*ನಮ್ಮ ಗುರುಗಳು....*
*ನಮ್ಮ ಗುರುಗಳು....*
(ಗೂರು ಪೌರ್ಣಿಮೆಯ ಸುಸಂದರ್ಭದಲ್ಲಿ ಗುರುಸ್ಮರಣೆ)
ಅಲುಗಾಡದ ಗುರುಭಕ್ತಿ, ಸರ್ವ ಸಮರ್ಪಣೆ, ನಿರಂತರ ಸೇವೆ, ಉತ್ಕೃಷ್ಟ ಅಧ್ಯಯನ ಇವುಗಳು ಗುರುಪ್ರೀತಿ ಸಾಧನೆಗಳು.
ಗುರು ಪ್ರೀತರಾದರೆ ಶಿಷ್ಯನ ಎಲ್ಲ ಮಾಲಿನ್ಯಕಳೆದು, ಆ ಶಿಷ್ಯನನ್ನೂ ಗುರುವಾಗುವಂತೆ ಪರಿವರ್ತಿಸಿಬಿಡುತ್ತಾರೆ. ಅಂತೆಯೇ ಗುರುಗಳ ಆರಾಧನೆ ಯಾವ ಮತಗಳಲ್ಲೂ ಇಲ್ಲದಷ್ಟು ನಮ್ಮ ಮತ ಸಂಪ್ರದಾಯಗಳಲ್ಲಿ ಹಾಸು ಹೊಕ್ಕಾಗಿದೆ.
ಗುರುಗಳಲ್ಲಿಯ ಭಕ್ತಿಯೇ ದೇವನ ಭಕ್ತಿಸೌಧದ ಮೊದಲ ಸೋಪಾನವೆನ್ನುತ್ತೆ ಶಾಸ್ತ್ರ. ಅಂತೆಯೇ "ಮುಕುಂದ ಭಕ್ತ್ಯೈ ಗುರುಭಕ್ತಿಜಾಯೈ" ಎಂದು ಸಾರಿದರು ನಾರಾಯಣ ಪಂಡಿತಾಚಾರ್ಯರು.
*ಸರ್ವ ಸಮರ್ಪಣೆ....*
ಗುರು ದೇವತಾ ದೇವರಿಗೆ ನಮ್ಮನ್ನು ನಾವು ಪೂರ್ತಿ ಅರ್ಪಿಸಿಕೊಳ್ಳುವದರಿಂದ, ಅವರು ನಮ್ಮ ಬೆನ್ನಿಗಿರುತ್ತಾರೆ.
ನಮ್ಮ ಬಳೆಕೆಗೆ ಬರುತ್ತಾರೆ. ಆಪತ್ತಿಗೆ ಒದಗುತ್ತಾರೆ.
ಸಮಯವರಿತು ಕಾಪಾಡುತ್ತಾರೆ. ಎಷ್ಟು ಬಲಗಳು ಜೊತೆಗಿದ್ದರೂ ಅತಿ ಘೋರ ಆಪತ್ತಿಗೆ ಒದಗುವ ಬಲ ಗುರುಬಲ ಮಾತ್ರ.
*ಸಾರ್ಥಕತೆಗೆ ಬೇಕು ಗುರುವೆಂಬ ಆಶ್ರಯ...*
ಹನಿ ಹನಿ ಸೇರಿದರೆ ಅದು ಕಡಲು. ಹನಿ ಕಡಲಿನಲ್ಲಿ ಎಷ್ಟು ಸುರಕ್ಷಿತವೋ ಅಷ್ಟೇ ಅಸುರಕ್ಷಿತ ತಾನು ಕಡಲು ಸೇರದೆ ತಾನಾಗಿ ಇದ್ದರೆ. ಹಾಗೆಯೇ ಹನಿ ಹನಿಯಂತಿರುವ ನಾವಾಗಲಿ, ಅಥವಾ ನಮ್ಮ ಪುಣ್ಯವಾಗಲಿ ಗುರುಗಳು ಎಂಬ ಕಡಲು ಸೇರಿದರೆ ಆ ನಾವೂ ಸುರಕ್ಷಿತ. ನಮ್ಮ ಪುಣ್ಯವೂ ಸುರಕ್ಷಿತ, ಜೊತೆಗೆ ಮಹಾಫಲಕಾರಿ.
ನಾನು ಗುರು ಎಂಬ ಕಡಲು ಸೇರದೆ ಇದ್ದರೆ, ಅಥವಾ ನಮ್ಮ ಪುಣ್ಯ ಗುರುವೆಂಬ ಕಡಲಿಗೆ ಎರೆಯದೇ ನಮ್ಮ ಸನಿಹ ಇಟ್ಟುಕೊಂಡರೆ ಫಲ ಸಿಗುವದೂ ಇಲ್ಲ. ಆ ಪುಣ್ಯ ಅನರ್ಥಕಾರಿಯೂ ಅಗುತ್ತದೆ. ಆದ್ದರಿಂದ ನಮ್ಮ ಪುಣ್ಯವನ್ನು ಗುರಗಳಿಗೆ ಸಮರ್ಪಿಸೋಣ. "ಅನೇನ ಭಾವಿ ಯತ್ಪುಣ್ಯಂ ಅವಾಪ್ನೋತು ಗುರುರ್ಮಮ" ಎಂದು. ಜೊತೆಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ.
*ಗುರ್ವಾಶ್ರಿತನ ವೈಭವ....*
ಕಡಲಿನಲ್ಲಿರುವ ಹನಿ ಆವೆಯಾಗಿ ಮೋಡದಲ್ಲಿ ಸೇರಿ, ಸ್ವಾತೀ ನಕ್ಷತ್ರದಂದು ಮಳೆಯ ಮುಖಾಂತರ, ಅದೇ ಕಡಲಿನಲ್ಲಿಯೇ ಬಿದ್ದು, ಅಲ್ಲಿರುವ ಶಿಂಪಿಯ ಉದರದಲ್ಲಿ ಸೇರಿದರೆ ಆ ಹನಿಯೇ ಅತ್ಯುತ್ತಮ ಮುತ್ತೂ ಆಗಬಹುದು. ಆ ಮುತ್ತು ದೇವರ ಅಡೇದಾವರೆಗಳ ಆಭರಣವಾಗಿಯೂ ಉಳಿಯಬಹುದು. ಹಾಗೆಯೇ *ಗುರುಗಳೆಂಬ ಕಡಲು ಸೇರಿದರೆ ದೇವರ ಅಡೆದಾವರೆಗಳ ಪಾದಪೀಠವಾಗಿಯೂ ಬಾಳಬಹುದು* ಇದು ವೈಭವ. ಅಂತಹ ಉದ್ಧಾರಕ ಗುರುಗಳಿಗೆ ಕೋಟಿ ಕೋಟಿ ವಂದನೆಗಳು.
ಇಂತಹ ಗುರುಗಳನ್ನು ಪಡೆಯುವದೇ ಧ್ಯೇಯ. ಅವರ ಭಕ್ತರ ಸಮೂಹದಲ್ಲಿ, ಅವರ ದೃಷ್ಟಿಯ ಕುಡಿನೋಟದ ಕೊನೆಯ ವ್ಯಕ್ತಿ ನಾನು ಎಂದಾದರೂ ಸಾಕು. ಜೀವನ ಸಾರ್ಥಕ.
ಆ ತರಹದ ಗುರುಗಳೂ ಆದ *ಜನ್ಮಕೊಟ್ಟ ತಂದೆ ತಾಯಿ - "ವಿದ್ಯೋಪದೆಶ ಮಾಡಿದ ಉದ್ಧಾರಕ ಗುರುಗಳು - ದೇಹೇಂದ್ರಿಯ ಮನಸದಸಿನ ಪ್ರೇರಕರಾದ ತತ್ಚಾಭಿಮಾನಿ ದೇವತೆಗಳು - ಮುಖ್ಯಪ್ರಾಣದೇವರು* ಈ ಎಲ್ಲ ಗುರುಗಳನ್ನು ಇಂದು ವಿಶೇಷವಾಗಿ ನಮಸ್ಕಾರ ಮಾಡೋಣ ಸ್ಮರಿಸೋಣ.
*✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
be happy. I’ve read this publish and if I may I wish to suggest you few interesting issues or tips.
Perhaps you could write subsequent articles relating to
this article. I desire to learn even more things about it!
I have been surfing online more than 3 hours today, yet I never found any interesting article like yours.
It is pretty worth enough for me. In my opinion, if all web owners and bloggers made
good content as you did, the net will be a lot more useful
than ever before. These are truly wonderful ideas in regarding blogging.
You have touched some pleasant things here. Any way keep up wrinting.
http://dell.com
There are products that attempt to mimic the production of keratin, but in the end, real
protein needs to be constructed by the physique from the inside out.