Posts

Showing posts from January, 2021

*ಹೇ ಅದೃಷ್ಟ ಹೀನ ಮನಸ್ಸೇ..... ಇನ್ನಾದರೂ ಬಲಿಷ್ಠನಾಗು*

Image
  *ಹೇ ಅದೃಷ್ಟ ಹೀನ ಮನಸ್ಸೇ..... ಇನ್ನಾದರೂ ಬಲಿಷ್ಠನಾಗು* "ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ" ಮನುಷ್ಯರ ಸಂಸಾರ ಬಂಧಕ್ಕೂ ಹಾಗೂ ಬಂಧದಿಂದ ಮುಕ್ತಿಗೂ ಮನಸ್ಸೇ ಕಾರಣ" ಇದು ಸುಪ್ರಸಿದ್ಧ.  ಸಂಸಾರದಲ್ಲಿ ಸುಖ ದುಃಖ, ಸೋಲು ಗೆಲವು, ಯಶಸ್ಸು ಅಪಯಶಸ್ಸು, ಏಳು ಬೀಳು, ಇತ್ಯಾದಿ ಎಲ್ಲವನ್ನು  ಅನುಭವಿಸಲೂ ಮನಸ್ಸೇ ಮೂಲ ಕಾರಣ. ಇದುವೂ ಸಿದ್ಧ. ಮನಸ್ಸು ಮಹಾಕೋತಿ. ಇಂದಿನ ಈ ಕ್ಷಣದ ವೈಭವ ಮಾತ್ರ ಮನಸ್ಸಿಗೆ ಬೇಕು. ಅಂತೆಯೇ ಪುಣ್ಯಸಂಪಾದೆನೆಗೆ ಹಿದೇಟು. ಪುಣ್ಯ ಮಾಡುವಾಗ ದುಃಖ, ಆ ದುಃಖ ಮನಸ್ಸಿಗೆ ಸರ್ವಥಾ ಬೇಡ. ಪಾಪ ಮಾಡುವಾಗ ಸುಖ, ಆ ಸುಖವನ್ನು ಪರಿಪೂರ್ಣವಾಗಿ ಸ್ವಾಗತಿಸುತ್ತದೆ ಮನಸ್ಸು.  ಪುಣ್ಯವೇ ರುಚಿಸದ, ಸ್ವಾಗತಿಸದ, ಆಸ್ವಾದಿಸದ ಒಂದು ವಸ್ತು ಎಂದರೆ ಅದು ಮನಸ್ಸೇ.   *ಆ ಕಾರಣದಿಂದಲೇ ಅದೃಷ್ಟ ಹೀನವಾಗಿದೆ ಮನಸ್ಸು.* ಅದೃಷ್ಟವಿರದಿರೆ ಮನಸ್ಸು ಮಹಾ ದುರ್ಬಲ. ಹಿತವಾದ ಯಾವ ಮಾತನ್ನೂ ಕೇಳದು. ಹಿತವಾದದ್ದನ್ನು ಮಾಡದು. *ಅದೃಷ್ಟ ಹೀನ ಮನಸ್ಸಿಗೆ ದೂರದೃಷ್ಟಿ ಕಡಿಮೆ* ಅದೃಷ್ಟ ಹೀನವಾದ ಮನಸ್ಸು ಎಂದಿಗೂ ದೂರಾಲೋಚನೆ ಕಡಿಮೆ ಇರುತ್ತದೆ. *ದೂರಾಲೋಚನೆಗಿಂತಲೂ ದುರಾಲೋಚನೆಯೇ ಹೆಚ್ಚು ಆಗಿರುತ್ತದೆ.* ದುರಾಲೋಚೆನೆಗಳು ಹೆಚ್ಚಾದಷ್ಟು ಮನಸ್ಸು ದುರ್ಬಲ ಆಗುತ್ತಾ ಸಾಗುತ್ತದೆ. ದುರ್ಬಲ ಮನಸ್ಸು ಎಲ್ಲ ವಿಷಯದಲ್ಲಿಯೂ ತನ್ನ ಸ್ವಾಸ್ಥತೆಯನ್ನು ಕಳೆದುಕೊಂಡಿರುತ್ತದೆ. ಎಲ್ಲ ಕಡೆ ಕದಡಿಸಿಕೊಂಡಿರುತ್ತದೆ. ಎಲ್...

*ಹಿರಿಯರು ಹೇಳಿದ್ದು ಸರಿ ಎಂದು ತಿಳಿದುಕೊಳ್ಳುವಷ್ಟರಲ್ಲಿ, ನೀನು ಹೇಳಿದ್ದು ತಪ್ಪು ಎಂದೇ ಹೇಳುವ ಮಗ ಹುಟ್ಟಿರುತ್ತಾನೆ*

Image
 * ಹಿರಿಯರು ಹೇಳಿದ್ದು ಸರಿ ಎಂದು ತಿಳಿದುಕೊಳ್ಳುವಷ್ಟರಲ್ಲಿ, ನೀನು ಹೇಳಿದ್ದು ತಪ್ಪು ಎಂದೇ ಹೇಳುವ ಮಗ ಹುಟ್ಟಿರುತ್ತಾನೆ* ತಂದೆ ತಾಯಿ ಗುರು ಧರ್ಮ ಶಾಸ್ತ್ರ ಇವರೆಲ್ಲರೂ ನಮ್ಮ ಹಿತೈಷಿಗಳೆ. ಆದರೆ ಇವರು ಹೇಳಿದ್ದು ಸರಿ ಎಂದು ಒಪ್ಪಿಕೊಳ್ಳುವ ಮನೋಭಾವ ಮಾತ್ರ ನನ್ನದಾಗಿಲ್ಲ.  *ಅವರು ಹೇಳುವ ಹಿತ ನನಗೆ ಹಿತ ಎಂದೆನಿಸುವದಿಲ್ಲ. ನಾನು ಹಿತ ಎಂದು ಯಾವದು ತಿಳಿದಿರ್ತೆನೆ ಅದು ಎನಗೆ ಹಿತ ಆಗಿರುವದಿಲ್ಲ.* ಹಾಗಾಗಿ ಏಳು ಬೀಳು, ಸೋಲು, ಹತಾಶೆ, ಅಶಾಂತಿ ಇವುಗಳಲ್ಲಿ ಬಿದ್ದು ಎದ್ದು ನೊಂದು  'ಓಹ್ ಹಿರಿಯರು ಹೇಳಿದ್ದು ಎಷ್ಟು ಸತ್ಯವಾಗಿತ್ತು ಅಲ್ವೆ" ಅದನ್ನು ಪರಿಪಾಲಿಸಬೇಕಿತ್ತು, ಇನ್ನಾದರೂ ಪರಿಪಾಲಿಸೋಣ ಎಂದು ತಿಳಿದುಕೊಳ್ಳುವಷ್ಟರಲ್ಲಿ *ಅಪ್ಪಾ ನಿನಗೇನು ತಿಳಿಯುತ್ತದೆ ತೆಪ್ಪಗೆ ಬಿದ್ದಿರು* ಎಂದು ಹೇಳುವ ಮಗನಾಗಿರುತ್ತಾನೆ.  ಹಿರಿಯರು ಹಿತೈಷಿಗಳೂ ಬೋಧಿಸುತ್ತಾರೆ *ಇಂದು ಏಕಾದಶಿ _ ಉಪವಾಸ ಮಾಡು* ಎಂದು. ನಿಮಗೇನು ತಿಳಿಯತ್ತೆ,ನಂದು ಉಪವಾಸ ಬೇಕಿದ್ದರೆ ನೀವು ಮಾಡಿ ಎಂದು ಗುರಾಯಿಸುತ್ತಾನೆ.  ಅವರು ಉಪವಾಸ ಮಾಡಲು ಹೇಳಿದ ಕಾರಣ ಕೋಟಿ ಕೋಟಿ ಪಾಪಗಳ ಪರಿಹಾರಕ್ಕೆ. ಆದರೆ ಆಗ ನಾನು ನನ್ನ ಅಹಂಭಾವದಲ್ಕಿ ಮಾಡಲೇ ಇಲ್ಲ.  ಇಂದು ನಾನು ನನ್ನ ಜೀವನದಲ್ಲಿ ಏನನ್ನೂ ಪಡೆಯಲಿಲ್ಲ. ಯಾಕೆ ಅಂದರೆ ಪಡೆಯುವದಕ್ಕೆ ಇರುವ ಅಡೆತಡೆಗಳನ್ನು ಕಳೆದುಕೊಂಡಿಲ್ಲ. ಇನ್ಮೇಲೆ ಆದರೂ ಕಳೆದುಕೊಳ್ಳೋಣ ಅಂದರೆ ಮಗ ಬಯ್ದು ಸುಮ್ ಕೂಡಿಸುತ...

*.......ಪುಷ್ಯಾರ್ಕಾದಿ ಸಮಾಗಮೇ (ಒಂದುಬಾರಿ ಓದೋಣ)

Image
 *.......ಪುಷ್ಯಾರ್ಕಾದಿ ಸಮಾಗಮೇ* (ಒಂದುಬಾರಿ ಓದೋಣ) ಪ್ರತೀ ದಿನವನ್ನು ನಾವು, ನಮಗಾಗಿ ಹೇಗೆ ಬಳಿಸಿಕೊಳ್ಳಬಹುದು ಎನ್ನುವದಕ್ಕೆ  *ಗುರು ಪುಷ್ಯಾಮೃತ* ಯೋಗವಿರುವ ಈ ದಿನವೂ ಒಂದು ನಿದರ್ಶನ.  ಇಂದು ನಮಗೆ ಕಷ್ಟಗಳು ತುಂಬ. ಅಪತ್ತುಗಳು ಅಪಾರ. ಈಗಿನ ಕೆಲ ದಿನಗಳಲ್ಲಿ, ಪ್ರತಿನಿತ್ಯವೂ ಕನಿಷ್ಟ ಎರಡರೆ ಕೆಟ್ಟ ಸುದ್ದಿ ಕಿವಿಗೆ ಬಿದ್ದಿರ್ತಾವ. ಸ್ವಯಂ ನಾವು ಆಪತ್ತುಗಳ ಸುಳಿಗಳಲ್ಲಿ ಇದ್ದೇವೆ. ಆದಾಯ ಕುಂಠಿತವಾಗಿದೆ. ಬರುವ ಆದಾಯ ಸರಿಯಾಗಿ ಹೊಂದಿಸಲು ಕಷ್ಟವಾಗಿದೆ. *ಜಪ ಪಾರಾಯಣಗಳೂ ಕುಂಠಿತವಾಗಿವೆ.* ಘೋರದಿನಗಳ ಅರಿವು ಅಂತೂ ನಮಗಾಗಿದೆ.   ಹೀಗಿರುವಾಗ..... *ನಾಳೆಯದಿನವನ್ನೂ ಯಾಕೆ ಬಳಿಸಿಕೊಳ್ಳಬಾರದು......* ಅನುಭವಿಸಿದ ಒಳ್ಳೆಯ ದಿನಗಳು ಬರಲು, ಅತ್ಯುತ್ತಮ ಸುದ್ದಿಗಳು ಕೇಳಲು, ಉತ್ತಮ ವಿಚಾರ ರೂಢಿಸಿಕೊಳ್ಳಲು, ಜಪ ಪಾರಾಯಣ ಸುಸೂತ್ರವಾಗಿ ನಡೆಯಲು, ಸಂಪಾದನೆ ಸರಾಗವಾಗಿ ಆಗಲು, ಅನಿಷ್ಟ ಕಳೆದುಕೊಳ್ಳಲು, ಆಪತ್ತುಗಳಿಂದ ಗೆದ್ದುಬರಲು, *ದೇವರ ದೇವತೆಗಳ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಲು* ನಾಳೆಯ ದಿನವನ್ನು ಬಳಿಸಿಕೊಳ್ಳಣ ಅಲ್ಲವೇ... *ಹೇಗೆ ಬಳಿಸಿಕೊಳ್ಳುವದು.....* ದೇವರ ಗುರುಗಳ ಅನುಗ್ರಹದಿಂದ ನಾಳೆ  *ಗುರು ಪುಷ್ಯಾಮೃತ* ಯೋಗ ಒದಗಿದೆ. ಪ್ರಾತಃಸ್ಮರಣೀಯ ಅಪ್ಪಣ್ಣಾಚಾರ್ಯರು ತಿಳಿಸುತ್ತಾರೆ ಈ ದಿನದಂದು *ರಾಯರ ಸ್ತೋತ್ರ ಪಾರಾಯಣ* ಮಾಡುವದರಿಂದ ರಾಯರ ಪರಮಾನುಗ್ರಹ ಆಗತ್ತೆ ಎಂದು. *ದೈವ ವಶ...

*ದ್ವೇಶಮಾಡದೇ ಪ್ರೀತಿಸುವವ ನೈಜ ಭಕ್ತ*

Image
 *ದ್ವೇಶಮಾಡದೇ ಪ್ರೀತಿಸುವವ ನೈಜ ಭಕ್ತ* ಇಂದು "ಭಾವಬೋಧಕಾರರು" ಆದ ಪ್ರಾತಃಸ್ಮರಣೀಯರಾದ, ಅನೇಕ ಟೀಕಾ ಟಿಪ್ಪಣಗಳನ್ನು ರಚಿಸಿರುವ *ಶ್ರೀ ಶ್ರೀರಘೂತ್ತಮತೀರ್ಥರ* ಆರಾಧನಾ ಮಹೋತ್ಸವ". ಅವರು ರಚಿಸಿದ ಗೀತಾಭಾಷ್ಯ ಭಾವಬೋಧ. ಒಂದು ಶ್ಲೋಕದ ಚಿಂತನೆ ಮಾಡುವ ಪ್ರಯತ್ನ ಮಾಡೋಣ.  *ಭಕ್ತ ಯಾರು.... ???* ನಾವೆಲ್ಲರೂ ಭಕ್ತರೇ, ಮಹಾ ಭಕ್ತರೇ ಎಂದು ಹೇಳಿಕೊಳ್ಳುತ್ತೇವೆ. ತಕ್ಕಮಟ್ಡಿಗೆ ಭಕ್ತಿಯನ್ನೂ ಮಾಡುತ್ತೇವೆ. ಹೇಳಿಕೊಂಡಷ್ಟು ಅಲ್ಲದಿದ್ದರೂ ಅಲ್ಪ ಸ್ವಲ್ಪ ಭಕ್ತರಂತೂ ಇದ್ದೇವೆ.  *ಹಾಗಾದರೆ ನೈಜ ಭಕ್ತರಾರು... ??* *ಅದ್ವೇಷ್ಟಾ ಸರ್ವಭೂತಾನಾಂ....* ಕೃಷ್ಣ ಗೀತೆಯ ಹನ್ನರಡನೇಯ ಅಧ್ಯಾಯದಲ್ಲಿ ಬಹಳ ಸುಂದರವಾಗಿ ತಿಳಿಸುತ್ತಾನೆ. *ಯಾರು ಯಾರನ್ನೂ ದ್ವೇಶಿಸುವದಿಲ್ಲ, ಯಾರು ಎಲ್ಲರಿಗೂ ಪ್ರಿಯನರಾಗಿದ್ದಾರೆಯೋ* ಅವರನ್ನು ಭಕ್ತ ಎಂದು ಪರಿಗಣಿಸುವೆ.  "ಭಕ್ತ ಯಾರನ್ನೂ ದ್ವೇಶಿಸುವದಿಲ್ಲ. ಭಕ್ತನಿಗೆ ದ್ಚೇಶಿಗಳು ಯಾರಿಲ್ಲ. ತನ್ನನ್ನು ದ್ವೇಶಿಸುವವನನ್ನೂ ತುಂಬ ಪ್ರೀತಿಸುವವನು" ಇದು ಭಕ್ತನ ಅನೇಕ ಲಕ್ಷಣಗಳಲ್ಲಿ ಒಂದು ಲಕ್ಷಣ.  *ದ್ವೇಶ ಮಾಡುವದಕ್ಕೂ ಭಕ್ತನಾಗದೇ ಇರುವದಕ್ಕೂ ಸಂಬಂಧವೇನು....??* "ದ್ವೇಶ ನಮ್ಮ ಮನಸ್ಸಿನ ಶಕ್ತಿಯನ್ನು ವ್ಯಯ ಮಾಡುವದು. ನಮ್ಮ ಸಮಯವನ್ನು ಹಾಳು ಮಾಡುವದು. ಯಾರನ್ನು ದ್ವೇಶಿಸುತ್ತೇವೆಯೋ ಅವನಿಗಿಂತ ಹೆಚ್ಚು ಕೇಡು ನಮಗೇ ಆಗುವದು." ಈ ಮೂರು ಮುಖ್ಯವಾಗಿ ದ್ವೇಶದಲ್ಲಿ ಇರುವಂತಹದ್ದು...

*ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ*

Image
 *ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ * ಮನುಷ್ಯನಿಗೇ ರೋಗಗಳು ಅನೇಕ. ಪ್ರಾಣಿ ಪಶು ಪಕ್ಷಿಗಳಕ್ಕಿಂತಲೂ ಅಧಿಕ ಮಟ್ಟದಲ್ಲಿ ರೋಗಿಷ್ಠ ಮನುಷ್ಯ. ದೈಹಿಕ ರೋಗಗಳು ಒಂದಾದರೆ ಮನಸ್ಸಿನ ರೋಗಳೂ ತುಂಬ,  ಇವುಗಳ ಮಧ್ಯದಲ್ಲಿ  *ಇನ್ನೊಬ್ಬರ ಅನುಕರಣೆಯಿಂದ* ಬರುವ ರೋಗಗಳೂ ಅತಿ ಭಯಂಕರ ವಾದದ್ದು.   ಪುರುಷ/ಸ್ತ್ರೀ ಗೋಪಿಚಂದನವೋ ಅಥವಾ ಕುಂಕುಮವೋ ಧರಿಸುವದು ಬಿಟ್ಟಿರುತ್ತಾರೆ. ಬಿಡುವದಕ್ಕೆ ಮೂಲವೇನು... ?? ಪರರ ಅನುಕರುಣೆಯೇ... ಹೊರತು ಇನ್ನೇನು ಬೇರೆ ಕಾರಣವೇ  ಇರುವದಿಲ್ಲ. ಕೇವಲ ಇದು ಒಂದು ಉದಾಹರಣೆ ಮಾತ್ರ. ಧರ್ಮ ಬಿಡಲು ಮನುಷ್ಯನಿಗೆ ಧೈರ್ವಿಲ್ಲ. ಅದರೂ ಧರ್ಮವನ್ನು ಬಿಡುತ್ತಾನೆ ಅದಕ್ಕೆ ಒಂದೇ ಕಾರಣ *ಪರರ ಅನುಕರಣೆ.*  ಧರ್ಮ ಮಾಡದ ಅವನು ಚೆನ್ಬಾಗಿ ಇದ್ದಾನೆ, ಹಾಗಿರುವಾಗ ನಾನೇಕೆ ಧರ್ಮವನ್ನು ಮಾಡಬೇಕು..? ಎಂದು ಯೋಚಿಸಿಯೇ ಬಿಟ್ಟಿರುತ್ತಾನೆ. ಹೀಗಾಗುವದು ಏಕೆ..?? ಸ್ವಂತ ವಿಚಾರವಿಲ್ಲದ, ಸ್ವಂತಿಕೆಯೇ ಇಲ್ಲದ ಮನುಷ್ಯ, ಇನ್ನೊಬ್ವರನ್ನು ಅನುಕರಣೆ ಮಾಡುವದನ್ನುಳಿದು ಬೇರೆ ಮಾರ್ಗವಂತೂ ಇರಲಾರದು. ಆಕಾರಣದಿಂದಾಗಿಯೇ ದರ್ಮ ಬಿಡುವ. ಒಂದು ಬಾರಿ ಒಬ್ಬರ ಅನುಕರಣೆಯ ರುಚಿ ಹತ್ತಿತೋ ಮತ್ತೊಮ್ಮೆ ಇನ್ನೊಬ್ಬ ಸಿಗುವ, ಅವನ ಅನುಕರಣೆ ಆರಂಭ. ಮುಗುದೊಮ್ಮೆ ಇನ್ನೊಬ್ಬನ ಅನುಕರಣೆ. ಕೊನೆಗೆ ಇನ್ನೊಬ್ವರ ಅನುಕರಿಸುವದರಲ್ಕೇ ಜೀವನದ ಕೊನೆ.  ಅಂತೆಯೇ ಇಂದು ನಮ್ಮ ಸ್ವಂತಿಕೆ ಹೋಗಿದೆ, ಏಳುವ...

*ಆಪತ್ತಿದೊಗುವದು ಆ ಮುದ್ದು ಅರಗಿಣಿಯು*

Image
 *ಆಪತ್ತಿದೊಗುವದು ಆ ಮುದ್ದು ಅರಗಿಣಿಯು* ಆಪತ್ತುಗಳು ಬೆಂಬಿಡದಭೂತಗಳು. ಅತೀ ಸಣ್ಣ ಆಪತ್ತುಗಳಿಂದಾರಂಭಿಸಿ ಅತೀದೊಡ್ಡ ಆಪತ್ತು ಯಾವ ಕ್ಷಣಕ್ಕೆ ಹೇಗೆ ಬಂದು ಅಪ್ಪಳಿಸುತ್ತದೆಯೋ ತಿಳಿಯದು.  *ಇಂದಿನ ಮಹಾಮಾರಿ.... ಮಹಾ ಆಪತ್ತು* *ಕರೋನಾ* ಎಂಬ ಮಹಾ ಆಪತ್ತು ಜಗತ್ತಿಗೇ ಬಂದು ಇಂದಿಗೆ ವರ್ಷಗಳು ಉರುಳುತ್ತಾ ಬಂತು. ಇಂದಿಗೂ ಆಪತ್ತಾಗಿಯೇ ಇದೆ. ಇದಕ್ಕೆ ಪರಿಹಾರ ಇರುವದು ನಮ್ಮ ಕೈಯಲ್ಲಿ ಎಷ್ಟಿದೆಯೋ ಅಷ್ಟಕ್ಕೂ "ನೂರುಪಾಲು ಹೆಚ್ಚು ದೇವರ ಕೈಯಲ್ಲಿ ಇದೆ" ಇದು ಪ್ರತಿಶತಃ ಸಾವಿರದಷ್ಟು ನಿಶ್ಚಿತ.  *ಮರೆಯುವದು ಸರ್ವಥಾ ಬೇಡ....* ಕರೋನಾ ಹೋಗಿದೆ ಎಂದು ಮರೆಯುವದಾಗಲಿ, ಅಥವಾ ರಕ್ಷಿಸುವ ದೇವರನ್ನಾಗಲಿ ಮರೆಯುವದು ಸರ್ವಥಾ ತರವಲ್ಲ. ನಿತ್ಯವೂ "ನಮ್ಮ ಎದುರಿನವನಲ್ಲಿ ಕರೋನಾ ಇದೆ" ಎಂಬ ಎಚ್ಚರಿಕೆ ಒಂದಾದರೆ,  "ಈ ಆಪತ್ತು ಬರದಿರುವಂತೆ ನೋಡಿಕೊಳ್ಳುವ, ಬಂದಮೇಲೆ ಪರಿಹರಿಸುವ ದೇವರನ್ನೂ ದೇವತೆಗಳನ್ನೂ" ಮರೆಯುವದು ಸಲ್ಲ.  *ಬಾರವೋ ಭಯಗಳು ಬಂದರೋ ನಿಲ್ಲವು.....* ನಿತ್ಯದಲ್ಲಿಯೂ ರಕ್ಷಿಸುವ ದೇವರ ಎಚ್ಚರಿಕೆಯೊಂದಿಗೆ "೧)ನಿತ್ಯ ನರಸಿಂಹ ಧನ್ವಂತ್ರಿ ಸುದರ್ಶನ ಈ ಮಂತ್ರಗಳ ಜಪ, ೨) ಮನ್ಯಸೂಕ್ತ ದುರ್ಗಾಸ್ತೋತ್ರ ವಿಷ್ಣು ಸಹಸ್ರನಾಮ, ಗೀತಾ ಹನ್ನೊಂದನೇಯ ಅಧ್ಯಾಯ, ಸುಂದರಕಾಂಡ, ರಾಯರಸ್ತೋತ್ರ ಪಾರಾಯಣ - ೩) ತಿಂಗಳಿಗೊಮ್ಮೆಯಾದರು ಪವಮಾನ ನವಗ್ರಹ ನರಸಿಂಹ ಮಂತ್ರಗಳ ಹವನ, ೪) ಸ್ತ್ರೀಯರೆಲ್ಲರೂ ನರಸಿಂಹ ಧನ್ವಂತ್...

*ನೋಡುವವರ ಅಜ್ಙಾನದಮೇಲೆ ಬದುಕಿನ ಡೊಂಬರಾಟ*

Image
  *ನೋಡುವವರ ಅಜ್ಙಾನದಮೇಲೆ ಬದುಕಿನ ಡೊಂಬರಾಟ* ತನ್ನ ಬಗ್ಗೆ ತಿಳುವಳಿಕೆ ಎಲ್ಲಿಯವರೆಗೆ, ಎಷ್ಟು ಜನರಿಗೆ ಇರುವದಿಲ್ಲವೋ ಅಲ್ಲಿಯವರೆಗರ ಅಷ್ಟು ಜನರಿಲ್ಲಿ ತನ್ನ ಡೊಂಬರಾಟ ನಡೆಸುತ್ತಿರುತ್ತಾನೆ. ಎಂದು ತನ್ನ ಬಗ್ಗೆ ಸ್ಪಷ್ಟವಾಗಿ ಜನರಿಗೆ ತಿಳಿಯಿತೋ ಅಂದು ತನ್ನೆಲ್ಲ ಬಾಲವನ್ನೂ ಮುದುರಿಕೊಂಡು ಮನೆಯಲ್ಲಿ ಕೂಡುತ್ತಾನೆ. ಅಂತೆಯೇ *ನೋಡುಗರ ಅಜ್ಙಾನ ತನ್ನ ಕುಣಿತಕ್ಕೆ ಕಾರಣ* ಎಂದು. ಅಂತೆಯೇ ನಮ್ಮ ಜ್ಙಾನ ನಮಗೂ ಸ್ಪಷ್ಟ ಇರಬೇಕು. ಇನ್ನೊಬ್ಬರಿಗೂ ಸಷ್ಟಪಡಿಸಿರಬೇಕು. ಇನ್ನೊಬ್ಬರ ಜ್ಙಾನ ನಮಗೂ ಸ್ಪಷ್ಟ ಇರಿಬೇಕು. ನಮಗೆ ಸ್ಪಷ್ಟ ಇದೆ ಎಂದು ತಿಳಿಸಿರಲೂ ಬೇಕು. ಇಲ್ಲವೋ ಡೊಂಬರಾಟ ಇರುವದೇ. ಜ್ಙಾನ ಜ್ಙಾನಕ್ಕಭಿಮಾನಿನೀ ಸರಸ್ವತೀದೇವಿ. ಸರಸ್ವತಿ ಕರೆದವರ ಕೂಸು. ಸಲಹುವ ಯೋಗ್ಯತೆ ಇರುವಲ್ಲಿ ನೆಲೆಸುವ ಮಹಾತಾಯಿ. ಸರಸ್ವತಿಯನ್ನು ಕರೆಯಲೂ ಯೋಗ್ಯತೆ ಬೇಕು. ವಿದ್ಯೆ ಇದು ಯಾರೊಬ್ಬರ ಮೊನಾಪಲ್ಲಿ ಅಲ್ಲ. ಯಾರಲ್ಲಿದ್ದರೂ ವಿದ್ಯೆಯೇ. ವಿದ್ಯೆ ಪಡೆದವರು ವಂದ್ಯರೇ. ಕುಲ ವಯಸ್ಸು ಯಾವುದರ ಸಂಬಂಧವಿಲ್ಲ. ವಿದ್ಯೆ ಇರುವವ ಜಗತ್ತು ಹಾಗೂ ಜಗತ್ತಿನ ಜನ ಮತ್ತು ಜಗನ್ನಿಯಾಮಕ ಸ್ವಾಮಿ ಎಲ್ಲರಿಗೂ ಪ್ರಿಯನೇ ಆಗುವ ಇದು ವಿದ್ಯೆಯ ಮಹತಿ. ವಿದ್ಯೆಯಿಲ್ಲ ಎಂದಾದರೆ ಎಲ್ಲರೂ ಡೊಂಬರಾಟ ಮಾಡಲು ಆರಂಭಿಸುತ್ತಾರೆ. "ನಮ್ಮ ಅಜ್ಙಾನ ಪರರ ಕುಣಿತಕ್ಕೆ ಕಾರಣ" ಯಾವುದೇ ವ್ಯಕ್ತಿ ಡೊಂಬರಾಟ ಮಾಡಲು ನೌಟಂಕಿ ಮಾಡಲು ಆರಂಭಿಸುತ್ತಾನೆ ಎಂದಾದರೆ ಅದಕ್ಕೆ ಮೂಲ ನಮ್ಮ ವಿದ್ಯೆಯ ...

*ಇರುವೆ ..... ಮರ = ಮಹಾತ್ಮಾ*

Image
 *ಇರುವೆ ..... ಮರ = ಮಹಾತ್ಮಾ* ಮಾನವ ಇರುವೆಯಂತೆಯೂ ಇರಬೇಕು, ಮರದಂತೆಯೂ ಆಗಬೇಕು.  ಹಾಗಾದರೆ ಅವನು ಮಹಾತ್ಮನೇ ಆಗುವ.  🐜 ಇರುವೆ ಸಿಹಿಯ ಸನಿಹವೇ ಹೋಗುವಂತೆ, ಸಕಾರಾತ್ಮಕ ವಿಚಾರಗಳೇ ತುಂಬಿರಬೇಕು. ಸಕಾರಾತ್ಮಕತೆ ಮಹತಿಗೆ ಮಾರ್ಗ.   ಗುಡ್ಡ ನೀರು ಗೊಡೆ ಪರ್ವತ ಮೊದಲಾದ ಎಷ್ಟೇ ಕಷ್ಟದ ದಾರಿ ಎದುರಾದರೂ ತನ್ನ ನಾಜೂಕುತನದಿಂದ ತನ್ನ ದಾರಿಯನ್ನು ಅತ್ಯಂತ ವೈಭವದಿಂದ ತಾನೇ ಮಾಡಿಕೊಳ್ಳುತ್ತದೆ ಇರುವೆ. ಮಹಾತ್ಮರೂ ಹಾಗೆಯೇ. ತನ್ನವರ ಗುಂಪು ನಿರ್ಮಾಣ ಮಾಡಿಕೊಳ್ಳುತ್ತದೆ. ಏನು ಕಾರಣಕ್ಕೂ ತಮ್ಮವರು ನಡೆದ ದಾರಿಯನ್ನು ಬಿಟ್ಟು ಬೇರೆ ಮಾರ್ಗವನ್ನು ಹಿಡಿಯುದಿಲ್ಲ ಇರುವೆ. ಮಹಾತ್ಮರೂ ಹಾಗೆ ತನ್ನವರು ನಡೆದ ದಾರಿಯಲ್ಲೇ ನಡಿಯುವವರು ಹಾಗೂ ತನ್ನವರನ್ನೂ ನಡೆಸುವವರು.  ಗುಂಪಿಗೆ ಬಲವಿದೆ ಎಂದೇ ತೋರಿಸಿಕೊಡುತ್ತದೆ ಇರುವೆ. ತಾನು ಆರಿಸಿಕೊಂಡ ಉತ್ತಮ ದಾರಿಯನ್ನು ನಾವು ಎಷ್ಟು ಬದಲಾಯಿಸಿದರೂ ಅದೇ ದಾರಿಗೆ ಮತ್ತೆ ಮರಳುತ್ತದೆ. ಛಲ ಬಿಡುವದಿಲ್ಲ. ತನ್ನ ಆಹಾರಕ್ಜಾಗಿ ಎಂದಿಗೂ ಇನ್ನೊಬ್ಬರಿಗೆ ಕೈಯೊಡ್ಡುವದಿಲ್ಲ. *ಹಾಡಿದರೆ ಎನ್ನ ಒಡೆಯನ ಹಾಡಯವೆ - ಬೇಡಿದರೆ ಎನ್ನ ಒಡೆಯಗೆ ಬೇಡುವೆ* ಎನ್ನುವವರು ಮಹಾತ್ಮರು. ತಾನು ಕಟ್ಟಿದ ಮನೆಯಲ್ಲಿ ಹಾವು ದೌರ್ಜನ್ಯದಿಂದ ಬಂದು ವಾಸ ಮಾಡಿದರೂ, ಬೇರೆಯೊಂದು ಮನೆಕಟ್ಟಲು ಯೋಚಿಸುತ್ತದೆಯೇ ಹೊರತು ಅಳತಾ ಕೂಡುವದಿಲ್ಲ.  ಹೀಗೇ ನಾನಾವಿಧ ಗುಣಗಳು ಇರುವಿಯಲ್ಲಿ ಉಂಟು... ಮಹಾತ್ಮರೂ ಅಷ್...

ಸಾಮಾನ್ಯರಾದ ನಮಗೆ ವರ ದೊರಕೀತು..... ಫಲ ದೊರೆಯುವದು ಸುಲಭವಲ್ಲ

Image
  *ಸಾಮಾನ್ಯರಾದ ನಮಗೆ ವರ ದೊರಕೀತು..... ಫಲ ದೊರೆಯುವದು ಸುಲಭವಲ್ಲ* ಫಲಕ್ಕಾಗಿ ವರ, ವರಕ್ಕಾಗಿ ತಪಸ್ಸು, ತಪಸ್ಸಿಗಾಗಿ ಕಾಡು ಮೇಡು ನಾವು ಬಯಸುವ ಹಾದಿ. ಈ ಹಾದಿಯಯಲ್ಲಿ ಕೊನೆ ಮುಟ್ಟುವವರು ಕೆಲವರು ಮಾತ್ರ. ಉಳಿದವರು ಅಲ್ಲಲ್ಲೇ ಜಾರಿದವರೇ. *ಮಹಾ ಫಲಕ್ಕಾಗಿ ಮಂದಭಾಗ್ಯರಾದ ನಾವು ಏನು ಮಾಡುವದು ??* ಅಲ್ಪಭಾಗ್ಯರಾದ ನಮಗೆ ತಪಸ್ಸೇ ಮಹಾ ಮಾರ್ಗ. *ಮಂದಭಾಗ್ಯೋಲ್ಪಭಾಗ್ಯಾನಾಂ ತಪ ಏಕಂ ಸಮಾಸ್ಥಿತಮ್* ಇದು ಮಹಾಭಾರತದ ನಾಣ್ಣುಡಿ. ಆದ್ದರಿಂದ ದೇವತೆಗಳು, ಋಷಿಗಳು ತಪಸ್ಸಿನಲ್ಲಿ ತೊಡಗುತ್ತಾರೆ. ಎಲ್ಲವನ್ನೂ ಪಡೆಯುತ್ತಾರೆ. ವರ ಕೊಡುವ ದಿವ್ಯ ಶಕ್ತಿಯನ್ಬೇ ಪಡೆಯುತ್ತಾರೆ. "ಏನೂ ಇಲ್ಲ, ಎಲ್ಲವೂ ಇದೆ" ಇದು ತಪಸ್ಸಿನ ಫಲ. ಇದನ್ನು ಗಮನಿಸಿದ ಸಾಮಾನ್ಯರಾದ ನಾವು, ಅಥವಾ ದೈತ್ಯರೂ ತಪಸ್ಸಿನಿಂದ ಏನನ್ನಾದರೂ ಪಡೆಯಬಹುದು ಎಂದು ಭಾವಿಸಿ ತಪಸ್ಸಿನಲ್ಲಿ ತೊಡಗಿದರೆ, ಸಿಗುವದು *ವರ* ಮಾತ್ರ. ಫಲ ದೊರೆಯದು. "ಫಲಕ್ಕೆ ಯೋಗ್ಯತೆಯ ತೊಡಕು ಇದೆ. ವರಕ್ಕೆ ಯೋಗವಿದ್ದರೆ ಸಾಕು."  ಫಲ ಪಡೆಯುವದು ಏನಿದೆ ಅದು *ನನಗೆ ಯೋಗ್ಯವಾಗಿರಬೇಕು, ದೇವರ ಇಚ್ಛೆಗೆ ಬಂದಿರಬೇಕು* ಅಂದರೆ ಮಾತ್ರ ಫಲ. ನಮ್ಮ ವಿಚಾರ ಸಾಮಾನ್ಯವಾಗಿ *ನನಗೆ ಅಯೋಗ್ಯವೇ ಆಗಿರುತ್ತದೆ, ದೆವರ ಇಚ್ಛೆಗೆ ವಿರುದ್ಧವೇ ಆಗಿರುತ್ತದೆ* ಆದರೆ ತಪಸ್ಸು ಮಾತ್ರ ಬಿಡಲಾರೆ. ಅಂತಹ ತಪಸ್ಸಿಗೆ ದೆವರು ವರ ಕೊಡುವ ಅದರಲ್ಲಿ ಸಂಶಯವೇ ಇಲ್ಲ. ಫಲ ಕೊಡಲಾರ ಅದುವೂ ಅಷ್ಟೇ ನಿಜ.  ಏನೋ ಒಂದರ ಉದ್ಯೇ...