*ವಿಶ್ವ ನಿದ್ರಾ ದಿನ - ನಿದ್ರಾ ಪ್ರಿಯರಿಗೊಂದು ಶುಭಾಷಯ


 *ವಿಶ್ವ ನಿದ್ರಾ ದಿನ*


ನಿದ್ರಾ ಪ್ರಿಯರಿಗೆ ವಿಶ್ವ ನಿದ್ರಾದಿನದ ಶುಭಾಷಯಗಳು....🌹🌹🪷


ನಿದ್ರೆ ಇದು ದೇವರು ಕೊಟ್ಟ ಅಮೂಲ್ಯವಾದ ಸ್ಥಿತಿ. ದೈನಂದಿನವಾದ ಅವಶ್ಥೆಗಳು ಮೂರು. ೧) ಜಾಗ್ರದವಸ್ಥೆ, ೨) ಸುಷುಪ್ತಾವಸ್ಥೆ ೩ ) ಸ್ವಪ್ನಾವಸ್ಥೆ. ದೇವರು ಏನು ಕೊಡ್ತಾನೆ ಅದರಲ್ಲಿ ಒಂದು ಮಹತ್ವವಿದೆ. ಅಮೂಲ್ಯತೆ ಇರುತ್ತದೆ. ಅನಿವಾರ್ಯತೆಯೂ ಹೆಚ್ಚಿರತ್ತೆ. ಕೊನೆಗೆ ಸಾಧನೋಪಯೋಗಿಯೂ ಆಗಿರುತ್ತದೆ. ಇದುವೇ ದೇವರ ಕೊಡುಗೆಯಾಗಿರುತ್ತದೆ. 


*ನಿದ್ರೆ ಇದೊಂದು ಅದ್ಭುತ*


ನಿದ್ರೆ ಇಲ್ಲದೆ ಜಾಗ್ರತ್ ಅವಸ್ಥೆ ಇಲ್ಲ. ನಿದ್ರೆ ಇಲ್ಲದೆ ಉತ್ಸಾಹವಿಲ್ಲ. ನಿದ್ರೆಯಿಲ್ಲ ಸಮಾಧಾನವಿಲ್ಲ. ನಿದ್ರೆಯಿಲ್ಲದೆ ಜೀರ್ಣವಾಗುವದಿಲ್ಲ. ನಿದ್ರೆಇಲ್ಲದೆ ದೇಹದ ಬೆಳವಣಿಗೆ ಇಲ್ಲ. ನಿದ್ರೆ ಇಲ್ಲದೆ ಸ್ವಪ್ನಗಳು ಇಲ್ಲ. ನಿದ್ರೆ ಇಲ್ಲದೆ ಲವಲವಿಕೆ ಇಲ್ಲ. 


ನಿದ್ರೆಯಲ್ಲಿ ಸಮಾಧಾನವಿದೆ. ನಿದ್ರೆಯಲ್ಲಿ ಶಾಂತತೆ ಇದೆ. ನಿದ್ರೆಯಲ್ಲಿ ಅಪೂರ್ವವಾದ ಸುಖವಿದೆ. ಸಂಪೂರ್ಣ ನಿದ್ರೆ ಹತ್ತೇನಿಮಿಷವಾದರೂ ಎಂಟು ಗಂಟೆ ದುಡಿಯುವ ಉತ್ಸಾಹವಿದೆ. ನಿದ್ರೆಯಲ್ಲಿ ದೇವರ ಆಲಿಂಗನವಿದೆ. ನಿದ್ರೆಯಲ್ಲಿಯೇನೆ ಸ್ವರೂಪದ ಸುಖಾಭಿವ್ಯಕ್ತಿ ಇದೆ. ಅಂತೆಯೇ ನಿದ್ರೆಯೇ ಪರದೇವತೆ. 


ಒಬ್ಬ ಕವಿ ಬಹಳ ಸುಂದರವಾಗಿ ಹಾಸ್ಯ ಮಾಡ್ತಾನೆ.. 


೧) ಭೋಗೇ ರೋಗಭಯಂ. ೨) ಕುಲೇ ಚ್ಯುತಿ ಭಯಂ, ೩) ಪಾಠೇ ಪರೀಕ್ಷಾದ್ಭಯಂ, ೪) ಸರ್ವಂ ವಸ್ತು ಭಯಾನ್ವಿತಂ ಭುವಿ ನೃಣಾಂ *ನಿದ್ದಿಮೇವಾಭಯಮ್* ಎಂದು. 


ಬಹಳ ಭೋಗಿಯಾದರೆ ರೋ್ದ ಭಯವಿದೆ, ಕುಲದಲ್ಲಿ ನಾಶದ ಭಯವಿದೆ, ಹಣದಲ್ಲಿ ಚೋರರಭಯವಿದೆ. ಎಲ್ಲ ವಸ್ತುಗಳಲ್ಲೂ ಒಂದಿಲ್ಲ ಒಂದು ಭಯ ಅಂಟಿಕೊಂಡಿರುತ್ತದೆ. ಆದ್ದರಿಂದ ನಿದ್ದಿಯಲ್ಲಿ ಇದ್ದಮನುಷ್ಯನಿಗೆ ಯಾವ ಭಯವೂ ಇರುವದಿಲ್ಲ ಆದ್ದರಿಂದ ನಿದ್ರೆ ಪರದೈವತ ಎಂದು ಹಾಸ್ಯ ಮಾಡ್ತಾನೆ. 


ನಿದ್ರೆಗೆಡುವದರಿಂದ ಏನು ಅನರ್ಥವಿದೆ ? 


ನಿದ್ರೆಗೆಡುವದರಲ್ಲಿ ಏನು ಅನರ್ಥವಿದೆ ಎಂಬ ಪ್ರಶ್ನೆಗೆ ಒಂದೇ ಉತ್ತರ ಎಲ್ಲ ಅನರ್ಥಗಳೂ ನಿದ್ರೆಗೆಡುವದರಲ್ಕಿಯೇ ಇದೆ. 


ಒಂದು ಕಾಲವಿತ್ತು ರಾತ್ರಿ ಒಂಭತ್ತು ಹತ್ತು ಗಂಟೆಗೆ ಮಲಗುವ ಸುಂದರವಾದ ವಾತಾವರಣವಿತ್ತು. ಒಂಭತ್ತು ಗಂಟೆಗೆ ಮಲಗಿದ ಮನುಷ್ಯನಿಗೆ ಐದು ಆರು ಗಂಟೆಗೆ ಎಚ್ಚರವಾಗುತ್ತಿತ್ತು. ಒಂಭತ್ರು ಗಂಟೆಗೆ ಆಫೀಸಿಗೆ ಹೋಗುವದಿರುತ್ತಿತ್ತು. ಹಾಗಾಗಿ ಸರಿಯಾಗಿ ಸೂರ್ಯೋದಯಕ್ಕೆ ಅರ್ಘ್ಯಕೊಡುತ್ತಿದ್ದ. ಗಾಯತ್ರೀಜಪ ಮಾಡ್ತಿದ್ದ. ಇಂದು ಹನ್ಬೆರಡು ಒಂದು ಗಂಟೆಯವರೆಗೆ ನಿದ್ರೆಗೆಡುವದರಿಂದ ಏಳುವದು ತಡ. ಆಫೀಸಿಗೆ ಕ್ಲಾಸಿಗೆ ಹೋಗುವದು ಸರಿಸಮಯಕ್ಕೆ. ಹೊಡತ ಬಿದ್ದಿದ್ದು ಸಂಧ್ಯಾವಂದನ ಗಾಯತ್ರಿ ಪೂಜೆ ಇವುಗಳಿಗೇ. ದೇವರಿಂದ ದೂರಾಗಾವದಕ್ಕೆ ಮೊದಲ ದಾರಿ ಹುಡುಕಿಕೊಡುವದೇ ನಿದ್ರೆಗೆಡುವದು. ಇಲ್ಲಿಂದ ಅನರ್ಥಗಳ ಸುರಿಮಳೆ ಪ್ರಾರಂಭ. 


ಮಧ್ಯ ರಾತ್ರಿ ಹೊತ್ತಿನಲ್ಲಿಯ ಎಚ್ಚರ ಇರುವಾಗ ೯೯% ಪ್ರತಿಶತಃ ದುಷ್ಟ ದುರ್ವಿಚಾರಗಳೇ ಬರುವದು. ಯಾಕೆಂದರೆ ಆ ಸಮಯ ದುಷ್ರ ರಾಕ್ಷಸರ ಸಮಯವೇ. ಹಾಗಾಗಿ ನಿದ್ರೆಗೆಡುವದರಿಂದ ಅನರ್ಥಗಳೇ. 


ಇಂದಿನ ಘೋರ ಅಪಘಾತಗಳಿಗೂ ನಿದ್ರೆಯ ನಂಟು. 


ಸರಿಯಾದ ಸಮಯಕ್ಕೆ ಸರಿಯಾದ ನಿದ್ರೆಯಾಗದಿರುವಾಗ, ನಿದ್ರೆಗೆ ತಕ್ಕುದಾದ ಸಮಯ ನೀಡದಿದ್ದಾಗ  ನಿದ್ರೆ ತಾನು ಯಾವಾಗ ಬೇಕಾದರೂ ದಾಳಿ ಮಾಡಿಬಿಡುತ್ತದೆ. ಹತ್ತೇ ಕ್ಷಣದ ನಿದ್ರೆಯೇ ನೂರಾರು ಸಾವಿರಾರು ಅಪಘಾತಗಳಿಗೂ ಕಾರಣವಾಗಿದೆ. ಆದ್ದರಿಂದಲೂ ನಿದ್ರೆಗೆಡದಿರುವದು ಬಹಳೇ ಶ್ರೇಷ್ಠ. 


*ಸಾಧಕನಿಗೆ ನಿದ್ರೆಯೂ ಒಂದು ಸಾಧನೆಯೇ*


ದಾಸರಾಯರಿಗೆ ಯಾರೋ ನಮ್ಮಂತಹ ಪೆದ್ದು ಸಾಧನಗೆ ಮನಸ್ಸಿದೆ ಸಮಯವಿಲ್ಲ ಎಂದು ಗೊಗರೆಯವ ಸಾಧಕ ನನಗೆ ಸಾಧನಡಗೆ ಸಮಯವೇ ಸಿಗುವದಿಲ್ಲ ಎಂದು ಕೇಳಿದನಂತೆ. ಆಗ ದಾಸರಾಯರ ಉತ್ತರ *ಮೈ ಮರೆತು ಮಲಗುವದೇ ಧರಣಿಗೆ ನಮಸ್ಕಾರ* ಮೈ ಮರೆತು ಮಲಗುವದಕ್ಕೂ ಪೂರ್ವದಲ್ಲಿ "ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಸ್ವಾಮಿ !! ಇನ್ಮುಂದೆ ಎಚ್ಚರವಿಲ್ಲದೆ ಮಲಗುವವನಿದ್ದೇನೆ ಮಾಲಗು ಏನಿದೆ ನಿನಗಿದೋ ಸಾಷ್ಟಾಂಗ ನಮಸ್ಕಾರ" ಎಂದು ಸಂಕಲ್ಪಿಸಿ‌ ಮಲಗಿಕೊ ಅದುವೇ ಒಂದು ಉತ್ಕೃಷ್ಟ ಸಾಧನೆಯಾಗುತ್ತದೆ ಎಂದರು ದಾಸರು. 


*ನಿದ್ರೆಯಲ್ಲಿ ಸಾಧನೆಯ ಶುನ್ಯತೆಯೂ ಕೆಲವರಿಗುಂಟು*


ದಶಮಿಯ ದಿನ ರಾತ್ರಿ ಊಟ ಮಾಡಿ ಮಲಗಿದ ಭೂಪರು ದ್ವಾದಶಿಯ ದಿನ ಪಾರಣೆಗೇ ಏಳುವ ಮಹಾತ್ಮರೂ ಇದ್ದಾರೆ. ಸಾಧನೆ ಮೈನಿಸ್ಸಿನಲ್ಲಿ ಸಾಗಿಬಿಡುತ್ತದೆ. "ಅತಿ ಸರ್ವತ್ರ ವರ್ಜಯೇತ್" ಎಂದು ಹೇಳಿರುವದರಿಂದ ಅತಿನಿದ್ರೆಯೂ ಚಿರನಿದ್ರೆಗೆ ವೆಗದಿಂದ ಎಳೆದೊಯ್ದು ಬಿಡುತ್ತದೆ. 

"ಹೇಗೆ ಮಲಗುವದು ??"

ದಕ್ಷಿಣ ಹಾಗೂ ಪೂರ್ವಕ್ಕೆ ತಲೆ ಮಾಡಿ ಮಲಗುವದು ಉತ್ತಮ. ಮಲಗುವಾಗ ದೇವರಿಗೆ ಇಂದು ಅನುಭವಿಸಿದ ಎಲ್ಲವನ್ನೂ ಸಮರ್ಪಿಸಿ ಮಲಗುವದು ಶ್ರೇಷ್ಠ. ಮಲಗುವಾಗಿನ ನಮ್ಮ ಚಟುವಟಿಕೆಗಳೇ ಬೆಳಗಾದಾಗಿನ ಮೊದಲ ಚಟುವಟಿಕೆ ಯಾಗಿರುತ್ತದೆ. ಬೆಳೆಗೆ ಎದ್ದಾಗಿನ ಮೊದಲ ಚಟುವಟಿಕೆಯೇ ಸಂಪೂರ್ಣ ದಿನದಲ್ಲಿ ಮೇಲಿಂದ ಮೇಲೆ ರಿಪೀಟ್ ಆಗುತ್ತದೆ. ಹಾಗಾಗಿ ಮಲಗುವಾಗ ದೇವರನ್ನು ಸ್ಮರಿಸಿ ಸಂತೋಷದಿಂದ ನಗುನಗ್ತಾ ಸುಖವಾಗಿ ಮಲಗುವದು ಸೂಕ್ತ. 

ದೇವರ ಆಲಿಂಗನದಲ್ಲಿ ಸ್ವರೂಪಸುಖದ ಆನಂದವನ್ನು ಅನುಭವಿಸುತ್ತಾ, ದೇಹಕ್ಕೆ ಮನಸ್ಸಿಗೆ ಇಂದ್ರಿಯಗಳಿಗೆ ಎಷ್ಟು ಬೇಕೋ ಅಷ್ಟು ನಿದ್ರೆಬೇಕು. ಸರಿಯಾದ ಅಮಯಕ್ಕೆ ನಿದ್ರೆಗೆ ಜಾರಬೇಕು. ಸರಿಯಾದ ಸಮಯಕ್ಕೆ ನಿದ್ರೆಯಿಂದ ಎಚ್ಚತ್ತರೆ ಸಾಧನೆಗಳಿಂದಾರಂಭಿಸಿ ನಮ್ಮ ಲೌಕಿಕ ಕಾರ್ಯಗಳೂ ಅತ್ಯಂತ ಯಶಸ್ವಿಯಾಗಿ ಆಗುತ್ತವೆ. ಪದರಾಣಾಪಾಯಗಳು ತಪ್ಪುತ್ತವೆ. ಸಮಯ ಹಾಳುಮಾಡದೆ ಸುಖ ನಿದ್ರೆಗೆ ಜಾರೋಣ "ಶುಭರಾತ್ರಿ" 


✍🏽ನ್ಯಾಸ

ಗೋಪಾಲದಾಸ

ವಿಜಯಾಶ್ರಮ, ಸಿರಿವಾರ

Comments

Popular posts from this blog

*ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ ಅರ್ಘ್ಯ ಸಮರ್ಪಣ - ಮಂತ್ರಗಳು*

ನಾಗ ಸ್ತೋತ್ರಮ್

ಇಂದು ಚಂದ್ರಗ್ರಹಣ - ಪರ್ವಕಾಲ*