ಬಸುರಿಯ ಹೊಟ್ಟೆಗೆ, ಪಟಾಕೆ ತಿನಿಸಿದರಾ ನೀಚರು.....*
*ಬಸುರಿಯ ಹೊಟ್ಟೆಗೆ, ಪಟಾಕೆ ತಿನಿಸಿದರಾ ನೀಚರು.....*
ಕೃತಯುಗದಲ್ಲಿ ಯಾವ ಆನೆಯನ್ನು ಸ್ವಯಂ ದೇವರು ಬಂದು ರಕ್ಷಿಸಿದನೋ, ಇಂದು ದೇವರನ್ನು ಮರೆತ ನಾವು ಈ ಕಲಿಯುಗದಲ್ಲಿ ಒಂದಾನೆಯನ್ನು ಉಳಿಸಿಕೊಳ್ಳಲಾಗಲಿಲ್ಲ.
ಕಾಡಲ್ಲೇ ಇರುವ ಪ್ರಾಣಿಗಳಿಗೆ ಆಶ್ರಯವಾದ ಕಾಡನ್ನು ನಾಶ ಮಾಡಿದೆವು. ನಾಶ ಮಾಡುವಾಗ ಸರ್ಕಾರವೇ ಯೋಚಿಸಲಿಲ್ಲ. ಅನುಮತಿಯನ್ನೂ ಕೊಟ್ಟಿತು. ಅನ್ನವಿಲ್ಲದ ಮನುಷ್ಯ ಅನ್ನಕ್ಕಾಗಿ ಈ ದೇಶ ಬಿಟ್ಟು ಹೋರ ಹೋಗಿ ಬದುಕಿದ. ಅನ್ನ ರುಚಿಯದೆಯೋ ಇಲ್ಲೋ ತಿಳುವಿಕೆ ಇದ್ದವ ಕೆಟ್ಟ ಅನ್ನ ದುಷ್ಟ ಅನ್ನ ತಿಂದು ಹಾಳಾದ. ಆದರೆ ಈ ಮುಗ್ಧ ಪ್ರಾಣಿ.. ?? ಏನು ಮಾಡಬೇಕು..??
ಆಶ್ರಯ ಕಾಡು ಹೋಯಿತು. ತಿನ್ನಲು ಅನ್ನವಿಲ್ಲ. ಜೊತೆಗೆ ಎರಡು ಹೊಟ್ಟೆಗೆ ಆಗುವಷ್ಟು ಅನ್ನಬೇಕು. ಸಣ್ಣ ಹೊಟ್ಟೆಯಲ್ಲ. ಹಸಿದ ಹೊಟ್ಟೆ ತಣ್ಣಗೆ ಮಾಡಿಕೊಳ್ಳಲು ನಾಡಿಗೆ ಬಂದರೆ, ಒಂದು ಮುಗ್ಧ ಬಸುರಿ ಆನೆಗೆ ಅನ್ನ ಕೊಡದಷ್ಟು ಹೊಲಸು ಜನರು ಒಂದೆಡೆ ಆದರೆ... ಅನ್ನದಲ್ಲಿ ಹಣ್ಣಿನಲ್ಲಿ ಪಾಟಾಕಿ ಇಡುವ ನೀಚರು ಮತ್ತೊಂದೆಡೆ.
*ಹಣ್ಣನಲ್ಲಿ ಪಟಾಕಿ ಇಟ್ಟರೆ ನೀಚರು...*
ಅನ್ನ ಕೊಡುವಷ್ಟು ಒಳ್ಳೆಯವರಾಗದಿದ್ದರೂ ಪರವಾಗಿಲ್ಲ, *ಹಣ್ಣಿನಲ್ಲಿ ಪಟಾಕಿ ಇಡುವಷ್ಟು ನೀಚರಾಗಿದ್ದಾರೆ* ಈ ನರ ಹಂತಕರು ಎನ್ನುವದು ಊಹಿಸಲೂ ಜೀರ್ಣಿಸಿಕೊಳ್ಳಲೂ ಆಗುತ್ತಿಲ್ಲ. ಆದರೆ ಇದು ಸತ್ಯ.
*ಪಾಟಾಕಿಯ ವಾಸನೆಯೇ ತಡಿಯದ ನಾವು, ಪಟಾಕಿಯನ್ನೇ ನುಂಗಿದ ಆನೆಯ ದುಃಖ ಊಹಿಸಿಕೊಳ್ಳಬೇಕು...*
ಹಣ್ಣಿನಲ್ಲಿ ಪಟಾಕಿ ಇಟ್ಟು ತಿನಿಸಿದವನಿಗೆ ನಿಜವಾಗಿಯೂ ಯಾವ ಪ್ರಾಣಿಯ ಹೊಲಸೂ ತಿನಿಸಿದರೂ ತಪ್ಪಾಗಲಿಕ್ಕಿಲ್ಲ.
ಆ ಆನೆಯ ಪಟ್ಟ ಕಷ್ಟ, ತನ್ನೊಡಲಿನಲ್ಲಿರುವ ಕೂಸನ್ನು ಉಳಿಸಿಕೊಳ್ಳಲು ಪಟ್ಟ ಕಷ್ಟ ನಾವೂ ಸ್ವಲ್ಪ ಊಹಿಸಿಕೊಂಡು ನೋಡಬೇಕು. ಪಟಾಕಿಯ ವಾಸನೆ ತಡೆದು ಕೊಳ್ಳದ ನಾವು, ಪಟಾಕಿಯನ್ನೇ ನುಂಗಿದಾಗ ಏನು ಅವಸ್ಥೆ ಬಂದಿರಬಹುದು... ??? ಆ ಆನೆ ಎಷ್ಟು ಒದ್ದಾಡಿರಬಹುದು.. ನೆನಿಸಿದರೆ ಕಣ್ಣಲ್ಲಿ ನೀರಿಳಿಯದೇ ಇರುವದಿಲ್ಲ... ರಕ್ತ ಕುದಿಯದೇ ನಿಲ್ಲದು.
*ತಂಪಿಗಾಗಿ ಸುತ್ತಾಡಿದ ಬಸುರಿ ಮುಗ್ಧ ಆನೆ...*
ದುಷ್ಟರು ನೀಚರು ಕೊಟ್ಟ ಪಟಾಕಿಯಿಂದ ಸಹಿತವಾದ ಹಣ್ಣು ತಿಂದ ಮುಗ್ಧ ಆನೆ, ಬೆಂಕಿಯಂತೆ ಹೊಟ್ಟೆಯಲ್ಲಿ ಉರಿಯುವ ವಿಶಾಗ್ನಿಯನ್ನು ನಂದಿಸಿಕೊಳ್ಳಲು ಊರೆಲ್ಲ ತಿರುಗಿದೆ, ಸುತ್ತಾಡಿದೆ, ಕೊನೆಗೆ ಕೆರೆಗೆ ಇಳಿದು ಸಂಪೂರ್ಣ ದೇಹ ನೀರನಲ್ಲಿ ಮುಳುಗುವ ಹಾಗೆ, ನೀನಲ್ಲಿ ಮುಳುಗಿನಿಂತಿದೆ, ಎಂದರೆ ಎಷ್ಟು ಒದ್ದಾಡಿರಬಹುದು... ಆ ಸಂಕಟವೇನೂ...
ಒಂದೆಡೆ ಕೂಸು, ಇನ್ನೊಂದೆಡೆ ವಿಶಾಗ್ನಿ, ತನ್ನ ಪ್ರಾಣ ಒಂದೆಡೆ, ಮತ್ತೊಂದೆಡೆ ಕೂಸಿನ ಪ್ರಾಣ.... ಯಾವದನ್ನೂ ಉಳಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿ. ... ಮನುಷ್ಯರ ದುರ್ವರ್ತನೆಯ ಪರಾಕಾಷ್ಠೆ 😥😭😭😥😥
*ನೀಚರಿಗೆ ಆಗುವ ಸ್ಥಿತಿ...*
ಆ ನೀಚರಿಗೆ ಸರ್ಕಾರ ನ್ಯಾಯಾಲಯ ಏನು ಶಿಕ್ಷೆ ಕೊಡತ್ತೋ ಗೊತ್ತಿಲ್ಲ. ಅವರನ್ನು ಹಿಡಿದು ಜೈಲಿಗಾದರೂ ಹಾಕುತ್ತರೆಯೋ ಇಲ್ಲೋ ತಿಳಿಯದು. ಎಷ್ಟು ಜನ ಸೇರಿ ಆ ನೀಚರನ್ನು ರಕ್ಷಿಸಲು ನಿಂತಿದಾರೆಯೋ ಗೊತ್ತಿಲ್ಲ. ಆದರೆ.... ಒಂದಂತೂ ನಿಜ... *ಸಮಗ್ರ ಭಾರತದ ನೂರಾಮೂವತ್ತು ಕೋಟಿ ಜನರ ಶಾಪವಂತೂ ಇದ್ದೇ ಇದೆ.* ಈ ಜನ್ಮದಲ್ಲಿಯೇ ಬದುಕಿದಲ್ಲಿಯೇ ನರಕಯಾತನೆ ಅನುಭವಿಸಿಯೇ ತಿರುತ್ತಾರೆ. ಸತ್ತಮೇಲಿನ ದುಃಖ ನರಕ ತಮಸ್ಸು ಯಾವ ಮಟ್ಟದಲ್ಲಿ ಇರಬಹುದು ಎಂದು ಯೋಚಿಸಲಾಗದು. ಇದು ನೂರಕ್ಕೆ ನೂರರಷ್ಟು ನಿಜ.
*ಇಂದು ಎಚ್ಚುತ್ತಗೊಳ್ಳಲೇಬೇಕು...*
ಆನೆಯನ್ನು ಕೊಂದಾಗ ಆಗುವ ದುಃಖ ಅತ್ಯಂತ ನಿವೇ. ಆದರೆ ನಿತ್ಯವೂ ನೂರಾರು ವಾಇರಾರು ಲಕ್ಷ ಲಕ್ಷ ಆಕಳುಗಳ ಮಾರಣ ಹೋಮ ನಡಿಯುತ್ತಾ ಇದೆ. ಆ ಎಚ್ಚರವೂ ಎಲ್ಲರಿಗೂ ಇರಲೇಬೇಕು.
ಅದರಂತೆಯೇ ಆಕಳು, ಆನೆ, ಕೋಳಿ, ಮೀನು, ಮೊದಲು ಮಾಡಿ ಅನೇಕ ಪ್ರಾಣಿಗಳನ್ನು ಅನಾಯಾಸೇನ ಕೊಂದು ತಿಂತಾರೆ. ಅವುಗಳ ಕೋಪದ ಪ್ರಭಾವದಿಂದಲೇ ನೂರಾರು ವೈರಸ್ ಗಳಿಗೆ ಕಾರಣವಾಗಿವೆ. ಇನ್ನೂ ಘೋರವಾದ ವೈರಸ್ ಗಳು ದಾಳಿ ಮಾಡುವವು ಎಂದೂ ನುರಿತವರು ಹೇಳುತ್ತಿದ್ದಾರೆ.
*ಇಂದು ನಾವು ತಿದ್ದಿಕೊಳ್ಳದಿದ್ದರೆ, ಎಲ್ಲರೂ ಅನುಭವಿಸುವದೂ ಅತ್ಯಂತ ನಿಶ್ಚಿತ.*
*✍🏽✍🏽...ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.
Comments