ಬಲಿಪ್ರತಿಪದಾ ಶುಭದಿನದ ಶುಭ ಆಶಂಸನೆಗಳೊಂದಿಗೆ ಒಂದು ಚಿಂತನೆ*
*ಬಲಿಪ್ರತಿಪದಾ ಶುಭದಿನದ ಶುಭ ಆಶಂಸನೆಗಳೊಂದಿಗೆ ಒಂದು ಚಿಂತನೆ*
ಈ ..... ಸಂವತ್ಸರದ "ಬಲಿಪ್ರತಿಪತ್" ದಿನವು ಬಲಿಯ ಅನೇಕ ದುರ್ಗುಣಗಳನ್ನು ಹಾಗೂ ದುರ್ವಿಚಾರಗಳನ್ನು ಪರಿಹರಿಸಿದಂತೆ ನಮಗೂ ನಮ್ಮ ದುರ್ಗುಣಗಳನ್ನು ಹಾಗೂ ದುರ್ವಿಚಾರಗಳನ್ನೂ ಪರಿಹರಿಸಿ ತನ್ನ ಪಾದಾರವಿಂದಗಳ ಸನ್ನಿಧಾನವನ್ನು ಒದಗಿಸಿಲಿ.
*ಬಲಿಚಕ್ರವರ್ತಿ*
ಬಲಿ ಸ್ವಾಭಾವಿಕ ವಿಷ್ಣುಭಕ್ತ. ಮುಕ್ತಿಯೋಗ್ಯ. ಆದರೆ ಜನ್ಮ ದುಷ್ಟರಲ್ಲಿ. ಸಹವಾಸ ದುಷ್ಟರದ್ದೇ. ಆ ಎಲ್ಲಾ ದೈತ್ಯರ ಚಕ್ರವರ್ತಿ. ಅನಿವಾರ್ಯವಾಗಿ ದುರ್ಗುಣಗಳನ್ನೇ ರೂಢಿಸಿಕೊಳ್ಳಬೇಕಾಯ್ತು. ದುರ್ವಿಚಾರಗಳೇ ಮೈದೆಳೆದವು.
"ಮುಖವನ್ನು ನೋಡಿ ಮಣಿಹಾಕದ" ಕರುಣಾಮಯಿಯಾದ ದೇವ, ಹಿಂದಿನ ಒಳಗಿನ ಸ್ವಭಾವವನ್ನು ನೋಡಿ, ಓಡಿ ಬಂದು ಆ ಎಲ್ಲ ದುರ್ಗುಣಗಳನ್ನೂ ಕಳೆದ. ದುರ್ವಿಚಾರಗಳಿಂದಲೂ ಮುಕ್ತನನ್ಬಾಗಿಸಿದ. ತುಂಬ ವಿಚಿತ್ರ ದೈತ್ಯರ ಚಕ್ರವರ್ತಿಯಾಗಿ ಇಂದಿಗೂ ದೈತ್ಯರ ಮಧ್ಯದಲ್ಲಿಯೇ ಇದ್ದರೂ ದೈತ್ಯಗುಣಗಳ ದುರ್ವಿಚಾರಗಳ ಪ್ರಭಾವವೂ ಆಗದೇ, ಗಂಧವೂ ಸೋಸದಂತೆ ಮಾಡಿ ತನ್ನ ಪಾದಾರವಿಂದ ಬಲಿಯ ತಲೆಯಮೇಲಿಟ್ಟು, ದ್ವಾರಪಾಲಕನಾಗಿ ನಿಂತ. ಇದು ದೇವರ ಕಾರುಣ್ಯ.
ಈ ವಿಶೇಷವಾದ ಕಾರುಣ್ಯ ನಿತ್ಯ ನೆನೆಯಲೇಬೇಕು. ನಾಳೆಯದಿನ ವಿಶೇಷವಾಗಿ ನೆನೆಯೋಣ. ನಮ್ಮ ದುರ್ಗುಣ ದುರ್ವಿಚಾರಗಳಿಂದ ದೂರಾಗೋಣ.....
*ವಾಮನ - ತ್ರಿವಿಕ್ರಮ*
ಅತ್ಯಂತ ಕರುಣಾಮಯಿ ತಾ ಅವತರಿಸುವದು ತನಗಾಗಿ ಅಲ್ಲ. ಕೇವಲ ನಮಗಾಗಿ. *ದೇರೊಗೋಸ್ಕರ ನಾವೇನು ಮಾಡದಿದ್ದರೂ, ದೇವರ ಮಾತು ಹಠದಿಂದ ವಿರೋಧ ಮಾಡಿದರೂ, ದೇವ ತಾ ಮಾತ್ರ ನಮಗೋಸ್ಕರ ಏನು ಮಾಡಲೂ ಸಿದ್ಧ.* ಈ ಎಚ್ಚರ ಕೊಡುವದೇ ದೇವರ ಅವತಾರಗಳು.
ನಾವು ಯಾರಿಗೋಸ್ಕರ ದೇವರನ್ನು ಮರೆತಿದ್ದೇವೆಯೋ ಅವರ್ಯಾರೂ ನಮಗಾಗಿ *ಒಂದೇ ದಿನ ಭಕ್ಷೆ ಬೇಡಲು ಸಿದ್ಧರಾಗುವದಿಲ್ಲ* ಆದರೆ ದೇವರು ಮಾತ್ರ ನಮಗೋಸ್ಕರವೇ ಭಕ್ತರಿಗೋಸ್ಕರವೇ *ಭಿಕ್ಷೆ ಬೇಡಲೂ ಸಿದ್ಧ.* ಏನು ಮಾಡಲೂ ಸಿದ್ಧ. ಇದು ದೇವರ ಕಾರುಣ್ಯ. ಆ ಕಾರುಣ್ಯದ ದುರುಪಯೋಗ ನಮ್ಮಲ್ಲಿ ಮಾತ್ರ ಕಾಣಬಹುದು.
ದೇವ ತಾ ಕಾರುಣ್ಯವನ್ನು ಮಾತ್ರ ತೋರಿಸುದಿಲ್ಲ. ತನ್ನ ಅಮೋಘ ಶಕ್ತಯನ್ನೂ ತೋರಿಸುವದಕ್ಕಾಗಿಯೇನೆ *ತ್ರಿವಿಕ್ರಮನಾಗಿ ಹೆದ್ದೈವನಾಗಿ ನಿಂತ* ನನ್ನ ಪೂಜೆ ಆರಾಧನೆ ಜ್ಙಾನ ಇವುಗಳು ನನ್ನ ಆಜ್ಙೆ. ನನ್ನ ಕರುಣೆಯನ್ನು ದುರುಪಯೋಗ ತೆಗೆದುಕೊಳ್ಳವದಾದರೆ ತ್ರಿವಿಕ್ರಮನಾಗಿ ಅತೀ ಘೋರ ರೂಪವನ್ನೂ ತಾಳಿ ಶಿಕ್ಷೆ ಕೊಡಲೂ ಸಿದ್ಧ. *ಭಕ್ತನಾಗಿದ್ದರೆ ತನ್ನ ಪಾದಗಳಿಗೆ ಆಭರಣವನ್ನೂ ಮಾಡಿಕೊಳ್ಳಲೂ ಸಿದ್ಧ.* ಮುಂದಿನದು ನಮ್ಮ ವಿಚಾರ.
*ಹಬ್ಬ ಹರಿದಿನಗಳು*
ಹಬ್ಬ ಹರಿದಿನಗಳು ಇಂದು ಕೇವಲ ಊಟ, ವೈಭವ, ಆಡಂಬರ ಇವುಗಳಿಗೆ ಮಾತ್ರ ಸೀಮಿತವಾಗಿವೆ. ಹಬ್ಬಗಳ ಉದ್ಯೇಶ್ಯ ಸರ್ವಥಾ ಊಟವಲ್ಲ. ಕಿಂತು ಧರ್ಮ ಮಾರ್ಗದಿಂದ, ದೇವಮಾರ್ಗದಿಂದ ವಿಮುಖರಾದವರಿಗೆ, ಈ ತರಹದ ಕಥೆಗಳನ್ನು, ಸೂಚಕಗಳನ್ನು ತಿಳಿಸುವ ಮುಖಾಂತರ ಎಚ್ಚರಿಸುವದೇ ಹಬ್ಬ ಹರಿದಿನಗಳ ಸಂಕೆತ.
*ಬಲಿ ಪ್ರತಿಪದಾ ಹಬ್ಬದ ಹೃತ್ಪೂರ್ವಕ ಶುಭಾಷಯಗಳು.... ....... ನಾಮ ಸಂವತ್ಸರದ ಈ ಬಲಿಪ್ರತಿಪತ್ ಅಂಧಕಾರವನ್ನು ರೋಗಗಳನ್ನು ಕಳೆದು ಆರೋಗ್ಯ ಜ್ಙಾನ ಇವುಗಳನ್ನೇ ದಯಪಾಲಿಸುವ ಮುಖಾಂತರ ಧರ್ಮಮಾರ್ಗದಲ್ಲಿಯೇ ಇರಿಸಲಿ, ಬೆಳಿಸಲಿ, ಅಭಿವೃದ್ಧಿಯನ್ನೀಯಲಿ.....💐🌹🌹*
*✍🏽✍🏽ನ್ಯಾಸ...*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
Comments