ಒಂದು ಸುಳ್ಳು, ಶಾಪ ಹಲವು


"ಒಂದು ಸುಳ್ಳು, ಶಾಪ ಹಲವು"

ಸುಳ್ಳು ಹೇಳುವದು ಸುಲಭ. ಒಂದು ಸುಳ್ಳು ಹತ್ತು ರೀತಿಯಿಂದ ತನಗೆ ಶಾಪವಾಗಿ ಬಂದೆರಗುತ್ತದೆ. ಇದು ಅಷ್ಟೇ ನಿಜ. ಅನೇಕ ನಿದರ್ಶನಗಳು ಕಾಣಸಿಗುತ್ತದೆ. 

ಸುಳ್ಳುಹೇಳುವವ ತುಂಬ ಬುದ್ಧಿವಂತ. ಆದರೆ ಆ ಬುದ್ದಿಮತ್ತದ ಮಟ್ಟ ತುಂಬ ಕೆಳಸ್ತರದ್ದು. "ಕೀಳು ಬುದ್ಧಿವಂತ" ಎಂದು ಬಿಂಬಿತವಾಗುತ್ತದೆ. ಇದುವೇ ಮೊದಲ ಶಾಪ.

ಕೆಲಸಗಳಿಂದ ನುಣುಚಿಕೊಳ್ಳುವವ ಸುಳ್ಳು ಹೇಳುತ್ತಾನೆ. ಅದರಿಂದ ಅವನನ್ನು ಜಗತ್ತು ಗುರುತಿಸುವದು "ಕೆಲಸಗಳ್ಳ (ಕಾಮ್ ಚೋರ್ ) " ಎಂದು. ಇದು ಇನ್ನೊಂದು ಶಾಪ.

ಹೇಳಿದ ಸುಳ್ಳಿನ ರಕ್ಷಣೆಗೆ ಮತ್ತೊಂದು ಸುಳ್ಳು,  ಅದರ ರಕ್ಷಣೆಗೆ ಮತ್ತೊಂದು ಸುಳ್ಳು. ಹೀಗೆ ಸುಳ್ಳಿನ ಸರಪಳಿಯನ್ನೇ ನಿರ್ಮಾಣ ಮಾಡುವ ಸುಳ್ಳಿನ ನಿರ್ಮಾತ್ರು ಎಂದಾಗುವ. ಇದು‌ ಮುಗದೊಂದು ಶಾಪ.

ಸುಳ್ಳು ಹೇಳಿದಾಗ ಒಂದು ತರಹದ ಆನಂದವಾಗುತ್ತದೆ. ಆ ಆನಂದಕ್ಕಾಗಿ ಪದೇ ಪದೇ ಸುಳ್ಳು ಹೇಳುತ್ತಾನೆ. ಆದರೆ ಆ ಆನಂದ ಕೆಸರಿನಲ್ಲಿಯ ಹುಳ ತಿಂದಾಗಿನ ಆನಂದದಂತಹ ಆನಂದ. ಅಂದರೇ ಅತೀ ಕೆಳಮಟ್ಟದ್ದು. ಇದು ಮತ್ತೊಂದು ಶಾಪ.

ಸುಳ್ಳು ಹೇಳಿದಾಗ ತನ್ನ ಬುದ್ದಿವಂತೆಕೆಯ ಮೇಲೆಯೇ ಒಂದು ಮೆಚ್ಚುಗೆಯ ಭಾವ ಮೂಡುತ್ತದೆ. ಈ ಭಾವ ಮಹಾ ಶಾಪವೆ. ಬೆನ್ನು ಬಿಡದ ಬೇತಾಳವಿದ್ದಂತೆಯೇ. ಈ ದಿಕ್ಕಿನಲ್ಲಿ ಇನ್ನೂ ಪ್ರೇರೇಪಿಸುತ್ತದೆ. ಈ ತರಹದ ಮೆಚ್ಚುವಿಕೆಯ ಮೋಹ ಗೋರವಾದ ಶಾಪವೇ..

ಸುಳ್ಳು ತಾತ್ಕಾಲಿಕ ಜಯದ ಭ್ರಾಂತಿ ಹಾಗೂ ಮಹಾ ಹಠಮಾರಿತನವನ್ನು ತಂದುಕೊಡುತ್ತದೆ. ಸಿಕ್ಕು ಬಿದ್ದಾಗಲೂ ಒಪ್ಪಿಕೊಳ್ಳದಂತೆ ಪ್ರೇರಿಸುತ್ತದೆ. 'ಮತ್ತೊಂದು ಸುಳ್ಳು ಹೇಳು' ಬಚಾವ್ ಆಗು ಎಂದು ಉದ್ಭೋಧಿಸುತ್ತದೆ.

'ಸುಳ್ಳು ಹೇಳುತ್ತಿದ್ದಾನೆ ಎಂದು ಗುರುತಿಸುತ್ತಾರೆ, ನೀ ಸುಳ್ಳು ಹೇಳುತ್ತಾ ಇದ್ದೀ ಎಂದು ಯಾರೂ ಬಾಯಿಬಿಟ್ಟು ಹೇಳಲಾರರು' ಇದುವೆ ತನ್ನ ಜಯ ಎಂದು ಭ್ರಾಂತಿಯಲ್ಲಿ ಮುಳುಗಿಬಿಡುತ್ತಾನೆ. ಇದು ಮಹಾಶಾಪ. 

ಇವೆಲ್ಲವೂ ತನಗೆ ಹಾನಿ ತಂದುಕೊಡುತ್ತದೆ ಎಂದು ಅರಿವಾದರೂ ಮತ್ತೊಂದು ಸುಳ್ಳು ಹೇಳಿ ಎದ್ದುಬರುವೆ ಎಂಬ ಅತೀ ಆತ್ಮವಿಶ್ವಾಸ. ಇದು ಮತ್ತೊಂದು ಘೋರ. ಒಂದು ಸುಳ್ಳು ಈ ತರಹ ನೂರಾರು ಸರಪಳಿಗಳೆಂಬ ಕೆಸರಿನಲ್ಲಿ ಸಿಕ್ಕು ಹಾಕಿಕೊಳ್ಳುತಾ ಸಾಗುವ. 

ಒಂದು ಸುಳ್ಳು‌ನೆಮ್ಮದಿಯನ್ನೇ ಹಾಳುಗೆಡುವುತ್ತದೆ. ಹಗಲು ರಾತ್ರಿ ನೆಮ್ಮದಿ ಕೆಡಿಸಿಕೊಳ್ಳುವ. ಕೊನೆಗೆ ಸಿಕ್ಕು ಬೀಳುವ. ಇನ್ನೂ ಘೋರ ಶಿಕ್ಷೆಗೆ ಗುರಿಯಾಗುವ. ಇದುವೇ ಸುಳ್ಳಿನ ಮಹಾ ಫಲ. ಹೀಗೆ ಸುಳ್ಳಿನಿಂದಾಗುವ ಒಂದುಂದು ಫಲವೂ ನಮಗೆ ಶಾಪವೇ. ಶಾಪಗ್ರಸ್ತ ಎಂದಿಗೂ ಮೇಲೇಳಲಾರ. 


ಅನಾಯಾಸೇನ‌, ಗುರುಗಳಿಲ್ಲದೇ, ಸ್ವತಃ ಒದಗುವ ವಿದ್ಯೆ ಒಂದಿದ್ದರೆ ಅದು *ಸುಳ್ಳೇ....* ಕಷ್ಟಪಟ್ಟಾದರೂ ಚಿಂತೆಯಿಲ್ಲ, ಗುರೂಪದೇಶ ಪಡೆದಾದರೂ ಅಡ್ಡಿಯಿಲ್ಲ ಸತ್ಯವನ್ನೇ ಬಯಸುವದು ಅತ್ಯುತ್ಕೃಷ್ಟ. ಸುಳ್ಳು ಮಾತಾಡುವದು ಅಷ್ಟೇ ಬಾಲಿಶ. ಹಲವಾರು ಶಾಪಗಳಿಗೆ ಗ್ರಸ್ತನಾಗುವದಕ್ಕಿಂತೂ ಕ್ಷಣದ ದುಃಖವನ್ನು ಕೊಡುವ ಸತ್ಯವೇ ಮೇಲು ಎಂದೆನಿಸುತ್ತದೆ........ 

*✍🏽✍🏽ನ್ಯಾಸ....*

ಗೋಪಾಲದಾಸ.

ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*