Posts

"ಗುಣ - ದೋಷಗಳು" ಒಂದು ಸಂಗ್ರಹ .....

 "ಗುಣ - ದೋಷಗಳು" ಒಂದು ಸಂಗ್ರಹ .....  (ಒಂದು ಬಾರಿ ಓದಲೇಬೇಕಾದ ಸಂಗ್ರಹ) ೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = *ಸಚ್ಚಾರಿತ್ರ್ಯ* ೨ ಎಲ್ಲ ದುರ್ದೈವಕ್ಕೆ ಕಾರಣ = *ಆಲಸ್ಯ* ೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = *ಭೀತಿ* ೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= *ಸಮಯ* ೬ ಸಾವಿರ ಯಜ್ಞಗಳಿಗಿಂತ  ಶ್ರೇಷ್ಠ ಕರ್ಮ = *ಪರೋಪಕಾರ* ೭ ಅತ್ಯಂತ ಶ್ರೇಷ್ಠ  ಸ್ವಭಾವ = *ತಾಳ್ಮೆ* ೮ ಅತ್ಯಂತ ಕೆಟ್ಟ ಗುಣ = *ಪರನಿಂದೆ* ೯ ಬಹುತೇಕ ಎಲ್ಲ ರೋಗಗಳಿಗೆ ಮುಖ್ಯಕಾರಣ = *ಅಜೀರ್ಣ* ೧೦ ಚಟಗಳಲ್ಲಿ ಅತೀ ಕೆಟ್ಟ ಚಟ = *ಚಾಡಿ ಹೇಳುವದು* ೧೧ ಬಂಧುಗಳಲ್ಲಿ ಶ್ರೇಷ್ಠ ಬಂಧು = *ವಿಶ್ವಾಸ.* ೧೨ ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = *ಅಹಂಕಾರ* ೧೩ ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = *ಆತ್ಮ ವಿಶ್ವಾಸ* ೧೪ ಜಗತ್ತಿನಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ = *ಆಧ್ಯಾತ್ಮಿಕ ಶಿಕ್ಷಣ* ೧೫ ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = *ಸಾಲಬಾಧೆ* ೧೭ ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = *ಹೊಗಳಿಸಿಕೊಳ್ಳುವದು* ೧೮ ಬದುಕಿನಲ್ಲಿಯೇ ಅತೀ ಹೀನಬದುಕು = *ಹಂಗಿನ ಬದುಕು* ೨೦ ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = *ವಿಶ್ವಾಸ* ೨೧ ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು  ಕತ್ತಲಾಗಿರುವುದು = *ಅಜ್ಞಾನ* ೨೩ ಜಗತ್ತಿನ ಎಲ್ಲ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = *ಸಜ್ಜನರ ನಿಷ್ಕ್ರಿಯತೆ* ೨೫ ಜಗತ್...

ಬಳಕಿನ ಹಬ್ಬದ ಶುಭಾಷಯಗಳು ಹಾಗೂ ನಮಸ್ಕಾರಗಳು*

Image
 *ಬಳಕಿನ ಹಬ್ಬದ ಶುಭಾಷಯಗಳು ಹಾಗೂ ನಮಸ್ಕಾರಗಳು* ಉಪನಿಷತ್ತಿನ ದೃಷ್ಟಿಯಲ್ಲಿ ಬೆಳಕು *अस्तमिते आदित्ये याज्ञवल्क्य चन्द्रमसि अस्तमिते शान्ते अग्नौ शान्तायां वाचि किं ज्योतिरेवायं पुरुषः इति आत्मैव ज्योतिः* ಉಪನಿಷತ್ತಿನ ದೃಷ್ಟಿಯಲ್ಲಿ  "ಸೂರ್ಯ ಇಲ್ಲದಾಗ, ಚಂದ್ರ ಮುಳುಗಿದಾಗ, ಅಗ್ನಿ ಶಾಂತನಾದಾಗ, ನಕ್ಷತ್ರ ಕಾಣಿಸದಾದಾಗ, ಮಾತು ನಿಂತಾಗ, ಅನಾಥ ಸ್ಥಿತಿಯಲ್ಲಿ ನಾ ಬಿದ್ದಾಗ  ನನ್ನನ್ನು *ತನ್ನವನು ಎಂದು ಸ್ವೀಕರಿಸುವ ದೇವರೇ  ಆದ್ದರಿಂದ ದೇವರೇ  ಎಲ್ಲರಿಗೂ ಬೆಳಕು."*  ಅಂತರ್ಯಾಮಿಯಿಂದಲೇ ನಮಗೆ "ನಮ್ಮ ಅರಿವು,  ಸುಖ, ಸಮೃದ್ಧಿ, ಅಜ್ಞಾನ,  ದೇಶ, ಕಾಲ, ಮುಂತಾದವುಗಳ ಜ್ಞಾನವಾಗುವದು. ಆ ದೇವನಿಂದಲೇ  ಜ್ಞಾನದ ಜ್ಯೋತಿ ಬೆಳಗುವದು. ನಮ್ಮ ಅಂತರ್ಯಾಮಿಯೇ  ಇಂದ್ರಿಯಗಳನ್ನು ಉದ್ದೀಪನಗೊಳಿಸಿ ಜ್ಞಾನ ಕರುಣಿಸುತ್ತಾನೆ. ಮನಸ್ಸನ್ನು ನಿತ್ಯ ಶುದ್ಧಿ ಕರಿಸಿ ಪ್ರತಿಕ್ಷಣ ಸ್ಫೂರ್ತಿ ಉತ್ಸಾಹಗಳನ್ನು ಬೆಳಗಿಸುತ್ತಾನೆ. ಇತ್ಯಾದಿ ನೂರಾರು ಸಾವಿರಾರು ಕಾರಣಗಳಿಂದ  ಜ್ಞಾನ ದೀಪನಾದ, ಅಧ್ಯಾತ್ಮದೀಪನಾದ ಪರಮಾತ್ಮನ ಅನುಗ್ರಹ ನನಗೆ ಆಗುವಂತೆ ಅನುಗ್ರಹಿಸಬೇಕು. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿಯ  ಹಾರ್ದಿಕ ಶುಭಾಶಯಗಳು....💐💐💐 ನಿಮ್ಮವ ......*ನ್ಯಾಸಣ್ಣ..💐*

ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ

Image
 ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ ಸ್ತೋತ್ರವನ್ನು ಭಗವಾನ್ ಶ್ರೀ ಕೃಷ್ಣನಿಗೆ ಪ್ರಾತಃ ಕಾಲ ಹಾಗು ಸಂಧ್ಯಾ ಕಾಲದ  ಸಮಯ  ಜ್ಯೋತಿ ಬೆಳಗುವ ವೇಳೆ ಪಠಿಸಬೇಕು . ಈ ಸ್ತೋತ್ರದ ವೈಶಿಷ್ಟ್ಯತೆ   ಏನೆಂದರೆ  ಇದರಲ್ಲಿ  ಪರಮಾತ್ಮನ  ದಶಾವತಾರದ  ಬಗ್ಗೆ ವಿವರಿಸಲಾಗಿದೆ. ಮತ್ಸ್ಯಾಕೃತಿಧರ  ಜಯದೇವೇಶ ವೇದವಿಭೋದಕ  ಕೂರ್ಮಸ್ವರೂಪ । ಮಂದರಗಿರಿಧರ  ಸೂಕರರೂಪ ಭೂಮಿವಿಧಾರಕ  ಜಯದೇವೇಶ ।।೧।। - ಮತ್ಸ್ಯಾವತಾರ ,ಕೂರ್ಮಾವತಾರ ,ವರಾಹವತಾರ ಕಾಂಚನಲೋಚನ  ನರಹರಿರೂಪ ದುಷ್ಟಹಿರಣ್ಯಕ ಭಂಜನ  ಜಯ ಭೋ । ಜಯ ಜಯ ವಾಮನ ಬಲಿವಿಧ್ವಂಸಿನ್ ದುಷ್ಟಕುಲಾಂತಕ  ಭಾರ್ಗವರೂಪ ।।೨।। - ನೃಸಿಂಹಾವತಾರ ,ವಾಮನವತಾರ ,ಪರಶುರಾಮಾವತಾರ  ಜಯವಿಶ್ರವಸಃ  ಸುತವಿಧ್ವಂಸಿನ್  ಜಯ ಕಂಸಾರೇ  ಯದುಕುಲತಿಲಕ । ಜಯವೃಂದಾವನಚರ   ದೇವೇಶ ದೇವಕಿನಂದನ  ನಂದಕುಮಾರ ।।೩।। -ರಾಮಾವತಾರ ,ಕೃಷ್ಣಾವತಾರ  ಜಯಗೋವರ್ಧನಧರ  ವತ್ಸಾರೇ ಧೇನುಕಭಂಜನ  ಜಯ ಕಂಸಾರೇ । ರುಕ್ಮಿಣಿನಾಯಕ  ಜಯ ಗೋವಿಂದ ಸತ್ಯಾವಲ್ಲಭ  ಪಾಂಡವ ಬಂಧೋ ।।೪।। - ಕೃಷ್ಣಾವತಾರ  ಖಗವರವಾಹನ  ಜಯಪೀಠಾರೇ  ಜಯ ಮುರಭಂಜನ  ಪಾರ್ಥಸಖೇತ್ವಮ್ । ಭೌಮವಿನಾಶಕ  ದುರ್ಜನಹಾರಿನ್ ಸಜ್ಜನಪಾಲಕ ಜಯದೇವೇಶ ।।೫।। - ಕೃಷ್ಣಾವತಾರ...

ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ

 _ * ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ! * _   _ * ನಿಮ್ಮ ಕಾಲುಗಳನ್ನು ಸಕ್ರಿಯವಾಗಿ ಮತ್ತು ಬಲವಾಗಿರಿಸಿಕೊಳ್ಳಿ !! * _    ನಾವು ಪ್ರತಿದಿನ ವಯಸ್ಸಾದಂತೆ, ನಮ್ಮ ಕಾಲುಗಳು ಯಾವಾಗಲೂ ಸಕ್ರಿಯವಾಗಿ ಮತ್ತು ಬಲವಾಗಿರಬೇಕು.  ನಾವು ವಯಸ್ಸಾಗುತ್ತಿದ್ದಂತೆ, ನಾವು ಬಿಳಿ ಕೂದಲು (ಅಥವಾ) ಸಡಿಲವಾದ ಚರ್ಮ (ಅಥವಾ) ಮುಖದ ಸುಕ್ಕುಗಳಿಗೆ ಹೆದರಬೇಕಾಗಿಲ್ಲ.    ಪ್ರಖ್ಯಾತ ಅಮೇರಿಕನ್ ನಿಯತಕಾಲಿಕ "ಪ್ರಿವೆನ್ಷನ್" ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯವಾದ ಮತ್ತು ಅತ್ಯಗತ್ಯವಾದ ಪ್ರಬಲವಾದ ಕಾಲಿನ ಸ್ನಾಯುಗಳನ್ನು ಪಟ್ಟಿ ಮಾಡುತ್ತದೆ.   * ಪ್ರತಿದಿನ ನಡೆಯಿರಿ. *   ನೀವು ಎರಡು ವಾರಗಳ ಕಾಲ ನಿಮ್ಮ ಕಾಲುಗಳನ್ನು ಚಲಿಸದಿದ್ದರೆ, ನಿಮ್ಮ ನಿಜವಾದ ಕಾಲಿನ ಬಲವು 10 ವರ್ಷಗಳಷ್ಟು ಕಡಿಮೆಯಾಗುತ್ತದೆ.   _ * ನಡಿಗೆ * _   ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಅಧ್ಯಯನವು ವೃದ್ಧರು ಮತ್ತು ಯುವಕರು ಎರಡು ವಾರಗಳವರೆಗೆ ನಿಷ್ಕ್ರಿಯವಾಗಿದ್ದರೆ ಅವರ ಕಾಲು ಸ್ನಾಯುಗಳ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ ಎಂದು ಕಂಡುಹಿಡಿದಿದೆ.  ಇದು 20-30 ವರ್ಷಗಳ ವೃದ್ಧಾಪ್ಯಕ್ಕೆ ಸಮ !!    _ * ಆದ್ದರಿಂದ ನಡೆಯಿರಿ * _   ಕಾಲಿನ ಸ್ನಾಯುಗಳು ದುರ್ಬಲಗೊಳ್ಳುವುದರಿಂದ, ನಾವು ಪುನರ್ವಸತಿ ಮತ್ತು ವ್ಯಾಯಾಮ ಮಾಡಿದರೂ ಚೇತರಿಸಿಕೊಳ್ಳಲು ಬಹಳ ಸ...

ಮೆಚ್ಚಿದವರ ಆರೈಕೆಯಲ್ಲಿಯೇ ಅರಳು.....*

Image
 * ಮೆಚ್ಚಿದವರ ಆರೈಕೆಯಲ್ಲಿಯೇ ಅರಳು.....* ಆರೈಕೆ ಮನುಷ್ಯನ ಸಹಜವಾದ ಒಂದು ಸ್ವಭಾವ. "ಮೆಚ್ಚಿದವರ ಪ್ರೀತಿಸಿದವರ ಆರೈಕೆಯಲ್ಲಿ ಮನುಷ್ಯ ತಾನು ಅರಳುತ್ತಾನೆ. ಎಂದಿಗೂ ಬಾಡುವದಿಲ್ಲ. ಸದಾ ಹಸನ್ಮುಖಿ. ಅವನ ಉತ್ಕರ್ಷಕ್ಕೆ ಮಿತಿ ಇರದು. ಅಂತೆಯೇ ಅವನೂ ನಮ್ಮ ಆರೈಕೆ ಮಾಡುತ್ತಾ ಇರುತ್ತಾನೆ.  ಆರೈಸುವ ವ್ಯಕ್ತಿ ಪಕ್ಕದಲ್ಲಿ ಇದ್ದರೆ ಸಹಾಯಕ್ಕೆ ನಿಲ್ಲುತ್ತಾನೆ. ದೂರದಲ್ಲಿ‌ ಇದ್ರೆ ಮನೋಬಲವನ್ನು ಹೆಚ್ಚಿಸುತ್ತಾನೆ. ದೇವಸ್ಥಾನಗಳಲ್ಲಿ  ಇದ್ದರೆ ದೈವೀಬಲವನ್ನು ಬೆಳೆಯುವಂತೆ ಬೇಡಿಕೊಳ್ಳುತ್ತಾನೆ. ತೀರ್ಥಯಾತ್ರೆಯಲ್ಲಿ ಇದ್ದರೆ ಪುಣ್ಯ ಅಭಿವೃದ್ಧಿಸುವಂತೆ ಮಾಡುತ್ತಾನೆ. ಒಟ್ಟಾರೆಯಾಗಿ ತನ್ನ ನಿತ್ಯದ ಕೆಲಸಗಳಲ್ಲಿ ನಮ್ಮದೂ ಒಂದು ಪಾಲು ಇಟ್ಟಿರುತ್ತಾನೆ. ಈ ಎಲ್ಲ ತರಹದ ಆರೈಕೆಯಲ್ಲಿಯೇ ತಾನೂ ಅರಳುತ್ತಾ ಸಾಗುತ್ತಾನೆ. ಸಂತೃಪ್ತಿಯನ್ನೇ ಅನುಭವಿಸುತ್ತಾನೆ. ಆ ಆನಂದ ಅನುಭವಿಸಿದವನಿಗೇ ಗೊತ್ತು. ನಮ್ಮನ್ನೂ ಅರಳಿಸುತ್ತಾನೆ. *ಈ ತರಹದ ಅರಳುವಿಕೆ ಸಿಗುವದೆಲ್ಲಿ....??* ಬಹಳ ವಿಚಿತ್ರ ಕೆಲವೊಮ್ಮೆ ಯಾರ ಆರೈಕೆ ಮಾಡಬೇಕು ಎಂಬುವದೇ ಜೀವನ ಕಳೆದರೂ ಗೊತ್ತಾಗುವದೇ ಇಲ್ಲ.  ಯಾರು ನಮ್ಮ ಹಿತೈಷಿಗಳು.... ನಮಗಾಗಿ ನಮ್ಮ ಹಿತಕ್ಕಾಗಿ ತಡಬಡಿಸುವವರು ಯಾರು ಎಂಬುವದೇ ಕೊನೆವೆರೆಗೂ ತಿಳಯಲಾಗುವದಿಲ್ಲ. ಹಲವುಬಾರಿ ಅವರನ್ನು ದ್ವೇಶಿಸುವದೇ ಆಗಿರುತ್ತದೆ. ಆರೈಕೆ ನನ್ನ ಸ್ವಭಾವ. ಪ್ರೀತಿ ಬತ್ತಿದ ಸ್ವಾರ್ಥಿಗಳ ಆರೈಕೆಯಲ್ಲಿ ತೊಡಗಿ ಸೊರಗುವದಂತೂ ನ...

*ಸುನೀತಿ ಸುರುಚಿ*

Image
 *ಸುನೀತಿ ಸುರುಚಿ* ಸುನೀತಿ ಇರುವಲ್ಲಿ ಸುರುಚಿ ಇರಲಾರದು. ಸುರುಚಿ ಇರುವಲ್ಲಿ ಸುನೀತಿ ಇರಲಾರದು. ಇದು ನಿಶ್ಚಿತ. ರುಚಿ ಪ್ರಿಯನಾದ ಉತ್ತಾನಪಾದ ರಾಜನಿಗೆ ಸುನೀತಿಗಿಂತಲೂ ಸುರೂಚಿ ಪ್ರಿಯಳೇ...... ಸಾಮಾನ್ಯವಾಗಿ ರುಚಿ ನೀತಿಗೆಡಸತ್ತೆ. ನೀತಿ ರುಚಿಯನ್ನು ಹದ್ದುಬಸ್ತಿನಲ್ಲಿ ಇಡತ್ತೆ. ನೀತಿ ರುಚಿಯ ಹಿಂದೆ ಬೀಳಿಸುದಿಲ್ಲ. ತಿನ್ನುವ ರುಚಿ ಹಂಬಲ ಹೆಚ್ಚು ಇದ್ದರೂ ನೀತಿವಂತನ ಊಟ ಶಿಸ್ತು. ತಿನ್ನುವ ರುಚಿಗೆ ಜೋತುಬಿದ್ದ ವ್ಯಕ್ತಿ ತುಂಬ ಅಶಿಸ್ತು. ಇದು ರುಚಿ ನೀತಿಗಳ ನೀತಿ.  ರುಚಿಯ ದಾಸನಿಗೆ ದೀರ್ಘದರ್ಶಿತಾ ಇರುವದಿಲ್ಲ. ನೀತಿಯ ದಾಸ ಸುದೀರ್ಘ, ಸುದೃಢ, ವ್ಯಾಪಕದರ್ಶಿಯಾಗಿರುವ. ನೀತಿವಂತನ ನಿರ್ಣಯ ಅದ್ಭುತ. ರುಚಿವಂತನ ನಿರ್ಣಯ ತನಗೇ ತಾನೇ ಮೋಸಮಾಡಿಕೊಳ್ಳುವಂತಹದ್ದು.  ಸುರೂಚಿ ಸವತಿ ಮಗನಾದ ಧೃವನನ್ನು ತಂದೆಯ ತೊಡೆಯಮೇಲಿನಿಂದ ತಳ್ಳಿದಳು, ತಾಯಿ ಸುನೀತಿ ಘೋರವಾದ ಕಾಡಿಗೆ ತೆರಳಲು ಅನುಮತಿಸಿದಳು.  ರುಚಿಯ ದಬ್ಬಾಳಿಕೆಗೆ ಅವಮಾನಿತನಾದ ಮಗನನ್ನು ನೋಡಿದರೂ ರುಚಿಗೆ ದಾಸನಾದ ಉತ್ತಾನಪಾದ ನೋಡದ ಹಾಗೆ ಕುಳಿತ. ನೀತಿ ಕಾಣಲೇ ಇಲ್ಲ. ನೀತಿವಂತನಾಗಲಿಲ್ಲ. ಅವನ ಸ್ಥಿತಿ ತುಂಬ ಹದೆಗೆಟ್ಟು ಹೋಗುತ್ತದೆ.  ಸುನೀತಿಯ ದಾಸನಾದ ಧೃವ ತನಗಾದ ಅವಮಾನವನ್ನು ಮೆಟ್ಟಲುಗಳನ್ನಾಗಿ ಸ್ವೀಕರಿಸಿದ. ನೀತಿವಂತ ತಾಯಿಯ ಅನುಮತಿಯಿಂದ ಪ್ರೋತ್ಸಾಹಿತನಾದ ತಪಸ್ಸಿಗೆ ತೆರಳಿದ. ದೇವರನ್ನು ಒಲಿಸಿಕೊಂಡ. ದೃಢವಾದ *ಧೃವ ಪದವಿ*ಯನ್ನೇ ಪಡೆದ. ಇಂದಿ...

_*ಸಾಂಕರ್ಯದ ದೊಡ್ಡ ಅಪಾಯ ಬ್ರಾಹ್ಮಣ ಸಮಾಜದ ಮುಂದಿದೆ*_

 _*ಸಾಂಕರ್ಯದ ದೊಡ್ಡ ಅಪಾಯ ಬ್ರಾಹ್ಮಣ ಸಮಾಜದ ಮುಂದಿದೆ*_ ಬ್ರಾಹ್ಮಣ ಯುವಕರು ಕನ್ಯಾ ಸಿಗುತ್ತಿಲ್ಲ ಎಂದು ಅನ್ಯಜಾತಿ ವಿವಾಹ ಆಗುವುದು ಮತ್ತು ಬ್ರಾಹ್ಮಣ ಯುವತಿಯರು ಪ್ರೇಮಿಸಿ ಅನ್ಯಜಾತಿ ವಿವಾಹ ಆಗುತ್ತಿರುವುದು ಮುಖ್ಯಕಾರಣ. ಯಾರೋ ಒಬ್ಬ ವ್ಯಕ್ತಿ ಕನ್ಯಾ ಸಿಗದಿದ್ದರೆ ಅನ್ಯಜಾತಿ ವಿವಾಹ ಆಗಿ ತಪ್ಪೇನಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ. ಅದನ್ನು ಅನುಮೋದಿಸಿ ಹಲವಃ ಬ್ರಾಹ್ಮಣರು ಕಮೆಂಟ್ ಕೂಡ ಮಾಡಿದ್ದಾರೆ. ಆದರೆ ಇದು ಹೇಗೆಂದರೆ  ನಿರುದ್ಯೋಗ ನಮಗೆ ಸಮಸ್ಯೆ ಅಂತ ಹೇಳಿ  ಕಳ್ಳತನ , ಸುಲಿಗೆ, ರೌಡಿಯಿಸಂ ಮಾಡಲು ತೊಡಗಿದರೆ ತಪ್ಪು ಹೇಗೋ ಹಾಗೇ ಕನ್ಯಾ ಸಿಗುವುದಿಲ್ಲ ಎಂದು ಅನ್ಯಜಾತಿ ವಿವಾಹ ಆಗುವುದೂ ತಪ್ಪು.  ಸಮಸ್ಯೆಗೆ ಪರಿಹಾರ ತಪ್ಪು ಮಾಡುವುದಲ್ಲ ಸಮಸ್ಯೆಯನ್ನೆ ಸರಿಮಾಡುವುದು.  ಗೀತೆಯಲ್ಲಿ ಅರ್ಜುನ ಕೃಷ್ಣನಿಗೆ ಹೇಳುತ್ತಾನೆ ''ಯುದ್ಧ ಬೇಡ ಏಕೆಂದರೆ ಯುದ್ಧದಲ್ಲಿ ಅಪಾರ ಸೈನಿಕರು ಸಾಯುವುದರಿಂದ ಅವರ ಹೆಂಡತಿ ಮಕ್ಕಳು ಅನಾಥರಾಗುತ್ತಾರೆ ವರ್ಣ ಸಾಂಕರ್ಯ ಉಂಟಾಗಿ ಜನರು ಪತಿತರಾಗುತ್ತಾರೆ ನರಕಕ್ಕೆ ಗುರಿಯಾಗುತ್ತಾರೆ ಮತ್ತು ಅವರ ಪಿತೃಗಳು ಶ್ರಾದ್ಧಾದಿ ಕರ್ಮಗಳು ಇಲ್ಲದೆ ಸದ್ಗತಿ ಹೊಂದುವುದಿಲ್ಲ'' ಎಂದು ಹೇಳುತ್ತಾನೆ. ಮೇಲ್ನೋಟಕ್ಕೆ ಅರ್ಜುನನ ಮಾತು ಸರಿ ಎನಿಸಿದರೂ ಅವನದು ಅಜ್ಞಾನವೇ. ಏಕೆಂದರೆ ದುರ್ಯೋಧನ ರಾಜನಾಗಿದ್ದರೆ ಆ ರಾಜ್ಯವು ಎಲ್ಲಾ ರೀತಿಯಲ್ಲೂ ಪಾಪಗಳಿಂದ ತುಂಬಿಹೋಗಿ ಧರ್ಮವು ಪತನವಾಗಿ ಸರ್ವವೂ ನಾಶ...