*ಅತ್ತೆ - ಸೊಸೆ - ತಂದೆತಾಯಿ* (ಹಾಗೆ ಸುಮ್ಮನೆ ಕಾಲ್ಪನಿಕ ವಿಚಾರ)
* ಅತ್ತೆ - ಸೊಸೆ - ತಂದೆತಾಯಿ* (ಹಾಗೆ ಸುಮ್ಮನೆ ಕಾಲ್ಪನಿಕ ವಿಚಾರ) ಈಗಷ್ಟೇ ಮದುವೆ ಆಗಿ ಹೆಣ್ಣು ಗಂಡನ ಮನೆಗೆ ತನ್ನ ಅತ್ತೆಯ ಜೊತೆ ಬಂದಿದ್ದಳು. ಕೆಲವು ದಿನಗಳ ನಂತರ ಅವಳಿಗೆ ತನ್ನ ಅತ್ತೆಯ ಜೊತೆ ಒಂದೇ ಮನೆಯಲ್ಲಿ ಬದುಕಲು ಕಷ್ಟವಾಗುತ್ತದೆ ತನ್ನ ಅತ್ತೆ ಹಳೆಯ ಕಾಲದವರು ಅವರದು ಹಳೆ ಫ್ಯಾಷನ್ ಮತ್ತು ಅವರ ಯೋಚನೆ ಅಭಿಪ್ರಾಯಗಳು ತನ್ನ ಯೋಚನೆ ಅಭಿಪ್ರಾಯಗಳಿಗೆ ತದ್ವಿರುದ್ದವಾಗಿವೆ ಅಂದುಕೊಳ್ಳಲು ಆರಂಭಿಸಿದಳು. ಇದರಿಂದಾಗಿ ಇಬ್ಬರು ಜಗಳ ಆಡಲು ಪ್ರಾರಂಭಿಸಿದರು. ತಿಂಗಳುಗಳು ಕಳೆದವು ಅವಳ ಮತ್ತು ಅತ್ತೆಯ ಜೀವನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಬರಿ ಜಗಳವೇ ಇತ್ತು . ಅವಳ ಅತ್ತೆಯು ಯಾವುದೇ ಕೆಲಸ ಮತ್ತು ವಿಚಾರದಲ್ಲಿ ಹೇಗೆ ಇರಬೇಕು ಹೇಗೆ ಮಾಡಬೇಕು ಎಂದು ಅಭಿಪ್ರಾಯ ನೀಡುತ್ತಿದ್ದರು. ಇದು ಅವಳಿಗೆ ಸ್ವಲ್ಪಾನು ಇಷ್ಟ ಆಗಿರಲಿಲ್ಲ. ಒಂದು ರಾತ್ರಿ ತನ್ನ ಗಂಡನಿಗೆ ಬೇರೆ ಮನೆ ಮಾಡುವ ವಿಚಾರವನ್ನು ಹೇಳಿ ತನಗೆ ಇಲ್ಲಿ ಇರಲು ಆಗಲ್ಲ ನಿಮ್ಮ ಅಮ್ಮ ಮತ್ತು ನನಗೆ ಸರಿ ಆಗಲ್ಲ ಎಲ್ಲ ವಿಷಯದಲ್ಲೂ ನನ್ನ ಜೊತೆ ಜಗಳ ಆಡುತ್ತಾರೆ ಅಂದಳು. ಆದರೆ ಗಂಡ ಸಹ ತನ್ನ ತಾಯಿಯ ಪರವಾಗಿ ಮಾತಾಡಿ ಬೇರೆ ಮನೆ ಮಾಡುವ ಕನಸು ಕೂಡ ಬೇಡ ಅಂದನು. ಅವಳು ಸಿಟ್ಟಿನಿಂದ ಮರುದಿನ ಮನೆ ಬಿಟ್ಟು ಅವಳ ಮನೆಗೆ ಹೋದಳು. *ಉಗ್ರನಿರ್ಧಾರ* ಅವಳು ತನ್ನ ಮನೆಗೆ ಹೋಗಿ ತಂದೆಯ ಬಳಿ ನಡೆದುದನ್ನೆಲಾ ಹೇಳಿದಳು. ಅವಳ ತಂದೆಯು ಒಬ್ಬ ಆಯುರ್ವೇದ ಪಂಡಿತರು ಜ್ಞಾನಿಯು ಆಗಿದ್ದರು. ಅವಳು ಅ...