*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*
* ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ* ಶ್ರೀಸತ್ಯಾತ್ಮತೀರ್ಥರ ಇಪ್ಪತ್ತೊಂಭತ್ತನೇಯ ಹಾಗೂ ಶ್ರೀ ವೇದವರ್ಧನತೀರ್ಥರ ನಾಲ್ಕನೇಯ ಚಾತುರ್ಮಾಸ್ಯ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಾ ಸಾಗಿದೆ. *ಜ್ಙಾನಪ್ರಧಾನ ಚಾತುರ್ಮಾಸ್ಯ* ಮುಂಬಯಿಯ ಈ ಚಾತುರ್ಮಾಸ್ಯದ ಅತ್ಯಂತ ವಿಶೇಷವೇನೆಂದರೆ *ಜ್ಙಾನಪ್ರಧಾನ* ವಾದ ಈ ಚಾತುರ್ಮಾಸ್ಯ. ಇದುವೇ ಅತ್ಯಂತ ವಿಶೇಷ. "ಸತ್ವ ಸತ್ವ ಮಹಾಸತ್ವ" ಇರುವಲ್ಲಿ ತತ್ವಜ್ಙಾನ ಇರಲೇಬೇಕು. ತತ್ವಜ್ಙಾನವಿದೆ ಎಂದರೆ ಸತ್ವಗುಣದ ವ್ಯಾಪಾರ ಇರಲೇಬೇಕು. ಬೆಳಿಗಿನ ಝಾವಾ ೫ ಗಂಟೆ ಇಂದ ಎಂಟು ಗಂ ವರೆಗೆ ಪರಮಪೂಜ್ಯ ಶ್ರೀಶ್ರೀಗಳವರಿಂದ ಶ್ರೀಮನ್ಯಾಯಸುಧಾ ಪಾಠ. ಇದೇ ಸಮಯದಲ್ಲಿ ಪೂ ಆಚಾರ್ಯರರಿಂದ ಸುಧಾಪಾಠ. ಎಂಟರಿಂದ ಒಂಭತ್ತರವರೆಗೆ ತತ್ವಪ್ರಕಾಶಿಕಾ ಪಾಠ. ಹತ್ತು ಗಂ ಇಂದ ಹನ್ನೆರಡು ಮೂವತ್ತರ ವರೆಗೆ ಪೂಜೆಯ ಪ್ರಸಂಗದಲ್ಲಿ ಪಂಡಿತರುಗಳಿಂದ ವಿಶೇಷ ಉಪನ್ಯಾಸ. ನಂತರ ಪೂಜ್ಯ ಆಚಾರ್ಯರಿಂದ ವಿಶೇಷ ತತ್ವ ಉಪನ್ಯಾಸಗಳ ವೈಭವ. *ಪೂ ಆಚಾರ್ಯರ ತತ್ವೋಪನ್ಯಾಸ* ಆರವತ್ತೈದು ವರ್ಷದ ಹಳೆಯದಾದ ವಿಶೇಷವಾದ ಒಂದು ವೃಕ್ಷ. ಆ ವೃಕ್ಷದಲ್ಲಿ ಒಂದೇ ತೆರನಾದ ಹಣ್ಣುಗಳು ಸಿಗುವಂತಹದ್ದಲ್ಲ ಕಿಂತು ನಾನಾವಿಧ ಪಕ್ವವಾದ ರುಚಿರುಚಿಯಾದ ಮೋಕ್ಷಜ್ಙಾನಕ್ಕೆ ಕಾರಣಾವದ ದಿವ್ಯ ಹಣ್ಣುಗಳನ್ನು ಕೊಡುವ ಉಣಿಸುವ ವೃಕ್ಷ. ಆ ವೃಕ್ಷ ಮತ್ಯಾವದೂ ಅಲ್ಲ *ಪೂಜ್ಯ ಆಚಾರ್ಯರೆಂಬ ಮಹಾ ವೃಕ್ಷ.* ದತ್ತಸ್ಚಾತಂತ್ರ್ಯ, ...