Posts

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*

Image
 * ಚಾತುರ್ಮಾಸ್ಯ ಮಹೋತ್ಸವ -  ಮುಂಬಯಿ* ಶ್ರೀಸತ್ಯಾತ್ಮತೀರ್ಥರ ಇಪ್ಪತ್ತೊಂಭತ್ತನೇಯ ಹಾಗೂ ಶ್ರೀ ವೇದವರ್ಧನತೀರ್ಥರ ನಾಲ್ಕನೇಯ ಚಾತುರ್ಮಾಸ್ಯ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಾ ಸಾಗಿದೆ.  *ಜ್ಙಾನಪ್ರಧಾನ ಚಾತುರ್ಮಾಸ್ಯ* ಮುಂಬಯಿಯ ಈ ಚಾತುರ್ಮಾಸ್ಯದ ಅತ್ಯಂತ ವಿಶೇಷವೇನೆಂದರೆ *ಜ್ಙಾನಪ್ರಧಾನ* ವಾದ ಈ ಚಾತುರ್ಮಾಸ್ಯ. ಇದುವೇ ಅತ್ಯಂತ ವಿಶೇಷ.  "ಸತ್ವ ಸತ್ವ ಮಹಾಸತ್ವ" ಇರುವಲ್ಲಿ ತತ್ವಜ್ಙಾನ ಇರಲೇಬೇಕು. ತತ್ವಜ್ಙಾನವಿದೆ ಎಂದರೆ ಸತ್ವಗುಣದ ವ್ಯಾಪಾರ ಇರಲೇಬೇಕು.  ಬೆಳಿಗಿನ ಝಾವಾ ೫ ಗಂಟೆ ಇಂದ ಎಂಟು ಗಂ ವರೆಗೆ ಪರಮಪೂಜ್ಯ ಶ್ರೀಶ್ರೀಗಳವರಿಂದ ಶ್ರೀಮನ್ಯಾಯಸುಧಾ ಪಾಠ. ಇದೇ ಸಮಯದಲ್ಲಿ ಪೂ ಆಚಾರ್ಯರರಿಂದ ಸುಧಾಪಾಠ. ಎಂಟರಿಂದ ಒಂಭತ್ತರವರೆಗೆ ತತ್ವಪ್ರಕಾಶಿಕಾ ಪಾಠ. ಹತ್ತು ಗಂ ಇಂದ ಹನ್ನೆರಡು ಮೂವತ್ತರ ವರೆಗೆ ಪೂಜೆಯ ಪ್ರಸಂಗದಲ್ಲಿ  ಪಂಡಿತರುಗಳಿಂದ ವಿಶೇಷ ಉಪನ್ಯಾಸ. ನಂತರ ಪೂಜ್ಯ ಆಚಾರ್ಯರಿಂದ ವಿಶೇಷ ತತ್ವ ಉಪನ್ಯಾಸಗಳ ವೈಭವ.  *ಪೂ ಆಚಾರ್ಯರ ತತ್ವೋಪನ್ಯಾಸ* ಆರವತ್ತೈದು ವರ್ಷದ ಹಳೆಯದಾದ ವಿಶೇಷವಾದ ಒಂದು ವೃಕ್ಷ. ಆ ವೃಕ್ಷದಲ್ಲಿ ಒಂದೇ ತೆರನಾದ ಹಣ್ಣುಗಳು ಸಿಗುವಂತಹದ್ದಲ್ಲ ಕಿಂತು ನಾನಾವಿಧ ಪಕ್ವವಾದ ರುಚಿರುಚಿಯಾದ ಮೋಕ್ಷಜ್ಙಾನಕ್ಕೆ ಕಾರಣಾವದ ದಿವ್ಯ  ಹಣ್ಣುಗಳನ್ನು ಕೊಡುವ ಉಣಿಸುವ ವೃಕ್ಷ. ಆ ವೃಕ್ಷ ಮತ್ಯಾವದೂ ಅಲ್ಲ *ಪೂಜ್ಯ ಆಚಾರ್ಯರೆಂಬ ಮಹಾ ವೃಕ್ಷ.* ದತ್ತಸ್ಚಾತಂತ್ರ್ಯ, ...

*ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು*

Image
  *ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು* "ಧನ್ವಂತರಿರ್ಭಗವಾನ್ ಪಾತ್ವಪಥ್ಯಾತ್" ಅಪಥ್ಯವಾದ ಏನೆಲ್ಲ ಗೀಳುಗಳಿವೆಯೋ ಅವೆಲ್ಲವನ್ನು, ಅಪಥ್ಯ  ಸಂಸಾರವೆಂಬ ಮಹರೋಗವನ್ನು, ಅಷ್ಟೇ ಅಲ್ಲದೇ ಅಪಥ್ಯ  ಸಂಸಾರದಲ್ಲಿಯ ದೈಹಿಕ ಮಾನಸಿಕ ಎಲ್ಲ ರೋಗಗಳನ್ನೂ ಅಪಹಿರಿಸಿ ಸಮೂಲವಾಗಿ ಸಂಹರಿಸಿ, ಮೋಕ್ಷಾನಂದವೆಂಬ ಅಮೃತ ಆರೋಗ್ಯವೆಂಬ ಅಮೃತವನ್ನು ಉಣಿಸುವ ಕರುಣಿಸುವ ಮುಖಾಂತರ ನಮ್ಮನ್ನು ರಕ್ಷಿಸುವ ಕೃಪಾಳು  ಹೆದ್ದೊರೆ ನಮ್ಮ ಧನ್ವಂತ್ರಿ ಭಗವಾನ್.  *ತುಂಬ ವಿಚಿತ್ರ ಆಶ್ಚರ್ಯ* ಎಲ್ಲ ಕಡೆಗೂ ಅಂತರ್ನಿಯಾಮಕನಾದ ಭಗವಾನ್ ಕ್ರಮವಾಗಿ ೧)ರೋಗದಲ್ಲಿ. ೨)ರೋಗಿಯಲ್ಲಿ. ೩)ಔಷಧಿಯಲ್ಲಿ. ೪)ವೈದ್ಯನಲ್ಲಿ ಹೀಗೆ ಕ್ರಮವಾಗಿ ಅಂತರ್ಯಾಮಿಯಾಗಿ ಇದ್ದಾನೆ.  *ನಮ್ಮ ದೇವ ಅಪರಾಜಿತ* ನಮ್ಮ ನಾರಾಯಣ ಹರಿ ಭಗವಾನ್ ಸರ್ವಸ್ವಾಮಿ ದೇವ ಎಂದಿಗೂ ಯಾರಿಂದಲೂ ಸೋಲಿಲ್ಲದ ಸರದಾರ ಎಂಬುವದು ಜಗತ್ಪ್ರಸಿದ್ಧ, ಶಾಸ್ತ್ರಸಿದ್ಧ.  ರೋಗದ ನಿಯಾಮಕನಾಗಿ ಇರುವ ಭಗವಂತ ಸೋಲದೇ ಘಟ್ಟಿಯಾಗಿ ನಿಂತರೆ ರೋಗವೂ ದೃಢವಾಯಿತು.‌ಆರೋಗ್ಯಬರುವದೆಂದು ?  ಔಷಧದ ಅಂತರ್ಯಾಮಿಯೂ ಸರ್ವಶಕ್ತ. ವೈದ್ಯನ ಅಂತರ್ಯಾಮಿ "ವೈದ್ಯೋನಾರಾಯಣೋ ಹರಿಃ" ವೈದ್ಯರೇ ದೇವ ಎಂದಿರುವಾಗ ವೈದ್ಯರ ಅಂತರ್ಯಾಮಿ ಮಹಾದೇವನೇ. ಹೀಗೆ ಮೂರೂ ಭಗವದ್ರುಪಗಳು ಸೋಲಿಲ್ಲದೇ ಇದ್ದರೆ, ವೈದ್ಯರ ಔಷಧಿಗಳ ಅಂತರ್ಯಾಮಿ ಸೋತರೆ  ಜಗತ್ತು ಎಷ್ಟು  ಅಸ್ತವ್ಯಸ್ತ ಎಂದು ಊಹಿಸಲು ಯಾರಿಂ...

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

Image
 *ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol* ಸತ್ಯಧ್ಯಾನವಿದ್ಯಾಪೀಠ ನಾನಾತರಹದ ಪ್ರೋತ್ಸಾಹನೆಗಳ, ವಿವಿಧ ವಿಚಾರಗಳ, ಹೊ ಆವಿಷಗಕಾರಗಳ, ಬಹುಮುಖ  ಕೃತಿಗಳ (ಕಾರ್ಯಗಳ)  ಕೈಗನ್ನಡಿ.  *Madhwa idol* ನೂರಾರು ಹೊಸ ಹೆಜ್ಜೆಗಳಲ್ಲಿ Madhwa idol ಇದೂ ವಿನೂತನ ಹೆಜ್ಜೆ. ಮುಂಬಯಿ ಪ್ರಾಂತದ ನೂರಾರು ಆಸಕ್ತ ಕಲಾಕಾರರುಗಳನ್ನು ಆಕರ್ಷಿಸಿ ಕಲಾಕೃತಿಗಳನ್ನು ನಿರ್ಮಿಸುವದು *Madhwa idol* ಉದ್ಯೇಶ್ಯ.  ವಿಷ್ಣು ಭಕ್ತಿಯನ್ನು ಸಾರುವ, ವಿಷ್ಣುವಿನಲ್ಲಿ ನಿಷ್ಠೆಯನ್ನು ಬೆಳೆಸುವ, ಮನಸ್ಸಿಗೆ ನೆಮ್ಮೆದಿಯನ್ನೂ ಕೊಡುವ, entertainment ಕೊಡುವ, ಸರಿ ದಾರಿಯನ್ನು ಬೋಧಿಸುವ, ಅಹಂಕಾರಗಳಿಗೆ ಕಡಿವಾಣ ಹಾಕುವ, ಹತಾಶಯನ್ನು ಕತ್ತರಿಸುವ, ಜೀವನೋತ್ಸಾಹವನ್ನು ಕೊಡುವ ನೂರಾರು ಹಾಡುಗಳು ಇವೆ. ಆ ಎಲ್ಲ ಹಾಡುಗಳೂ ವೈಷ್ಣವರ ನಾಲಿಗೆಯ ತುದಿಗೆ ಇರಬೇಕು ಇದು ಪರಮಪೂಜ್ಯ  ಪರಮಾಚಾರ್ಯರ ಸಂಕಲ್ಪ. ಸಾಕಾರಮಾಡಿದವರು ಪೂಜ್ಯ ಆಚಾರ್ಯರು. ಯುವಕರ ಕಣ್ಮಣಿಯಾದ  ಪಂ ವಿಶ್ವಪ್ರಜ್ಙಾಚಾರ್ಯರು ಮನೆಮನೆಗೆ, ಮಕ್ಕಳುಮರಿಗಳವರೆಗೂ ತಲುಪುವಂತೆ ಮಾಡುತ್ತಿದ್ದಾರೆ.  *ಪಂ ವಿಶ್ವಪ್ರಜ್ಙಾಚಾರ್ಯರ ಕನಸಿನ ಕೂಸು* ಪಂ ವಿಶ್ವಪ್ರಜ್ಙಾಚಾರ್ಯರು ನಿರಂತರ ಶ್ರಮವಹಿಸಿ, ಆಸಕ್ತಿಯನ್ನು ತೋರಿ, ಪ್ರೋತ್ಸಾಹಿಸಿ, ಶ್ರೀಗಳವರ ಪರಮಾನುಗ್ರಹದ ಬೆಳಕಿನದಾರಿಯನ್ನು ತೋರಿ ನೂರಾರು ಯುವಕ - ಯುವತಿ- ಹಿರಿಯ- ಕಿರಿಯ ಎಲ್ಲರನ್ನೂ ಒಗ್ಗೂಡಿಸಿ...

ಶ್ರೀಸತ್ಯಾತ್ಮತೀರ್ಥರ ೨೯ನೇಯ ಚಾತುರ್ಮಾಸ್ಯ*

 *ಶ್ರೀಸತ್ಯಾತ್ಮತೀರ್ಥರ ೨೯ನೇಯ ಚಾತುರ್ಮಾಸ್ಯ*  ಉತ್ತರಾದಿ ಮಠಾಧೀಶರಾದ ಶ್ರೀಶ್ರೀಗಳವರು ತಮ್ಮ ೨೯ ನೇಯ ಚಾತುರ್ಮಾಸ್ಯ ಸಂಕಲ್ಪಕ್ಕಾಗಿ ಮುಂಬಯಿ ಆಗಮಿಸಿದ್ದಾರೆ.   "ಮೋಹನಗರಿ ಮಾಯಾನಗರೀ ಎಂದೇ ಪ್ರಸಿದ್ದವಾದ  ಮುಂಬಯಿ ಮಹನಾಗರವನ್ನು, ಮಹಾವಿರಾಗಿಗಳಾದ, ತತ್ವಜ್ಙಾನದ ಗಣಿಗಳಾದ,  ಭಗವಂತನ ಅನೇಕಗುಣಗಳಿಗೆ  ಪ್ರತಿಬಿಂಬಗುಣಗಳನ್ನು ರೂಢಿಸಿಕೊಂಡಿರುವ, ಶ್ರೀಮದಾಚಾರ್ಯರಿಂದಾರಂಭಿಸಿ ಹಿರಿಯಶ್ರೀಗಳವರೆಗೆ ಎಲ್ಲ ಗುರುಗಳ ಮೂರ್ತಿಗಳಾದ ಶ್ರೀಶ್ರೀಗಳವರು ಇಂದಿನ ಶುಭ ಅವಸರದಲ್ಲಿ ಮುಂಬಯಿಯನ್ನು ಪ್ರವೇಶಿಸಿದರು.  *ಸತ್ಯಧ್ಯಾನ ವಿದ್ಯಾಪೀಠ*  ದ್ವೈತವಾಙ್ಮಯ ಪ್ರಪಂಚದಲ್ಲಿ ತುಂಬ ಪ್ರಾಚೀನ ವಿದ್ಯಾಸಂಸ್ಥೆ ಪರಮಪೂಜ್ಯ ಮಾಹುಲೀ ಹಿರಿಯಾಚಾರ್ಯರು ಸಂಸ್ಥಾಪಿಸಿದ,  ಇಂದು ಪೂಜ್ಯ ಮಾಹುಲೀ ಆಚಾರ್ಯರು ಕುಲಪತಿಗಳಾಗಿ ನಡೆಸುತ್ತಿರುವ ಸಂಸ್ಥೆ ಅದು *ಸತ್ಯಧ್ಯಾನ ವಿದ್ಯಾಪೀಠ - ವಾಣೀವಿಹಾರ ವಿದ್ಯಾಲಯ* ಇದು ಜಗತ್ಪ್ರಸಿದ್ಧ. ಈ ಸತ್ಯಧ್ಯಾನ ವಿದ್ಯಾಪೀಠದಲ್ಲಿ ೧೯೭೩ ರಲ್ಲೇ ಶ್ರೀಶ್ರೀಸತ್ಯಪ್ರಮೋದತೀರ್ಥರು ಚಾತುರ್ಮಾಸ್ಯಗೈದಿದ್ದರು. ಆ ವರುಷವೇ ಸರ್ವಜ್ಙಾಚಾರ್ಯರು (ಶ್ರೀಸತ್ಯಾತ್ಮರು) ಅವತಾರಗೈದ ವರುಷವೂ ಆಗಿತ್ತು.  ಶ್ರೀಸರ್ವಜ್ಙಾಚಾರ್ಯರ ಸಂಪೂರ್ಣ ಬಾಲ್ಯ ಅವಸ್ಥೆ ವಿದ್ಯಾಪೀಠದಲ್ಲಿಯೆ. ಸಮಗ್ರ ಶಾಸ್ತ್ರಾಧ್ಯಯನ ಪೂ ಮಾಹುಲೀ ಆಚಾರ್ಯರಲ್ಲಿಯೇ. ನಿರಂತರ ಅಧ್ಯಯನಶೀಲರು. ನಿರಂತರ ಉತ್ಸಾಹ. ವಿದ್ಯಾ...

ನಮ್ಮ ನಾಡು..*

 *ನಮ್ಮ ನಾಡು ..* ಅಂತರ್ನಿಹಿತ ಪಶುಭಾವದ ತೃಪ್ತಿಗಾಗಿ ಸದಾ ತೊಯ್ದಾಡುವ ಮಾನವನಿಗೆ ಮನಶ್ಶಾಂತಿ ನೀಡುವ ನೀಡುವ ತತ್ವಜ್ಙಾನ, ನೀತಿ ಅಧ್ಯಾತ್ಮಗಳ ತವರು ನಮ್ಮ ಸಿದ್ಧಾಂತ .. ಮಾನವ ತಾ ತನ್ನ ಪಾಶವೀಯ ಮೇಲ್ಮಸುಗನ್ನು ಕಿತ್ತೆಸೆದು, ತನ್ನ ಜನ್ಮ ಮೃತ್ಯುರಹಿತ ಆನಂದಮಯ ಆತ್ಮ ರೂಪದಲ್ಲಿ ನಿರಂತರ ತನ್ನನ್ನು ತಾ ಕಂಡುಕೊಳ್ಳುವಂಥ ಸರ್ವವಿದ್ಯೆಗಳ ಸಾಧನಾ ಸ್ಥಳ ನಮ್ಮ ಭಾರತ. ಸುಖಭೋಗಗಳನ್ನುಂಡು, ಅದಕ್ಕಿಂತೂ ಹೆಚ್ಚಾಗಿ ದುಃಖದ ನಂಜು ನುಂಗಿ, ಕಡೆಗೆ ಅವೆಲ್ಲ ಅಸಾರ ಅನುಪಯುಕ್ತ ಎಂಬ ಭಾವನೆ ಅನುಭವಿಸಕ್ಕಿಂತಲೂ ಮೊದಲಿಗೇ ತಿಳಿಸಿದ ಭೂಮಿ ನಮ್ಮ ಭಾರತ.. ನವ ಯವ್ವನದ ಮದ, ಮದುಯುಕ್ತ ವಿಲಾಸಿ ಜೀವನ, ಆ ಭವ್ಯ ಜೀವನದ ಅಮಲಿನಲ್ಲಿ ಮುಳುಗುವದಕ್ಕೂ ಪೂರ್ವದಲ್ಲೆ ಇದು ಅನುಪಯುಕ್ತ, ಅತ್ಯಂತ ಹೇಯ ಅಂತ ಸಾರಿದ ಭೂಮಿ ನಮ್ಮ ಭಾರತ. ಭವಸಾಗರ. ಇದರಲ್ಲಿ ನೋವು ನಲಿವು, ಸಬಲತೆ ದುರ್ಬಲತೆ, ಸುಖ ದುಃಖ, ಸಮೃದ್ಧಿ ದಾರಿದ್ರಯ, ಸಾವು ಬದುಕು, ಪ್ರೇಮ ದ್ವೇಶ, ಪ್ರೀತಿ ಮಾತ್ಸರ್ಯ, ಇವೆ ಮೊದಲಾದ ಪ್ರಬಲ ಪ್ರವಾಹಗಳ ಮಧ್ಯದಲ್ಲಿಯೇ ನಿಸ್ಸೀಮ ಶಾಂತಿಯನ್ನು ಅರಹುವ ಏಕೈಕ ದೇಶ ಅದು ನಮ್ಮ ದೇಶ. ಜ್ಙಾನದ ಮೇರುಗಳನ್ನು, ವಾಙ್ಮಯ ಗಂಗೆಗಳನ್ನು ಹರಿಸುವ ಮುಖಾಂತರ ಧರ್ಮದ ಭಯ ಹುಟ್ಟಿಸಿ, ಸನ್ಮಾರ್ಗದಲ್ಲಿ ಇರಿಸುವ ದೇಶ ನಮ್ಮ ದೇಶ. ಎಂತಹ ದುಃಖಗಳು ಅಪ್ಪಳಿಸಿದರೂ , ಆ ದುಃಖದ ಮಧ್ಯದಲ್ಲಿಯೇ *ಸಣ್ಣದರಲ್ಲಿಯೇ ಆಯಿತು* ಎಂಬ ಸಮಾಧಾನದ ಸೂತ್ರವನ್ನು ತಿಳಿಸಿದ ದೇಶ.  ಎನೆಲ್ಲವನ್...

ಇರುವದೆಲ್ಲವನ್ನೂಅಭಿವ್ಯಕ್ತಗೊಳಿಸುವದು ಮನಸ್ಸು*

Image
 * ಇರುವದೆಲ್ಲವನ್ನೂಅಭಿವ್ಯಕ್ತಗೊಳಿಸುವದು ಮನಸ್ಸು*  ಮನಸ್ಸು ಇದೊಂದು ಅಮೂಲ್ಯವಾದ ಪದಾರ್ಥ. ಒಂದು ಬಾರಿ ಮನಸ್ಸಿನಲ್ಲಿ ಏನೋ ಒಂದು ವಿಷಯ, ಯಾವುದೋ ರೀತಿಯಲ್ಲಿ ಒಳ ಸೇರಿತೋ ಅದು ಮನಸ್ಸಿನಲ್ಲಿ  ಸಂಸ್ಕಾರ ರೂಪದಿಂದ ಶಾಶ್ವತವಾಗಿ ಉಳಿದು ಬಿಡುತ್ತದೆ.  ಮನಸ್ಸಿನಲ್ಲಿ ಒಮ್ಮೆ ಒಂದು ವಿಷಯ ಸೇರಿತು ಎಂದಾದರೆ ಆ ವಿಷಯವೆಂಬ ಹುಳ ಒಳಗೆ ಕೊರೆಯಲು ಆರಂಭಿಸುತ್ತದೆ.  ಆ ವಿಷಯವನ್ನು ಒಳಗೇ ಇಟ್ಟು ಕೊಳ್ಳುತ್ತೇನೇ ಎಂಬುವದೂ ಅಸಾಧ್ಯದ ಮಾತೆ. ಒಂದಿಲ್ಲ ಒಂದು ರೂಪದಿಂದ ಅಭಿವ್ಯಕ್ತವಾಗಲೇ ಬೇಕು. ಆಗಿಯೇ ಆಗುತ್ತದೆ. ಸಕಾರಾತ್ಮಕ ವಿಷಯಗಳು ಮನಸ್ಸಿನಲ್ಲಿ ಸೇರಿದ್ದರೆ, ಸಾಕಾರಾತ್ಮಕ ವಿಚಾರಗಳೇ ಹೊರಬರುತ್ತವೆ. ನಕಾರಾತ್ಮಕ ವಿಷಯಗಳು ಸೇರಿದ್ದರೆ ನಕಾರಾತ್ಮಕ ವಿಚಾರಗಳೇ ಅಭಿವ್ಯಕ್ತವಾಗುವದು.  ಗುರು ದೇವತಾ ದೇವರುಗಳ, ಧರ್ಮ ಶಾಸ್ತ್ರ, ತಂದೆ ತಾಯಿ ಅತ್ತೆ ಮಾವ, ಅಕ್ಕ ತಂಗಿ, ಅಣ್ಣ ತಮ್ಮ, ಆತ್ಮೀಯರು ಹಿತೈಷಿಗಳು ಇತ್ಯಾದಿ ಅಂತರಂಗದ ಅಥವಾ ಬಹಿರಂಗದ ವ್ಯಕ್ತಿಗಳ ವಿಷಯಕ ಸಕಾರಾತ್ಮಕ positive ವಿಷಯಗಳು ಸೇರಿದ್ದರೆ ಸಕಾರಾತ್ಮಕವಾಗಿಯೇ ಮಾತಾಡುವ. ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ. ನಕಾರಾತ್ಮಕ negative ಆಗಿದ್ದರೆ ನಕಾರಾತ್ಮಕವಾಗಿಯೇ. ಒಂದಂತೂ ನಿಶ್ಚಿತ ಅಭಿವ್ಯಕ್ತಗೊಳಿಸದೇ ಇರಲಾರ.  ಒಂದು ಸುಂದರ ಉದಾಹರಣೆ. ಒಂದು ಹಣ್ಣು ಚಿಕ್ಕು ತೆಗೆದುಕೊಂಡು ಅದನ್ನು ಹಿಂಡೋಣ , ಹಿಂಡಿದಾಗ ಬರುವ ರಸವೇನು ?? ಸಿಹಿಯಾದ ...

ಆಯುಧಗಳಿವೆ - ಉಪಯೋಗಿಸುತ್ತಿಲ್ಲವೇಕೆ... ??*

Image
 *ಆಯುಧಗಳಿವೆ -  ಉಪಯೋಗಿಸುತ್ತಿಲ್ಲವೇಕೆ... ??* ಓ ಆಯುಧ !! ಪ್ರತಿಯೊಂದು ಆಪತ್ತಿಗೂ ನೀನೇ ಒಂದು ದೊಡ್ಡ ಆಯುಧ, ನೀನು ಎನ್ನ ಬಳಿ ಇರಲಾಗಿ ನಿನ್ನನ್ನೂ ಬಳಿಸದೆ ಬಿಟ್ಟರೆ ನನಗೆ ಸೋಲಲ್ಲದೇ ಮತ್ತಿನ್ನೇನೂ.....  ಒಂದೇ ಏಟಿಗೆ ಇಷ್ಟೊಂದು ಪರೀಕ್ಷೆಗಳು ಎದುರಾದರೆ ನಾನೇನು ಮಾಡಲು ಸಾಧ್ಯ... ??? ಈ ಪ್ರಶ್ನೆ ಆಪತ್ತಿನಲ್ಲಿ ಸಿಲುಕಿದ ಎಲ್ಲರದೂ ಆಗಿರುವದೇ. ನನಗೂ ಅನೇಕಬಾರಿ ಬಂದದ್ದೂ ಇದೆ...  ಗುಬ್ಬಚ್ಚಿಯ ಹಾಗೆ ಕಾಸು ಕಾಸು ಗೂಡಿಸಿದೆ, ಸಾಲ ತಗೆಸಿದೆ ಕೊನೆಗೆ  ಮನೆ ಕಟ್ಟಿದೆ.  ಭರ್ಜರಿ ವಾಸ್ತು ಮಾಡಿದೆ. ಮನೆ ಆಯಿತು ಕೆರಿಯರ್ ಸೆಟ್ ಮಾಡ್ಕೋಬೇಕು ಅಂದೆ..  ಅಷ್ಟರಲ್ಲೆ ಮಕ್ಕಳು ಆದರು. ಕೈಲಿ ಹಣವಿಲ್ಲ. ಬಂದ ಎಲ್ಲ ದುಡ್ಡು ಸಾಲದ ಕಂತಿಗೇ ಹೋಗುತ್ತದೆ. ಈ ಪ್ರಸಂಗದಲ್ಕೇ ಟ್ರಾನ್ಸ್ಫರ್ ಆಯ್ತು.. ಎಕ್ಸ್ಟ್ರಾ ದುಡಿಯೋಣ ಅಂದರೆ ಮನೆಯಲ್ಲಿ ಕಿರಿಕಿರಿ.  ನನ್ನಿಂದ ಉಪಯೋಗವಿಲ್ಲ ಎಂದಾಕ್ಷಣಕ್ಕೆ ನನ್ನ ಆತ್ಮೀಯರೆಲ್ಲರೂ ಪಲಾಯನ ಮಾಡಿದರು.   ಹೀಗೆ ಮನೆಯಲ್ಕಿ ಒಂದರಮೇಲೆ ಒಂದು ಸಮಸ್ಯೆ.. ಈ ಸಮಸ್ಯೆಗಳು ನನ್ನ ಮೆಲೆಯೇ ಯಾಕೆ ಬರುತ್ತವೆ... ?? ಒಮ್ಮೆಲೆ ಈ ಸಮಸ್ಯೆಗಳು ಎಗರಿಬಂದರೆ ನಾನಾದರೂ ಏನು ಮಾಡಲಿ... ??? ಆ ದೇವರಿಗೆ ಸ್ವಲ್ಪಾನೂ ಕರುಣೆ ಇಲ್ಲವೆ.. ?? ಛೇ ನನ್ನ ಜನ್ಮಕ್ಕಿಷ್ಟು...  ಮಜಾ ಏನೆಂದರೆ ಇಷ್ಟೆಲ್ಲ ಒದ್ದಾಡು ಮನುಷ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ಒಂದು ಕ್ಷಣವೂ ಯೋಚಿ...