*ವಿಜಯದಾಸರ ದೃಷ್ಟಿಯಲ್ಲಿ "ಶ್ರೀಮಟ್ಟೀಕಾಕೃತ್ಪಾದರು"*
*ವಿಜಯದಾಸರ ದೃಷ್ಟಿಯಲ್ಲಿ "ಶ್ರೀಮಟ್ಟೀಕಾಕೃತ್ಪಾದರು"* ಜ್ಙಾನ ಹಾಗೂ ಭಕ್ತಿ ಮಾರ್ಗಗಳನ್ನು ತೋರಿದ, ಅನಾದಿ ಸತ್ಸಂಪ್ರದಾಯಪರಂಪರಾ ಪ್ರಾಪ್ತವಾದ ಭವ್ಯವಾದ ದ್ವೈತಸಿದ್ಧಾಂತವನ್ನು ಸ್ಥಾಪಿಸಿದ ಪ್ರತಿಷ್ಠಾಪಿಸಿದ ಮಹಾಮಹಿಮರು ನಮ್ಮ ಶ್ರೀಮದಾಚಾರ್ಯರು. ಶ್ರೀಮದಾಚಾರ್ಯರು ರಚಿಸಿದ ಮೂಲಗ್ರಂಥಗಳನ್ನು ವ್ಯಾಖ್ಯಾನಿಸಿ, ಟೀಕಾರಚಿಸಿ ಸಾಮಾನ್ಯ ಜನರಿಗೆ ತಿಳಿಸಿ, ಈ ಭವ್ಯ ಸಿದ್ಧಾಂತಕ್ಕೆ *ಶ್ರೀಮನ್ಯಾಯಸುಧಾ ತತ್ವಪ್ರಕಾಶಿಕಾ* ಮೊದಲಾದ ಉದ್ಗ್ರಂತಗಳನ್ನು ರಚಿಸಿ ಭವ್ಯವಾದ ಕೊಟೆಗೊಡೆಯನ್ನು ನಿರ್ಮಿಸಿ, ಕೊಟೆಗೋಡೆಯ ರಕ್ಷಣೆಗೆ ನಿಂತ ಸೇನಾಧಿಪತಿ ಎಂದೆನಿಸಿದವರು ಇಂದಿನ ಆರಾಧ್ಯ ಪುರುಷರಾದ, ಮಲಖೇಡ ನಿವಾಸಿಗಳಾದ *ಶ್ರೀಮಟ್ಟೀಕಾಕೃತ್ಪಾದರು.* ಶ್ರೀ ವ್ಯಾಸತೀರ್ಥರು ಶ್ರೀಶ್ರೀಪಾದರಾಜರು ಶ್ರೀವ್ಯಾಸರಾಜರು ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಘೂತ್ತಮರು ಶ್ರೀರಾಘವೆಂದ್ರ ಪ್ರಭುಗಳು, ಶ್ರೀವೇದೇಶತೀರ್ಥರು, ಶ್ರೀವಿಷ್ಣುತೀರ್ಥರು, ಶ್ರೀಯಾದವಾರ್ಯರಿಂದಾರಂಭಿಸಿ ಸಕಲ ಜ್ಙಾನಿಗಳೂ, ಪುರಂದರದಾಸ ವಿಜಯದಾಸಾದಿ ಸಕಲ ದಾಸ ವರೇಣ್ಯರೂ " ಜ್ಙಾನಿಗಳು" ಎಂದಾಗಿದ್ದು *ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹ, ಟೀಕಾ ಗ್ರಂಥಗಳ ಆಮೂಲಾಗ್ರ ಅಧ್ಯಯನ* ಇವುಗಳಿಂದಲೇ. ಇದರಲ್ಲಿ ಕಿಂಚಿತ್ತೂ ಸಂಶಯ ಆ ಜ್ಙಾನಿಗಳಿಗೂ ಇಲ್ಲ. ನಮಗೂ ಇಲ್ಲ. ಇದೆಲ್ಲವೆನ್ನು ಸೂಕ್ಷ್ಮವಾಗಿ ಗಮನಿಸಿಯೇ ವಿಜಯದಾಸರು *ಸೃಷ್ಟಿಯೊ...