Posts

* ಅನಿಷ್ಟ ಪರಿಹರಿಸಿಕೊಳ್ಳಲು, ಪುಣ್ಯಘಳಿಸಲು ಒಂದು ಸದವಕಾಶ*

Image
 *ಪಾಪ ಪರಿಹರಿಸಿಕೊಳ್ಳಲು ಪುಣ್ಯಘಳಿಸಲು  ಒಂದು ಸದವಕಾಶ* ಜೀವನ ಸರ್ವಸ್ವಕ್ಕೆ ಕಾರಣ ಪುಣ್ಯಪಾಪಗಳು. ನಿತ್ಯ ಪುಣ್ಯ ಸಂಪಾದಿಸಬೇಕು. ಪಾಪಗಳನ್ನು ಪರಿಹರಿಸಿಕೊಳ್ಳಬೇಕು. ಆದರೆ..... ಒತ್ತಡವೋ, ಆಲಸ್ಯವೋ, ತಾತ್ಸಾರವೋ, ಅನಾಸಕ್ತಿಯೋ, ಅವಿಶ್ವಾಸನೋ ತಿಳಿಯದು ಅಂತೂ ನಿತ್ಯ ಪುಣ್ಯ ಸಂಪಾದನೆಯಾಗುವದಿಲ್ಲ ಇದು ಅತ್ಯಂತ ನಿಶ್ಚಿತ.  ಪಾಪದಲ್ಲಿ ಅಭಿರುಚಿಯೋ, ತೃಪ್ತಿಸಿಗತ್ತೆ ಎಂಬ ಸಂತೋಷವೋ, ಪಾಪ ಮಾಡಿದರೆ ಏನಾಗತ್ತೆ ಎಂಬ ಭಂಡ ಧೈರ್ಯವೋ ಅತ್ಯಂತ ಅನಾಯಾಸವಾಗಿ ನಿತ್ಯವೂ ಪಾಪಗಳು ಘಟಿಸುತ್ತಾ ಹೋಗುತ್ತವೆ ಇದುವೂ ಅಷ್ಟೇ ನಿಶ್ಚಿತ.  ನಿತ್ಯವೂ ಪಾಪಗಳನ್ನು ಪರಿಹರಿಸಿಕೊಳ್ಳುತ್ತಾ ಪುಣ್ಯ ಸಂಪಾದನೆಯ ಮಾರ್ಗವನ್ಬು ಅವಲಂಬಿಸಿದಿದ್ದರೂ ಕನಿಷ್ಠ ಕೆಲವೊಂದು ದಿನವಾದರೂ ಅನುಸರಿಸಲಿ, ಅಂದು ದುಪ್ಪಣ್ಯಕೊಡುವೆ ಎಂಬುವದು ದೇವರ ಸಂಕಲ್ಪವೋ ಏನೋ ಕೆಲವೊಂದು ದಿನಗಳನ್ನು ಮೀಸಲು ಇಟ್ಟಿದ್ದಾನೆ.  ಆ ದಿನಗಳು ಎಂದರೆ *ಪ್ರತಿ ಹದಿನೈದು ದಿನಕ್ಕೊಮ್ಮೆ ಬರುವ ಏಕಾದಶೀ ಉಪವಾಸಗಳು, ಪ್ರತಿ ತಿಂಗಳಿನ ಸಂಕ್ರಮಣಗಳು, ಆರು ತಿಂಗಳಿಗೊಮ್ಮೆ ಬರುವ ೨ ಮುಖ್ಯ ಸಂಕ್ರಮಣಗಳು, ಆಗಾಗ ಬರುವ ಪರ್ವಕಾಲಗಳು, ಗ್ರಹಣ, ಮಗು ಜನಿಸುವಕ್ಷಣದ ಕಾಲ, ಗುರುಗಳ ಆರಾಧನೆಯ ಪ್ರಸಂಗ, ಹಬ್ಬ ಹರಿದಿನಗಳು* ಇತ್ಯಾದಿಯಾಗಿ ಮೀಸಲು ಇಟ್ಟಿದ್ದಾನೆ. ಆ ಆ ದಿನಗಳಂದು ಮಾಡುವ ಸಾಧನೆ ನೂರಾರುಪಟ್ಟು ಹೆಚ್ಚಿನ ಫಲ ದೊರೆಯುತ್ತದೆ. ಮಹಾಮಹಾ ಪಾಪಗಳ ನಾಶವೂ ಆಗುತ್ತದೆ.  ಈಗ ಪ್ರ...

ದಧಿ ವಾಮನ ಸ್ತೋತ್ರ :

Image
 ದಧಿ ವಾಮನ ಸ್ತೋತ್ರ : ಹೇಮಾದ್ರಿ-ಶಿಖರಾಕಾರಂ ಶುದ್ಧ-ಸ್ಫಟಿಕ-ಸನ್ನಿಭಮ್ | ಪೂರ್ಣಚಂದ್ರ-ನಿಭಂ ದೇವಂ ದ್ವಿಭಜಂ ವಾಮನಂ ಸ್ಮರೇತ್ || ೧ || ಪದ್ಮಾಸನಸ್ಥಂ ದೇವೇಶಂ ಚಂದ್ರಮಂಡಲ-ಮಧ್ಯಗಮ್ | ಜ್ವಲತ್ಕಾಲಾನಲ-ಪ್ರಖ್ಯಂ ತಟಿತ್ಕೋಟಿ-ಸಮಪ್ರಭಮ್ || ೨ || ಸೂರ್ಯಕೋಟಿ-ಪ್ರತೀಕಾಶಂ ಚಂದ್ರಕೋಟಿ-ಸುಶೀತಲಮ್ | ಚಂದ್ರಮಂಡಲ-ಮಧ್ಯಸ್ಥಂ ವಿಷ್ಣುಮಚ್ಯುತಮವ್ಯಯಮ್ || ೩ || ಶ್ರೀವತ್ಸ-ಕೌಸ್ತುಭೋರಸ್ಕಂ ದಿವ್ಯರತ್ನ-ವಿಭೂಷಿತಮ್ | ಪೀತಾಂಬರಧರಂ ದೇವಂ ವನಮಾಲಾ-ವಿಭೂಷಿತಮ್ || ೪ || ಸುಂದರಂ ಪುಂಡರೀಕಾಕ್ಷಂ ಕಿರೀಟೇನ ವಿರಾಜಿತಮ್ | ಷೋಡಶಸ್ತ್ರೀಪರಿವೃತಮ್-ಅಪ್ಸರೋಗಣ-ಸೇವಿತಮ್ || ೫ || ಸನಕಾದಿಭಿರನ್ಯೈಶ್ಚ ಸ್ತೂಯಮಾನಂ ಸಮಂತತಃ | ಋಗ್ಯಜುಸ್ಸಾಮಾಥರ್ವಭಿರ್-ಗೀಯಮಾನಂ ಜನಾರ್ದನಮ್ || ೬ || ಚತುರ್ಮುಖಾದ್ಯೈರ್ದೇವೇಶೈಃ ಸ್ತೋತ್ರಾರಾಧನ-ತತ್ಪರೈಃ | ತ್ರಿಯಂಬಕೋ ಮಹಾದೇವೋ ನೃತ್ಯತೇ ಯಸ್ಯ ಸನ್ನಿಧೌ || ೭ || ದಧಿಮಿಶ್ರಾನ್ನಕವಲಂ ರುಗ್ಮಪಾತ್ರಂ ಚ ದಕ್ಷಿಣೇ | ಕರೇಽಪಿ ಚಿಂತಯೇದ್ವಾಮೇ ಪೀಯೂಷಮಮಲಂ ಸುಧೀಃ || ೮ || ಸಾಧಕಾನಾಂ ಪ್ರಯಚ್ಛಂತಮನ್ನಪಾನಮುತ್ತಮಮ್ | ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಧ್ಯಾಯೇದ್ದೇವಮಧೋಕ್ಷಜಮ್ | ಆಯುರಾರೋಗ್ಯಮೈಶ್ವರ್ಯಂ ಲಭತೇ ಚಾನ್ನಸಂಪದಮ್ || ೯ || ಅತಿಸುವಿಮಲಗಾತ್ರಂ ರುಗ್ಮಪಾತ್ರಸ್ಥಮನ್ನಂ ಸುಲಲಿತದಧಿಖಂಢಂ ಪಾಣಿನಾ ದಕ್ಷಿಣೇನ | ಕಲಶಮಮೃತಪೂರ್ಣಂ ವಾಮಹಸ್ತೇ ದಧಾನಂ ತರತಿ ಸಕಲದುಃಖಾದ್ವಾಮನಂ ಭಾವಯೇದ್ಯಃ || ೧೦ || ಇದಂ ಸ್ತೋತ್...

*ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ ಅರ್ಘ್ಯ ಸಮರ್ಪಣ - ಮಂತ್ರಗಳು*

Image
 *ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ  ಅರ್ಘ್ಯ  ಸಮರ್ಪಣ - ಮಂತ್ರಗಳು*  ಸಂಕಲ್ಪ ಮಂತ್ರ -  ಅದ್ಯ ಸ್ಥಿತ್ವಾ ನಿರಾಹಾರಃ ಶ್ವೋಭೂತೇ ಪರಮೇಶ್ವರ |  ಭೋಕ್ಷ್ಯಾಮಿ ಪುಂಡರೀಕಾಕ್ಷ ಅಸ್ಮಿನ್ ಕೃಷ್ಣಾಷ್ಟಮೀ ದಿನೆ ||  ಸ್ನಾನ ಮಂತ್ರ -  ಯೋಗಾಯ ಯೋಗಪತಯೇ ಯೋಗೇಶ್ವರಾಯ ಯೋಗಸಂಭವಾಯ ಶ್ರೀಗೋವಿಂದಾಯ ನಮೋನಮಃ ||  ಕೃಷ್ಣಪೂಜಾ ಮಂತ್ರ -  ಯಜ್ಙಾಯ ಯಜ್ಙಪತಯೇ ಯಜ್ಙೇಶ್ವರಾಯ ಯಜ್ಙಸಂಭವಾಯ ಶ್ರೀಗೋವಿಂದಾಯ ನಮೋನಮಃ ||  ಕೃಷ್ಣಾರ್ಘ್ಯ ಮಂತ್ರ -  ಜಾತಃಕಂಸ ವಧಾರ್ಥಾಯ ಭೂಭಾರೋತ್ತಾರಣಾಯ ಚ |  ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ||  ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |  ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ ||  ಚಂದ್ರಾರ್ಘ್ಯಮಂತ್ರ  ಕ್ಷೀರೋದಾರ್ಣವ ಸಂಭೂತ ಅತ್ರಿಗೋತ್ರಸಮುದ್ಭವ |  ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃಶಶಿನ್ ||  ರಾತ್ರಿ ಮಲಗುವಾಗ -  ವಿಶ್ವಾಯ ವಿಶ್ವಪತಯೇ ವಿಶ್ವೇಶ್ವರಾಯ ವಿಶ್ವಸಂಭವಾಯ ಶ್ರೀಗೋವಿಂದಾಯ ನಮೋನಮಃ  ಪಾರಣ ಮಂತ್ರ -  ಸರ್ವಾಯ ಸರ್ವಪತಯೇ ಸರ್ವೇಶ್ವರಾಯ ಸರ್ವಸಂಭವಾಯ ಶ್ರೀಗೋವಿಂದಾಯ ನಮೋನಮಃ ||  ವ್ರತಸಮರ್ಪಣಾ ಮಂತ್ರ -  ಧರ್ಮಾಯ ಧರ್ಮಪತಯೇ ಧರ್ಮೇಶ್ವರಾಯ ಧರ್ಮಸಂಭವಾಯ ಶ್ರೀಗೋವಿಂದಾಯ ನಮೋನಮಃ

ನಾಗ ಸ್ತೋತ್ರಮ್

 *ನಾಗ ಸ್ತೋತ್ರಮ್* ಬ್ರಹ್ಮ ಲೋಕೇ ಚ ಯೇ ಸರ್ಪಾಃ  ಶೇಷನಾಗಃ ಪುರೋಗಮಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೧॥ ವಿಷ್ಣು ಲೋಕೇ ಚ ಯೇ ಸರ್ಪಾಃ  ವಾಸುಕೀ ಪ್ರಮುಖಾಶ್ಚ ಯೇ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೨॥ ರುದ್ರ ಲೋಕೇ ಚ ಯೇ ಸರ್ಪಾಃ  ತಕ್ಷಕ: ಪ್ರಮುಖಸ್ತಥಾ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೩॥ ಖಾಂಡವಾಸ್ಯ ತಥಾ ದಾಹೇ  ಸ್ವರ್ಗೇ ಚ  ಸಮಾಶ್ರಿತಾಃ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೪॥ ಸರ್ಪ ಸತ್ರೇ ಚ ಯೇ ಸರ್ಪಾಃ  ಆಸ್ತಿಕೇನಾಭಿ ರಕ್ಷಿತಃ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥5॥ ಪ್ರಲಯೇ ಚೈವ್ ಯೇ ಸರ್ಪಾಃ  ಕಾರ್ಕೋಟಕ ಪ್ರಮುಖಶ್ಚಯೇ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥6॥ ಧರ್ಮ ಲೋಕೇ ಚ ಯೇ ಸರ್ಪಾಃ  ವೈತರಣ್ಯಾಂ ಸಮಾಶ್ರಿತಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೭॥ ಯೇ ಸರ್ಪಾಃ ಪರ್ವತೇ ಯೇಷು  ಧಾರಿ ಸಂಧಿಷು ಸಂಸ್ಥಿತಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೮...

*ಅಧಿಕಮಾಸ "ಅಧಿಕಸ್ಯ ಅಧಿಕಂ ಫಲಮ್"*

Image
 *ಅಧಿಕಮಾಸ "ಅಧಿಕಸ್ಯ ಅಧಿಕಂ ಫಲಮ್" * ಅಧಿಕಮಾಸ ಇದು ಮಲಮಾಸ ಎಂದು ಪ್ರಸಿದ್ಧ. ಮಲಮಾಸದಲ್ಲಿ ಮಲ ಪಾಪಗಳನ್ನು,  ಕಷ್ಟ ದಾರಿದ್ರ್ಯ ಕಾರ್ಪಣ್ಯ  ಮುಂತಾದವುಗಳನ್ನು ಪರಿಹರಿಸಿಕೊಳ್ಳುವ ಮುಖಾಂತರ ಎಲ್ಲ ವಿಧ ಸೌಖ್ಯ ಸೌಭಾಗ್ಯಗಳನ್ನು ಪಡೆಯಲುಭೆಕಾದ ಸಾಧನೆಗಳನ್ನು ಮಾಡಿಸುವದಲ್ಲದೇ ವಿಷ್ಣುಭಕ್ತಿ ದ್ವಾರಾ ಮೊಕ್ಷಾದಿ ಪುರುಷಾರ್ಥಗಳನ್ನು ಕೊಡಿಸುವದರಲ್ಲೂ ಸಮರ್ಥವಾಗಿದೆ.  ಈ ಮಲ ಮಾಸದಲ್ಲಿ ವಿಹಿತವಾದವುಗಳು ಎಂದರೆ "ಯಜ್ಙ ದಾನ ತಪಸ್ಸು" ಇವುಗಳೇ.  ಯಜ್ಙ ವೈಶ್ವಾನರ ಯಜ್ಙ ಹಾಗೂ ಪವಮಾನ ಹೋಮ ಮೊದಲಾದ ಯಜ್ಙಗಳು ಹೀಗೆ ಎರಡು ವಿಧ. ಅನ್ನದಾನ ರೂಪವಾದ ವೈಶ್ವಾನರ ಯಜ್ಙವನ್ನು ಮಾಡುವದರಿಂದ ನನ್ನ (ದಾನಿಯ) ನೂರನೇಯ ತಲೆಮಾರಿನವರೆಗೂ ನೈವೇದ್ಯ ವೈಶ್ವದೇವದ ಅನ್ನವೇ ಹೊಟ್ಟೆಗೆ ಬೀಳುವಂತೆ ಮಾಡುತ್ತದೆ.  ಪವಮಾನ ಮೊದಲಾದ ಎಲ್ಲಯಾಗಗಳೂ ಬ್ರಹ್ಮಹತ್ಯೆ ಸುರಾಪಾನ ಸ್ವರ್ಣಸ್ತೇಯ ಅಭಕ್ಷ್ಯಭಕ್ಷಣ ಬಾಲಹತ್ಯೆ ಶಿಷುಹತ್ಯೆ ಬ್ರೂಣಹತ್ಯೆ ಸ್ತ್ರೀಹತ್ಯೆ ಮೊದಲಾದ ಎಲ್ಲ ಪಾಪಗಳನ್ನೂ ಪರಿಹರಿಸಲು ಸಮರ್ಥವಾಗಿದೆ. ದಾನ ಈ ದಾನವೂ ಎರಡು ವಿಧವಾಗಿದೆ. ಒಂದು ಅಪೂಪದಿಂದ ಆರಂಭಿಸಿ ಸ್ವರ್ಣ ರಜತ ಭೂ ತಿಲ ದೀಪ ಮೊದಲಾದ ನಾನಾತರಹದ ದಾನಗಳು. ಈ ಎಲ್ಲ ತರಹದ ದಾನಗಳಿಂದ ಒಂದು ದ್ರವ್ಯಶುದ್ಧಿ. ಶತ್ರುಪರಿಹಾರ. ತತ್ವಜ್ಙಾನ ಪ್ರಾಪ್ತಿ ಒಬ್ಬ ಬ್ರಾಹ್ಮಣನಿಗಾದರೂ ಉಪಯೋಗ ಹೀಗೆ ನಾನಾತರಹದ ಫಲಗಳು ಒಳಗೊಂಡಿವೆ.  ತಪಸ್ಸು  ಈ ತಪವೂ ಮೂರುವಿಧ. ...

ಗೆಳೆತನ ತುಂಬ ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ.

Image
 *ಗೆಳೆತನ ತುಂಬ  ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ. ಒಳ್ಳೆಯ ಗೆಳಯರು ಸಿಗುವದೇ ಕಠಿಣ. ಸನ್ಮಾರ್ಗ ತೋರುವವರು, ಸಾಧನೆ ಮಾಡಿಸುವವರು ತುಂಬ ವಿರಳ. ಸನ್ಮಾರ್ಗ ತೋರುವ ಅಥವಾ ಮೆಲೆತ್ತರಕ್ಜೆ ಬೆಳಿಸುವ ಗೆಳೆಯ ಸಿಕ್ಕಾಗ ಆ ಗೆಳೆತನ ಉಳಿಸಿಕೊಳ್ಳುವದು ತುಂಬ ಕಠಿಣ.  ಗೆಳತನದಲ್ಲಿ ತಗ್ಗು ಬಗ್ಗುವಿಕೆಗಳು ಇವೆ. ನಾನು ನನ್ನದು ಎಂಬವುಗಳಿಗೆ ಅಲ್ಲಿ ಆಸ್ಪದವಿಲ್ಲ. ನನ್ನದೇ ಆಗಬೇಕು ಎಂಬ ದರ್ಬಾರವೂ ಇಲ್ಲ.  ಅಂದರೆ ದುಃಖವಿಲ್ಲ. ಹೊಗಳಿದರೆ ಹುಮ್ಮಸ್ಸಿಲ್ಲ. ಮೊದಲೇ ಮಾತಾಡಬೇಕು ಎಂಬ ಬಿಗುಮಾನವಿಲ್ಲ. ಆಡುವ ಮಾತುಗಳಲ್ಲಿ ಚುಚ್ಚುವಿಕೆ ಇಲ್ಲ. ಆಡುವ ಮಾತು ಚೇತೋಹಾರಿ ಮಾತುಗಳೇ. ಗೆಳೆತನದ ಗಟ್ಟಿತನದಮುಂದೆ ಎಂತಹ ಕಷ್ಟ ಆಪತ್ತುಗಳ ಸರಣಿಗಳು ಬಂದರೂ ತುಂಡು ತುಂಡು ಆಗಿಹೋಗುತ್ತವೆ.  ಗೆಳತನದಲ್ಲಿ ಆಸೆ ಆಕಾಂಕ್ಷೆಗಳಿಗೆ ಆಸ್ಪದವಿಲ್ಲ. ತ್ಯಾಗ ಅಡಗಿದೆ. ಸಹನೆ ತುಂಬಿದೆ. ಪೂರ್ಣ ಸಮರ್ಪಣಾಭಾವ ನರನಾಡಿಗಳಲ್ಲಿ ಹೊಕ್ಕಿರುತ್ತದೆ. ವಿಶ್ವಾಸ ಪೂರ್ಣ. ಸ್ನೇಹ ಪ್ರೇಮ ನಿರಂತರ ಇಂಪಾದ ಶೃತಿಗಾನವಾಗಿರುತ್ತದೆ.  ಗೆಳೆತನದಲ್ಲಿ ಕ್ಷಣದ ಮೌನ ಭರ್ಚಿಯಂತೆ ಚುಚ್ಚತ್ತೆ. ಅತಿ ಪುಟ್ಟ ಸಂಶಯ ದೃಢ ಬಾಂಧವ್ಯವನ್ಬೇ ಅಲುಗಾಡಿಸಿಬಿಡತ್ತೆ.  ಗೆಳೆತನದಲ್ಲಿ ಒಂದುಬಾರಿ ತಪ್ಪು ತಿಳುವಳಿಕೆ ಉದಯಿಸಿತೋ ಅದು ಕೆಲ ದಿನಗಳಲ್ಲಿ ಹೆಮ್ಮರವಾಗಿ ಗೆಳೆತನಕ್ಜೆ ಅಡ್ಡವಾಗಿ ಮಾಹಾ ಗೋಡೆಯಂತೆ ಬೆಳದು ನಿಲ್ಲತ್ತೆ.  ಆಪತ್ತಿನಲ್ಲಿ ಗೆಳೆಯ. ದ...

ಓ!! ವಿವೇಕಾತ್ಮನೇ ವಿವೇಕವನ್ನೀಯು...*

Image
  ಓ!! ವಿವೇಕಾತ್ಮನೇ ವಿವೇಕವನ್ನೀಯು...* ಆತ್ಮ‌ಮನಸ್ಸು, ಮನಸ್ಸಿನಲ್ಲಿ ವಿವೇಕತೆಯ ಜಾಲ ಹರಡಿಸುವವನು ಶ್ರೀಹರಿ. ಅವನೇ ವಿವೇಕಾತ್ಮ.‌ ಶ್ರೀಹರಿ ಬಿಂಬ. ನಾವು ಪ್ರತಿಬಿಂಬರು. ಪ್ರತಿಬಿಂಬರು ಸರ್ವಥಾ ಬಿಂಬನ ಅಧೀನ. "ನಡದು ನಡೆಸುವ, ನುಡಿದು ನಿಡಿಸುವ" ಇತ್ಯಾದಿ ಇತ್ಯಾದಿ...  ದೇವರನ್ನು ಕಾಣುವದು ಬಾಹ್ಯ ಇಂದ್ರಿಯಗಳಿಗೆ ಸಾಮರ್ಥ್ಯವಿರದು. ಕೇವಲ ಮನಸ್ಸಿಗೆ ಮಾತ್ರ ಸಾಧ್ಯವಿದೆ. ಬಾಹ್ಯ ಪದಾರ್ಥಗಳನ್ನು ನೋಡುವದು ಕಣ್ಣು. ಆದರೆ ಆ ಕಣ್ಣಿನಗೆ ನೂರಾರು ಪದಾರ್ಥಗಳ ಗೊಂದಲವುಂಟು ಮಾಡಿದರೆ, ತೋರಿಸುವ ಕಣ್ಣು ಕಾಣಿಸಲು ಅಸಮರ್ಥವಾಗುತ್ತದೆ. ಹಾಗೆಯೇ ದೇವರನ್ನೇ ಕಾಣುವ ಮನಸ್ಸಿಗೆ ಕೋಟಿ ಕೋಟಿ ಪದಾರ್ಥಗಳ ಸಂಬಂಧಗಳನ್ನು ಹಚ್ಚಿಸಿದಾಗ, ಗೊಂದಲವೋ ಗೊಂದಲವಾಗಿ ಯಾವದನ್ನು ಕಾಣಬೇಕೋ ಅದನ್ನು ಬಿಟ್ಟು ಕಂಡದ್ದು ಕಾಣಲು ತೊಡಗುತ್ತದೆ.  *ನಮ್ಮೊಳಗೆ ದೇವನಿದ್ದಾನೆ. ಪ್ರೇರಕನಾಗಿ ನಿಂತಿದಾನೆ. ನಮ್ಮ ಪರಮ ಹಿತೈಷಿಯಾಗಿಯೇ ಇದ್ದಾನೆ.  ಆ ದೇವರನ್ನು ಕಾಣುವ ನಮ್ಮ ಮನಸ್ಸು ಗದ್ದಲದಿಂದ ತುಂಬಿರುವದರಿಂದ ಅವನ ದಿವ್ಯ ಧ್ವನಿ ಕೇಳದಾಗಿದೆ, ಚುರುಕು ಓಡಾಟ ಕಾಣದಾಗಿದೆ......  ಯಾವದು ಹಿತ, ಯಾವದು ಅಹಿತ ಎಂಬ ವಿವೇಕ ಪೂರ್ಣನಾಗಿ ಯೋಚಿಸಿ, ಮೌನವೆಂಬ  ಝರಡಿ ಹಿಡಿದಾಗ  ಒತ್ತಡಗಳೆಂಬ ಎಲ್ಲ ಅಲೋಚನೆಗಳೂ ಕಸದ ಬುಟ್ಟಿಗೆ ಸೇರುತ್ತವೆ. ಆಗ ಧ್ಯಾನ. ಆ ಧ್ಯಾನದಲ್ಲಿ ದೇವರೇ ದೇವರು .. ನೀನೇ ನೀನು. ಕೇಳುವದು, ನೋಡುವದು, ಮೂಸುವದು, ಸ...