*ಶ್ರೀ ವೇದೇಶತೀರ್ಥರ ಆರಾಧನೆ*
*ಶ್ರೀ ವೇದೇಶತೀರ್ಥರ ಆರಾಧನೆ*
ವಿರಕ್ತ ಶಿಖಾಮಣಿಗಳು, ಜ್ಙಾನಿಗಳೂ, ತಪಸ್ವಿಗಳೂ, ಸಾಧಕರೂ, ರಘೂತ್ತಮತೀರ್ಥ ಶ್ರೀಪಾದಂಗಳವರ ಹಾಗೂ ಶ್ರೀವೇದವ್ಯಾಸತೀರ್ಥ ಶ್ರೀದರ ಶಿಷ್ಯರೂ, ಯಾದವಾರ್ಯರಂಥ ಮಹಾಜ್ಙಾನಿಗಳ ಗುರುಗಳೂ ಆದ *ಶ್ರೀವೇದೇಶತೀರ್ಥರ ಆರಾಧನಾ ಮಹೋತ್ಸವ* ಇಂದು.
ಶ್ರೀಮದಾಚಾರ್ಯರ ಸರ್ವಮೂಲಗಳಲ್ಲಿ ಬರುವ ಹತ್ತೂ ಪ್ರಮೇಯ ಗ್ರಂಥಗಳಿಗೆ ಇರುವ ಟೀಕೆಗೆ *ವೇದೇಶತೀರ್ಥೀಯಾ* ಎಂಬ ಟಿಪ್ಪಣಿ ಬರೆದವರು ಶ್ರೀ ವೇದೇಶತೀರ್ಥರು. ಹತ್ತು ಉಪನಿಷತ್ತುಗಳಲ್ಲಿ ಕಠಿಣವಾದ ಉಪನಿಷತ್ತು ಛಾಂದೊಗ್ಯ ಉಪನಿಷತ್ತು. ಉಪನಿಷದ್ಭಾಷ್ಯವೂ ಅಷ್ಟೇ. ಉಪನಿಷದ್ಭಾಷ್ಯಕ್ಕೆ ಟೀಕೆ, ಹಾಗೂ ಉಪನಿಷತ್ತಿಗೆ ಖಂಡಾರ್ಥಗಳನ್ನು ರಚಿಸಿ ಮಹಾನ್ ಅನುಗ್ರಹ ಮಾಡಿದ ಮಹಾತ್ಮರು ಶ್ರೀವೇದೇಶತೀರ್ಥರು. ಅಂತೆಯೆ ಅವರೆಲ್ಲ ಗ್ರಂಥಗಳಿಗೆ *ವೇದೇಶತೀರ್ಥೀಯ* ಎಂಬುವದಾಗಿಯೇ ಪ್ರಸಿದ್ಧಿಗೆ ತಂದ ಮಹಾಜ್ಙಾನಿ ಶ್ರೀವೇದೇಶತೀರ್ಥರು.
*ವಿರಕ್ತ ಶಿಖಾಮಣಿ*
ವೈರಾಗ್ಯದ ಪರಾಕಾಷ್ಠೆ ಶ್ರೀವೇದಶತೀರ್ಥರದ್ದು. ನುಚ್ಚು ಸೇವಿಸಿಯೇ ಜೀವನ. ತ್ಯಾಗಮಯೀ ಸ್ವರೂಪ. "ಅನುಜೋದಯಮಾಶಾಸೇ"ತತಮ್ಮನೆಂಬ ಸೂರ್ಯನ ಉದಯಕ್ಕಾಗಿ ನಾನು ಎಲ್ಲವನ್ನೂ ತ್ಯಜಿಸುವೆ ಎಂಬ ತ್ಯಾಗದ ಫಲವಾಗಿಯೇ ಈ ಮಹಾ ಜ್ಙಾನಸೂರ್ಯರಾದ *ಶ್ರೀಯಾದವಾರ್ಯರ* ಉದಯವಾಯಿತು.
*ವೇದಶತೀರ್ಥರ ಸಂದೇಶ*
ಇಂದಿನ ಘೋರ ಕಲಿಕಾಲ ಶ್ರೀಮದಾಚಾರ್ಯರ ತತ್ವಜ್ಙಾನದಿಂ ವಿಮುಖರಾದವರದ್ದೇ ಕಾಲ. ಅಧಾರ್ಮಿಕರಾದ, ವಿಷ್ಣುಭಕ್ತರಾಗದವರದ್ದೇ ತಾಂಡವವಾಡುವ ದುರ್ಧರ ಕಾಲ. ವಿಷ್ಣುಭಕ್ತ್ಯಾದಿ ಗುಣಗಳು ಇಲ್ಲ. ಗುಣವಂತರು ಇಲ್ಲ. ಗುಣಗಳನ್ನೋ ಗುಣವಂತರನ್ನೋ ಗುರುತಿಸುವವರಂತೂ ಇಲ್ಲವೇ ಇಲ್ಲ. ಆದ್ದರಿಂದ *ಇಂದಿನಿಂದ, ಈ ಕ್ಷಣದಿಂದ, ಒಂದೂ ಕ್ಷಣ ಬಿಡದೆ, ಜಗತ್ತಿನ ಉದ್ಧಾರಕ್ಕೆ, ಶ್ರೀವಿಷ್ಣುಪ್ರೀತಿಗೆ ನಿರಂತರ ಶ್ರೀಮದಾಚಾರ್ಯರ ಶಾಸ್ತ್ರಗಳಿಗೆ ವ್ಯಾನ ಮಾಡುವಂತಹವರಾಗಿ* ಎಂದು ಯಾದವಾರ್ಯರಿಗೆ ಆದೇಶವನ್ನು ಸಂದೇಶವನ್ನು ಕೊಡುತ್ತಾರೆ.
*ಚರಮಶ್ಲೋಕ*
ವೇದೇಶಯೋಗಿನಂ ವಂದೇ
ಯಾದವಾರ್ಯ ಗುರೋರ್ಗುರುಮ್.
ಛಾಂದೋಗ್ಯ ಭಾಷ್ಯ ಸಟ್ಟೀಕಾ
ಕರ್ತಾರಮಹಮಾದರಾತ್ ||
ಇಂದಿಗೂ ಶ್ರೀಮದಾಚಾರ್ಯರ ಸಾಕ್ಷಾತ್ ಶಿಶ್ಯರಾದ *ಶ್ರೀಮಾಧವತೀರ್ಥರ* ದಿವ್ಯಸನ್ನಿಧಾನದ (ಮಣ್ಣೂರು) ಯಲ್ಲಿಯೇ ವಾಸವಾಗಿದ್ದಾರೆ. ಈ ಶ್ಲೋಕದಿಂದ ಹೆಚ್ಚುಬಾರಿ ೧೦೮ ೧೦೦೮ ಬಾರಿ ಪಾರಾಯಣ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
*ಪ್ರಾರ್ಥನೆ*
ಮಹಾಮಹಿಮೋತರಾದ ಶ್ರೀವೇದಶತೀರ್ಥರಲ್ಲಿ *ತಮ್ಮ ಜ್ಙಾನ, ವೈರಾಗ್ಯ, ಶಾಸ್ತ್ರನಿಷ್ಠೆ, ಸಾಮಾಜಿಕ ಕಳಕಳಿ ಇವುಗಳಲ್ಲಿಯ ಕೋಟ್ಯಂಶವಾದರೂ ನನಗೆ ಬರಲಿ* ಎಂದು ಅನಂತ ಪ್ರಣಾಮಗಳನ್ನು ಸಲ್ಲಿ ಸುತ್ತಾ ಪ್ರಾರ್ಥಿಸುವೆ. ಜೊತೆಗೆ *ನಿಮ್ಮ ಸಂದೇಶವನ್ನು ಆಜ್ಙೆಯಂತೆ ಧರಿಸಿ ಪಾಲಿಸುವಂತಾಗಲಿ* ಎಂದೂ ಪ್ರಾರ್ಥಿಸುತ್ತೇನೆ. ನಿಮ್ಮ ಅನುಗ್ರಹ ದಯೆ ಕರುಣೆ ಎಂದಿಗೂ ಇರಲಿ. ಎಂದಿಗೂ ನಿಮ್ಮ ದಾಸನೇ ನಾನು.
*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments