*ವಿಶ್ವ ಕಿಡ್ನಿ (kidney) ದಿನ - ದೇವರ ಕಾರುಣ್ಯ*

 

*ವಿಶ್ವ ಕಿಡ್ನಿ (kidney) ದಿನ*


ದೇವರ ಸೃಷ್ಟಿಯೇ ತುಂಬ ವಿಚಿತ್ರ. ಅದರಲ್ಲೂ ಪೂರ್ಣವಾದ ಸೃಷ್ಟಿ ಪುರುಷನ (ಪುರುಷ ಸ್ತ್ರೀ) ಸೃಷ್ಟಿ. ಹಾಗಾಗಿ ಪುರುಷ ಸೃಷ್ಟಿ ತುಂಬ ಆಶ್ಚರ್ಯತಮವಾದ ಸೃಷ್ಟಿ. 


ಪುರುಷನಲ್ಲಿ ಇರುವ ಯಾವ ಅಂಗಾಗಗಳೂ ಪುರುಷ ಬೇಡಿ ಪಡೆದದ್ದು ಅಲ್ಲ. ಕರುಣೆ ಮಾಡಿ ದೇವನೇ ಕೊಟ್ಟದ್ದು. ಒಂದೊಂದು ಅಂಗಾಗಗಳ ಮಹತ್ವ, ಆವುಗಳ ಆವಶ್ಯಕತೆ, ಇತ್ಯಾದಿಗಳನ್ನು ತಿಳಿದು ಕೊಳ್ಳುವದು ಸಾಮಾನ್ಯನಾದ ಈ ಕುನ್ನಿ ಮಾನವನಿಗೆ ಅಸಾಧ್ಯವೇ. 


ತಲೇಯಿಂದ ಆರಂಭಿಸಿ ಪಾದದವರೆಗೂ ಒಂದು ಶಿಸ್ತು ಇದೆ. ಅದ್ಭುತತೆ ಇದೆ. ಆಶ್ಚರ್ಯ ಅಡಗಿದೆ. ಅನಿವಾರ್ಯತೆ ತುಂಬಿದೆ. ತಿಳಿದವರಿಗೆ ಜ್ಙಾನಿಗಳಿಗೆ ಈ ಪಿಂಡಾಂಡ ಬ್ರಹ್ಮಾಂಡವೇ ಆಗಿದೆ. 


*ಮಂಗ್ಯನ ಕೈಲಿ ಮಾಣಿಕ್ಯ ಕೊಟ್ಟಂತೆ...*


ಉಚಿತವಾಗಿ ದೇವ ಒಂದೊಂದು ಅಂಗಾಂಗಗಳನ್ನು ಕೊಟ್ಟಿದ್ದಾನೆ. ಅವುಗಳ ಸರಿಯಾದ ಉಪಗಗಳನ್ನೂ ತಿಳಿಸಿದ್ದಾನೆ. ಸರಿಯಾಗಿ ಉಪಯೋಗಿಸಿಕೊಳ್ಳುವ ಕೌಶಲ ಎಲ್ಲರಿಗೂ ಕೊಟ್ಟಿಲ್ಲ. ಹಾಗಾಗಿ *ಆ ಅಂಗಾಗಗಳ ಶಕ್ತಿ, ಉಪಯುಕ್ತತೆ, ಅನಿವಾರ್ಯತೆ, ಮಹತ್ವ, ಗೋತ್ತು ಆಗುವದೇ ಇಲ್ಲ. ಉಚಿತವಾಗಿ ಕೊಟ್ಟದ್ದಕ್ಕಾಗಿ ಬಳಿಸಿಕೊಳ್ಳುವ ರೀತಿಯೂ ಗೊತ್ತಾಗುವದಿಲ್ಲ. ಎರ್ರಾಬಿರ್ರಿ ಬಳಿಸಿಕೊಳ್ಳುತ್ತಾನೆ. 


ಆದರೇ.......


*ಈ ಅಂಗಾಗಳ ವೈಫಲ್ಯಗಳು,  ಅಪ್ಪಳಿಸಿದಾಗಲೇ, ತಮ್ಮ ಶಕ್ತಿ ಸಾಮರ್ಥ್ಯಕಳೆದುಕೊಂಡಾಗಲೇ, ರೋಗಗಳಗೆ ಬಲಿಯಾದಾಗಲೇ ಅಂಗಾಂಗಗಳ ಮಹತ್ವ ಶಕ್ತಿ ಉಪಯೋಗ ಇತ್ಯಾಗಿಳ ಅರಿವು ಮೂಡುತ್ತದೆ.* ಅಷ್ಟರಲ್ಲಿ ಕಾಲ ಮಿಂಚಿರುತ್ತದೆ. 


ಪ್ರಕೃತವಾಗಿ ಇಂದು *ಮೂತ್ರಪಿಂಡ - kidney ದಿನ.* ಕೊಟ್ಯಾವಧಿ ಬೆಲೆಗೂ ಸಿಗದು ಈ ಕಿಡ್ನಿ. ಈ ಕಿಡ್ನಿಯನ್ನು ದೇವರು ಆ ಪುಟ್ಟ ತಾಯಿಯ ಉದರದಲ್ಲಿ ಗರ್ಭದಲ್ಲಿ, ಈ ಸಣ್ಣದಾದ ಶರೀರ, ಈ ಶರೀರದಲ್ಲಿ ಪುಟ್ಟದಾದ ಚೊಕ್ಕದಾದ ಅದ್ಭುತವಾದ ಆಶ್ಚರ್ಯತಮವಾದ ಈ ಕಿಡ್ನಿಯನ್ನು ಹೇಗೆ ಸೃಷ್ಟಿ ಮಾಡಿದ ?? ಎಂಬುವದೇ ಒಂದು ಆಶ್ಚರ್ಯ. ಇಷ್ಟು ಬೆಲೆ ಬಾಳುವ ಈ ಕಿಡ್ನಿಯನ್ನು ಉಚಿತವಾಗಿ ಎಲ್ಲರಿಗೂ ಕೊಟ್ಟ ಹೇಗೆ ?? ಅದು ಇನ್ನೂ ಆಶ್ಚರ್ಯ. 


ಸುಲಭದಲ್ಲಿ ಕಿಡ್ನಿಯು ತನ್ನ ಕಾರ್ಯ ತಾನು ಮಾಡ್ತಾ ಇರುವಾಗ, ಇದೊಂದು ವಸ್ತು ನಮ್ಮಲ್ಲಿ ಇದೆ, ಇದು ತುಂಬ ಅಪರೂಪದ್ದು, ಇದರಿಂದ ನಮ್ಮ ಶರೀರ ಇಂದ್ರಿಯ ಮನಸ್ಸುಗಳಿಗೆ ಅತ್ಯುಪಯುಕ್ತ. ಇದೊಂದು ಇದ್ದರೆ ನಾ ಸುಖವಾಗಿ ನೂರುಕಾಲ ಬದುಕಬಹುದು ಎಂಬ ಅತಿ ಸಣ್ಣ ವಿಚಾರವೂ ನಮ್ಮಲ್ಲಿ ಒಂದು ಕ್ಷಣವೂ ಬಂದು ಹೋಗುವದಿಲ್ಲ. ಸೂಕ್ಷ್ಮಾತಿಸೂಕ್ಷ್ಮ ಮಹತ್ವ ತಿಳಿದು ಜೋಪಾನಮಾಡಿಕೊಳ್ಳುವದು ಮುಂದಿನದು. 


ಆದರೇ....


ಈ ಕಿಡ್ನಿ ಒಮ್ಮೆ ದೈವದವಶಾತ್ ತನ್ನ ಕೆಲಸಗಳನ್ನು ಮಾಡುವದನ್ನು ನಿಲ್ಲಿಸಿತು ಎಂದಾದರೆ, ತನ್ನ functions ಗಳಲ್ಲಿ ಏನುಪೇರು ಮಾಡಿಕೊಂಡಿತೂ ಎಂದಾದರೆ ಆಗ ಅರ್ಥವಾಗುವದು ಎಂಥ ಅಮೂಲ್ಯವಾದ ವಸ್ತುವನ್ನು ದೇವರು ದಯಪಾಲಿಸಿದ್ದ... ಈ ಅಮೂಲ್ಯವಸ್ತು ಹೇಗೆ ಕೆಡಿಸಿಕೊಂಡೆ.. ಇತ್ಯಾದಿ. 


ಯಾವುದೇ ವಸ್ತು ಒಮ್ಮೆ ಕೆಡಲು ಆರಂಭಿಸಿತು ಎಂದಾದರೆ ಅದನ್ನು  ಪುನಹ ಸರಿ ದಾರಿಗೆ ತರುವದು ತುಂಬನೇ ಕಷ್ಟ. 


ಸರಿಮಾಡಲು ಸಾವಿರ ಸಾವಿರ ಬಲಗಳೂ ಬೇಕಾಗಬಹುದು. ಸಾವಿರ ಸಾವಿರ ಬಲಗಳೂ ಸಾಕಾಗದಿರಬಹುದು. ಮೊಲನೇಯದ್ದು ದಾರಿತಪ್ಪಿದೆ ಎಂಬ ತಿಳುವಳಿಕೆಯ ಬಲ, ಸುಧಾರಿಸಿಕೊಳ್ಳುವೇ ಎಂಬ ಮನೋ ಬಲ, ಪ್ರಯತ್ನಬಲ,  ಛಲ ಹಠ ಬಲ, ಶಕ್ತಿ, ಸಾಮರ್ಥ್ಯಗಳ ಬಲ, ನಿರಂತರ ಹೋರಾಟ, ಮನೋಬಲ, ಅಪಾರವಾದ ಧನಬಲ, ರಾಶಿ ರಾಶಿ ಪುಣ್ಯಬಲ, ಅನನ್ಯಗತಿಕನಾದ ದೈವೀಬಲ, ನುರಿತ ವಿಶ್ವಾಸಾರ್ಹ ಪ್ರಚಂಡ ಬುದ್ಧಿವಂತರಾದ ವೈದ್ಯರಬಲ, ನಮ್ಮ ಪರವಾಗಿ ಅಖಂಡವಾಗಿ ದೇವರಲ್ಲಿ ಪ್ರಾರ್ಥಿಸುವ ಗುರುಗಳ ಬಲ, ಆ ಆ ಅಂಗಾಗಗಳ ಅಭಿಮಾನಿಗಳಾದ ದೇವತಾ ಬಲ, ಹೀಗೆ ನೂರಾರು ಸಾವಿರಾರು ಬಲಗಳನ್ನು ಬಳಿಸಿಕೊಳ್ಳಬೇಕಾಗುತ್ತದೆ. 


ಆಗಲೇ ಅರ್ಥವಾಗುವದು ಈ ಅಂಗಾಗಳ ಈ kidny ಕಿಡ್ನಿಯ ಮಹತ್ವ ಏನಿದೆ, ಎಷ್ಟು ಅಪೂರೂಪದ್ದಾಗಿದೆ, ಎಷ್ಟು ಕರುಣೆ ಮಾಡಿ ದೇವ ಸುಲಭವಾಗಿ ನಮಗೆ ದಯಪಾಲಿಸಿದ್ದಾನೆ ಎಂಬ ಅರಿವು ಸ್ಪಷ್ಟವಾಗಿ ಮೂಡುತ್ತದೆ. ದೇವರ ಅಪಾರ ಮಹಿಮೆ ಅರ್ಥವಾಗುತ್ತದೆ. ದೇವರಲ್ಲಿ ಭಕ್ತಿ ಉಜ್ವಲವಾಗುತ್ತದೆ. 


ಅಮೂಲ್ಯವಾದ ಕಿಡ್ನಿಯನ್ನು ಉಚಿತವಾಗಿ ದಯಪಾಲಿಸಿದ ದೇವನಿಗೆ ಅನಂತ ನಮೋನಮನಗಳು. ನಮ್ಮ ನಿರ್ಲಕ್ಷ್ಯತೆಯಿಂದ ಕೆಡಿಸಿಕೊಂಡಾಗ ಉಪಚಾರಕ್ಕೆ ಒದಗುವ, ಪ್ರೀತಿಯಿಂದ ನೋಡಿಕೊಳ್ಳುವ, ಆರೈಕೆಯಿಂದ ಉಪಚರಿಸುವ, ಸೂಕ್ಷ್ಮಾತಿಸೂಕ್ಷ್ಮ ಕಾರ್ಯಗಳನ್ನು ಬೇಗ ತಿದುಕೊಂಡು, ಸರಿಯಾದ trwatment ಕೊಡುವ ವೈದ್ಯರಿಗೂ ನಮಸ್ಕಾರಗಳು ಹಾಗೂ ಶುಭಾಶಂಸನೆಗಳು......🪷🪷🌹🌹🌹 


✍🏽✍🏽ನ್ಯಾಸ

ಗೋಪಾಲ ದಾಸ

ವಿಜಯಾಶ್ರಮ, ಸಿರವಾರ.

Comments

Popular posts from this blog

*ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ ಅರ್ಘ್ಯ ಸಮರ್ಪಣ - ಮಂತ್ರಗಳು*

ನಾಗ ಸ್ತೋತ್ರಮ್

ಇಂದು ಚಂದ್ರಗ್ರಹಣ - ಪರ್ವಕಾಲ*