*ನರಕಕ್ಕಿರುವ ಹಾದಿಯನ್ನು ಉತ್ತಮ ಇಂಗಿತಗಳಿಂದಲೇ ಸಜ್ಜುಗೊಳಿಸಲಾಗಿರುತ್ತದೆ.....*
*ನರಕಕ್ಕಿರುವ ಹಾದಿಯನ್ನು ಉತ್ತಮ ಇಂಗಿತಗಳಿಂದಲೇ ಸಜ್ಜುಗೊಳಿಸಲಾಗಿರುತ್ತದೆ.....*
"ನರಕಕ್ಕಿರುವ ಹಾದಿಯನ್ನು ಉತ್ತಮ ಇಂಗಿತಗಳಿಂದಲೇ ಸಜ್ಜುಗೊಳಿಸಲಾಗಿರುತ್ತದೆ" ಎಂಬ ಹೇಳಿಕೆ ಕೇಳಲು ತುಂಬ ಚೆನ್ನಾಗಿಯೇ ಇದೆ. ಆದರೆ ಇದರ ಮರ್ಮ ಘೋರವಾಗಿದೆ.
ನಿಧನದ ನಂತರ ತಿರುಗಿಬರಲು ಎರಡು ಮಾರ್ಗಗಳು, ತಿರುಗಿ ಬಾರದಿರಲು ಒಂದು ಮಾರ್ಗ ಹೀಗೆ ಮೂರು ದಾರಿಗಳು ಇವೆ. ಮೊದಲ ದಾರಿ ಜ್ಙಾನ ಭಕ್ತಿಗಳ ದಾರಿ. ಆ ದಾರಿಯಲ್ಲಿ ಸಾಗಿದವ ತಿರುಗಿ ಬಾರ. ತಿರುಗಿ ಬರುವ ದಾರಿಗಳು ಇನ್ನೆರಡು ದಾರಿಗಳು. ಒಂದು ಸ್ವರ್ಗ ಮಾರ್ಗ, ಇನ್ನೊಂದು ನರಕ ಮಾರ್ಗ.
ಸುಖಮಾರ್ಗವಾದ ಸ್ವರ್ಗ ಮಾರ್ಗವನ್ನು ಸಿದ್ದಮಾಡಿಕೊಳ್ಳುವದು ತುಂಬ ಕಠಿಣ. ದುಃಖದ ದಾರಿಯಾದ ನರಕ ಮಾರ್ಗ ಅತ್ಯಂತ ಸಹಜ.
ಸ್ವರ್ಗ ಮಾರ್ಗವನ್ನು ನಿರ್ಮಿಸಲು ತುಂಬ ತ್ಯಾಗ ಅತ್ಯಾವಷ್ಯಕ. ನರಕ ಮಾರ್ಗವನ್ನು ನಿರ್ಮಿಸಲು ಭೋಗ ಸಾಕು.
ಸ್ವರ್ಗಮಾರ್ಗಕ್ಕಾಗಿ ದೇವತಾ ದೇವರು, ಇವರುಗಳ ನಿರಂತರ ಆರಾಧನೆ ಅತ್ಯವಷ್ಯಕ. ನಾನಾವಿಧ ಧರ್ಮಾನುಷ್ಠಾನ ಕಡ್ಡಾಯ. ಗುರುಗಳು ಬೇಕು. ನರಕ ಮಾರ್ಗಕ್ಕಾಗಿ ಕೇವಲ ನಾನೊಬ್ಬ ಸಾಕು. (ನಾನೊಬ್ಬ ಇರುವಲ್ಲಿ ಅಧರ್ಮ ಸಹಜ ಪ್ರವೃತ್ತಿಯಾಗಿರುತ್ತದೆ.)
ಗುರು ದೇವತಾ ಧರ್ಮ ಇವುಗಳಿಗೆ ತಲೆಬಾಗಿ ನಡೆದರೆ ಸ್ವರ್ಗಮಾರ್ಗ. ಇವುಗಳನ್ನು ಕೆಕ್ಕರಿಸಿ ತಲೆ ಎತ್ತಿ ನಡೆದರೆ ನರಕ ಮಾರ್ಗ.
ಧರ್ಮ ಶಾಸ್ತ್ರ ದೇವ ಇವರುಗಳಿಗೆ ದೇಹವನ್ನು ಬಾಗಿಸಿ ನಮಸ್ಕರಿಸಿ, ಸಮರ್ಪಿಸಿದರೆ ಸ್ವರ್ಗಮಾರ್ಗ. ಎದೆ ಶೆಟೆದು ಗುರು ಹಿರಿಯರ ಶಾಸ್ತ್ರದ ಅವಮಾನಮಾಡಿ ನಡೆದರೆ ನರಕ ಮಾರ್ಗ.
ಇನ್ನೊಬ್ಬರ (ಶಾಸ್ತ್ರ, ಹಿರಿಯರು, ಧರ್ಮ) ಇಚ್ಛೆಗೆ ತಕ್ಕಂತೆ, ನಮ್ಮಇಚ್ಛೆಯನ್ನೂ ಬೆರಿಸಿ ನಡೆದರೆ ಸ್ವರ್ಗಮಾರ್ಗ. ತನ್ನ ಇಚ್ಛೆಗೆ ತಕ್ಕಂತೆ ನಡೆದರೆ ನರಕ ಮಾರ್ಗ.
ಮಡಿ ಮೈಲಿಗೆ ಇವುಗಳಲ್ಲಿ ನಮ್ಮನ್ನು ನಾವು ಕಟ್ಟಿ ಹಾಕಿಕೊಂಡರೆ ಸ್ವರ್ಗ ಮಾರ್ಗ. ಯಥೆಚ್ಛವಾಗಿ ಇದ್ದರೆ ಸಾಕು ನರಕ ಮಾರ್ಗ.
ಅತ್ಯಂತ ಚೇತೋಹಾರಿ ಆಹ್ಲಾದಕರ ಮಾರ್ಗ ಅದು ನರಕಮಾರ್ಗ. ಯಾವುದೇ ಕಟ್ಟು ಪಾಡಗಳು ಇಲ್ಲದಿರುವದು ನರಕ ಮಾರ್ಗ. ಅಂತೆಯೇ ಸುಲಭ ಮಾರ್ಗ ದೇವ ಮಾರ್ಗವಾದರೆ ಅದಕ್ಕೂ ಸುಲಭ ಮಾರ್ಗ ನರಕ ಮಾರ್ಗ.
ಧರ್ಮ ಮಾರ್ಗಕ್ಕೆ ದೇವತೆಗಳು ಕೈ ಜೋಡಿಸುವವರು, ನರಕ ಮಾರ್ಗಕ್ಕೆ ದುಷ್ಟರು. ಸ್ವರ್ಗಮಾರ್ಗಾವಲಂಬಿಗೆ ಇಲ್ಲಿಯೂ ಸುಖ ನೆಮ್ಮದಿ ಶಾಂತಿ, ಸ್ವರ್ಗದಲ್ಲಿಯಂತೂ ಸುಖ ಇದ್ದೇ ಇರತ್ತೆ. ನರಕ ಮಾರ್ಗದಲ್ಲಿ ಇಲ್ಲಿ ಎಲ್ಲ ಪಡೆಯಬಹುದು, ಮಾನಸಿಕ ಸಮಾಧಾನ ಶಾಂತಿ ನೆಮ್ಮದಿ ಸರ್ವಥಾ ಸಿಗದು. ನರಕದಲ್ಲಂತೂ ಸರ್ವಥಾ ಇರುವದೇ ಇಲ್ಲ.
ತಿರುಗಿ ಬಾರದ ಮಾರ್ಗ ಆರಿಸುವದು ತುಂಬ ಕಷ್ಟ. ತಿರುಗಿ ಬರುವ ಮಾರ್ಗಗಳಲ್ಲಿ ಯಾವುದನ್ನು ಆರಿಸಬೇಕು ನಮ್ಮ ಕೈಯಲ್ಲಿ ಇದೆ. ಇಂದಿನ ಆರಾಧ್ಯ ದೈವನಾದ ಶ್ರೀ ಭೂ ಸಹಿತ ಶ್ರೀನಿವಾಸನೇ ಸತ್ಪ್ರೇರಕನಾಗಿ ಧರ್ಮ ಶಾಸ್ತ್ರ ದೇವರು ಇವರುಗಳ ಜೊತೆಗೆ ನಮ್ಮನ್ನು ಇರಿಸಲಿ ಎಂಬ ಪ್ರಾರ್ಥನೆಯೊಂದಿಗೆ ಅನಂತ ನಮನಗಳನ್ನು ಸಲ್ಲಿಸುವೆ.....
*(ಸೂ.. ನಾವೆಲ್ಲ ಪುರುಷರೆಲ್ಲರು ಸೇರು ಎರಡು ಹೊತ್ತು ಸಂಧ್ಯಾವಂದನೆ/ ಗಾಯತ್ರೀಜಪ/ ದೇವರ ಪೂಜೆ ತಪ್ಪದೇ ಮಾಡೋಣ. ಸ್ತ್ರೀಯರೆಲ್ಲರೂ "ರಾಮಕೃಷ್ಣ, ಅಚ್ಯುತಾನಂತ" ನಾಮಸ್ಮರಣೆ ಮಾಡುವಂತಾಗಲಿ.)*
*✍🏼✍🏼✍🏼ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
Nebst Absaugungen im Fachgebiet von (dicker) Bauch auch Beinen wird Deutsche Mark
Patienten anschließend ein Kompressionsmieder oder eine Stützhose geplant.
Chip Operation wird nebst Vollnarkose oder auch weil
Lokalnarkose, je getreu Operationsbereich, am Patienten durchgeführt.
Unsereins verwenden Chip sogenannte TIVA, eine der modernsten außerdem schonendsten Narkoseformen überhaupt:
Auch hierbei Ursprung himmelweit schonende, kurzwirksame Schlaf- darüber hinaus
Schmerzmedikamente extra Chip Vene verabreicht, der Rest welcher Vollnarkose
besteht einzig und allein in einer Sauerstoff- nebst Luftbeatmung.
Dasjenige Hineingeben brennt eingangs etwas,
gemäß 3-5 Minuten setzt schon Chip Betäubung ein. Es dauert ca.
30 Minuten bis Chip Betäubung wirkt. Im Laufe von der letzten 14 Tage
vorab dem Operationstermin müssen Diese (z.B. bei Ihrem Hausarzt) ein befundetes Elektrokardiogramm ansonsten eine
Blutabnahme zur Bestimmung vonseiten kleinem Blutbild, Elektrolyten außerdem Blutgerinnung (sich) anschicken gewähren. Daneben besonders erschlaffter Haut,
hinsichtlich exemplarisch c/o einer herabhängenden Bauchdecke, kann ein zusätzlicher
Eingriff, in diesem Lage eine Bauchdeckenstraffung, benötigt Dasein.
fast! What host are you the use of? Can I get your associate hyperlink to your host?
I desire my site loaded up as fast as yours lol