*ತರುಣ(ಉಪ) ಕುಲಾಧಿಪತಿ - ಪಂ ವಿಶ್ವಪ್ರಜ್ಙಾಚಾರ್ಯ*
*ತರುಣ(ಉಪ) ಕುಲಾಧಿಪತಿ - ಪಂ ವಿಶ್ವಪ್ರಜ್ಙಾಚಾರ್ಯ* ಎಂಭತ್ತು ವರ್ಷಗಳ ಅತ್ಯಂತ ಪ್ರಾಚೀನವಾದ ವಿದ್ಯಾಪೀಠವೆಂದರೆ ಅದು *ಸತ್ಯಧ್ಯಾನ ವಿದ್ಯಾಪೀಠ.* 1937 ರಲ್ಲಿ *ವಾಣೀ ವಿಹಾರ ವಿದ್ಯಾಲಯ* ಎಂಬ ಹೆಸರಿನಿಂದ ಆರಂಭವಾದ ವಿದ್ಯಾಲಯ, ಅತ್ಯಂತ ಪ್ರಾಚೀನ ವಿದ್ಯಾಸಂಸ್ಥೆ. ಈ ವಿದ್ಯಾಲಯ ಎಂಟು ವಿದ್ಯಾರ್ಥಿಗಳಿಂದ ಹಾಗೂ ಎಂಟು ರೂಪಾಯಿಗಳಿಂದ ಆರಂಭವಾದ ವಿದ್ಯಾಲಯ. ಒಂದುವರೆ ಲಕ್ಷಕ್ಕೂ ಹೆಚ್ಚಾದ ಪುಸ್ತಕಗಳಿಂದ ಒಳಗೊಂಡ ಮಹಾ ವಿದ್ಯಾಲಯ. ಈ ಮಹಾವಿದ್ಯಾಲಯದ ಸಂಸ್ಥಾಪಕರು ಪಂಡಿತರಾಜ, ಪಂಡಿತರತ್ನ ಇತ್ಯಾದಿ ಅನೇಕ ಬಿರಿದು ಭೂಷಿತರಾದ *ಪರಮಪೂಜ್ಯ ಪಂ. ಮಾಹುಲೀ ( ಪಂ. ಮಾಹುಲೀ ಗೋಪಾಲಾಚಾರ್ಯರು) ಪರಮಾಚಾರ್ಯರು.* *ಸತ್ಯಧ್ಯಾನ ವಿದ್ಯಾಪೀಠ* "ವಾಣೀ ವಿಹಾರ ವಿದ್ಯಾಲಯವೇ" ಮುಂದೆ ಕೆಲವೇ ವರ್ಷಗಳಲ್ಲಿ, ಜಗದ್ಗುರುಗಳಾದ, ತಮ್ಮ ಸ್ವರೂಪೋದ್ಧಾರಕ ಗುರುಗಳೂ ಆದ, ವಿಭೂತಿ ಪುರುಷರೂ ಆದ ಪರಮಪೂಜ್ಯ "ಶ್ರೀಶ್ರೀ ಸತ್ಯಧ್ಯಾನ ತೀರ್ಥರ" ಹೆಸರಿನಿಂದ 1975 ರ ಸುಮಾರಿಗೆ ಮುಲುಂಡಿನಲ್ಲಿ *ಸತ್ಯಧ್ಯಾನ ವಿದ್ಯಾಪೀಠ* ಎಂದಾಯ್ತು. ನೂರಾರು ವಿದ್ಯಾರ್ಥಿಗಳು ಸೇರಿದರು. ಆ ಎಲ್ಲ ವಿದ್ಯಾರ್ಥಿಗಳಿಗೂ ಅನ್ನ ವಸತಿ ವಸ್ತ್ರಗಳನ್ನೊದಗಿಸಿ, ಮನೆಯ ವಾತಾವರಣವನ್ನೇ ನಿರ್ಮಿಸಿ, ಪ್ರಾಚೀನ ಪದ್ಧತಿಯಂತೆ ಗುರುಸೇವೆ, ವಿದ್ಯಾಪೀಠ ಸೇವೆ, ಸಮಾಜ ಸೇವೆ ಇವುಗಳನ್ನೊಳಗೊಂಡು ಹದಿನೈದು ವರ್ಷಗಳಕಾಲ ನಿರಂತರ ನ...