*ದ್ವೇಶಮಾಡದೇ ಪ್ರೀತಿಸುವವ ನೈಜ ಭಕ್ತ*


 *ದ್ವೇಶಮಾಡದೇ ಪ್ರೀತಿಸುವವ ನೈಜ ಭಕ್ತ*


ಇಂದು "ಭಾವಬೋಧಕಾರರು" ಆದ ಪ್ರಾತಃಸ್ಮರಣೀಯರಾದ, ಅನೇಕ ಟೀಕಾ ಟಿಪ್ಪಣಗಳನ್ನು ರಚಿಸಿರುವ *ಶ್ರೀ ಶ್ರೀರಘೂತ್ತಮತೀರ್ಥರ* ಆರಾಧನಾ ಮಹೋತ್ಸವ". ಅವರು ರಚಿಸಿದ ಗೀತಾಭಾಷ್ಯ ಭಾವಬೋಧ. ಒಂದು ಶ್ಲೋಕದ ಚಿಂತನೆ ಮಾಡುವ ಪ್ರಯತ್ನ ಮಾಡೋಣ. 


*ಭಕ್ತ ಯಾರು.... ???*


ನಾವೆಲ್ಲರೂ ಭಕ್ತರೇ, ಮಹಾ ಭಕ್ತರೇ ಎಂದು ಹೇಳಿಕೊಳ್ಳುತ್ತೇವೆ. ತಕ್ಕಮಟ್ಡಿಗೆ ಭಕ್ತಿಯನ್ನೂ ಮಾಡುತ್ತೇವೆ. ಹೇಳಿಕೊಂಡಷ್ಟು ಅಲ್ಲದಿದ್ದರೂ ಅಲ್ಪ ಸ್ವಲ್ಪ ಭಕ್ತರಂತೂ ಇದ್ದೇವೆ. 


*ಹಾಗಾದರೆ ನೈಜ ಭಕ್ತರಾರು... ??*


*ಅದ್ವೇಷ್ಟಾ ಸರ್ವಭೂತಾನಾಂ....* ಕೃಷ್ಣ ಗೀತೆಯ ಹನ್ನರಡನೇಯ ಅಧ್ಯಾಯದಲ್ಲಿ ಬಹಳ ಸುಂದರವಾಗಿ ತಿಳಿಸುತ್ತಾನೆ. *ಯಾರು ಯಾರನ್ನೂ ದ್ವೇಶಿಸುವದಿಲ್ಲ, ಯಾರು ಎಲ್ಲರಿಗೂ ಪ್ರಿಯನರಾಗಿದ್ದಾರೆಯೋ* ಅವರನ್ನು ಭಕ್ತ ಎಂದು ಪರಿಗಣಿಸುವೆ. 


"ಭಕ್ತ ಯಾರನ್ನೂ ದ್ವೇಶಿಸುವದಿಲ್ಲ. ಭಕ್ತನಿಗೆ ದ್ಚೇಶಿಗಳು ಯಾರಿಲ್ಲ. ತನ್ನನ್ನು ದ್ವೇಶಿಸುವವನನ್ನೂ ತುಂಬ ಪ್ರೀತಿಸುವವನು" ಇದು ಭಕ್ತನ ಅನೇಕ ಲಕ್ಷಣಗಳಲ್ಲಿ ಒಂದು ಲಕ್ಷಣ. 


*ದ್ವೇಶ ಮಾಡುವದಕ್ಕೂ ಭಕ್ತನಾಗದೇ ಇರುವದಕ್ಕೂ ಸಂಬಂಧವೇನು....??*


"ದ್ವೇಶ ನಮ್ಮ ಮನಸ್ಸಿನ ಶಕ್ತಿಯನ್ನು ವ್ಯಯ ಮಾಡುವದು. ನಮ್ಮ ಸಮಯವನ್ನು ಹಾಳು ಮಾಡುವದು. ಯಾರನ್ನು ದ್ವೇಶಿಸುತ್ತೇವೆಯೋ ಅವನಿಗಿಂತ ಹೆಚ್ಚು ಕೇಡು ನಮಗೇ ಆಗುವದು." ಈ ಮೂರು ಮುಖ್ಯವಾಗಿ ದ್ವೇಶದಲ್ಲಿ ಇರುವಂತಹದ್ದು. 


ಈ ಮೂರರಿಂದಲೂ ಹಾನಿ ತನಗೇ ಆಗುತ್ತದೆ. ಸಾಮಾನ್ಯವಾಗಿ "ಜ್ಙಾನಿ ತನಗೆ ಆಗುವ ಹಾನಿಯನ್ನು ತಪ್ಪಿಸಿಕೊಳ್ಳುತ್ತಾನೆ" ಇದು ಒಂದಾದರೆ "ಅಷ್ಟೇ ದೇವರಿಂದ ದೂರಾಗ್ತೇನೆ ಎಂಬ ಕೊರಗೂ ಇರುತ್ತದೆ" ಆದ್ದರಿಂದ  ಅವ ಎಂದೂ ಯಾರನ್ನೂ ದ್ವೇಶಿಸಲು ಹೋಗುವದೆ ಇಲ್ಲ. 


*ಅವನನ್ನು ಯಾರಾದರೂ ದ್ವೇಶಿಸಿದರೆ...??*


"ದ್ವೇಶವನ್ನು ದ್ವೇಶದಿಂದ ಕೊನೆಗಾಣಿಸುವೆ" ಎನ್ನುವದು  ಇಂದಿನ ಸಿದ್ಧಾಂತ. ಅದು ಎಂದಿಗೂ ಕೊಗಾಣುವದಿಲ್ಲ ಇದು ಭಕ್ತನಿಗೆ ಮನವರಿಕೆಯಾದ ವಿಷಯ. 


ಯಾರಾದರೂ ತನ್ನನ್ನು ದ್ವೇಶ ಮಾಡಿದರೆ , ಪ್ರತಿಯಾಗಿ ತಾನೂ ದ್ವೇಶಮಾಡದೇ, *ಇದು ನನ್ನ ಯಾವುದೋ ಒಂದು ತಪ್ಪಿಗೆ ದೇವರು ಕೊಟ್ಟ ಶಿಕ್ಷೆ* ಎಂದೇ ಭಾವಿಸಿ ಪ್ರೀತಿಯಿಂದ ಸ್ವೀಕರಿಸಿಬಿಡುವ. ಹೀಗೆ ದ್ವೇಶಿಗಳನ್ನೂ ಪ್ರೀತಿಯಿಂದ ಕಾಣುವ. 


ಯಾರನ್ನೇ ದ್ಚೇಶಿಸುವದು ಎಂದರೆ ದೇವರಿಂದ ಅಷ್ಟು ಹೊತ್ತು ಕಾಲ ದೂರವಿದ್ದ ಹಾಗೆಯೇ. ದೇವರ ಸನಿಹವೇ ಇದ್ದು, ದೇವರ ಗುಣ ರೂಪ ಕ್ರಿಯೆಗಳನ್ನು ಚಿಂತಿಸುತ್ತಾ ಎಷ್ಟು ಸಮಯ ಕಳಿಯುತ್ತಾನೆಯೋ ಅವ ಭಕ್ತ. ಹಾಗಾಗಿ *ಭಕ್ತ ಯಾರನ್ನೂ ದ್ವೇಶಿಸುವದಿಲ್ಲ‌. ಯಾರನ್ನೂ ಯಾರು ದ್ವೇಶಿಸುವದಿಲ್ಲವೋ ಅವನೇ ಭಕ್ತ.*  ಇನ್ನು ನಾವು ವಿಚಾರಿಸಬೇಕು ನಾವೆಂತಹ ಭಕ್ತರು ಎಂದು......


ಇಂದಿನ ಆರಾಧ್ಯ ಗುರುಗಳಾದ ಶ್ರೀರಘೂತ್ತಮತೀರ್ಥರ ಅನುಗ್ರಹದಿಂದ ಅನುವಾದ ಮಾಡುವ ಪುಟ್ಟ ಪ್ರಯತ್ನ. ಅವರಂತರ್ಯಾಮಿ ಶ್ರೀಮದಾಚಾರ್ಯರು, ಶ್ರೀಕೃಷ್ಣ ಸಂತೃಪ್ತನಾಗಲಿ. ಸಂತೃಪ್ತರಾದ ಗುರುಗಳು ದೇವರು *ಯಾರನ್ನೂ ದ್ವೇಶಿಸದ ಹಾಗೆ ನಮ್ಮನ್ನು ಕ್ರಿಯೇಟ್ ಮಾಡಲಿ* ಎಂದು ಪ್ರಾರ್ಥಿಸುತ್ತಾ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುವೆ.


*✍🏽✍🏽ನ್ಯಾಸ*

ಗೋಪಾಲದಾಸ

ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*