*ನೋಡುವವರ ಅಜ್ಙಾನದಮೇಲೆ ಬದುಕಿನ ಡೊಂಬರಾಟ*
*ನೋಡುವವರ ಅಜ್ಙಾನದಮೇಲೆ ಬದುಕಿನ ಡೊಂಬರಾಟ*
ತನ್ನ ಬಗ್ಗೆ ತಿಳುವಳಿಕೆ ಎಲ್ಲಿಯವರೆಗೆ, ಎಷ್ಟು ಜನರಿಗೆ ಇರುವದಿಲ್ಲವೋ ಅಲ್ಲಿಯವರೆಗರ ಅಷ್ಟು ಜನರಿಲ್ಲಿ ತನ್ನ ಡೊಂಬರಾಟ ನಡೆಸುತ್ತಿರುತ್ತಾನೆ. ಎಂದು ತನ್ನ ಬಗ್ಗೆ ಸ್ಪಷ್ಟವಾಗಿ ಜನರಿಗೆ ತಿಳಿಯಿತೋ ಅಂದು ತನ್ನೆಲ್ಲ ಬಾಲವನ್ನೂ ಮುದುರಿಕೊಂಡು ಮನೆಯಲ್ಲಿ ಕೂಡುತ್ತಾನೆ. ಅಂತೆಯೇ *ನೋಡುಗರ ಅಜ್ಙಾನ ತನ್ನ ಕುಣಿತಕ್ಕೆ ಕಾರಣ* ಎಂದು. ಅಂತೆಯೇ ನಮ್ಮ ಜ್ಙಾನ ನಮಗೂ ಸ್ಪಷ್ಟ ಇರಬೇಕು. ಇನ್ನೊಬ್ಬರಿಗೂ ಸಷ್ಟಪಡಿಸಿರಬೇಕು. ಇನ್ನೊಬ್ಬರ ಜ್ಙಾನ ನಮಗೂ ಸ್ಪಷ್ಟ ಇರಿಬೇಕು. ನಮಗೆ ಸ್ಪಷ್ಟ ಇದೆ ಎಂದು ತಿಳಿಸಿರಲೂ ಬೇಕು. ಇಲ್ಲವೋ ಡೊಂಬರಾಟ ಇರುವದೇ.
ಜ್ಙಾನ ಜ್ಙಾನಕ್ಕಭಿಮಾನಿನೀ ಸರಸ್ವತೀದೇವಿ. ಸರಸ್ವತಿ ಕರೆದವರ ಕೂಸು. ಸಲಹುವ ಯೋಗ್ಯತೆ ಇರುವಲ್ಲಿ ನೆಲೆಸುವ ಮಹಾತಾಯಿ.
ಸರಸ್ವತಿಯನ್ನು ಕರೆಯಲೂ ಯೋಗ್ಯತೆ ಬೇಕು.
ವಿದ್ಯೆ ಇದು ಯಾರೊಬ್ಬರ ಮೊನಾಪಲ್ಲಿ ಅಲ್ಲ. ಯಾರಲ್ಲಿದ್ದರೂ ವಿದ್ಯೆಯೇ. ವಿದ್ಯೆ ಪಡೆದವರು ವಂದ್ಯರೇ. ಕುಲ ವಯಸ್ಸು ಯಾವುದರ ಸಂಬಂಧವಿಲ್ಲ.
ವಿದ್ಯೆ ಇರುವವ ಜಗತ್ತು ಹಾಗೂ ಜಗತ್ತಿನ ಜನ ಮತ್ತು ಜಗನ್ನಿಯಾಮಕ ಸ್ವಾಮಿ ಎಲ್ಲರಿಗೂ ಪ್ರಿಯನೇ ಆಗುವ ಇದು ವಿದ್ಯೆಯ ಮಹತಿ.
ವಿದ್ಯೆಯಿಲ್ಲ ಎಂದಾದರೆ ಎಲ್ಲರೂ ಡೊಂಬರಾಟ ಮಾಡಲು ಆರಂಭಿಸುತ್ತಾರೆ. "ನಮ್ಮ ಅಜ್ಙಾನ ಪರರ ಕುಣಿತಕ್ಕೆ ಕಾರಣ" ಯಾವುದೇ ವ್ಯಕ್ತಿ ಡೊಂಬರಾಟ ಮಾಡಲು ನೌಟಂಕಿ ಮಾಡಲು ಆರಂಭಿಸುತ್ತಾನೆ ಎಂದಾದರೆ ಅದಕ್ಕೆ ಮೂಲ ನಮ್ಮ ವಿದ್ಯೆಯ ಕೊರೆತೆ ಹಾಗೂ ನಮ್ಮ ಅಜ್ಙಾನ.
ನಮ್ಮ ಅಜ್ಙಾನ ವಿದ್ಯೆ ಇಲ್ಲದಿರುವಿಕೆ ದೇವರ ಅಪ್ರೀತಿಗೆ ಕಾರಣ. ದೇವರಿಗೆ ಎಷ್ಟು ಅಪ್ರಿಯರೋ ಅಷ್ಟೇ ಜಗತ್ತು ನಮ್ಮನ್ನು ಕುಣಿಸಲು ಹವಣಿಸುತ್ತದೆ.
*ವಿದ್ಯಾವಂತನಾಗು, ಬುದ್ಧಿವಂತನಾಗು* ಎಂದು ಹಿರಿಯರು ಹರಿಸಲು ಕಾರಣವಾಯಿತೋ ಏನೋ ಎಂದನ್ನಿಸುತ್ತದೆ.
ವಿದ್ಯೆ ಬುದ್ಧಿಗಳಿಗೆ ಅಭಿಮಾನಿನೀಯಾದ ಸರಸ್ವತಿದೇವಿಯನ್ನು ನಮ್ಮಲ್ಲಿ ನೆಲೆಸುವಂತೆ ಮಾಡೋಣ. ಅವಳ ಸೇವೆಯನ್ನು ಮಾಡೋಣ. ಅವಳ ಕರುಣೆಗೆ ಪಾತ್ರರಾಗೋಣ. ಜ್ಙಾನ ಬರತ್ತೆ. ಜ್ಙಾನಿಯಾಗುವ. ಆಗ ತಾ ಡೊಂಬರ ಮಾಡಲಾರ. ಪರರ ಡೊಂಬರಾಟಕ್ಕೆ ಗುರಿಯಾಲಾರ...
*✍🏼✍🏼ನ್ಯಾಸ*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
Comments