*ಹಿರಿಯರು ಹೇಳಿದ್ದು ಸರಿ ಎಂದು ತಿಳಿದುಕೊಳ್ಳುವಷ್ಟರಲ್ಲಿ, ನೀನು ಹೇಳಿದ್ದು ತಪ್ಪು ಎಂದೇ ಹೇಳುವ ಮಗ ಹುಟ್ಟಿರುತ್ತಾನೆ*
ತಂದೆ ತಾಯಿ ಗುರು ಧರ್ಮ ಶಾಸ್ತ್ರ ಇವರೆಲ್ಲರೂ ನಮ್ಮ ಹಿತೈಷಿಗಳೆ. ಆದರೆ ಇವರು ಹೇಳಿದ್ದು ಸರಿ ಎಂದು ಒಪ್ಪಿಕೊಳ್ಳುವ ಮನೋಭಾವ ಮಾತ್ರ ನನ್ನದಾಗಿಲ್ಲ.
*ಅವರು ಹೇಳುವ ಹಿತ ನನಗೆ ಹಿತ ಎಂದೆನಿಸುವದಿಲ್ಲ. ನಾನು ಹಿತ ಎಂದು ಯಾವದು ತಿಳಿದಿರ್ತೆನೆ ಅದು ಎನಗೆ ಹಿತ ಆಗಿರುವದಿಲ್ಲ.* ಹಾಗಾಗಿ ಏಳು ಬೀಳು, ಸೋಲು, ಹತಾಶೆ, ಅಶಾಂತಿ ಇವುಗಳಲ್ಲಿ ಬಿದ್ದು ಎದ್ದು ನೊಂದು 'ಓಹ್ ಹಿರಿಯರು ಹೇಳಿದ್ದು ಎಷ್ಟು ಸತ್ಯವಾಗಿತ್ತು ಅಲ್ವೆ" ಅದನ್ನು ಪರಿಪಾಲಿಸಬೇಕಿತ್ತು, ಇನ್ನಾದರೂ ಪರಿಪಾಲಿಸೋಣ ಎಂದು ತಿಳಿದುಕೊಳ್ಳುವಷ್ಟರಲ್ಲಿ *ಅಪ್ಪಾ ನಿನಗೇನು ತಿಳಿಯುತ್ತದೆ ತೆಪ್ಪಗೆ ಬಿದ್ದಿರು* ಎಂದು ಹೇಳುವ ಮಗನಾಗಿರುತ್ತಾನೆ.
ಹಿರಿಯರು ಹಿತೈಷಿಗಳೂ ಬೋಧಿಸುತ್ತಾರೆ *ಇಂದು ಏಕಾದಶಿ _ ಉಪವಾಸ ಮಾಡು* ಎಂದು. ನಿಮಗೇನು ತಿಳಿಯತ್ತೆ,ನಂದು ಉಪವಾಸ ಬೇಕಿದ್ದರೆ ನೀವು ಮಾಡಿ ಎಂದು ಗುರಾಯಿಸುತ್ತಾನೆ. ಅವರು ಉಪವಾಸ ಮಾಡಲು ಹೇಳಿದ ಕಾರಣ ಕೋಟಿ ಕೋಟಿ ಪಾಪಗಳ ಪರಿಹಾರಕ್ಕೆ. ಆದರೆ ಆಗ ನಾನು ನನ್ನ ಅಹಂಭಾವದಲ್ಕಿ ಮಾಡಲೇ ಇಲ್ಲ.
ಇಂದು ನಾನು ನನ್ನ ಜೀವನದಲ್ಲಿ ಏನನ್ನೂ ಪಡೆಯಲಿಲ್ಲ. ಯಾಕೆ ಅಂದರೆ ಪಡೆಯುವದಕ್ಕೆ ಇರುವ ಅಡೆತಡೆಗಳನ್ನು ಕಳೆದುಕೊಂಡಿಲ್ಲ. ಇನ್ಮೇಲೆ ಆದರೂ ಕಳೆದುಕೊಳ್ಳೋಣ ಅಂದರೆ ಮಗ ಬಯ್ದು ಸುಮ್ ಕೂಡಿಸುತ್ತಾನೆ. ಹಾಗಾಗಿ ಅಂದೂ ಉಪವಾಸವಿಲ್ಲ, ಇಂದೂ ಉಪವಾಸ ಇಲ್ಲ. ಪಾಪಗಳ ಪರಿಹಾರ ಇಲ್ಲವೇ ಇಲ್ಲ. ಪಾಪಗಳಿದ್ದಾಗ ಇಷ್ಟಾರ್ಥಗಳ ಸಿದ್ಧಿ ಯಾವ ಸೀಮೆಯ ಮಾತು..... ?? ಇದು ಒಂದು ಏಕಾದಶಿಯ ಉದಾಹರಣೆ. ಪ್ರತಿಯೊಂದರಲ್ಲಿಯೂ ಹೀಗೆಯೇ ಆಗಿದೆ.
*ಅಂದು ಹಿರಿಯರ ಮಾತು ಕೇಳದಿರುವದರಿಂದ ಇಂದು ಕಿರಿಯರಿಂದ ಬಯಿಸಿಕೊಳ್ಳುವ ದೌರ್ಭಾಗ್ಯ* ಎದುರಾಗಿದೆ. ಕನಿಷ್ಠ ಇಂದಿನ ಯುವಕರಾದರೂ ಹಿರಿಯರ ಗುರುಗಳ ಶಾಸ್ತ್ರದ ಮಾತುಗಳನ್ನು ಕೇಳೋಣ. ನಮ್ಮ ಜೀವನದಾರಿಯಲ್ಕಿ ಮುಳ್ಳುಗಳೇ ಇಲ್ಲದಿರುವ ಹಾಗೆ, ಹು ಹಾಸಿದ ಮಾರ್ಗವನ್ನು ಮಾಡಿಕೊಳ್ಳೋಣ.
*ಅಂದು ಹಿರಿಯರು ಹೇಳಿದಾಗ ಧರ್ಮ ಮಾಡಲಿಲ್ಲ, ಇಂದು ಕಿರಿಯರು ಧರ್ಮ ಮಾಡಲು ಬಿಡುತ್ತಿಲ್ಲ* ಒಟ್ಟರೆಯಾಗಿ ಧರ್ಮವೇ ಇಲ್ಲದಂತಾಗುವದು ಬೇಡ. ಧರ್ಮ ನಮ್ಮ ಹಿತಕ್ಕೇ ಇದೆ. ಧರ್ಮ ಮಾಡಲು ಹಿಂಜರೆಯುವದು ಬೇಡವೇಬೇಡ. ಧರ್ಮ ಮಾಡೋಣ, ಧರ್ಮದಲ್ಕಿ ಜಾಗೃತಿ ಬೆಳೆಸೋಣ. ತಂದೆ ತಾಯಿ ಗುರು ಶಾಸ್ತ್ರ ಹೇಳಿದ್ದು ೫% ಅರೆ ಕೇಳಲು ಆರಂಭಿಸೋಣ.
*✍🏻✍🏻✍ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments