ಲಕ್ಷ್ಯ ಮುಟ್ಟುವವರೆಗೂ ವಿಶ್ರಾಂತಿ ಬೇಡ - ನಮ್ಮನ್ನು ಬದಲಾಯಿಸುವದೇ ನಮ್ಮ ಪ್ರಯತ್ನ


 ಲಕ್ಷ್ಯ ಮುಟ್ಟುವವರೆಗೂ ವಿಶ್ರಾಂತಿ ಬೇಡ - ನಮ್ಮನ್ನು ಬದಲಾಯಿಸುವದೇ ನಮ್ಮ ಪ್ರಯತ್ನ

ಮನುಷ್ಯನಿಗೆ ಗುರಿಗಳು ಲಕ್ಷ್ಯಗಳು ಇರಲೇಬೇಕು. ಆ ಗುರಿ ಲಕ್ಷ್ಯ ಸಾಧಿಸುವವರೆಗೂ ವಿಶ್ರಾಂತಿಯನ್ನು ತೆಗೆದುಕೊಳ್ಳಲೇ ಬಾರದು. ಒಂದು ಬಾರಿ ಗುರಿ ತಲುಪಿದ ಎಂದಾದರೆ ಇನ್ನು ಅವನನ್ನು ಹಿಡಿಯುವವರು ಇರುವದಿಲ್ಲ. ಅವನನ್ನು ಮೀರಿಸಿದವರೇ ಬರಬೆಕು.


*ಕನಸಗಳೇ ಗುರಿಗಳು....*

ಕನಸ್ಸುಗಳನ್ನು ಕಾಣುತ್ತಾನೆ. ಸಹಜ ಸ್ವಭಾವ. ಆ ಕನಸುಗಳೇ ಗುರಿಗಳಾಗಿರುತ್ತವೆ. ಆ ಗುರಿ ತಲುಪವಾದಕ್ಕೆ ಶ್ರಮವಹಿಸಿದಿದ್ದರೆ ಕನನಸುಗಳಾಗಿಯೇ ಉಳಿಯುತ್ತವೆ. 

"ಕನಸು ಕಾಣು, ಕಂಡ ಕನಸ್ಸನ್ನು ಗುರಿಯಾಗಿಸು, ಗುರಿ ಸಾಧಿಸುವ ವರೆಗೆ ವಿಶ್ರಾಂತಿ ಬೇಡ, ಲಕ್ಷ್ಯ ತಲುಪಿದ ನಂತರ ನಿನ್ನ ಹುಡುಕಿಕೊಂಡು ಬರುವದು ಜಗತ್ತು" ಇದು ಜಗದ ನಿಯಮ. 

ಸಕಲ ಜೀವರಿಗೂ ಕನಸು ಕಾಣುವ ಕಲೆ  ದೇವರು ಕೊಟ್ಟಿದ್ದಾನೆ. ಇದೊಂದು ಅದ್ಭುತ. ಮಾನವನಿಗೆ ತಾ ಕಂಡ ಮನಸ್ಸನ್ನು ಗುರಿ ಮಾಡಿಕೊಳ್ಳುವ ಕಲೆ ಕೊಟ್ಟಿದ್ದಾನೆ ಇದು ಇನ್ನೂ ಅದ್ಭುತ. ಪ್ರಯತ್ನ ಶೀಲ, ದೂರದೃಷ್ಟಿಯ ಪುರುಷರಿಗೆ ಆ ಗುರಿ ಸಾಧಿಸುವ ಶಕ್ತಿಯನ್ನೂ ಕೊಟ್ಟಿದ್ದಾನೆ ಇದು ಪರಮಾದ್ಭುತ ವರ. ದೇವರ ಮಹಾ ಕಾರುಣ್ಯ.

ಕನುಸು ಕಾಣುವದಕ್ಕೆ ತಾನು ಸ್ವತಂತ್ರ. ತನ್ನದೇ ಆದ ಹಕ್ಕು. ಯಾರೂ ಇದಕ್ಕೆ ಅಡ್ಡಿಬರಲಾರರು. ಯಾವ ಸರಕಾರವೂ ಶುಲ್ಕ ವಿಧಿಸಲಾರದು. ಹಾಗಿದ್ದರೂ "ಬಾಲಿಶ ಕನಸು ಕಾಣುವದೇನಿದೆ ಇವನ ಹೇಡಿತನವನ್ನೇ ಪ್ರತಿಬಿಂಬಿಸುತ್ತದೆ". ತನ್ನ ಜೀವನದ ಮಹೋನ್ನತಿಯ ಗುರಿಗೆ ಕಾರಣವಾಗದ ಕಂಡ ಕನಸು ಅದು ಅನುಪಯುಕ್ತ ಕನಸು. ಅದು ನಿಕೃಷ್ಟ ಕನಸು.

"ಕನುಸುಗಳನ್ನು ನನಸು ಮಾಡುವ ಪ್ರಕ್ರಿಯೆಗೆ ಚಾಲನೆ ಕೊಡುವದೇ ಗುರಿ ಸಾಧನೆ" ಎಂದು ಹೇಳುತ್ತಾರೆ ಹಿರಿಯರು.

ಮಹಾ ಯಶಸ್ವೀ ಪುರುಷನ ಹಿಂದೆ ದೊಡ್ಡದಾದ ಕನಸುಗಳಿವೆ. ಸಾಧಿಸುವ ಅವಿರತ ಛಲವಿದೆ. ಅಂತೆಯೇ ಯಶಸ್ವೀ ಪುರುಷ ಎಂದಾಗಿದಾನೆ. ಭವಿಷ್ಯವನ್ನೂ ತಮ್ಮ ಹತೋಟಿಯಲ್ಲಿ ಇಟ್ಟುಕೊಂಡ ವ್ಯಕ್ತಿಗಳೇ ಮಹಾ ಯಶಸ್ವೀ ಪುರುಷರು. 

ಮಹತ್ತರವಾದ ( ವಿದ್ಯಾವಂತ. ಧನವಂತ. ಶೀಲವಂತ. ವಿನಯ. ಧಾರ್ಮಿಕ. ಭಕ್ತಿವಂತ. ದಾನಿ. ಸಮಾಜಸೇವಕ. ಸಮಾಜಸುಧಾರಕ. ಅಪರೋಕ್ಷ ಜ್ಙಾನಿ ಇತ್ಯಾದಿ ಇತ್ಯಾದಿ)   ಆಸೆಗಳು ಕನಸುಗಳು ಇರಲಿ ಇದು ಮೊದಲ ಹೆಜ್ಜೆ.  ಅವುಗಳನ್ನು ಸಾಧಿಸುವ ಛಲವಿರಲಿ ಎರಡನೆ ಹೆಜ್ಜೆ . ಸಾಧಿಸುವವರೆಗೂ ವಿಶಾಂತಿ ಬೇಡ. *ಅವಿರತ ಶ್ರಮಕ್ಕೆ ಭಾಗದ ವಸ್ತು ಇಲ್ಲವೇ ಇಲ್ಲ*. ಹೀಗಾದರೆ ಯಶಸ್ಸಿನ ತುತ್ತ ತುದಿಯಲ್ಲಿ ಇರುವದಂತೂ ನಿಶ್ಚಿತ. 

ದೇವರು ಮೋಕ್ಷ, ಪದವಿಗಳು, ಶಾಸ್ತ್ರಜ್ಙಾನ, ಇವುಗಳನ್ನಾರಂಭಿಸಿ ಲಕ್ಷ್ಯ ಯಾವುದೇ   ಆಗಿರಬಹುದು ಅದನ್ನು  ಪಡೆದಮೆಲೆಯೇ ವಿಶ್ರಾಂತಿ ಪಡೆಯುವವರು ಸಾಧಕರು ಸಿದ್ಧಪುರುಷರು ಎಂದಾಗುತ್ತಾರೆ. ಊಹೆಗೆ ನಿಲುಕದ ಯಶಸ್ಸನ್ನು ಸಂಪಾದಿಸಿಕೊಂಡಿರುತ್ತಾರೆ. ಈ ತರಹದ ವಿಷಯವನ್ನು ಮನವರಿಕೆ ಮಾಡುವ  ಕಥೆಗಳು ನುರಾರು. ಅವೆಲ್ಲವೂ ಮಹಾಭಾರತ ಭಗವತಗಳಲ್ಲಿ ಸಿಕ್ಕು ಬರುತ್ತವೆ. 

ನಿತ್ಯಕೇಳುವ ಮಹಾಭಾರತ ಭಗವತ ಗುರಿಸಾಧಿಸುವ ಪುರುಷರಂತೆ ಛಲವನ್ನು ಅವಿರತ ಪರಿಶ್ರವನ್ನು ಬೋಧಿಸುತ್ತವೆ. ಪುಟ್ಟ ಧೃವ ಪ್ರಲ್ಹಾದರಿಗೆ ಪುಟ್ಟರಿದ್ದಾಗಲೇ ಗುರಿ ನಿಶ್ಚಿತವಾಗಿತ್ತು. ಪುಟ್ಟವರಿದ್ದಾಗಲೇ ಸಾಧಿಸಿಯೂ ತೀರಿದರು. ಈ ತರಹದ ಉದ್ಭೋಧಕ ನೂರಾರು ನಿದರ್ಶನಗಳು ಸಿಗುತ್ತವೆ. 


ಕನಸು ಗುರಿಗಳಾಗಲಿ. ಗುರಿ ಸಿದ್ಧವಾಗಲಿ. ಗುರಿ ಸಾಧಿಸುವವರೆಗೂ ಶ್ರಮ ನಮ್ಮದಾಗಲಿ. ಗುರಿ ಸಾಧಿಸಿದ ಜೀವನ ಗೌರವಯುಕ್ತವಾಗಲಿ. ಇದುವೇ ಇಂದಿನ ಸೂಕ್ತ ನೀತಿ....... *ಪ್ರಯತ್ನಶಿಲತೆ  ನಮ್ಮನ್ನು ಬದಲಾಯಿಸುತ್ತದೆ.....* ಇದು ಸತ್ಯ.



*✍🏽✍🏽ನ್ಯಾಸ.....*

ಗೋಪಾಲದಾಸ

ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*