದ ಕೆಲಸಕ್ಕೆ ಹೋಗುತ್ತಿದ್ದರು.  ಈಗ: ಮೊದಲ ತಿಂಗಳಿನಿಂದಲೇ ಡಾಕ್ಟರ್ ಚೆಕಪ್ ಗಳೆಲ್ಲಾ ಇದ್ದರೂ ಸಿಜೇರಿಯನ್ ತಪ್ಪುತ್ತಿಲ್ಲ. ಆಗ: ವರ್ಷವಿಡೀ ಸಿಹಿಗಳನ್ನು ತಿನ್ನುತ್ತಾ ಉಲ್ಲಾಸದಿಂದ ಇದ್ದರೆ... ಈಗ: ಸ...

*ಹೇ ಅದೃಷ್ಟ ಹೀನ ಮನಸ್ಸೇ..... ಇನ್ನಾದರೂ ಬಲಿಷ್ಠನಾಗು*

Image
  *ಹೇ ಅದೃಷ್ಟ ಹೀನ ಮನಸ್ಸೇ..... ಇನ್ನಾದರೂ ಬಲಿಷ್ಠನಾಗು* "ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ" ಮನುಷ್ಯರ ಸಂಸಾರ ಬಂಧಕ್ಕೂ ಹಾಗೂ ಬಂಧದಿಂದ ಮುಕ್ತಿಗೂ ಮನಸ್ಸೇ ಕಾರಣ" ಇದು ಸುಪ್ರಸಿದ್ಧ.  ಸಂಸಾರದಲ್ಲಿ ಸುಖ ದುಃಖ, ಸೋಲು ಗೆಲವು, ಯಶಸ್ಸು ಅಪಯಶಸ್ಸು, ಏಳು ಬೀಳು, ಇತ್ಯಾದಿ ಎಲ್ಲವನ್ನು  ಅನುಭವಿಸಲೂ ಮನಸ್ಸೇ ಮೂಲ ಕಾರಣ. ಇದುವೂ ಸಿದ್ಧ. ಮನಸ್ಸು ಮಹಾಕೋತಿ. ಇಂದಿನ ಈ ಕ್ಷಣದ ವೈಭವ ಮಾತ್ರ ಮನಸ್ಸಿಗೆ ಬೇಕು. ಅಂತೆಯೇ ಪುಣ್ಯಸಂಪಾದೆನೆಗೆ ಹಿದೇಟು. ಪುಣ್ಯ ಮಾಡುವಾಗ ದುಃಖ, ಆ ದುಃಖ ಮನಸ್ಸಿಗೆ ಸರ್ವಥಾ ಬೇಡ. ಪಾಪ ಮಾಡುವಾಗ ಸುಖ, ಆ ಸುಖವನ್ನು ಪರಿಪೂರ್ಣವಾಗಿ ಸ್ವಾಗತಿಸುತ್ತದೆ ಮನಸ್ಸು.  ಪುಣ್ಯವೇ ರುಚಿಸದ, ಸ್ವಾಗತಿಸದ, ಆಸ್ವಾದಿಸದ ಒಂದು ವಸ್ತು ಎಂದರೆ ಅದು ಮನಸ್ಸೇ.   *ಆ ಕಾರಣದಿಂದಲೇ ಅದೃಷ್ಟ ಹೀನವಾಗಿದೆ ಮನಸ್ಸು.* ಅದೃಷ್ಟವಿರದಿರೆ ಮನಸ್ಸು ಮಹಾ ದುರ್ಬಲ. ಹಿತವಾದ ಯಾವ ಮಾತನ್ನೂ ಕೇಳದು. ಹಿತವಾದದ್ದನ್ನು ಮಾಡದು. *ಅದೃಷ್ಟ ಹೀನ ಮನಸ್ಸಿಗೆ ದೂರದೃಷ್ಟಿ ಕಡಿಮೆ* ಅದೃಷ್ಟ ಹೀನವಾದ ಮನಸ್ಸು ಎಂದಿಗೂ ದೂರಾಲೋಚನೆ ಕಡಿಮೆ ಇರುತ್ತದೆ. *ದೂರಾಲೋಚನೆಗಿಂತಲೂ ದುರಾಲೋಚನೆಯೇ ಹೆಚ್ಚು ಆಗಿರುತ್ತದೆ.* ದುರಾಲೋಚೆನೆಗಳು ಹೆಚ್ಚಾದಷ್ಟು ಮನಸ್ಸು ದುರ್ಬಲ ಆಗುತ್ತಾ ಸಾಗುತ್ತದೆ. ದುರ್ಬಲ ಮನಸ್ಸು ಎಲ್ಲ ವಿಷಯದಲ್ಲಿಯೂ ತನ್ನ ಸ್ವಾಸ್ಥತೆಯನ್ನು ಕಳೆದುಕೊಂಡಿರುತ್ತದೆ. ಎಲ್ಲ ಕಡೆ ಕದಡಿಸಿಕೊಂಡಿರುತ್ತದೆ. ಎಲ್...

*ಹಿರಿಯರು ಹೇಳಿದ್ದು ಸರಿ ಎಂದು ತಿಳಿದುಕೊಳ್ಳುವಷ್ಟರಲ್ಲಿ, ನೀನು ಹೇಳಿದ್ದು ತಪ್ಪು ಎಂದೇ ಹೇಳುವ ಮಗ ಹುಟ್ಟಿರುತ್ತಾನೆ*

Image
 * ಹಿರಿಯರು ಹೇಳಿದ್ದು ಸರಿ ಎಂದು ತಿಳಿದುಕೊಳ್ಳುವಷ್ಟರಲ್ಲಿ, ನೀನು ಹೇಳಿದ್ದು ತಪ್ಪು ಎಂದೇ ಹೇಳುವ ಮಗ ಹುಟ್ಟಿರುತ್ತಾನೆ* ತಂದೆ ತಾಯಿ ಗುರು ಧರ್ಮ ಶಾಸ್ತ್ರ ಇವರೆಲ್ಲರೂ ನಮ್ಮ ಹಿತೈಷಿಗಳೆ. ಆದರೆ ಇವರು ಹೇಳಿದ್ದು ಸರಿ ಎಂದು ಒಪ್ಪಿಕೊಳ್ಳುವ ಮನೋಭಾವ ಮಾತ್ರ ನನ್ನದಾಗಿಲ್ಲ.  *ಅವರು ಹೇಳುವ ಹಿತ ನನಗೆ ಹಿತ ಎಂದೆನಿಸುವದಿಲ್ಲ. ನಾನು ಹಿತ ಎಂದು ಯಾವದು ತಿಳಿದಿರ್ತೆನೆ ಅದು ಎನಗೆ ಹಿತ ಆಗಿರುವದಿಲ್ಲ.* ಹಾಗಾಗಿ ಏಳು ಬೀಳು, ಸೋಲು, ಹತಾಶೆ, ಅಶಾಂತಿ ಇವುಗಳಲ್ಲಿ ಬಿದ್ದು ಎದ್ದು ನೊಂದು  'ಓಹ್ ಹಿರಿಯರು ಹೇಳಿದ್ದು ಎಷ್ಟು ಸತ್ಯವಾಗಿತ್ತು ಅಲ್ವೆ" ಅದನ್ನು ಪರಿಪಾಲಿಸಬೇಕಿತ್ತು, ಇನ್ನಾದರೂ ಪರಿಪಾಲಿಸೋಣ ಎಂದು ತಿಳಿದುಕೊಳ್ಳುವಷ್ಟರಲ್ಲಿ *ಅಪ್ಪಾ ನಿನಗೇನು ತಿಳಿಯುತ್ತದೆ ತೆಪ್ಪಗೆ ಬಿದ್ದಿರು* ಎಂದು ಹೇಳುವ ಮಗನಾಗಿರುತ್ತಾನೆ.  ಹಿರಿಯರು ಹಿತೈಷಿಗಳೂ ಬೋಧಿಸುತ್ತಾರೆ *ಇಂದು ಏಕಾದಶಿ _ ಉಪವಾಸ ಮಾಡು* ಎಂದು. ನಿಮಗೇನು ತಿಳಿಯತ್ತೆ,ನಂದು ಉಪವಾಸ ಬೇಕಿದ್ದರೆ ನೀವು ಮಾಡಿ ಎಂದು ಗುರಾಯಿಸುತ್ತಾನೆ.  ಅವರು ಉಪವಾಸ ಮಾಡಲು ಹೇಳಿದ ಕಾರಣ ಕೋಟಿ ಕೋಟಿ ಪಾಪಗಳ ಪರಿಹಾರಕ್ಕೆ. ಆದರೆ ಆಗ ನಾನು ನನ್ನ ಅಹಂಭಾವದಲ್ಕಿ ಮಾಡಲೇ ಇಲ್ಲ.  ಇಂದು ನಾನು ನನ್ನ ಜೀವನದಲ್ಲಿ ಏನನ್ನೂ ಪಡೆಯಲಿಲ್ಲ. ಯಾಕೆ ಅಂದರೆ ಪಡೆಯುವದಕ್ಕೆ ಇರುವ ಅಡೆತಡೆಗಳನ್ನು ಕಳೆದುಕೊಂಡಿಲ್ಲ. ಇನ್ಮೇಲೆ ಆದರೂ ಕಳೆದುಕೊಳ್ಳೋಣ ಅಂದರೆ ಮಗ ಬಯ್ದು ಸುಮ್ ಕೂಡಿಸುತ...

*.......ಪುಷ್ಯಾರ್ಕಾದಿ ಸಮಾಗಮೇ (ಒಂದುಬಾರಿ ಓದೋಣ)

Image
 *.......ಪುಷ್ಯಾರ್ಕಾದಿ ಸಮಾಗಮೇ* (ಒಂದುಬಾರಿ ಓದೋಣ) ಪ್ರತೀ ದಿನವನ್ನು ನಾವು, ನಮಗಾಗಿ ಹೇಗೆ ಬಳಿಸಿಕೊಳ್ಳಬಹುದು ಎನ್ನುವದಕ್ಕೆ  *ಗುರು ಪುಷ್ಯಾಮೃತ* ಯೋಗವಿರುವ ಈ ದಿನವೂ ಒಂದು ನಿದರ್ಶನ.  ಇಂದು ನಮಗೆ ಕಷ್ಟಗಳು ತುಂಬ. ಅಪತ್ತುಗಳು ಅಪಾರ. ಈಗಿನ ಕೆಲ ದಿನಗಳಲ್ಲಿ, ಪ್ರತಿನಿತ್ಯವೂ ಕನಿಷ್ಟ ಎರಡರೆ ಕೆಟ್ಟ ಸುದ್ದಿ ಕಿವಿಗೆ ಬಿದ್ದಿರ್ತಾವ. ಸ್ವಯಂ ನಾವು ಆಪತ್ತುಗಳ ಸುಳಿಗಳಲ್ಲಿ ಇದ್ದೇವೆ. ಆದಾಯ ಕುಂಠಿತವಾಗಿದೆ. ಬರುವ ಆದಾಯ ಸರಿಯಾಗಿ ಹೊಂದಿಸಲು ಕಷ್ಟವಾಗಿದೆ. *ಜಪ ಪಾರಾಯಣಗಳೂ ಕುಂಠಿತವಾಗಿವೆ.* ಘೋರದಿನಗಳ ಅರಿವು ಅಂತೂ ನಮಗಾಗಿದೆ.   ಹೀಗಿರುವಾಗ..... *ನಾಳೆಯದಿನವನ್ನೂ ಯಾಕೆ ಬಳಿಸಿಕೊಳ್ಳಬಾರದು......* ಅನುಭವಿಸಿದ ಒಳ್ಳೆಯ ದಿನಗಳು ಬರಲು, ಅತ್ಯುತ್ತಮ ಸುದ್ದಿಗಳು ಕೇಳಲು, ಉತ್ತಮ ವಿಚಾರ ರೂಢಿಸಿಕೊಳ್ಳಲು, ಜಪ ಪಾರಾಯಣ ಸುಸೂತ್ರವಾಗಿ ನಡೆಯಲು, ಸಂಪಾದನೆ ಸರಾಗವಾಗಿ ಆಗಲು, ಅನಿಷ್ಟ ಕಳೆದುಕೊಳ್ಳಲು, ಆಪತ್ತುಗಳಿಂದ ಗೆದ್ದುಬರಲು, *ದೇವರ ದೇವತೆಗಳ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಲು* ನಾಳೆಯ ದಿನವನ್ನು ಬಳಿಸಿಕೊಳ್ಳಣ ಅಲ್ಲವೇ... *ಹೇಗೆ ಬಳಿಸಿಕೊಳ್ಳುವದು.....* ದೇವರ ಗುರುಗಳ ಅನುಗ್ರಹದಿಂದ ನಾಳೆ  *ಗುರು ಪುಷ್ಯಾಮೃತ* ಯೋಗ ಒದಗಿದೆ. ಪ್ರಾತಃಸ್ಮರಣೀಯ ಅಪ್ಪಣ್ಣಾಚಾರ್ಯರು ತಿಳಿಸುತ್ತಾರೆ ಈ ದಿನದಂದು *ರಾಯರ ಸ್ತೋತ್ರ ಪಾರಾಯಣ* ಮಾಡುವದರಿಂದ ರಾಯರ ಪರಮಾನುಗ್ರಹ ಆಗತ್ತೆ ಎಂದು. *ದೈವ ವಶ...

*ದ್ವೇಶಮಾಡದೇ ಪ್ರೀತಿಸುವವ ನೈಜ ಭಕ್ತ*

Image
 *ದ್ವೇಶಮಾಡದೇ ಪ್ರೀತಿಸುವವ ನೈಜ ಭಕ್ತ* ಇಂದು "ಭಾವಬೋಧಕಾರರು" ಆದ ಪ್ರಾತಃಸ್ಮರಣೀಯರಾದ, ಅನೇಕ ಟೀಕಾ ಟಿಪ್ಪಣಗಳನ್ನು ರಚಿಸಿರುವ *ಶ್ರೀ ಶ್ರೀರಘೂತ್ತಮತೀರ್ಥರ* ಆರಾಧನಾ ಮಹೋತ್ಸವ". ಅವರು ರಚಿಸಿದ ಗೀತಾಭಾಷ್ಯ ಭಾವಬೋಧ. ಒಂದು ಶ್ಲೋಕದ ಚಿಂತನೆ ಮಾಡುವ ಪ್ರಯತ್ನ ಮಾಡೋಣ.  *ಭಕ್ತ ಯಾರು.... ???* ನಾವೆಲ್ಲರೂ ಭಕ್ತರೇ, ಮಹಾ ಭಕ್ತರೇ ಎಂದು ಹೇಳಿಕೊಳ್ಳುತ್ತೇವೆ. ತಕ್ಕಮಟ್ಡಿಗೆ ಭಕ್ತಿಯನ್ನೂ ಮಾಡುತ್ತೇವೆ. ಹೇಳಿಕೊಂಡಷ್ಟು ಅಲ್ಲದಿದ್ದರೂ ಅಲ್ಪ ಸ್ವಲ್ಪ ಭಕ್ತರಂತೂ ಇದ್ದೇವೆ.  *ಹಾಗಾದರೆ ನೈಜ ಭಕ್ತರಾರು... ??* *ಅದ್ವೇಷ್ಟಾ ಸರ್ವಭೂತಾನಾಂ....* ಕೃಷ್ಣ ಗೀತೆಯ ಹನ್ನರಡನೇಯ ಅಧ್ಯಾಯದಲ್ಲಿ ಬಹಳ ಸುಂದರವಾಗಿ ತಿಳಿಸುತ್ತಾನೆ. *ಯಾರು ಯಾರನ್ನೂ ದ್ವೇಶಿಸುವದಿಲ್ಲ, ಯಾರು ಎಲ್ಲರಿಗೂ ಪ್ರಿಯನರಾಗಿದ್ದಾರೆಯೋ* ಅವರನ್ನು ಭಕ್ತ ಎಂದು ಪರಿಗಣಿಸುವೆ.  "ಭಕ್ತ ಯಾರನ್ನೂ ದ್ವೇಶಿಸುವದಿಲ್ಲ. ಭಕ್ತನಿಗೆ ದ್ಚೇಶಿಗಳು ಯಾರಿಲ್ಲ. ತನ್ನನ್ನು ದ್ವೇಶಿಸುವವನನ್ನೂ ತುಂಬ ಪ್ರೀತಿಸುವವನು" ಇದು ಭಕ್ತನ ಅನೇಕ ಲಕ್ಷಣಗಳಲ್ಲಿ ಒಂದು ಲಕ್ಷಣ.  *ದ್ವೇಶ ಮಾಡುವದಕ್ಕೂ ಭಕ್ತನಾಗದೇ ಇರುವದಕ್ಕೂ ಸಂಬಂಧವೇನು....??* "ದ್ವೇಶ ನಮ್ಮ ಮನಸ್ಸಿನ ಶಕ್ತಿಯನ್ನು ವ್ಯಯ ಮಾಡುವದು. ನಮ್ಮ ಸಮಯವನ್ನು ಹಾಳು ಮಾಡುವದು. ಯಾರನ್ನು ದ್ವೇಶಿಸುತ್ತೇವೆಯೋ ಅವನಿಗಿಂತ ಹೆಚ್ಚು ಕೇಡು ನಮಗೇ ಆಗುವದು." ಈ ಮೂರು ಮುಖ್ಯವಾಗಿ ದ್ವೇಶದಲ್ಲಿ ಇರುವಂತಹದ್ದು...

*ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ*

Image
 *ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ * ಮನುಷ್ಯನಿಗೇ ರೋಗಗಳು ಅನೇಕ. ಪ್ರಾಣಿ ಪಶು ಪಕ್ಷಿಗಳಕ್ಕಿಂತಲೂ ಅಧಿಕ ಮಟ್ಟದಲ್ಲಿ ರೋಗಿಷ್ಠ ಮನುಷ್ಯ. ದೈಹಿಕ ರೋಗಗಳು ಒಂದಾದರೆ ಮನಸ್ಸಿನ ರೋಗಳೂ ತುಂಬ,  ಇವುಗಳ ಮಧ್ಯದಲ್ಲಿ  *ಇನ್ನೊಬ್ಬರ ಅನುಕರಣೆಯಿಂದ* ಬರುವ ರೋಗಗಳೂ ಅತಿ ಭಯಂಕರ ವಾದದ್ದು.   ಪುರುಷ/ಸ್ತ್ರೀ ಗೋಪಿಚಂದನವೋ ಅಥವಾ ಕುಂಕುಮವೋ ಧರಿಸುವದು ಬಿಟ್ಟಿರುತ್ತಾರೆ. ಬಿಡುವದಕ್ಕೆ ಮೂಲವೇನು... ?? ಪರರ ಅನುಕರುಣೆಯೇ... ಹೊರತು ಇನ್ನೇನು ಬೇರೆ ಕಾರಣವೇ  ಇರುವದಿಲ್ಲ. ಕೇವಲ ಇದು ಒಂದು ಉದಾಹರಣೆ ಮಾತ್ರ. ಧರ್ಮ ಬಿಡಲು ಮನುಷ್ಯನಿಗೆ ಧೈರ್ವಿಲ್ಲ. ಅದರೂ ಧರ್ಮವನ್ನು ಬಿಡುತ್ತಾನೆ ಅದಕ್ಕೆ ಒಂದೇ ಕಾರಣ *ಪರರ ಅನುಕರಣೆ.*  ಧರ್ಮ ಮಾಡದ ಅವನು ಚೆನ್ಬಾಗಿ ಇದ್ದಾನೆ, ಹಾಗಿರುವಾಗ ನಾನೇಕೆ ಧರ್ಮವನ್ನು ಮಾಡಬೇಕು..? ಎಂದು ಯೋಚಿಸಿಯೇ ಬಿಟ್ಟಿರುತ್ತಾನೆ. ಹೀಗಾಗುವದು ಏಕೆ..?? ಸ್ವಂತ ವಿಚಾರವಿಲ್ಲದ, ಸ್ವಂತಿಕೆಯೇ ಇಲ್ಲದ ಮನುಷ್ಯ, ಇನ್ನೊಬ್ವರನ್ನು ಅನುಕರಣೆ ಮಾಡುವದನ್ನುಳಿದು ಬೇರೆ ಮಾರ್ಗವಂತೂ ಇರಲಾರದು. ಆಕಾರಣದಿಂದಾಗಿಯೇ ದರ್ಮ ಬಿಡುವ. ಒಂದು ಬಾರಿ ಒಬ್ಬರ ಅನುಕರಣೆಯ ರುಚಿ ಹತ್ತಿತೋ ಮತ್ತೊಮ್ಮೆ ಇನ್ನೊಬ್ಬ ಸಿಗುವ, ಅವನ ಅನುಕರಣೆ ಆರಂಭ. ಮುಗುದೊಮ್ಮೆ ಇನ್ನೊಬ್ಬನ ಅನುಕರಣೆ. ಕೊನೆಗೆ ಇನ್ನೊಬ್ವರ ಅನುಕರಿಸುವದರಲ್ಕೇ ಜೀವನದ ಕೊನೆ.  ಅಂತೆಯೇ ಇಂದು ನಮ್ಮ ಸ್ವಂತಿಕೆ ಹೋಗಿದೆ, ಏಳುವ...